Author: main-admin

ಬಂಟ್ವಾಳ: ಇರಾ ಜೈಶಕ್ತಿ ಮಿತ್ರ ಮಂಡಳಿ ಮತ್ತು ಸ್ಥಳೀಯ ನಾಗರೀಕರು 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಊರಿನ ಹಿರಿಯರು ಶತಾಯುಷಿ ಶ್ರೀಮತಿ ಕಲ್ಯಾಣಿ ಇವರ ದಿವ್ಯ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್‌ ಸದಸ್ಯರುಗಳಾದ ರಮೇಶ್‌ ಪೂಜಾರಿ,ಶರ್ಮಿಳಾ,ಮತ್ತು ಭಾನುಮತಿ ರೈ ಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ವಿಠಲ್‌ ಶೆಟ್ಟಿ, ಕುಶಿ ಜಯರಾಜ್,ಉಮ್ಮರ್ ಸೈಟ್, ಹರೀಶ್ ಪಿ ಇರಾ, ಮನೋಜ್ ಸೈಟ್, ಅಂಗನವಾಡಿ ಪ್ರೇರಕಿ ಕವಿತಾ ಗೋಪಾಲ್‌, ಗೋಪಾಲ್ ನಾಯಕ್‌‌ ಇರಾ,ಸುಕೇಶ್‌ ಪೂಜಾರಿ ಇವರು ಭಾಗವಹಿಸಿದ್ದರು.ಹರೀಶ್‌ ಇರಾ ಧ್ವಜವಂದನೆಗೈದರು

Read More

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿ ಸ್ಕಾರ್ಪಿಯೋ ಕಾರು ಪಲ್ಟಿಯಾಗಿ ಪ್ರಯಾಣಿಕರು ಪವಾಡ ಸದೃಶ ಪಾರಾಗಿದ್ದಾರೆ. ಬಾಗಲಕೋಟೆ ಕಡೆಯಿಂದ ಮಂಗಳೂರು ಕಡೆಗೆ ಸೋಮವಾರ ಮುಂಜಾನೆ ಬರುತ್ತಿದ್ದ ಸ್ಕಾರ್ಪಿಯೊ ಕಾರು ಹಳೆಯಂಗಡಿ ಜಂಕ್ಷನ್ ತಲುಪುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಪಲ್ಟಿಯಾಗಿದೆ. ಅಪಘಾತದಿಂದ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದವರು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಚಾಲಕ ನಿದ್ರೆ ಮಂಪರ್‌ನಲ್ಲಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಕ್ರೇನ್ ಮೂಲಕ ಕಾರನ್ನು ತೆರವುಗೊಳಿಸಲಾಯಿತು.

Read More

ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ನೆಹರು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ನಗರವನ್ನು ಕನಸಿನ , ಆಕರ್ಷಣೀಯ ಮತ್ತು ಅಭಿವೃದ್ದಿ ಪಥದ ಮಂಗಳೂರು ಎಂಬ ಮೂರು ಪ್ರಮುಖ ಅಂಶಗಳೊಂದಿಗೆ ಅಭಿವೃದ್ದಿ ಮಾಡಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಅಪಾರ ಸಂಖ್ಯೆಯ ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ನವದೆಹಲಿ: ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸತತ 9ನೇ ಬಾರಿಗೆ ತ್ರಿವರ್ಣ ಧ್ವಜಾರೋಹಣ ಮಾಡಿದ್ದು, ಹಿರಿಯ ಸಚಿವರು, ಅಧಿಕಾರಿಗಳು ಮತ್ತು ಲಕ್ಷಾಂತರ ಪ್ರೇಕ್ಷಕರ ಉಪಸ್ಥಿತಿಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸಿದರು. ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆಯೇ ಭಾರತೀಯ ಸೇನೆಯ ವಿಶೇಷ ಪಡೆಗಳಿಂದ ಅವರು ಗಾರ್ಡ್ ಆಫ್ ಹಾನರ್ ಸ್ವೀಕರಿಸಿದರು. ಬಳಿಕ ಪ್ರಧಾನಿ ಮೋದಿ ಧ್ವಜಾರೋಹಣ ನೆರವೇರಿಸುತ್ತಲೇ ವಾಯುಸೇನೆಯ ಹೆಲಿಕಾಪ್ಟರ್ ಗಳಿಂದ ಧ್ವಜಕ್ಕೆ ಪುಷ್ಪವೃಷ್ಟಿ ಸುರಿಸಿ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು ರಾಷ್ಟ್ರಪಿತ ಮಹಾತ್ಮಾಗಾಂಧಿ ಅವರ ಸ್ಮಾರಕ ರಾಜ್ ಘಾಟ್ ಗೆ ತೆರಳಿ ಪುಷ್ಪನಮನ ಸಲ್ಲಿಸಿದರು. ಸ್ವಾತಂತ್ರ್ಯ ದಿನದಂದು ನಾನು ಎಲ್ಲಾ ಭಾರತೀಯರು ಮತ್ತು ಭಾರತವನ್ನು ಪ್ರೀತಿಸುವವರನ್ನು ಅಭಿನಂದಿಸುತ್ತೇನೆ. ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನ. ಈ ಕರ್ತವ್ಯದ ಹಾದಿಯಲ್ಲಿ ಜೀವ ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್,…

