ಕಾರವಾರ: ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದ ಬೋಟ್ ಒಂದನ್ನು ಉಡುಪಿಗೆ ಎಳೆದೊಯ್ಯುವ ವೇಳೆ ಮಲ್ಪೆ ಸಮೀಪ ಸಮುದ್ರದಲ್ಲಿ ಮುಳುಗಿ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಏಳು ಮಂದಿ ಮೀನುಗಾರರನ್ನ ಪಾರು ಮಾಡಲಾಗಿದೆ. ಕಾರವಾರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಬೋಟ್ ಒಂದು ಕೆಟ್ಟು ನಿಂತಿತ್ತು. ಕೆಟ್ಟು ನಿಂತ ಬೋಟನ್ನ ಆರು ಬೋಟುಗಳ ನೆರವಿನಿಂದ ಎಳೆದೊಯ್ಯಲಾಗುತ್ತಿತ್ತು. ಉಡುಪಿಯ ಮಲ್ಪೆ ಸಮೀಪಿಸುತ್ತಿದ್ದಂತೆ ಕಡಲಿನಲ್ಲಿ ಉಂಟಾದ ಪ್ರಕ್ಷುಬ್ಧತೆಯಿಂದ ಬೋಟಿನಲ್ಲಿ ನೀರು ತುಂಬಲಾರಂಭಿಸಿದೆ. ತಕ್ಷಣ ಇತರ ಬೋಟುಗಳಲ್ಲಿದ್ದವರು ನೀರು ತುಂಬುತ್ತಿದ್ದ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರನ್ನ ತಮ್ಮ ಬೋಟಿಗೆ ಕರೆದುಕೊಂಡಿದ್ದಾರೆ. ನಾಲ್ವರು ಆಂಧ್ರಪ್ರದೇಶ ಹಾಗೂ ಮೂವರು ಭಟ್ಕಳದ ಮೀನುಗಾರರು ಈ ಬೋಟಿನಲ್ಲಿದ್ದರು. ಮೀನುಗಾರರು ಸುರಕ್ಷಿತವಾಗಿ ಇನ್ನೊಂದು ಬೋಟನ್ನ ಹತ್ತುತ್ತಿದ್ದಂತೆ ಕೆಟ್ಟಿದ್ದ ಬೋಟಿನಲ್ಲಿ ಸಂಪೂರ್ಣ ನೀರು ತುಂಬಿ ನೋಡ ನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗಡೆಯಾಗಿದೆ.
Author: main-admin
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿರುವ ಎಸ್.ಡಿ.ಪಿ.ಐ. ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮನೆಗೆ ಗುರುವಾರ ಬೆಳಗ್ಗೆ ಎನ್.ಐ.ಎ. ಅಧಿಕಾರಿಗಳ ತಂಡ ಬಂಟ್ವಾಳ ಪೊಲೀಸರ ಸಹಕಾರದಿಂದ ದಾಳಿ ನಡೆಸಿ ವಿಚಾರಣೆ ನಡೆಸಿದೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿಯಾಝ್, ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಎನ್.ಐ.ಎ. ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾನು ರಾಷ್ಟ್ರೀಯ ಕಾರ್ಯದರ್ಶಿ ಆಗಿರುವುದರೊಂದಿಗೆ ಬಿಹಾರದ ಉಸ್ತುವಾರಿಯೂ ಆಗಿರುತ್ತೇನೆ, ಅಲ್ಲಿಗೆ ಆಗಾಗ ಹೋಗುತ್ತಿರುತ್ತೇನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಘಟನೆಗೂ ತನಗೂ ಸಂಬಂಧವಿದೆಯೇ ಎಂಬುದನ್ನು ವಿಚಾರಿಸಲು ಬಂದಿದ್ದರು. ನನ್ನ ಮನೆಗೆ ಆಗಮಿಸಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ವಿಚಾರಣೆ ನಡೆಸಿ, ಕೆಲವೊಂದು ದಾಖಲೆಗಳು ಹಾಗೂ ನನ್ನ ಹಾಗೂ ನನ್ನ ಪತ್ನಿಯ ಮೊಬೈಲ್ ಫೋನುಗಳನ್ನು ಅವರು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು. ತನಿಖೆ ಪಾರದರ್ಶಕವಾಗಿರಲಿ ಎಂದವರು ಒತ್ತಾಯಿಸಿದರು.
