ಬೆಂಗಳೂರು: ನೂತನವಾಗಿ ರಾಜ್ಯಸಭಾ ಸದಸ್ಯನಾಗಿ ಅಧಿಕಾರವನ್ನು ಅಲಂಕರಿಸಿರುವ ಡಾ. ವಿರೇಂದ್ರ ಹೆಗ್ಗಡೆಯವರ ಮನವಿ ಮೇರೆಗೆ ಸಪ್ಟೆಂಬರ್ 1ರಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರು ಸೆ.1ರ ಬೆಳಿಗ್ಗೆ 11.30ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಎಸ್‌ಡಿಎಂ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕ್ಯಾಂಪಸ್‌ಗೆ ಬೇಟಿ ನೀಡಲಿದ್ದಾರೆ. ಡಾ. ಹೆಗ್ಗಡೆಯವರ ಕೋರಿಕೆ ಮೇರೆಗೆ ಯೋಗಿಯವರು ರಾಜ್ಯ ಪ್ರವಾಸ ಕೈಗೊಂಡಿದ್ದು ಈ ಸಂದರ್ಭ ಪಕ್ಷದಿಂದ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿಲ್ಲ.
Author: main-admin
ಭಟ್ಕಳ: ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿರುವ ಘಟನೆ ಜಾಲಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಮೀನುಗಾರ ನಾಪತ್ತೆಯಾಗಿದ್ದು, (Missing) ಇಬ್ಬರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ದೋಣಿ ಮುಳುಗಡೆಯಾಗಿ ನಾಪತ್ತೆಯಾದ ಮೀನುಗಾರರ ಜಾಲಿ ನಿವಾಸಿ ನಾಗರಾಜ ರಾಮಕೃಷ್ಣ ಮೊಗೇರ ಎಂದು ತಿಳಿದುಬಂದಿದೆ. ರವಿಕ್ಟರ್ ರಾಜ ಹಾಗೂ ಪುರುಷೋತ್ತಮ ಮೊಗೇರ ಎಂಬವರನ್ನು ರಕ್ಷಿಸಲಾಗಿದೆ. ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕುಕಾಟ ಮುಂದುವರಿದಿದೆ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆ ಸೂತ್ರಧಾರ ಹಾಗೂ ಅರ್ಥಧಾರಿ, ಹಿರಿಯ ಗೊಂಬೆಯಾಟ ಕಲಾವಿದ ಹೆಮ್ಮಾಡಿ ಹೇಮಾಪುರ ನಿವಾಸಿ ನಾರಾಯಣ ಬಿಲ್ಲವ (63) ಅನಾರೋಗ್ಯದಿಂದ ಸೋಮವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನಾರಾಯಣ ಬಿಲ್ಲವ ಅವರು ಕಳೆದ 43 ವರ್ಷದಿಂದ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಖಾಯಂ ಕಲಾವಿದರಾಗಿದ್ದು, ವಿದೇಶದಲ್ಲಿ ನಡೆದ ಗೊಂಬೆಯಾಟ ಪ್ರದರ್ಶನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅರ್ಥ ಹೇಳುತ್ತಿದ್ದರು. ಕನ್ನಡ, ಕೊಂಕಣಿ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ಹಿಡಿತ ಹೊಂದಿದ್ದ ಅವರು ಗೊಂಬೆಯಾಟದ ಸೂತ್ರಧಾರಿ ಹಾಗೂ ಅರ್ಥಧಾರಿಯಾಗಿ ಜನ ಮಾನಸದಲ್ಲಿ ನೆಲೆಯೂರಿದ್ದರು. ಉಪ್ಪಿನಕುದ್ರು ಗೊಂಬೆಯಾಟದ ಸಂಸ್ಥಾಪಕ ಕೊಗ್ಗ ದೇವಣ್ಣ ಕಾಮತ್ ಅವರ ಒಡನಾಡಿಯಾಗಿದ್ದು, ಅವರೊಟ್ಟಿಗೂ ತಿರುಗಾಟ ಮಾಡಿದ್ದ ಅವರು, ಮುಂದೆ ಕೊಗ್ಗ ಕಾಮತ್ ಅವರ ಪುತ್ರ ಭಾಸ್ಕರ ಕೊಗ್ಗ ಕಾಮತ್ ಜೊತೆ ಕಲಾವಿದರಾಗಿ ಮುಂದುವರಿದಿದ್ದರು. ಓದಿದ್ದು ಸ್ವಲ್ಪವಾದರೂ ಇಂಗ್ಲಿಷ್, ಹಿಂದಿ ಭಾಷೆಯ ಮೇಲಿನ ಅವರ ಹಿಡಿತ ನಿಜಕ್ಕೂ ಅದ್ಭುತವಾಗಿತ್ತು. ಕೊಂಕಣಿ ಭಾಷೆ ನಿರರ್ಗಳವಾಗಿ ಹರಿದು ಬರುತ್ತಿತ್ತು. ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು.…
ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಆಗಮಿಸುತ್ತಿದ್ದು, ಆದರೆ ಮೋದಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಸೆಪ್ಟೆಂಬರ್ 2ರ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮಂಗಳೂರಿಗೆ ಆಗಮಿಸಲಿರುವ ಮೋದಿ, ಮಧ್ಯಾಹ್ನ 3 ಗಂಟೆ ವೇಳೆಗೆ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೊದಲು ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಈಗ ಮಧ್ಯಾಹ್ನವೇ ನಡೆಯಲಿದೆ. ಸೆಪ್ಟೆಂಬರ್ 2 ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುವುದು ದೃಢಪಟ್ಟಿದ್ದು, ಆದರೆ, ಮೋದಿ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಸೆಪ್ಟೆಂಬರ್ 2ರ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮಂಗಳೂರಿಗೆ ಮೋದಿ ಆಗಮಿಸುತ್ತಿದ್ದು, ಮಧ್ಯಾಹ್ನ 1.30ರಿಂದ 2.30ರ ವರೆಗೆ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕೊಚ್ಚಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಲಿರುವ ಮೋದಿ, ಮಂಗಳೂರು ಏರ್‌ಪೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಮಂಗಳೂರು ಬಂದರಿನ ಹೆಲಿಪ್ಯಾಡ್‌ನಲ್ಲಿ ಲ್ಯಾಂಡಿಂಗ್ ಆಗಲಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಸಮಾವೇಶ ನಡೆಯುವ ಸ್ಥಳವಾದ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ರಸ್ತೆ ಮೂಲಕ ಪ್ರಧಾನಿ…
ಮಂಗಳೂರು: ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದ ಹಿನ್ನೆಲೆ ಮುಂಜಾಗರೂಕತೆಯ ಕ್ರಮವಾಗಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ ಅಲೆಮಾರಿಗಳನ್ನು ಪೊಲೀಸರು ಬೆದರಿಸಿ ತೆರಳುವಂತೆ ಸೂಚಿಸಿದ್ದು ಅಲೆಮಾರಿಗಳನ್ನು ಬೀದಿಪಾಲು ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಪೊಲೀಸರು ಬಂಗ್ರಕೂಳೂರು ಪ್ರದೇಶಕ್ಕೆ ತೆರಳಿ ಅಲ್ಲಿ ಟೆಂಟ್ ಹಾಕಿ ಬದುಕು ಸಾಗಿಸುತ್ತಿದ್ದ 9 ಕುಟುಂಬಗಳನ್ನು ತೆರವುಗೊಳಿಸಿದ್ದು ಇದರಿಂದ ಸುಮಾರು 30ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಭದ್ರತೆ ದೃಷ್ಠಿಯಿಂದ ಕೂಳೂರಿನಲ್ಲಿ ವಾಸವಿದ್ದ ಕುಟುಂಬಕ್ಕೆ ತಾತ್ಕಾಲಿಕ ವ್ಯವಸ್ಥೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಭದ್ರತೆ ಮತ್ತು ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಲಭ್ಯವಿರುವ ಪ್ರತಿಯೊಂದು ಸ್ಥಳವನ್ನು ಬಳಸಿಕೊಳ್ಳಲು ಪೊಲೀಸರು ಅವರನ್ನು ಸ್ಥಳಾಂತರಿಸಲು ಕೇಳಿಕೊಂಡಿದ್ದಾರೆ. ತಾತ್ಕಾಲಿಕ ವಸತಿಗಾಗಿ ಅವರಿಗೆ ಹತ್ತಿರದ ಸ್ಥಳಗಳನ್ನು ಒದಗಿಸಲಾಗುವುದು ಎಂದಿದ್ದಾರೆ.
