ಉಡುಪಿ : ನಾಡಗೀತೆಯ ರಾಗ ಸಂಯೋಜನೆ, ಕಾಲಮಿತಿ ಬಗ್ಗೆ 2005ರಿಂದ ಸ್ಪಷ್ಟತೆ ಇರಲಿಲ್ಲ. ಈ ಕುರಿತು ರಚಿಸಲಾದ ಎಚ್.ಆರ್.ಲೀಲಾವತಿ ನೇತೃತ್ವದ ಸಮಿತಿ ಮೈಸೂರಿನ ಅನಂತ ಸ್ವಾಮಿ ಅವರ ರಾಗಸಂಯೋಜನೆಯಡಿ 2.30ನಿಮಿಷ ಗಳಲ್ಲಿ ಕುವೆಂಪು ಬರೆದ ನಾಡಗೀತೆಯ ಯಾವುದೇ ಶಬ್ದವನ್ನು ಬಿಡದೆ ಹಾಡಲು ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಅದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಪ್ಪಿ ಮುಖ್ಯಮಂತ್ರಿ ಅವರಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುನಿಲ್ ಕುಮಾರ್, ಸರಕಾರಿ ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮದಲ್ಲಿ ಕಾಲಮಿತಿ, ರಾಗದ ಬಗ್ಗೆ ಸ್ಪಷ್ಟತೆ ಇರದೆ ನಾಡಗೀತೆಯನ್ನು 6. 7ನಿಮಿಷಗಳವರೆಗೆ ಕೂಡ ಹಾಡಲಾಗುತಿತ್ತು. ಇದಕ್ಕೆಲ್ಲ ಅಂತ್ಯ ಹಾಡುವ ಹಿನ್ನೆಲೆಯಲ್ಲಿ ಕಳೆದ 18 ವರ್ಷಗಳಿಂದ ಚರ್ಚೆಯಲ್ಲಿದ್ದ ಗೊಂದಲದ ಬಗ್ಗೆ ಸರಕಾರ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ನಾಡ ಗೀತೆಯು ಕರ್ನಾಟಕದ ಅಸ್ಮಿತೆಯ ಪ್ರಶ್ನೆ. ಕರ್ನಾಟಕವನ್ನು ಗೌರವಿಸುವ ಕಾರ್ಯ ವನ್ನು ನಾಡಗೀತೆ ಮೂಲಕ ನಾವು ಮಾಡುತ್ತಿದ್ದೇವೆ. ಬರಗೂರು ರಾಮಚಂದ್ರ, ಬೈರಪ್ಪ ಸಹಿತ ಎಲ್ಲ…
Author: main-admin
ಉಡುಪಿ: ಕೋಟತಟ್ಟು ಗ್ರಾ.ಪಂ., ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಟಾನ ಕೋಟದ ಸಹಭಾಗಿತ್ವದಲ್ಲಿ ನೀಡಲಾಗುವ 2022ನೇ ಸಾಲಿನ ಡಾ.ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರಕ್ಕೆ ನಟ ಡಾ.ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ. ಕಳೆದ 17 ವರ್ಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡಲಾಗುತ್ತಿದೆ. ಈ ಬಾರಿ ದಶಕಗಳಿಂದ ಚಲನಚಿತ್ರ ಹಾಗೂ ಸಾಮಾಜಿಕ ಮಾಧ್ಯಮ ಕ್ಷೇತ್ರದಲ್ಲಿ ನಟ, ನಿರ್ದೇಶಕ, ನಿರೂಪಕ, ವ್ಯಕ್ತಿತ್ವ ವಿಕಸನ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಡಾ.ರಮೇಶ್ ಅರವಿಂದ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 10ರಂದು ಡಾ.ಕೋಟ ಶಿವರಾಮ ಕಾರಂತರ ಜನ್ಮದಿನದಂದು ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