ಮಂಗಳೂರು: ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್ – ಉಪ ಮೆಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಾಳೆ ನಡೆಯಲಿದ್ದು, ಈ ಪಟ್ಟ ಯಾರಿಗೆ ಸಿಗಲಿದೆ ಎಂಬುದರ ಕುರಿತು ಕುತೂಹಲ ಮೂಡಿಸಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮೇಯರ್ ಆಯ್ಕೆ ಪ್ರಮುಖವಾದದ್ದು. ರಾಜಕೀಯ ಅನುಭವ, ಮಹಾ ನಗರ ಪಾಲಿಕೆಯ ಮೇಲೆ ಪೂರ್ಣ ಹಿಡಿತ, ಚುನಾವಣೆ ಸಂದರ್ಭದಲ್ಲಿ ತನು ಮನ ಧನದೊಂದಿಗೆ ಓಡಾಟ ನಡೆಸುವ ಅಭ್ಯರ್ಥಿಯನ್ನು ಮೇಯರ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅನುಭವ, ಸಾಮರ್ಥ್ಯದ ಜತೆ ವಾರ್ಡ್, ಜಾತಿ ಲೆಕ್ಕಾಚಾರ ಕೂಡಾ ತುಲನೆಯಾಗುತ್ತಿದೆ. ನಾಳೆ ಬೆಳಗ್ಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಅದನ್ನು ಘೋಷಿಸಲಾಗುತ್ತದೆ. ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ.
ಪುತ್ತೂರು: ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ( KSRTC Bus ) ತನ್ನೂರಿಗೆ ತೆರಳೋದಕ್ಕೆ ಹೋದಂತ ಸಂದರ್ಭದಲ್ಲಿ, ಆತನ ಮೇಲೆ ಹಲ್ಲೆ ನಡೆಸಿ, ಹೊರಗೆ ಕಾಲಿನಿಂದ ಒದ್ದು ನಿರ್ವಾಹಕ ತಳ್ಳಿದ್ದರು. ಇದರಿಂದಾಗಿ ಅಂಗಾತವಾಗಿ ಬಸ್ ಡೋರಿನಿಂದ ಹೊರಗೆ ಬಿದ್ದಂತ ಪ್ರಯಾಣಿಕ ಗಾಯಗೊಂಡಿದ್ದನು. ಈ ಘಟನೆಯ ಹಿನ್ನಲೆಯಲ್ಲಿ ನಿರ್ವಾಹಕನನ್ನು ಅಮಾನತುಗೊಳಿಸಿ, ಸಾರಿಗೆ ನಿಗಮ ಆದೇಶಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲ ಮಾರ್ಗವಾಗಿ ಸುಳ್ಯಪದವು ಕಡೆಗೆ ಸಂಜೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಗೆ ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಏರಿದ್ದಾನೆ. ಹೀಗೆ ಬಸ್ಸನ್ನು ಏರಿದಂತ ಪ್ರಯಾಣಿಕನನ್ನು ಹತ್ತಿಸಿಕೊಳ್ಳದೇ ನಿರ್ವಾಹಕ ಕೆಳಗೆ ಇಳಿಯುವಂತೆ ಸೂಚಿಸಿದ್ದನು. ಕಂಡಕ್ಟರ್ ಮಾತಿಗೆ ಒಪ್ಪದಂತ ಪಾನಮತ್ತ ಪ್ರಯಾಣಿಕ ಮಾತ್ರ ಬಸ್ಸಿನಿಂದ ಇಳಿದಿಲ್ಲ. ಈ ವೇಳೆಗೆ ಸಿಟ್ಟುಗೊಂಡಂತ ನಿರ್ವಾಹಕ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಸ್ಸಿನ ಡೋರಿನಿಂದ ಕಾಲಿನಿಂದ ಒದ್ದಿದ್ದಾನೆ. ಆಗ ಪಾನಮತ್ತ ಪ್ರಯಾಣಿಕ ರಸ್ತೆಗೆ ಅಂಗಾತ ಬಿದ್ದು ಪೆಟ್ಟುಗೊಂಡಿರೋ ವೀಡಿಯೋ…
ಬಂಟ್ವಾಳ: ಹೇಳಿಕೆಗಳ ಮೂಲಕ ಪ್ರಸಿದ್ಧ ಪಡೆದಿದ್ದ ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳೀಯ ಎಸ್‌ಡಿಪಿಐ ಮುಖಂಡರು ಮನೆ ಮುಂದೆ ಜಮಾಯಿಸಿದ್ದು, ‘ಗೋ ಬ್ಯಾಕ್’ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಸಂಬಂಧ ಎರಡು ದಿನಗಳ ಹಿಂದೆ ಏಕಕಾಲದಲ್ಲಿ ಸುಮಾರು 33 ಕಡೆಗೆ ದ.ಕ.ಜಿಲ್ಲೆಯ ಎಸ್.ಡಿ.ಪಿ.ಐ. ಹಾಗೂ ಇತರ ಸಂಘಟನೆಗಳ ಪ್ರಮುಖರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದ ಎನ್.ಐ.ಎ, ದಾಳಿ ಮುಂದುವರಿಸಿದೆ. ಸುಮಾರು ಐವತ್ತಕ್ಕೂ ಅಧಿಕ ಎಸ್.ಡಿ.ಪಿ.ಐ ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕಳೆದ ಕೆಲ ದಿನಗಳಿಂದ ಎನ್.ಐ. ಎ. ಸಕ್ರಿಯವಾಗಿ ವಿವಿಧೆಡೆ ದಾಖಲೆ ಪರಿಶೀಲನೆಗಾಗಿ ಭೇಟಿ ನೀಡುತ್ತಿದ್ದು, ಇದು ಅದರ ಪ್ರಕ್ರಿಯೆಯ ಮುಂದುವರಿದ ಭಾಗವಾಗಿದೆ ಎನ್ನಲಾಗಿದೆ.
ಬೆಳ್ತಂಗಡಿ: ಕಡತ ದುರುಪಯೋಗ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಹೋಬಳಿ ವ್ಯಾಪ್ತಿಗೆ ಒಳಪಟ್ಟ ತಣ್ಣೀರುಪಂತ, ಪುತ್ತಿಲ, ಬಾರ್ಯ, ಕರಾಯ ಗ್ರಾಮದ ಗ್ರಾಮಕರಣಿಕ ಜಯಚಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜಯಚಂದ್ರ ಪಿ.ಎನ್. 2018ರಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಕೊಕ್ಕಡ ಹೋಬಳಿಯ ಎನ್‌ಸಿಆರ್ ಫೈಲ್‌ಗಳ ಕೇಸ್ ವರ್ಕರ್ ಆಗಿದ್ದ. ಈ ವೇಳೆ ಆತ ಅಕ್ರಮ ಲಾಭಗಳಿಸುವ ದುರುದ್ದೇಶದಿಂದ ಸರಕಾರಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ತಾಲೂಕು ಕಚೇರಿಗೆ ಸಾರ್ವಜನಿಕರಿಂದ ಬಂದ ಎನ್‌ಸಿಆರ್ ಫೈಲ್‌ಗಳನ್ನು ಮತ್ತೋರ್ವ ಆರೋಪಿ ರಾಜು ಎಂಬಾತನಿಗೆ ನೀಡಿ ಸಾರ್ವಜನಿಕರಿಗೆ ವಂಚನೆ ಹಾಗೂ ನಂಬಿಕೆಗೆ ದ್ರೋಹ ಎಸಗಿದ್ದರು. ಈ ವಂಚನೆ ಆರೋಪದ ಬಗ್ಗೆ ಆ.16 ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆ .7ರಂದು ಜಯಚಂದ್ರನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ: ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಗುಲಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಕಡಬದಲ್ಲಿ ನಡೆದಿದೆ. ಕುಂತೂರು ಕಾಲಾಯಿಲ್ ನಿವಾಸಿ ಮನೋಜ್(43) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮನೋಜ್ ಅವರು ಮರದ ಕೊಂಬೆಯೊಂದು ಕಡಿಯುವಾಗ 33 kv ವಿದ್ಯುತ್ ತಂತಿ ತಾಗಿ ದುರ್ಮರಣ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.
