ಬೆಂಗಳೂರು: ಆಹಾರ ಮತ್ತು ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಕತ್ತಿ (61) ಅವರು ಇಂದು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ತಂದೆಯ ಅಗಲಿಕೆ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ್ದ ಉಮೇಶ್ ಕತ್ತಿ, ತಂದೆಯಂತೆಯೇ ಹೃದಯಾಘಾತಕ್ಕೀಡಾಗಿ ಅಗಲಿದ್ದಾರೆ. ಉಮೇಶ್ ಕತ್ತಿಯವರ ತಂದೆ ವಿಶ್ವನಾಥ ಕತ್ತಿ ಅವರು ಕೂಡ ಹೃದಯಾಘಾತದಿಂದಲೇ ಸಾವಿಗೀಡಾಗಿದ್ದರು. ಅವರು ವಿಧಾನಸಭೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು. ತಂದೆಯ ಮರಣದ ಬಳಿಕ ಉಮೇಶ್ ಕತ್ತಿ ರಾಜಕೀಯಕ್ಕೆ ಪ್ರವೇಶಿಸಿದ್ದರು.
Author: main-admin
ತೊಕ್ಕೊಟ್ಟು: ತೆಂಗಿನ ಕಾಯಿ ಕೀಳಲು ಮರವೇರಿದ್ದ ವೇಳೆ ಕಣಜದ ಹುಳುಗಳು ದಾಳಿ ನಡೆಸಿದ ಪರಿಣಾಮ ಕಾಯಿ ಕೀಳುವವ ಗಂಭೀರ ಗಾಯಗೊಂಡದ್ದಲ್ಲದೆ, ರಸ್ತೆಯಲ್ಲಿ ಹೋಗುತ್ತಿದ್ದ ತಂದೆ, ಮಗಳಿಗೂ ಹುಳುಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತೊಕ್ಕೊಟ್ಟು ಸಮೀಪದ ಉಳ್ಳಾಲ ಬೈಲು ಎಂಬಲ್ಲಿ ನಡೆದಿದೆ. ಉಳ್ಳಾಲ ಬೈಲು ನಿವಾಸಿ ಜಿತನ್ ರೆಸ್ಕಿನ ಅವರು ಕಣಜದ ಹುಳುವಿನ ದಾಳಿಯಿಂದ ಗಂಭೀರ ಗಾಯಗೊಂಡು ನಗರದ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿತನ್ ಅವರು ವೃತ್ತಿ ಪರ ತೆಂಗಿನ ಕಾಯಿ ಕೀಳುವವರಾಗಿದ್ದು ಇಂದು ಬೆಳಿಗ್ಗೆ ಉಳ್ಳಾಲ ಬೈಲಿನ ಭವಾನಿ ಎಂಬವರ ಮನೆಯಲ್ಲಿ ಮರವೇರುವ ಯಂತ್ರದ ಮೂಲಕ ಕಾಯಿ ಕೀಳುತ್ತಿದ್ದ ವೇಳೆ ಮರದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾ ಏಕಿ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ನೊಣಗಳ ದಾಳಿಯ ರಭಸಕ್ಕೆ ಜಿತನ್ ಅವರು ಮರದಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಪಕ್ಕದ ರಸ್ತೆಯಲ್ಲಿ ಮಗಳನ್ನ ಶಾಲಾ ವಾಹನಕ್ಕೆ ಬಿಡಲು ತೆರಳುತ್ತಿದ್ದ ಸ್ಥಳೀಯ ಬಾಡಿಗೆ…
ಕಾರವಾರ: ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಅಂಕೋಲಾ ಅವರು ಉತ್ತರ ಕನ್ನಡ ಜಿಲ್ಲಾ ಶಾಸನ ಸಂಪುಟದ ರಚನೆಯ ಹಿನ್ನೆಲೆಯಲ್ಲಿ ಕುಮಟಾ ತಾಲೂಕಿನ ಕೋಡ್ಕಣಿಯಲ್ಲಿ ಕೈಗೊಂಡ ಎರಡನೇ ಹಂತದ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಲ್ಲಿನ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿನ ತೆಂಗಿನ ಮರದ ಬುಡದಲ್ಲಿ ಹನ್ನೆರಡನೇ ಶತಮಾನದ ಅವಧಿಗೆ ಸೇರಿದ ಹೊಸ ಅಪ್ರಕಟಿತ ತಿಗಳಾರಿ ಲಿಪಿ ಮತ್ತು ಕನ್ನಡ ಭಾಷೆಯಲ್ಲಿರುವ ಶಾಸನ ಪತ್ತೆ ಮಾಡಿದ್ದಾರೆ. ಈಗ ದೊರೆತಿರುವ ತಿಗಳಾರಿ ಲಿಪಿಯಲ್ಲಿರುವ ಈ ಶಾಸನ ಒಟ್ಟೂ ಮೂವತ್ತೆರಡು ಸಾಲುಗಳಲ್ಲಿ ಬರೆದಿದ್ದು, ಶಿಶುಗಲಿ ಪಾಂಡ್ಯರ ರಾಜ ವಿಕ್ರಮ ತೈಲನದ್ದಾಗಿದೆ. ಹೆರ್ಗ್ಗಡಹೇಯ (ಬಹುಶಃ ಈಗಿನ ಹೆಗಡೆ) ಗ್ರಾಮದಲ್ಲಿ ಲಿಷ್ಣಮನ ತಮ್ಮ ನಾರಾಯಣ ಮತ್ತು ಸೀಗೆಯ ನಾರಾಯಣರು ಪ್ರತಿಷ್ಠಾಪಿಸಿದ ದೇವರಿಗೆ ನಂದಾದೀಪ ಮತ್ತು ನೈವೇದ್ಯಕ್ಕಾಗಿ ವಿಕ್ರಮತೈಲ ಭೂಮಿದಾನ ನೀಡಿದ ವಿಷಯ ತಿಳಿಸುತ್ತದೆ. ಮುಂದುವರೆದ ಶಾಸನ ಹಟ್ಟಣದ (ಪಟ್ಟಣದ) ತೈಲನೂ ದೇವರಿಗೆ ಭೂಮಿ ಮತ್ತು ಹಣದಾನ ನೀಡಿದ್ದನ್ನು ಶಾಸನ ಉಲ್ಲೇಖಿಸುತ್ತದೆ. ಈ ಶಾಸನದಲ್ಲಿ ಸ್ಪಷ್ಟವಾದ ತೇದಿಯ ಉಲ್ಲೇಖವಿಲ್ಲ. ಕೇವಲ ಮೀನದ ಬೃಹಸ್ಪತಿ…
ಚಾಮರಾಜನಗರ : ತಾಯಿಯಿಂದ ತಪ್ಪಿಸಿಕೊಂಡ ಆನೆ ಮರಿಯೊಂದು ಶಾಲೆಗೆ ಬಂದು ಮಕ್ಕಳೊಂದಿಗೆ ಆಟ ಆಡಿರುವ ಅಪರೂಪದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪುರಾಣಿ ಪೋಡಿನ ವಸತಿ ಶಾಲೆಯಲ್ಲಿ ನಡೆದಿದೆ. ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಮರಿಯಾನೆ ಪುರಾಣಿ ಪೋಡಿನ ವಸತಿ ಶಾಲೆಗೆ ಬಂದಿದೆ. ಆನೆ ಕಂಡದ್ದೇ ತಡ, ಖುಷಿಗೊಂಡ ಮಕ್ಕಳು ಆನೆ ಮರಿಯೊಂದಿಗೆ ಆಡಿ ನಲಿದಾಡಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರಿಂದ ಯಳಂದೂರು ವಲಯದ ಸಿಬ್ಬಂದಿ ಬಂದು ಗಸ್ತು ತಿರುಗಿದ್ದಾರೆ. ಈ ವೇಳೆ ತಾಯಿ ಆನೆ ಘೀಳಿಡುತ್ತಿದ್ದುದನ್ನು ಗಮನಿಸಿ, ಈರಣ್ಣ ಕಟ್ಟೆ ಪೋಡಿನ ಬಳಿ ಮರಿಯಾನೆ ತಾಯಿಯನ್ನು ಸೇರುವಂತೆ ಮಾಡಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿ ಸದಸ್ಯರುಗಳ ಚುನಾವಣೆಯನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಇದೇ ಸೆ. 09ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು: ಮಂಗಳೂರು ನಗರದ ವಿವಿಧ ಕಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕುಲಶೇಖರ ಶಕ್ತಿನಗರ ನಿವಾಸಿ ಜಗದೀಶ್ ಶೆಟ್ಟಿ (39), ಉರ್ವಸ್ಟೋರ್ ನಿವಾಸಿ ಸುಜಿತ್ ಶೆಟ್ಟಿ (40), ಪುತ್ತೂರು ಪದವಿನಂಗಡಿ ನಿವಾಸಿ ಸುರೇಶ್ ರೈ (39) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಸುಲಿಗೆ ಮಾಡಿದ್ದ 90 ಗ್ರಾಂ ತೂಕದ ಚಿನ್ನಾಭರಣ, 2 ಸ್ಕೂಟರ್ ಮತ್ತು 3 