ಕಾಸರಗೋಡು: ಸುಮಾರು ಹತ್ತು ಕೋಟಿ ಮೌಲ್ಯದ ತಿಮಿಂಗಿಲದ ವಾಂತಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಕಾಸರಗೋಡುವಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಞಂಗಾಡ್ ಕೊವ್ವಲ್ ಪಳ್ಳಿಯ ನಿಶಾಂತ್ ಕೆ.ವಿ (41), ಕಾಞಂಗಾಡ್ ಮುರಿಯನಾವಿಯ ಸಿದ್ದೀಕ್ ಮಾಡಂಬಿಲ್ಲತ್ (31) , ಕೊಟ್ಟೋಡಿಯ ದಿವಾಕರ (38) ಬಂಧಿತ ಆರೋಪಿಗಳು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾಞಂಗಾಡ್ ಡಿವೈಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಾಞಂಗಾಡ್ ಗ್ರೀನ್ ಲ್ಯಾಂಡ್ ಟೂರಿಸ್ಟ್ ಹೋಂ ನಿಂದ ತಿಮಿಂಗಿಲ ವಾಂತಿ ಸಹಿತ ಮೂವರನ್ನು ವಶಪಡಿಸಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.
ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ರಾಜ್ಯದ ಹಿಜಾಬ್ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿರುವಂತ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿಕೆ ಮಾಡಿದೆ. ಮೇಲ್ಮನವಿಗಳ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ನಡೆಸಲಿದೆ ಎನ್ನಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 5ಕ್ಕೆ ಮುಂದೂಡಿಕೆ ಮಾಡಿದೆ ಎಂದು ವರದಿಯಾಗಿದೆ. ಇದೇ ವೇಳೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿರುವ ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡುವಂತೆ ಕೋರುವ ಮನವಿಯನ್ನು ಸ್ವೀಕರಿಸುವುದಿಲ್ಲ ಎಂದಿದೆ.
ಸುಳ್ಯ: ಡಿಡೀರ್ ಪ್ರವಾಹ ಉಂಟಾಗಿ ಪಯಸ್ವಿನಿ ನದಿ ಉಕ್ಕಿ ಹರಿದು ಹಲವೆಡೆ ನೀರು ನುಗ್ಗಿ ಆವಾಂತರ ಸೃಷ್ಠಿಯಾದ ಘಟನೆ ನಡೆದಿದೆ. ಇಂದು ಬೆಳಿಗ್ಗಿನ ಜಾವ ಪಯಸ್ವಿನಿ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ನೀರು ತುಂಬಿ ಹರಿಯಿತು. ಹಲವು ಕಡೆಗಳಲ್ಲಿ ನದೀ ಬದಿಯ ಪ್ರದೇಶಗಳಿಗೆ ನೀರು ನುಗ್ಗಿದೆ. ಕೊಯನಾಡು ಶಾಲೆ ಬಳಿಯ 5 ಮನೆಗಳು ಜಲಾವೃತವಾಯಿತು. ಬಳಿಕ ಈ ಮನೆಯವರನ್ನು ಸುರಕ್ಷಿತ ಸ್ಣಳಗಳಿಗೆ ಸ್ಥಳಾಂತರಿಸಲಾಯಿತು. ಭಾರೀ ಗಾತ್ರದ ಮರಗಳು ಪ್ರವಾಹ ನೀರಿನಲ್ಲಿ ಕೊಚ್ಚಿ ಬಂದು ಕೊಯನಾಡಿನ ಕಿಂಡಿ ಅಣೆಕಟ್ಟಿನಲ್ಲಿ ಅಡ್ಡಲಾಗಿ ನಿಂತಿದೆ. ಹಲವೆಡೆ ಕೃಷಿ, ತೋಟಗಳಿಗೆ ನೀರು ನುಗ್ಗಿದೆ. ಊರುಬೈಲು, ಚೆಂಬು ಭಾಗದಲ್ಲಿ ಸೇತುವೆಗೆ ಹಾನಿಯಾಗಿರುವ ಬಗ್ಗೆ ವರದಿ ಯಾಗಿದೆ. ಸಂಪಾಜೆ ಭಾಗದಲ್ಲಿ ಮಳೆ ಕಡಿಮೆ ಇದ್ದರೂ ಪ್ರವಾಹ ಬಂದು ನದಿ ಉಕ್ಕಿ ಹರಿದು ನೀರು ನುಗ್ಗಿದ ಕಾರಣ ಜನರಲ್ಲಿ ಆತಂಕ ಸೃಷ್ಠಿಯಾ ಯಿತು. ಪಯಸ್ವಿನಿ ನದೀ ಪಾತ್ರದ ಗೂನಡ್ಕ, ಪೇರಡ್ಕ ಭಾಗದಲ್ಲಿಯೂ ನೀರು ನುಗ್ಗಿದೆ. ಪಯಸ್ವಿನಿ ಉದ್ಭವ ಭಾಗದಲ್ಲಿ ಭಾರೀ ಮಳೆಯಾ…