Read More

ನವದೆಹಲಿ : ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೆಂಪುಕೋಟೆ ಮೇಲೆ ಸತತ 9 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣದ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ ದೇಶವಾಸಿಗಳಿಗೆ ಶುಭಾಶಯಗಳು. ಅನೇಕ ಅಭಿನಂದನೆಗಳು. ಸ್ವಾತಂತ್ರ್ಯದ ಈ ಅಮೃತ ಮಹೋತ್ಸವಕ್ಕಾಗಿ ನಾನು ವಿಶ್ವದಾದ್ಯಂತ ಹರಡಿರುವ ಭಾರತದ ಪ್ರೇಮಿಗಳನ್ನು, ಭಾರತೀಯರನ್ನು ಅಭಿನಂದಿಸುತ್ತೇನೆ. ಇಂದು ಐತಿಹಾಸಿಕ ದಿನವಾಗಿದ್ದು, ಜಗತ್ತಿನಾದ್ಯಂತ ತ್ರಿವರ್ಣಧ್ವಜ ಹಾರಾಡುತ್ತಿದೆ. ಇಡೀ ದೇಶ ಇಂದು ಹೊಸ ಸಂಕಲ್ಪ ಮಾಡುತ್ತಿದೆ. ಗುಲಾಮಗರಿಯಿಂದ ಹೊರ ಬರಲು ಒಟ್ಟಾಗಿ ಹೋರಾಟ ಮಾಡಲಾಗಿತ್ತು. ದೇಶದ ಮೂಲೆ ಮೂಲೆಯಲ್ಲೂ ಹೋರಾಟ ನಡೆದಿತ್ತು. ಮಂಗಲ್ ಪಾಂಡೆ, ವೀರ ಸಾವರ್ಕರ್, ಭಗತ್ ಸಿಂಗ್, ಗಾಂಧೀಜಿ, ಜವಹಾರ್ ಲಾಲ್ ನೆಹರೂ ಸೇರಿದಂತೆ ಹಲವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ದೇಶದ ನಾರಿ ಶಕ್ತಿ ಏನ್ನು ಅನ್ನೋದು ಸ್ವಾತಂತ್ರ್ಯ ಹೋರಾಟದಲ್ಲಿ ಸಾಬೀತಾಗಿದೆ. ಭಾರತದ ಮೇಲಿನ ಪ್ರೀತಿಗಾಗಿ ತ್ಯಾಗ…

