Author: main-admin

ಉಡುಪಿ: ಪಿಎಫ್ ಐ ಸಂಘಟನೆ ಮುಖಂಡರ ಮನೆ ಮೇಲಿನ ದಾಳಿಯನ್ನು ಖಂಡಿಸಿ ಯಾವುದೇ ಅನುಮತಿ ಪಡೆಯದೇ ಉಡುಪಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಬೈಲಕೆರೆ ಮಲ್ಪೆ ನಿವಾಸಿ ಸಾದೀಕ್‌ ಅಹಮ್ಮದ್‌, ಮಲ್ಪೆ ಹೊಸತೋಟ ನಿವಾಸಿ ಅಫ್ರೋಜ್‌ ಕೆ,ಕಂಬ್ಲತೋಟ ನಿವಾಸಿ ಇಲಿಯಾಸ್‌ ಸಾಹೇಬ್‌, ಬ್ರಹ್ಮಾವರ ಸಾಸ್ತನ ನಿವಾಸಿ ಇರ್ಷಾದ್‌, ಸಾಸ್ತಾನ ಕೊಡಿರಸ್ತೆ ನಿವಾಸಿ ಫಯಾಜ್‌ ಅಹಮ್ಮದ್‌,ಅಂಬಲಪಾಡಿ ನಿವಾಸಿ ಮಹಮ್ಮದ್‌ ಅಶ್ರಫ್‌, ದೊಡ್ಡನಗುಡ್ಡೆ ನಿವಾಸಿ ಎ. ಹಾರೂನ್‌ ರಶೀದ್‌ ,ಬೈಲೂರು ನಿವಾಸಿ ಮೊಹಮ್ಮದ್‌ ಜುರೈಜ್‌, ಕೊಡವೂರು ಬಹುತೋಟ ನಿವಾಸಿ ಇಶಾಕ್‌ ಕಿದ್ವಾಯಿ, ಗುಂಡ್ಮಿ ನಿವಾಸಿ ಶೌಕತ್‌ ಅಲಿ, ಮಲ್ಪೆ ಬೈಲಕೆರೆ ರಸ್ತೆ ನಿವಾಸಿ ಮಹಮ್ಮದ್‌ ಝಹೀದ್‌ ಎಂಬವರ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನಲ್ಲಿ ನಡೆದ ಎನ್ಐಎ ದಾಳಿಯನ್ನು ಖಂಡಿಸಿ ಪಿಎಫ್ಐ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆಗೆ ನಿರ್ಧರಿಸಿದ್ದರು. ಆದ್ರೆ ಪೊಲೀಸರು ಪ್ರತಿಭಟನಕಾರರ ಮನವೊಲಿಸಿ, ಚದುರಿಸಿದ್ದರು. ಬಳಿಕ ಡಯಾನಾ ಸರ್ಕಲ್ ಬಳಿ ಗುಂಪುಗೂಡಿದ ಪಿಎಫ್ ಐ…

Read More

ಉಳ್ಳಾಲ : ತಲವಾರು ದೊಣ್ಣೆ ತೋರಿಸಿ ಜೀವ ಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.ಬಂಧಿತರನ್ನು ಕಸಬಾ ಗ್ರಾಮದ ಜಾಬೀರ್, ಫರಂಗಿಪೇಟೆಯ ಹೈದರಾಲಿ, ಬಂಟ್ವಾಳ ಮುಹಮ್ಮದ್ ಆರೀಫ್ ಬಂಧಿತರು. ಆರೋಪಿಗಳು ಮಾಡೂರು ಸೈಟ್ ನಿವಾಸಿ ಸತೀಶ್ ಎಂಬವರಿಗೆ ಸೇರಿದ ಹೋರಿಯನ್ನು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥಕಟ್ಟೆಯ ಬಳಿಯಿಂದ ಕದಿಯಲು ಬಂದಿದ್ದರು. ಈ ಸಂದರ್ಭ ಮಾಲೀಕ ಸತೀಶ್ ಅವರು ಓಡಿಬಂದಿದ್ದರು. ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು , ಅಡ್ಡಿಪಡಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿ ಜಾನುವಾರನ್ನು ಕಾರಿನೊಳಗಡೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ‌. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ನಡೆಸಿದ ಎಸಿಪಿ ನೇತೃತ್ವದ ಉಳ್ಳಾಲ ಪೊಲೀಸ್ ತಂಡ ಮೂವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಿದ್ದು, ಆತ ಪರಾರಿಯಾಗಿದ್ದಾನೆ.