ಮಣಿಪಾಲ: ಬೆಂಗಳೂರಿನ ಮಣಿಪಾಲ್ ಗ್ರೂಪ್ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಮಣಿಪಾಲದಲ್ಲೂ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.ಬೆಳಿಗ್ಗೆ ಮಣಿಪಾಲಕ್ಕೆ ಆಗಮಿಸಿದ ಆದಾಯ ತೆರಿಗೆ ಅಧಿಕಾರಿಗಳ ತಂಡ ,ಮಣಿಪಾಲ್ ಗ್ರೂಪ್ ನ ಫೈನಾನ್ಸ್ ವಿಭಾಗದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿ ನಿಂದ ಬಾಡಿಗೆ ಕಾರಿನ ಮೂಲಕ ಅಧಿಕಾರಿಗಳ ತಂಡ ಬೆಳ್ಳಂಬೆಳಿಗ್ಗೆ ಇಲ್ಕಿಗೆ ಆಗಮಿಸಿತ್ತು. ಸದ್ಯ ದಾಖಲೆಗಳನ್ನು ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು, ಸಂಜೆತನಕ ದಾಖಲೆಗಳನ್ನು ಜಾಲಾಡುವ ಸಾಧ್ಯತೆ ಇದೆ.
ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ ಹಾಗೂ ಮೂಡುಬಿದಿರೆಯ ಆಳ್ವಾಸ್ ಮೈದಾನದಲ್ಲಿ 50 ಸಾವಿರ ಯೋಗಪಟುಗಳ ಸೇರುವಿಕೆಯಲ್ಲಿ ಆ.17ರಂದು ಯೋಗಥಾನ್ ಕಾರ್ಯಕ್ರಮ ನಡೆಯಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು. ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಯೋಗಥಾನ್-2022 ಆಯೋಜನೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಣ್ಣೀರುಬಾವಿ ಬೀಚ್ ನಲ್ಲಿ 40,000 ಹಾಗೂ ಆಳ್ವಾಸ್ ಮೈದಾನದಲ್ಲಿ 10,000 ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಸಾರ್ವಜನಿಕ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರಕ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅವರು ನಿರ್ದೇಶನ ಮಾಡಿದರು. ಸೆ.17ರ ಬೆಳಗ್ಗೆ 9ರಿಂದ 10ರವರೆಗೆ ನಡೆಯುವ ಯೋಗಥಾನ್‍ಗೆ ಜಿಲ್ಲೆಯ 50 ಸಾವಿರಕ್ಕೂ ಅಧಿಕ ಯೋಗಪಟುಗಳ ನೋಂದಣಿಯಾಗಬೇಕು, ಕೂಡಲೇ ನೋಂದಣಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು. ಜಿಲ್ಲೆಯ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ಯೋಗಥಾನ್‍ನಲ್ಲಿ ಭಾಗವಹಿಸಲು ಜಾಗೃತಿ ಮೂಡಿಸುವಂತೆ ಆಯಾ ಕಾಲೇಜುಗಳ ನೋಡಲ್ ಅಧಿಕಾರಿಗಳಿಗೆ ಸೂಚಿಸಬೇಕು. ಈ…
ನವದೆಹಲಿ: ‘ಕಾರು ಮತ್ತು ಎಸ್‌ಯುವಿ ಗಳ ಹಿಂದಿನ ಆಸನಗಳಲ್ಲಿ ಕುಳಿತು\ ಪ್ರಯಾಣಿಸುವವರು ಕೂಡ ಸೀಟ್ ಬೆಲ್ಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗು ವುದು. ಸೀಟ್ ಬೆಲ್ಟ್ ಧರಿಸದವರಿಗೆ ದಂಡ ಹಾಕಲಾಗುವುದು. ಈ ಕುರಿತ ಅಧಿಸೂಚನೆಯನ್ನು ಮೂರು ದಿನಗಳಲ್ಲಿ ಹೊರಡಿಸಲಾಗುವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ‘ಹಿಂದಿನ ಆಸನಗಳಲ್ಲಿ ಕುಳಿತವರು ಕೂಡ ಸೀಟ್ ಬೆಲ್ಟ್ ಧರಿಸುವುದರ ಮಹತ್ವದ ಬಗ್ಗೆ ಕ್ರಿಕೆಟ್ ಆಟಗಾರರು ಮತ್ತು ಬಾಲಿವುಡ್ ತಾರೆಯರನ್ನು ಬಳಸಿ ಜಾಗೃತಿ ಮೂಡಿಸಲಾಗುವುದು’ ಎಂದೂ ಹೇಳಿದ್ದಾರೆ.