Read More

ವಿಟ್ಲ:ಮನೆಗೆ ನುಗ್ಗಿ ತಂದೆ-ಮಗನಿಗೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ವಿಟ್ಲ ಚಂದಳಿಕೆ ಸಮೀಪದ ಕುರುಂಬಲ ನಿವಾಸಿ ಲೋಕನಾಥ್ ಜೋಗಿ ಮತ್ತು ಅವರ ಮಗಹೃದಯ್ ಜೋಗಿ ಎಂದು ಗುರುತಿಸಲಾಗಿದೆ.ಹೃದಯ್ ಗೆ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಜಾಗದ ವಿಷಯವಾಗಿ ಜಗಳ ನಡೆದಿದ್ದು,ಈ ಹಿನ್ನೆಲೆ ಮನೆಗೆ ಅಕ್ರಮ ಪ್ರವೇಶ ಮಾಡಿ ಪುನೀತ್ ಜೋಗಿ ಮತ್ತು ತ್ಯಾಗರಾಜ್ ಎಂಬವರು ಲೋಕನಾಥ್ ಜೋಗಿ ಮತ್ತು ಅವರ ಮಗ ಹೃದಯ್ ಜೋಗಿರವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು,ಗಾಯಗೊಂಡ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಮಂಗಳೂರು: ಈ ಬಾರಿ ನಾವು ದೇಶ ಸ್ವಾತಂತ್ರ್ಯ ಅಮೃತೋತ್ಸವದ ಸಡಗರದಲ್ಲಿದೆ. ಗಲ್ಲಿಗಲ್ಲಿಗಳಲ್ಲಿ ತಿರಂಗ ರಾರಾಜಿಸುತ್ತಿದೆ. ಶ್ರೀಕ್ಷೇತ್ರ ಕುದ್ರೋಳಿಯ ರಾಜಗೋಪುರದ ಮುಂಭಾಗದ ನೆಲದಲ್ಲಿ ಮೂಡಿರುವ 900 ಕೆಜಿ ಧಾನ್ಯಗಳ ಬೃಹತ್ ತಿರಂಗ ಭಕ್ತರ ಗಮನಸೆಳೆಯಿತು. ಈ ಬೃಹತ್ ತಿರಂಗ 38 ಫೀಟ್ ಅಗಲವನ್ನು ಹೊಂದಿದೆ. ತಲಾ 300 ಕೆಜಿ ಮಸ್ಸೂರು ದಾಲ್, ಸಬ್ಬಕ್ಕಿ, ಹೆಸರು ಕಾಳುಗಳನ್ನು ಬಳಸಲಾಗಿದೆ. ಫೋಮ್ ನಲ್ಲಿ ರಚಿಸಿರುವ ಅಶೋಕ ಚಕ್ರ 8 ಫೀಟ್ ಅಗಲವಿದೆ. ಅಲ್ಲದೆ ತಿರಂಗದ ಅಲಂಕಾರಕ್ಕೆ 54 ಕಲಶ, 138 ಬಾಳೆ ಎಲೆಯಲ್ಲಿ ಅಕ್ಕಿ ಎಲೆಯಡಿಕೆ, ಚೆಂಡು ಹೂಗಳನ್ನು ಬಳಸಲಾಗಿದೆ. ಜೊತೆಗೆ ಕ್ಯಾರೆಟ್, ಮೂಲಂಗಿ, ಬೆಂಡೆಯಿಂದ ಮಾಡಿರುವ 75 ಅಕ್ಷರದಲ್ಲೂ ತಿರಂಗದ ಕಲ್ಪನೆಯನ್ನು ಮೂಡಿಸಲಾಗಿದೆ. ಫೋಟೋ ಜರ್ನಲಿಸ್ಟ್ ಸತೀಶ್ ಇರಾ ಅವರ ಪರಿಕಲ್ಪನೆ ಹಾಗೂ ಖ್ಯಾತ ಫೋಟೋ ಗ್ರಾಫರ್, ಕಲಾವಿದ ಪುನೀತ್ ಶೆಟ್ಟಿಯವರ ಕೈಚಳದಲ್ಲಿ ಈ ಬೃಹತ್ ತಿರಂಗವು ಅದ್ಭುತವಾಗಿ ಮೂಡಿ ಬಂದಿದೆ. ಶ್ರೀಕ್ಷೇತ್ರದ ಗುರು ಬೆಳದಿಂಗಳು ಹಾಗೂ ಗೋಕರ್ಣನಾಥ ಸೇವಾದಳ ತಂಡ ಸಹಕರಿಸಿದೆ. ಆ.13ರ…

Read More

ಮಳೆಗಾಲ ಬಂತೆಂದರೆ ಏನಾದರೂ ಬಿಸಿ ಬಿಸಿ ತಿನ್ನಬೇಕೆನಿಸುತ್ತದೆ. ಮಲೆನಾಡಿನಲ್ಲಿ ಮಳೆ ಹೆಚ್ಚು. ಹಾಗಾಗಿಯೇ ಇಲ್ಲಿನವರು ಮಳೆಗಾಲಕ್ಕೆಂದೇ ಕೆಲವು ಅಡಿಗೆಗಳನ್ನು ಮಾಡುತ್ತಾರೆ. ಅಂತಹ ಅಡಿಗೆಯಲ್ಲಿ ಕೆಸುವಿನ ಸೊಪ್ಪಿನ ಕರಕಲಿಯೂ ಒಂದು. ಬೇಕಾಗುವ ಸಾಮಗ್ರಿ : 10-15 ಕೆಸುವಿನ ಸೊಪ್ಪು, ಬೆಳ್ಳುಳ್ಳಿ, ಓಮು, ಉಪ್ಪು, ಹುಳಿಗೆ ಅಮಟೆಕಾಯಿ, ಹಸಿಮೆಣಸು ಮಾಡುವ ವಿಧಾನ : ಮೊದಲು ಕೆಸುವಿನ ಸೊಪ್ಪನ್ನು ತೊಳೆದು ಒಣಗಿಸಿಕೊಳ್ಳಿ. ಹಸಿ ಇರುವಾಗ ಕತ್ತರಿಸಿದರೆ ತುರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ನಂತರ ಸೊಪ್ಪನ್ನು ಉಪ್ಪು, ಅಮಟೆಕಾಯಿ, ಹಸಿಮೆಣಸಿನ ಪೇಸ್ಟ್ ಹಾಕಿ ಬೇಯಿಸಿ. ಅಮಟೆಕಾಯಿ ಲಭ್ಯವಿರದಿದ್ದಲ್ಲಿ ಲಿಂಬು ಕೂಡ ಬಳಸಬಹುದು. ಕೆಸುವಿನ ಸೊಪ್ಪು ಚೆನ್ನಾಗಿ ಬೆಂದ ನಂತರ ಅದಕ್ಕೆ ಓಮು, ಬೆಳ್ಳುಳ್ಳಿಯ ಒಗ್ಗರಣೆ ಹಾಕಿ. ಒಗ್ಗರಣೆಗೆ ಎಣ್ಣೆ ತುಸು ಜಾಸ್ತಿ ಇದ್ದಲ್ಲಿ ಕರಕಲಿಯ ರುಚಿ ಹೆಚ್ಚು. ಬೇಸಿಗೆಯಲ್ಲಿ ಈ ಕರಕಲಿ ತಯಾರಿಸುವುದು ಒಳಿತಲ್ಲ. ಏಕೆಂದರೆ ಬೇಸಿಗೆಯಲ್ಲಿ ಇದನ್ನು ಸೇವಿಸಿದರೆ ಗಂಟಲಿನ ತುರಿಕೆ ಉಂಟಾಗುವ ಸಾಧ್ಯತೆ ಹೆಚ್ಚು.