ಪುತ್ತೂರು: ಯುವತಿಯರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿ ನೊಂದ ಯುವತಿಯೋರ್ವಳು ಪುತ್ತೂರು ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾಳೆ. ಕಲ್ಲೇಗ ಶೇವಿರೆ ಸಮೀಪ ಯುವತಿಯರು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಯುವಕರ ತಂಡವೊಂದು ಯುವತಿಯರನ್ನು ಅಡ್ಡಗಟ್ಟಿ ಚುಡಾಯಿಸಿ, ಕಿರುಕುಳ ನೀಡಿರುವುದಾಗಿ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಮಹಿಳಾ ಠಾಣೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಬೆಳ್ತಂಗಡಿ : ರಾಜ್ಯ ಕಾಂಗ್ರೆಸ್ ಪೇ ಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೆ ಇದೀಗ ಕರಾವಳಿಗೂ ಪೇ ಎಂಎಲ್ ಎ ಪೋಸ್ಟರ್ ಅಭಿಯಾನ ಎಂಟ್ರಿ ಕೊಟ್ಟಿದ್ದು, ಶಾಸಕರ ಫೋಟೋ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಹಾಕಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಪೇನ್ ಶುರು ಮಾಡಿದ್ದು, ಬೆಳ್ತಂಗಡಿಯ ಬಸ್ ನಿಲ್ದಾಣ, ಸಾರ್ವಜನಿಕ ಶೌಚಾಲಯ ಹಾಗೂ ಬಸ್ ಗಳಲ್ಲಿ ಪೇ ಎಂಎಲ್ ಎ ಪೋಸ್ಟರ್ ಅಂಟಿಸಿ ಅಭಿಯಾನ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಪೇ-ಸಿಎಂ ಪೋಸ್ಟರ್ ಅಂಟಿಸುವ ಮೂಲಕ ರಾಜ್ಯ ಕಾಂಗ್ರೆಸ್ ವಿನೂತನ ಅಭಿಯಾನ ಆರಂಭಿಸಿದ್ದು, ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದೆ. ಈ ಬೆನ್ನಲ್ಲೇ ಕರಾವಳಿಯಲ್ಲೂ ಇದೀಗ ಪೇ ಎಂಎಲ್ ಎ ಅಭಿಯಾನ ಶುರುವಾಗಿದೆ.
ಮಂಗಳೂರು:ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ ಸುಮಾರು 3.30 ಕ್ಕೆ ಬೆಂಗಳೂರಿನ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ಹಾಸ್ಟೆಲ್‌ನ ಕಿಟಕಿ ಮುರಿದು ಹೊರಬಂದು ಕಾಣೆಯಾಗಿದ್ದರು.ಈ ಕುರಿತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಈ ಮೊದಲು ಮಂಗಳೂರಿನ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ವಿದ್ಯಾರ್ಥಿನಿಯರ ಪತ್ತೆಗೆ ಚೆನ್ನೈಗೆ ತೆರಳಿದ್ದರು. ಇವರು ಯಾಕೆ ತೆರಳಿದ್ದಾರೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಮಂಗಳೂರು: ಮಂಗಳೂರು ತಾಲೂಕಿನಲ್ಲಿ ಸೆ.28 ರಿಂದ ಅಕ್ಟೋಬರ್ 16 ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ. ಮಂಗಳೂರು ದಸರಾ ಸೆಪ್ಟೆಂಬರ್ 28ರಿಂದ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16 ರವರೆಗೆ ನೀಡಲಾಗಿದೆ. ಆದರೆ ಮಂಗಳೂರು ದಸರಾ ಆರಂಭಗೊಳ್ಳುವ ಸಂದರ್ಭದಲ್ಲೇ ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕೆಂದು ಆಗ್ರಹಗಳು ಕೇಳಿಬಂದಿತ್ತು.ಇದೀಗ ತಾಲೂಕಿನಲ್ಲಿ ಹೆಚ್ಚುವರಿ ನಾಲ್ಕು ದಿನ ರಜೆ ಘೋಷಿಸಲು ಶಿಕ್ಷಣ ಸಚಿವರು ಸೂಚಿಸಿದ ಹಿನ್ನೆಲೆ ಮಂಗಳೂರು ತಾಲೂಕಿನಲ್ಲಿ ಮಾತ್ರ ಸೆ. 