Read More

ನವದೆಹಲಿ : ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ಸಂಬಂಧ ಮೇಲ್ಮನವಿ ಅರ್ಜಿಗಳ ವಿಚಾರಣೆ ಅಂತ್ಯವಾಗಿದ್ದು, ಹಿಜಾಬ್ ಕುರಿತು ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಶಾಲಾ ಮತ್ತು ಕಾಲೇಜು ತರಗತಿಗಳಲ್ಲಿ ಹಿಜಾಬ್ಗಳನ್ನು ನಿಷೇಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಸುಪ್ರೀಂಕೋರ್ಟ್ ನಲ್ಲಿ ಇಂದು ಹಿಜಾಬ್ ಕುರಿತು ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ದ್ವಿಸದಸ್ಯಪೀಠ ಹಿಜಾಬ್ ಕುರಿತ ತೀರ್ಪನ್ನು ಕಾಯ್ದಿರಿಸಿದೆ. ಶಾಲಾ ಕಾಲೇಜುಗಳ ಸಮವಸ್ತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

Read More

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಗಾಣದಬೆಟ್ಟು ಎಂಬಲ್ಲಿ 14ನೇ ಶತಮಾನದ ವೈಷ್ಣವ ಪಂಥದ ಶಿಲಾ ಶಾಸನ ಪತ್ತೆಯಾಗಿದೆ ಗಾಣದಬೆಟ್ಟು ಅಮ್ಮು ಶೆಟ್ಟಿ ಎಂಬುವರ ಜಾಗದಲ್ಲಿ ಈ ಶಾಸನ ಪತ್ತೆಯಾಗಿದ್ದು ಇದು ಸುಮಾರು 1409 ಇಸವಿಯದ್ದಾಗಿರಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಎಸ್ಎ ಕೃಷ್ಣಯ್ಯ ಹಾಗೂ ಕಡಿಯಾಳಿ ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ ಶ್ರೀಧರ ಭಟ್ ಇವರ ಮಾರ್ಗದರ್ಶನದಲ್ಲಿ ಫ್ಲೀಚ್ ಇಂಡಿಯಾ ಫೌಂಡೇಶನ್ ಹೈದರಾಬಾದ್ ಇದರ ಸಹಾಯಕ ಸಂಶೋಧಕ ಶ್ರುತೇಶ್ ಆಚಾರ್ಯ ಶಿಲಾಶಾಸನವನ್ನು ಓದಿ ಅಧ್ಯಯನ ನಡೆಸಿದ್ದಾರೆ. ಶಿಲಾ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಶಂಖ ಚಕ್ರಗಳ ಕೆತ್ತನೆಯನ್ನು ಕೆತ್ತಲಾಗಿದೆ ಇದು ವೈಷ್ಣವ ಪಂಥದ ಶಿಲಾ ಶಾಸನ ವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 1409 ಇಸವಿಯ ನವಂಬರ್ 7 ರ ಗುರುವಾರದಂದು ಇದನ್ನು ಸ್ಥಾಪಿಸಿರಬಹುದೆಂದು ಊಹಿಸಲಾಗಿದೆ .ಈ ಶಾಸನದಲ್ಲಿ 14ನೇ ಶತಮಾನದ ಕನ್ನಡವನ್ನು ಬಳಕೆ ಮಾಡಲಾಗಿದ್ದು…

Read More

ಮಂಗಳೂರು: ಎನ್ಐಎ ದಾಳಿಯ ವೇಳೆ ಪ್ರತಿಭಟನೆ ನಡೆಸಿದ ಪಿಎಫ್ಐ, ಎಸ್‌ಡಿಪಿಐನ 50ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ, ಎಸ್‌ಡಿಪಿಐ ಕಚೇರಿಗೆ ಎನ್ಐಎ ಬೆಳ್ಳಂಬೆಳಗ್ಗೆ ದಾಳಿ ನಡೆಸಿತ್ತು. ಈ ವೇಳೆ 200 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು 50 ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದೆ. ಸದ್ಯ ಸ್ಥಳದಲ್ಲಿ ಅರೆಮೀಸಲು ಪಡೆ, ಪೊಲೀಸರು ಬೀಡು ಬಿಟ್ಟಿದ್ದು ಭಾರೀ ಕಟ್ಟೆಚ್ಚರ ವಹಿಸಿದೆ‌. ಪಿಎಫ್ಐ, ಎಸ್‌ಡಿಪಿಐ ಕಚೇರಿ ಇರುವ ಮಂಗಳೂರಿನ ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

Read More

ಮಂಗಳೂರು: ಇಂದು ಬೆಳ್ಳಂಬೆಳಗ್ಗೆ ಎನ್ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಕಚೇರಿ ಸೇರಿದಂತೆ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯ ಪಿಎಫ್ ಐ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿರುವ ಎನ್ಐಎ ಇಂದು ಮಂಗಳೂರು ಹೊರವಲಯದ ಬಜ್ಪೆ, ಜೋಕಟ್ಟೆ ಸೇರಿದಂತೆ ಕೆಲವೆಡೆ ರಾಜ್ಯ ಪಿಎಫ್ಐ ನಾಯಕರ ಮನೆ ಮೇಲೆ ದಾಳಿ ನಡೆಸಿದೆ.ನಾಯಕರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆ ಮುಂಭಾಗ ಪಿಎಫ್ಐ ಕಾರ್ಯಕರ್ತರು ಜಮಾಯಿಸಿದ್ದು, ಗೋ ಬ್ಯಾಕ್ ಎನ್ಐಎ ಘೋಷಣೆ ಕೂಗಿ, ಇದು ಸರಕಾರಿ ದಾಳಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಜ್ಪೆ ಜೋಕಟ್ಟೆ, ಕಾವೂರು ಕುಳಾಯಿ ಸೇರಿದಂತೆ ನಗರದ ಹಲವೆಡೆ Sdpi ನಾಯಕರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಏಕಕಾಲಕ್ಕೆ ವಿವಿಧ ವಾಹನಗಳಲ್ಲಿ ಆಗಮಿಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ, ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಜಮಾಯಿಸಿ ಎನ್ ಐಎ…

Read More

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕಾಂಚೋಡು ಬಳಿ ಸ್ಮೋಕ್ ಹೌಸ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿಕೊಂಡು ಅಪಾರ ನಷ್ಟ ಸಂಭವಿಸಿದ ಘಟನೆ ಸೆ. 21ರಂದು ನಡೆದಿದೆ. ಕಾಂಚೋಡ್ ಗ್ರಾಮದ ನಾರಾಯಣ ರಾವ್ ಎಂಬವರಿಗೆ ಸೇರಿದ ಸ್ಮೋಕ್ ಹೌಸ್ ಇದಾಗಿದ್ದು ಸುಮಾರು 4,500 ಕ್ಕಿಂತಲೂ ಅಧಿಕ ಒಣಗಿದ ತೆಂಗಿನಕಾಯಿ, ರಬ್ಬರ್ ಬೆಂಕಿಗಾಹುತಿಯಾಗಿದೆ. ವಿಷಯ ತಿಳಿದಂತೆ ಸ್ಥಳೀಯರು ಆಗಮಿಸಿ ಪೈಪಿನಲ್ಲಿ ನೀರು ಹಾಯಿಸಿ ಬೆಂಕಿ ಮನೆಯ ಭಾಗಕ್ಕೆ ಹರಡುವುದನ್ನು ತಡೆದಿದ್ದಾರೆ. ನಂತರ ಸುಳ್ಯ ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರೆಂದು ತಿಳಿದುಬಂದಿದೆ.