ಉಡುಪಿ: ಬಡ ಮಕ್ಕಳ ಚಿಕಿತ್ಸೆಗಾಗಿ ಪ್ರತಿವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ವಿಶಿಷ್ಟ ವೇಷಧಾರಣೆ ಮಾಡಿಕೊಂಡು ಹಣ ಸಂಗ್ರಹ ಮಾಡಿ ಸಾರ್ಥಕ ಸಮಾಜ ಸೇವೆ ಮಾಡಿದ್ದ ರವಿ ಕಟಪಾಡಿ ಅವರು ತಮ್ಮ ವೇಷಧಾರಣೆಗೆ ವಿದಾಯ ಹೇಳಲಿದ್ದಾರೆಂಬ ಸುದ್ದಿಗಳು ಸದ್ಯ ವೈರಲ್ ಆಗುತ್ತಿವೆ. ಆದರೆ ಇದನ್ನು ರವಿ ಕಟಪಾಡಿ ಅವರು ಅಧಿಕೃತಗೊಳಿಸಿಲ್ಲ. ರವಿ ಅವರು ಕಳೆದ ಏಳು ವರ್ಷಗಳಿಂದ ಸಂಗ್ರಹಿಸಿದ ಮೊತ್ತ ಈ ಅಷ್ಟಮಿಗೆ ಒಂದು ಕೋಟಿ ರೂ.ಗಳಾಗಿದ್ದು, ಮುಂದಿನ ಮಂಗಳವಾರ ಇದರ ವಿತರಣೆಗಾಗಿ ಸಮಾರಂಭವೊಂದನ್ನು ಆಯೋಜಿಸಲಾಗಿದೆ. ತಮ್ಮ ಸಮಾಜ ಸೇವೆಯ ಮುಂದುವರಿಕೆ ಅಥವಾ ನಿಲ್ಲಿಸುವ ಬಗ್ಗೆ ಈ ಸಮಾರಂಭದಲ್ಲೇ ಅವರು ಮಾಹಿತಿ ನೀಡಲಿದ್ದಾರೆ. ಈ ಕುರಿತು ರವಿ ಕಟಪಾಡಿಯವರೇ ಮಾಹಿತಿ ನೀಡಿದ್ದು, ಸದ್ಯ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ನಾನು ವೇಷಧಾರಣೆ ನಿಲ್ಲಿಸುವ ಬಗ್ಗೆ ಈವರೆಗೆ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಶಿಷ್ಟ ವೇಷಧಾರಣೆ ಮಾಡಿಕೊಂಡು ಬಡ ಮಕ್ಕಳ ಚಿಕಿತ್ಸೆಗಾಗಿ 90 ಲಕ್ಷ ರೂ.ಗಳನ್ನು ರವಿ ಅವರು ಸಂಗ್ರಹಿಸಿದ್ದರು. ಈ ಬಾರಿ ಡೆಮೋನ್ ಮೂಲಕ…
ಶಿವಮೊಗ್ಗ: ಇನ್ನು ಮುಂದೆ ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಆನಂದಪುರಂನ ಮುರುಘಾ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗ 50 ಸಾವಿರ ಹಾಗೂ 1 ಲಕ್ಷಕ್ಕೂ ಹಳೆ ಕಾರುಗಳು ಸಿಗುತ್ತಿವೆ. ಗಾರೆ ಮಾಡುವವರು, ಮೀನು ಹಿಡಿಯುವವರೂ ಕಾರು ತೆಗೆದುಕೊಂಡು ಹೋಗುತ್ತಾರೆ. ಅಂತವರ ಕಾರ್ಡ್ ಸಹಿತ ರದ್ದಾಗಿರುವುದು ಸರಿಯಲ್ಲ ಎಂದರು. ಈ ವಿಷಯವಾಗಿ ಶಾಸಕ ಎಚ್.ಹಾಲಪ್ಪ ಹರತಾಳು ಹಾಗೂ ನಾನು ಮುಖ್ಯಮಂತ್ರಿ ಬಳಿ ಚರ್ಚಿಸಿದ್ದೇವೆ. ಈ ಕಾನೂನಿನಿಂದ ಬಡವರು ಹೊಂದಿರುವ ಕಾರ್ಡ್ ರದ್ದಾಗುತ್ತದೆ. ಅವರ ಜೀವನಾಧಾರಕ್ಕೆ ತೊಂದರೆ ಆಗುತ್ತದೆ ಎಂದು ಮನವರಿಕೆ ಮಾಡಿದ್ದೇವೆ. ಬಡವರ ಮೇಲೆ ಕರುಣೆ ತೋರಿ ಸಿಎಂ ಆದೇಶ ಹೊರಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.