28 ರಿಂದ ಅಕ್ಟೋಬರ್ 1ರ ತನಕ ಹೆಚ್ಚುವರಿ ರಜೆ ನೀಡಲಾಗಿದ್ದು, ಆ ಮೂಲಕ ಅಕ್ಟೋಬರ್ 16ರವರೆಗೆ ದಸರಾ ರಜೆ ನೀಡಿದಂತಾಗಿದೆ.ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಲು ಸೂಚಿಸಲಾಗಿದೆ. ಹಾಗೂ ಮಂಗಳೂರಿನಲ್ಲಿ ಹೆಚ್ಚುವರಿಯಾಗಿ ನೀಡಿರುವ 4 ದಿನಗಳ ರಜೆಯನ್ನು ನವೆಂಬರ್ (2022) ತಿಂಗಳಲ್ಲಿ ನಾಲ್ಕು ಶನಿವಾರ ಪೂರ್ಣದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸಲು ಶಿಕ್ಷಣ ಇಲಾಖೆ…
ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಕ್ಕಮಗಳೂರಿನ ಕಡೂರು ಸೋಮನಹಳ್ಳಿ ತಾಂಡಾದ ರಕ್ಷಿತಾ ಕುಟುಂಬಕ್ಕೆ ರಾಜ್ಯ ಸರ್ಕಾರ 8 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ., ಉದ್ಯಮಶೀಲತೆ ಯೋಜನೆಯಡಿ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಶೇಖರ್ ನಾಯ್ಕ ಮತ್ತು ಲಕ್ಷ್ಮೀಬಾಯಿ ದಂಪತಿಯ ಪುತ್ರಿ ವಿದ್ಯಾರ್ಥಿನಿಯಾಗಿದ್ದ ರಕ್ಷಿತಾ ಬಸ್ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆ ಕುಟುಂಬಸ್ಥರು ನೋವಿನಲ್ಲೂ ಮಗಳ ಬಹುಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದರು. ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ರಕ್ಷಿತಾ, ಸೆ.18ರಂದು ಚಿಕ್ಕಮಗಳೂರಿನ ಸಂಬಂಧಿಕರ ಮನೆಗೆ ಬಸ್ನಲ್ಲಿ ಹೋಗುವಾಗ ಮಾರ್ಗ ಮಧ್ಯೆ ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡ್ ಬಳಿ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿತ್ತು. ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಮಿದುಳು ನಿಷ್ಕ್ರಿಯಗೊಂಡಿದೆ, ಇನ್ನು ಮಗಳು ಬದುವುದಿಲ್ಲ ಎಂಬ ಸುದ್ದಿ ಕೇಳಿ…
ಬೆಳ್ತಂಗಡಿ: ದೇಶದ ಸಮಸ್ತ ಜನರ ಬಹು ನಿರೀಕ್ಷೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯ ಸಂಕ್ರಾಂತಿ ಬಳಿಕ ಬಹುತೇಕ ಕಾಮಗಾರಿಗಳಿಗೆ ವೇಗ ಸಿಗಲಿದೆ. ಕಂಬಗಳನ್ನು ನಿಲ್ಲಿಸುವ ಕಾರ್ಯ ಸಾಗುತ್ತಿದೆ ದೇವರನ್ನು ಕುಳ್ಳಿರಿಸುವ ಪೀಠದವರೆಗಿನ ಕಾರ್ಯ ಮುಗಿದಿದೆ ಎಂದು ಉಡುಪಿ ಪೇಜಾವರ ಶ್ರೀಗಳು ಹೇಳಿದರು. ಧರ್ಮಸ್ಥಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲರಾಮ ದೇವರ ಮೂರುತಿಯನ್ನು ಅಮೃತಶಿಲೆಯಿಂದ ನಿರ್ಮಿಸುವ ವಿಚಾರ ಮುಂದಿದ್ದು, ನೀಲಿ ವರ್ಣವೂ ಅದರಲ್ಲಿ ಒಳಗೊಳ್ಳಲಿದೆ. ಇದನ್ನು ಈಗಾಗಲೇ ಸಭೆಯಲ್ಲಿ ನಿರ್ಣಯಿಸಲಾಗಿದೆ. ಇದಕ್ಕೆ ಬೇಕಾದ ಶಿಲೆಯ ಶೋಧ ನಡೆಯುತ್ತಿದೆ ಎಂದರು. ಉಗ್ರ ಚಟುವಟಿಕೆಗಳ ಸಂಬಂಧ ಪ್ರತಿಕ್ರಿಯಿಸಿದ ಶ್ರೀಗಳು, ಶಿವಮೊಗ್ಗ ಹಾಗೂ ಕರಾವಳಿ ಭಾಗದಲ್ಲಿ ಉಗ್ರರ ಸಂಚು ಪತ್ತೆಯಾಗಿದೆ. ಇದನ್ನು ಈ ಮೊದಲೇ ಮಟ್ಟ ಹಾಕಬೇಕಿತ್ತು. ಕೇಂದ್ರ, ರಾಜ್ಯ ಸರಕಾರಗಳು ಈಗಾಗಲೇ ಬಂಧಿಸಿದವರನ್ನು ತೀವ್ರ ವಿಚಾರಣೆ ನಡೆಸಿ, ಇದರ ಮೂಲವನ್ನು ಬೇರು ಸಹಿತ ಕಿತ್ತೊಗೆಯಬೇಕು. ಈ ವಿಚಾರಗಳಿಗೆ ಕೋಮು ಬಣ್ಣಹಚ್ಚುವ ಷಡ್ಯಂತ್ರ ನಡೆಯುತ್ತಿದ್ದು ಇದಕ್ಕೆ ಸರಕಾರ ಅವಕಾಶ ಮಾಡಿಕೊಡಬಾರದು. ದೇಶದಲ್ಲಿ ಸದಾ ಶಾಂತಿ…
ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಮುದ್ದಿಗೆ ಎಂಬಲ್ಲಿ ಮನೆಯ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದ ಕಾರಣಕ್ಕೆ ಮೆಸ್ಕಾಂ ಲೈನ್ ಮ್ಯಾನ್ ಮೇಲೆ ಧಮ೯ಸ್ಥಳ ಗ್ರಾಮದ ರಿಜೇಶ್ ಮತ್ತೀತರರು ಹಲ್ಲೆ ಮಾಡಿರುವ ಘಟನೆ ಸೆ.22 ರಂದು ರಾತ್ರಿ ವೇಳೆ ಕೊಕ್ಕಡದಲ್ಲಿ ನಡೆದಿದೆ.ಹತ್ಯಡ್ಕ ನಿವಾಸಿ ಕಾಂತುಪೂಜಾರಿ ಎಂಬವರು ಮನೆಯ ವಿದ್ಯುತ್ ಬಿಲ್ ಪಾವತಿಸಿರಲಿಲ್ಲ. ಇಲಾಖೆ ಸೂಚನೆಯನ್ವಯ ಕೊಕ್ಕಡದ ಲೈನ್ ಮ್ಯಾನ್ ಉಮೇಶ್ ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆ ಫ್ಯೂಸ್ ತೆಗೆದಿದ್ದಾರೆ. ನಂತರ ಸೆ.21ರಂದು ಬಿಲ್ ಪಾವತಿಸಿದ್ದು, ವಿದ್ಯುತ್ ಸಂಪರ್ಕ ನೀಡಲಾಯಿತೆನ್ನಲಾಗಿದೆ. ವಿದ್ಯುತ್ ಸಂಪರ್ಕದ ಫ್ಯೂಸ್ ತೆಗೆಧ ವಿಚಾರದಲ್ಲಿ ಕಾಂತು ಪೂಜಾರಿಯವರ ಸಂಬಂಧಿ ನಿನ್ನೆ ರಾತ್ರಿ ಕೊಕ್ಕಡದಲ್ಲಿ ಲೈನ್ ಮ್ಯಾನ್ ಉಮೇಶ್ ಅವರನ್ನು ಪ್ರಶ್ನಿಸಿ, ಹಲ್ಲೆಗೆ ಮುಂದಾದಾಗ ಪವರ್ ಮ್ಯಾನ್ ದುಂಡಪ್ಪ ಇದನ್ನು ತಡೆದರೆನ್ನಲಾಗಿದೆ. ಈ ಸಂದರ್ಭ ಪವರ್ ಮ್ಯಾನ್ ದುಂಡಪ್ಪ ತಲೆಗೆ ಆರೋಪಿ ಹೊಡೆದಿದ್ದಾರೆ.ತಲೆಗೆ ತೀವ್ರವಾದ ಗಾಯವಾದ ದುಂಡಪ್ಪ ಅವರನ್ನು ಕೂಡಲೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುರತ್ಕಲ್: ಎಸ್‌ಡಿಪಿಐ, ಪಿಎಫ್ಐ ಮುಖಂಡರು, ಕಾರ್ಯಕರ್ತರ ಮೇಲೆ ನಡೆದ ಎನ್‌ಐಎ ದಾಳಿ ಖಂಡಿಸಿ ಎಸ್‌ಡಿಪಿಐ, ಪಿಎಫ್ಐ ಕಾರ್ಯಕರ್ತರು ಸುರತ್ಕಲ್‌ನಲ್ಲಿ ಏಕಾಏಕಿ ಹೆದ್ದಾರಿ ತಡೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದೇಶದ್ರೋಹಿ ಕೃತ್ಯಗಳಲ್ಲಿ ಸಹಕರಿಸಿದ ವ್ಯಕ್ತಿಗಳ ವಿರುದ್ಧ ಮತ್ತು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಸಂಬಂಧ ಎನ್‌ಐಎ ತನಿಖೆ ನಡೆಸುತ್ತಿದೆ. ಆರೋಪಿಗಳ ವಿಚಾರಣೆ ತೀವ್ರಗೊಳಿಸಿದೆ. ಇಂತಹ ಸಂದರ್ಭದಲ್ಲಿ ಯಾರಾದರೂ ಪುಂಡಾಟಿಕೆ, ಕಾನೂನು ಉಲ್ಲಂಘನೆ ಮಾಡಿದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸುರಕ್ಷತಾ ಕ್ರಮವಾಗಿ ಪೊಲೀಸ್ ಕಣ್ಗಾವಲು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.