Read More

ಮುಂಬೈ: ಷೇರು ಮಾರುಕಟ್ಟೆಯ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ, ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್ ವಾಲಾ (62) ಇಂದು ಭಾನುವಾರ ಬೆಳಿಗ್ಗೆ ನಿಧನರಾದರು.ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತೇಜಿಸಿದ್ದಾರೆ. 1960ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದ ರಾಕೇಶ್ ಜುಂಜುನ್ವಾಲಾ, 1985ರಲ್ಲಿ ಶೇರು ಮಾರುಕಟ್ಟೆಗೆ ಕಾಲಿಟ್ಟರು. 5000 ರೂ ನಿಂದ ವಹಿವಾಟು ಆರಂಭಿಸಿದ್ದ ರಾಕೇಶ್ 11 ಸಾವಿರ ಕೋಟಿ ರೂ. ವಹಿವಾಟು ನಡೆಸುವಷ್ಟು ಬೆಳೆದಿದ್ದರು. ಸಕ್ರಿಯ ಹೂಡಿಕೆದಾರರಾಗಿರುವ ಜುಂಜುನ್ ವಾಲಾ ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್ ಟೈನ್ ಮೆಂಟ್ ಪ್ರೈವೇಟ್ ನ ಅಧ್ಯಕ್ಷರಾಗಿದ್ದಾರೆ. ಷೇರು ಮಾರುಕಟ್ಟೆಯ ತನ್ನ ಹಿಡಿತದ ಕಾರಣದಿಂದ ರಾಕೇಶ್ ಜುಂಜುನ್ ವಾಲಾ ಅವರನ್ನು ‘ಬಿಗ್ ಬುಲ್ ಆಫ್ ಇಂಡಿಯಾ’ ಮತ್ತು ‘ಕಿಂಗ್ ಆಫ್ ಬುಲ್ ಮಾರ್ಕೆಟ್’ ಎಂದು ಕರೆಯಲಾಗುತ್ತದೆ. ಇತ್ತೀಚೆಗಷ್ಟೇ ಅವರು ಆಕಾಶ ಏರ್ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ್ದರು. ಆಗಸ್ಟ್ 7ರಂದು ಇದರ ಮೊದಲ ಹಾರಾಟ ನಡೆದಿತ್ತು.

Read More

ಪಡುಬಿದ್ರಿ : ಮೂಡು ಪಲಿಮಾರು ನಿವಾಸಿ ಶೋಭಾ ಅವರ ಮನೆಗೆ ಮೇ 6ರಂದು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಹರೀಶ್‌ ಪುತ್ತೂರು ಹಾಗೂ ತಾನು ವಿಶ್ವಕರ್ಮ ಕುಲದವನೆಂದು ಪರಿಚಯಿಸಿಕೊಂಡು ಶೋಭಾ ಅವರಿಂದ 1.65 ಲಕ್ಷ ರೂ.ಗಳ ಚಿನ್ನಾಭರಣವನ್ನು ಪಡೆದು ಮೋಸ ಮಾಡಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಕುಂದಾಪುರದಲ್ಲಿ ಇದ್ದ ತನ್ನ 80 ಲಕ್ಷ ರೂ. ಮೌಲ್ಯದ ಜಾಗವು ಮಾರಾಟವಾಗಿದ್ದು, ಅದರ ದಾಖಲೆಗಳು ಬ್ಯಾಂಕಿನಲ್ಲಿ ಇರುವುದರಿಂದ ಅವುಗಳನ್ನು ಬಿಡಿಸಿಕೊಳ್ಳಲು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದ. ಶೋಭಾ ಅವರು ತನ್ನಲ್ಲಿ ಹಣ ಇಲ್ಲವೆಂದರೂ ಅವರ ಅಕ್ಕ ಶ್ಯಾಮಲಾ ಹಾಗೂ ಶೋಭಾರನ್ನು ಆರೋಪಿಯು ನಂಬಿಸಿ, ಅಕ್ಕ ಶ್ಯಾಮಲಾ ಅವರಿಂದ 6 ಗ್ರಾಂ ತೂಕದ ಚಿನ್ನದ ಉಂಗುರ, ಶೋಭಾ ಅವರಿಂದ ಎರಡೂವರೆ ಪವನ್‌ ತೂಕದ ಪವನ್‌ ಸರ, ಒಂದೂಕಾಲು ಪವನ್‌ನ ಚಿನ್ನದ ಬೆಂಡೋಲೆ ಮತ್ತು ಜುಮ್ಕಿಯನ್ನು ತೆಗೆದುಕೊಂಡು ಹೋಗಿದ್ದ. ಚಿನ್ನದ ಹಣವನ್ನು ತನ್ನ ಜಾಗ ಮಾರಾಟ ಮಾಡಿ ಬಂದಿರುವ ಹಣದಲ್ಲಿ ಮೇ 16ರಂದು ನಿಮ್ಮ…

Read More