ಮೊಬೈಲ್ ಫೋನ್ ಸಹಿತ ಒಟ್ಟು 5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್‌ನಲ್ಲಿ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2 ಸರ ಸುಲಿಗೆ ಮತ್ತು ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದ ಸಿಸಿಬಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದಾಗ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು…
ಬಂಟ್ವಾಳ: ತಡರಾತ್ರಿ ಚಿರತೆಯೊಂದು ಮನೆಯ ಆವರಣದಲ್ಲಿ ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿ ಹೊತ್ತೊಯ್ದಿರುವ ಘಟನೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ನಡೆದಿದೆ. ಕಲ್ಮಲೆ ನಿವಾಸಿ ನಾರಾಯಣ ರೈ ಎಂಬುವರ ಮನೆಗೆ ಚಿರತೆ ನುಗ್ಗಿ, ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದೆ. ಇದೆ ವೇಳೆ ಅಲ್ಲೆ ಇದ್ದ ಮತ್ತೊಂದು ನಾಯಿ ರಕ್ಷಣೆಗೆ ನುಗ್ಗಿದೆ, ರಕ್ಷಣೆಗೆ ನುಗ್ಗಿದ ನಾಯಿಯನ್ನು ಕೂಡಾ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ. ಈ ವೇಳೆ ನಾಯಿಗಳು ಬೊಗಳುತ್ತಿದ್ದಂತೆ ಮನೆಮಂದಿ ಎದ್ದು ಹೊರ ಬಂದು ಕಿರುಚಾಡಿದ್ದಾರೆ. ಗಾಬರಿಗೊಂಡ ಚಿರತೆ ನಾಯಿಯನ್ನು ಹೊತ್ತೊಯ್ದಿದೆ. ಗ್ರಾಮದ ಸುತ್ತ ಗುಡ್ಡಗಾಡಿನಲ್ಲಿ ಚಿರತೆ ಆಗಾಗ ಪ್ರತ್ಯಕ್ಷವಾಗಿ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ.
ಬ್ರಹ್ಮಾವರ: ಹಣ ನೀಡುವಂತೆ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದಾಗಿ ಬ್ರಹ್ಮಾವರದ ಪ್ರಜ್ಞಾ ಎಂಬವರು ತಮ್ಮಗಂಡ ಭರತ್ ರಾಜ್ ಸೇರಿದಂತೆ ಆತನ ಮನೆಯ 8 ಮಂದಿ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳುವಾಯಿಯ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತೆಯಾಗಿ ಕೆಲಸ ಮಾಡಿಕೊಂಡಿರುವ ಪ್ರಜ್ಞಾ.ಜೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಬ್ರಹ್ಮಾವರದ ಪೇತ್ರಿಯ ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಗುಮಾಸ್ತನಾಗಿದ್ದ ಕೊಕ್ಕರ್ಣೆಯ ಭರತ್ ರಾಜ್‌ನೊಂದಿಗೆ ಪೆರ್ಡೂರಿನಲ್ಲಿ ಮದುವೆ ಆಗಿದ್ದರು. ಮದುವೆಯ ಸಮಯ ಪ್ರಜ್ಞಾ ಅವರ ತವರು ಮನೆಯಿಂದ 20 ಪವನ್ ಚಿನ್ನ ಹಾಗೂ 10 ಲಕ್ಷ ರೂ. ಹಣದೊಂದಿಗೆ ಮದುವೆಯ ಖರ್ಚು ವೆಚ್ಚ ನೋಡಿಕೊಂಡಿದ್ದರು. ಮಾತ್ರವಲ್ಲದೆ ಮದುವೆಗೆ ಮುಂಚಿತವಾಗಿ ಆರೋಪಿ ಪತಿ ಭರತ್ ರಾಜ್ ಒಂದು ಲಕ್ಷ ಹಣವನ್ನು ಪಡೆದುಕೊಂಡಿದ್ದ. ಮದುವೆಯ ದಿನದಿಂದಲೇ ಆರೋಪಿ ಭರತ್ ಹಾಗೂ ಆತನ ತಂದೆ ಸದಾನಂದ ಕೂಡಾ ಹಣಕ್ಕಾಗಿ ಬೇಡಿಕೆ ಇಟ್ಟು, ಹಣ ತರದೇ ಇದ್ದಲ್ಲಿ ಮಗನಿಗೆ ಬೇರೆ ಮದುವೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಜೊತೆಗೆ ಅತ್ತೆ…
ಚಿತ್ರದುರ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮೊದಲನೇ ಆರೋಪಿ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ ಕೆ ಕೋಮಲ ಅವರು ಸೆ.14ರವರೆಗೆ ಶ್ರೀಗಳಿಗೆ ನ್ಯಾಯಾಂಗ ಬಂಧನ ಅದೇಶ ನೀಡಿದ್ದಾರೆ. ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮಠದ ಅಕ್ಕಮಹಾದೇವಿ ಹಾಸ್ಟೆಲ್ ವಾರ್ಡನ್ ರಶ್ಮಿ ಅವರನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ನಡುವೆ ಶ್ರೀಗಳು ಸಲ್ಲಿಸಿದ್ದ ಜಾಮೀನು ಅರ್ಜಿ ಕೋರ್ಟ್ ತಿರಸ್ಕರಿಸಿದೆ.
ಶೀಘ್ರದಲ್ಲಿಯೇ 900 ಪಿಎಸ್‌ಐಗಳ ನೇಮಕಾತಿ ನಡೆಯಲಿದೆ. ನೇಮಕಾತಿಯಲ್ಲಿ ಶೇ.20 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಅಂತ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಅವರು ಇಂದು ಕಸಬಾಪೇಟ ಹಾಗೂ ದಕ್ಷಿಣ ಸಂಚಾರ ಪೊಲೀಸ್ ಠಾಣೆಗಳ ಉದ್ಘಾಟನೆ ಮತ್ತು ಗೋಕುಲ ರಸ್ತೆ,ವಿದ್ಯಾನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಇದೇ ವೇಳೆ ಅವರು ಮಾತನಾಡಿ, ಎಂಟು ತಿಂಗಳ ಹಿಂದೆಯಷ್ಟೇ ಶಂಕುಸ್ಥಾಪನೆ ನೆರವೇರಿಸಿದ್ದ ಎರಡು ಪೊಲೀಸ್ ಠಾಣೆಗಳ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟಿಸಿರುವುದು ಅನುಕರಣೀಯ ಸಂಗತಿಯಾಗಿದೆ.ಈ ಹಿಂದೆ ವರ್ಷಕ್ಕೆ ರಾಜ್ಯದಲ್ಲಿ 2 ರಿಂದ 3 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು.ಈಗ ವಾರ್ಷಿಕ 100 ಕ್ಕೂ ಹೆಚ್ಚು ಠಾಣೆಗಳನ್ನು ನಿರ್ಮಿಸಲಾಗುತ್ತಿದೆ.ಶೇ.35 ರಷ್ಟಿದ್ದ ಖಾಲಿ ಹುದ್ದೆಗಳ ಪ್ರಮಾಣವನ್ನು ಶೇ.12 ಕ್ಕೆ ಇಳಿಕೆ ಮಾಡಲಾಗಿದೆ.ಶೀಘ್ರದಲ್ಲಿಯೇ 900 ಪಿಎಸ್‌ಐಗಳ ನೇಮಕಾತಿ ನಡೆಯಲಿದೆ.ನೇಮಕಾತಿಯಲ್ಲಿ ಶೇ.20 ರಷ್ಟು ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.ಪೊಲೀಸ್ ಇಲಾಖೆಗೆ ಈ ವರ್ಷ ಅತ್ಯಂತ ಸವಾಲಿನದಾಗಿತ್ತು.ಹುಬ್ಬಳ್ಳಿ ಗಲಭೆಯನ್ನು ಇಲ್ಲಿನ ಪೊಲೀಸ್ ಆಯುಕ್ತ ಲಾಭೂರಾಮ್ ನೇತೃತ್ವದ ತಂಡ ಅತ್ಯಂತ…