Read More

ಮಂಗಳೂರು: ನಗರದ ಮೇರಿಹಿಲ್ ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಓದುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರು ಕಾಲೇಜು ಹಾಸ್ಟೆಲ್ ನಿಂದ ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಮೂರು ಗಂಟೆ ವೇಳೆಗೆ ಹಾಸ್ಟೆಲ್ ಕಿಟಕಿ ಮುರಿದು ಹೊರಕ್ಕೆ ಹಾರಿ ಪರಾರಿಯಾಗಿದ್ದು ಕಾಲೇಜು ಆವರಣದಲ್ಲಿ ಆತಂಕ ನೆಲೆ ಮಾಡಿದೆ. ಬೆಂಗಳೂರು ಮೂಲದ ಯಶಸ್ವಿನಿ, ದಕ್ಷತಾ ಮತ್ತು ಚಿತ್ರದುರ್ಗ ಮೂಲದ ಸಿಂಚನಾ ಪರಾರಿಯಾದ ವಿದ್ಯಾರ್ಥಿನಿಯರು. ಮುಂಜಾನೆ 3 ಗಂಟೆ ವೇಳೆಗೆ ಹೊರಕ್ಕೆ ಹಾರಿ ಹೋಗಿದ್ದಾರೆ ಎನ್ನಲಾಗುತ್ತಿದೆ. ನಾವು ಹೋಗುತ್ತಿದ್ದೇವೆ, ಕ್ಷಮಿಸಿ ಅಂತ ಪತ್ರ ಬರೆದಿಟ್ಟು ತೆರಳಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ, ಯಾರ ಉತ್ತೇಜನದಿಂದ ಹೊರ ತೆರಳಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಹಿಜಾಬ್‌ ಪ್ರಕರಣ ಬಹುದೊಡ್ಡ ಪಿತೂರಿಯಾಗಿದ್ದು, ಇದರ ಹಿಂದೆ ಪಿಎಫ್‌ಐ ಸಂಘಟನೆ ಇದೆ. ಧಾರ್ಮಿಕ ಸಾಮರಸ್ಯವನ್ನು ಕದಡಿ ಆಂದೋಲನ ಸೃಷ್ಟಿ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಹಿಜಾಬ್‌ ಚಳವಳಿ ಪ್ರಾರಂಭಿಸಿ ಬಳಿಕ ಶಿಕ್ಷಣ ಸಂಸ್ಥೆಗಳಲ್ಲಿ ಮುಂದುವರಿಸಲಾಗಿತ್ತು ಎಂದು ರಾಜ್ಯ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ (Solicitor General) ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದಾರೆ. ಸತತ 8 ದಿನಗಳಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಹಿಜಾಬ್‌ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಅರ್ಜಿದಾರರ ಪರವಾಗಿ ಸತತ 8 ದಿನಗಳ ಕಾಲ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ದುಷ್ಯಂತ್‌ ದವೆ, ದೇವದತ್‌ ಕಾಮತ್‌, ಸಲ್ಮಾನ್‌ ಖುರ್ಷಿದ್‌ ಸೇರಿ 17 ವಕೀಲರು ವಾದ ಮಂಡಿಸಿದರು. ಮಂಗಳವಾರ ರಾಜ್ಯ ಸರ್ಕಾರದ ಪರ ತುಷಾರ್‌ ಮೆಹ್ತಾ ವಾದ ಮಂಡಿಸಿ, ಆಂದೋಲನ ರೂಪಿಸುವ ಉದ್ದೇಶದಿಂದಲೇ ಹಿಜಾಬ್‌ ಹೋರಾಟ ರೂಪಿಸಲಾಗಿತ್ತು. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪಿಎಫ್‌ಐ ಇದರ ಭಾಗ ಆಗಿತ್ತು. ಇದು…

Read More

ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಸೆಪ್ಟೆಂಬರ್ 20 ರಂದು ವೃದ್ಧ ಮಹಿಳೆಯೋರ್ವರು ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಬ್ಯಾಗಿನಿಂದ ಪರ್ಸ್ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪರ್ಸ್ ಕಳೆದುಕೊಂಡಿರುವ ಮಹಿಳೆ ಪುತ್ತೂರು ಯೋಜನಾಧಿಕಾರಿ ಸುಕನ್ಯಾ ಎಂದು ತಿಳಿದುಬಂದಿದೆ. ಅವರು ಮಂಗಳವಾರ ಕಲ್ಲಡ್ಕದಿಂದ ಬಸ್ಸಿನಲ್ಲಿ ಹತ್ತಿದ್ದು ಪುತ್ತೂರಿನಲ್ಲಿ ಇಳಿಯುವ ಸಂದರ್ಭ ಬ್ಯಾಗಿನೊಳಗೆ ಇದ್ದ ಪರ್ಸು ಕಾಣೆಯಾಗಿರುವ ಬಗ್ಗೆ ತಿಳಿದು ಪರ್ಸ್ ಕಳ್ಳತನವಾಗಿರುವ ಬಗ್ಗೆ ಪುತ್ತೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಸ್ಸಿನ ವಿವರ ಸಂಗ್ರಹಿಸಿದಾಗ ಮಹೇಶ್ ಬಸ್ಸು ಇದಾಗಿದ್ದು ಬಸ್ಸಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ ಕಾರಣ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬೊಳುವಾರು ಬಳಿ ಬಸ್ಸಿನಲ್ಲಿ ಸುಕನ್ಯಾ ರವರ ಬಳಿ ಕುಳಿತಿದ್ದ ಕಳ್ಳಿ ಬ್ಯಾಗಿನಿಂದ ಪರ್ಸ್ ಎಗರಿಸುವ ವಿಡಿಯೋ ಕಂಡು ಬಂದಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ಕಳ್ಳತನದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Read More