ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಕೊಂಡಿದೆ. ಈ ಹಿನ್ನೆಲೆಯಲ್ಲಿ ಈಗ ಪ್ರವೀಣ್ ಹಂತಕತರಲ್ಲಿ ಮತ್ತಿಬ್ಬರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಸುಳ್ಯದ ನಾವೊರಿನ್ ಅಬೀದ್ ಮತ್ತು ನೌಪಾಲರನ್ನ ಎನ್‌ಐಎ ಅಧಿಕಾರಿಗಳು ಹೆಡಮುರಿಕಟ್ಟಿದ್ದಾರೆ. ಈ ಮೂಲಕ ಈ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 6 ಜನರ ಬಂಧನವಾಗಿದೆ. ಕಠಿಣ ನಿರ್ಬಂಧಕ್ಕೆ ಒಳಗಾದ ಕರಾವಳಿ ಜಿಲ್ಲೆಗೆ ಈಗ ಸಡಿಲಿಕೆ ನೀಡಲಾಗಿದೆ.
Author: main-admin
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಿದ ಘಟನೆ ಪಣಂಬೂರಿನಿಂದ ಸುಮಾರು 90 ಮೀಟರ್ ದೂರ ಆಳ ಸಮುದ್ರದಲ್ಲಿ ನಡೆದಿದೆ. ಹಡಗಿನಲ್ಲಿ 11 ಮಂದಿ ಮೀನುಗಾರರರಿದ್ದು, ಅವರೆಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸಮೀಪದಲ್ಲಿದ್ದ ಇನ್ನೊಂದು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಜೈಶ್ರೀರಾಮ್ ಹೆಸರಿನ ಬೋಟ್ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮುಳುಗಿದೆ ಎನ್ನಲಾಗಿದ್ದು, ಶಶಿ ಬೆಂಗ್ರೆ ಎಂಬುವವರ ಒಡೆತನದಲ್ಲಿ ದೋಣಿ ಇತ್ತು ಎಂದು ತಿಳಿದುಬಂದಿದೆ.
ಬೆಂಗಳೂರು (ಆ. 07): ಪಿಎಸ್‌ಐ ಎಕ್ಸಾಂ ಅಕ್ರಮ ಹಗರಣದಲ್ಲಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಕೊಠಡಿಯಲ್ಲಿ ಕಿರುಚಾಡುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ‘ಹಿರಿಯ ಅಧಿಕಾರಿಗಳನ್ನು ನಂಬಿ ನಾನು ಹಾಳಾದೆ. ನಾನು ಕಂಬಿ ಹಿಂದೆ ಬರಲು ಹಿರಿಯ ಅಧಿಕಾರಿಗಳೇ ಕಾರಣ. ನನ್ನನ್ನು ಕಮಿಷನರ್ ಮಾಡುವುದಾಗಿ ಆಮೀಷವೊಡ್ಡಿ, ಈ ಕೆಲಸ ಮಾಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ರಾಮನಗರ: ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸೋಲೂರಿನಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಮಕ್ಕಳಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ನೇಪಾಳ ಮೂಲದ ಫರ್ಬಿನ್(4), ಇಷಿಕಾ(3) ಮೃತಪಟ್ಟವರು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೊಟ್ಟಿಗೆ ಪಕ್ಕದ ಶೆಡ್ ನಲ್ಲಿ ಇಬ್ಬರು ಮಕ್ಕಳು ಮಲಗಿದ್ದರು. ಈ ವೇಳೆ ಕೊಟ್ಟಿಗೆಯ ಗೋಡೆ ಕುಸಿದು ಪಕ್ಕದ ಶೆಡ್ ಮೇಲೆ ಬಿದ್ದು ಮಕ್ಕಳ ಮೇಲೆ ಬಿದ್ದಿದೆ. ಇದರಿಂದ ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೀನಾ ಮತ್ತು ಮೋನಿಷಾ ಎಂಬಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎರಡು ಕುಟುಂಬಗಳು ಒಂದೇ ಶೆಡ್‌ನಲ್ಲಿ ವಾಸವಾಗಿದ್ದರು. ಕುಸಿದ ಕೊಟ್ಟಿಗೆ ಗಂಗರಂಗಮ್ಮ ಎಂಬವರಿಗೆ ಸೇರಿದ್ದಾಗಿದೆ. ಕುದೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಘಟಿಸಿದೆ.
ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್ಎಸ್ಎಲ್ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು. AzaadiSAT ಮೂಲಕ ತಲಾ 50 ಗ್ರಾಂ ತೂಕದ 75 ಪೇಲೋಡ್ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ರೂಪಿಸಿರುವ EOS-02 ಭೂ ನಿಗಾ ಉಪಗ್ರಹ ಮತ್ತು ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ರೂಪಿಸಿರುವ 75 ಪುಟ್ಟ ಉಪಗ್ರಹಗಳು (ಪೇಲೋಡ್) ಈ ಬಾಹ್ಯಾಕಾಶ ವಾಹನದ ಮೂಲಕ ಅಂತರಿಕ್ಷದ ಭೂ ಕಕ್ಷೆ ಸೇರಿದವು.
ಉಡುಪಿ; ಅಪರೂಪದ ಪ್ರಕರಣವೊಂದರಲ್ಲಿ ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಕೊಟ್ಟ ಅಂಗಡಿ ವಿರುದ್ದ ಕೋರ್ಟ್ ನಲ್ಲಿ ದಾವೆ ಹೂಡಿದ್ದ ಗ್ರಾಹಕ ಮಹಿಳೆ ಇದೀಗ ಪರಿಹಾರವನ್ನು ಪಡೆದುಕೊಂಡಿದ್ದಾರೆ. ಉಡುಪಿಯ ಪೈ ಇಂಟರ್‌ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ. ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡುವಂತೆ ಸೂಚಿಸಿದೆ. ಅನಿತಾ ಎಂಬವರು ಎರಡು ವರ್ಷಗಳ ಹಿಂದೆ ಪೈ ಇಂಟರ್‌ನ್ಯಾಷನಲ್ ನಲ್ಲಿ 4,239 ರೂ.ಗಳನ್ನು ನೀಡಿ ಪ್ರೀತಿ ಮಿಕ್ಸರ್ ಗ್ರೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್‌ನ್ಯಾಷನಲ್ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು. ಅದರ ಅನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದವು. ಇದರಿಂದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ…
ಮಲ್ಪೆ: ಉಡುಪಿಯ ಟ್ಯುಟೋರಿಯಲ್ ಒಂದರಲ್ಲಿ ಪಿಯುಸಿ ಓದುತ್ತಿದ್ದ ತೆಂಕನಿಡಿಯೂರು ಲಕ್ಷ್ಮೀನಗರ ನಿವಾಸಿ ರವಿ ಕುಲಾಲ್ ಹಾಗೂ ಶರ್ಮಿಳಾ ದಂಪತಿ ಮಗ ಸೃಜನ್(17) ಎಂಬವರು ಆ.4ರಂದು ಬೆಳಗ್ಗೆ ಮನೆಯಿಂದ ಹೋದವನು ಮನೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾನೆ. ಸೃಜನ್ ಈ ಹಿಂದೆ ಎರಡು ಬಾರಿ ಮನೆ ಬಿಟ್ಟು ಹೋದವನು ಮರುದಿನ ವಾಪಸು ಬಂದಿದ್ದಾನೆ. ಈತ ಮನೆಯಿಂದ ಹೋಗುವಾಗ ಕ್ರೀಮ್ ಕಲರ್ ಪ್ಯಾಂಟ್ ಮತ್ತು ಕಾಫಿ ಬಣ್ಣದ ಹೂಗಳಿರುವ ಉದ್ಧತೋಳಿನ ಶರ್ಟ್ ಧರಿಸಿದ್ದ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಬಳೆ: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಕೃಷಿಗೆ ಅಪಾರ ಹಾನಿ ಸಂಭವಿಸಿದೆ. ರಸ್ತೆಗಳಲ್ಲಿ ನೆರೆ ನೀರು ಹರಿದು ವಾಹನ ಮತ್ತು ಜನ ಸಂಚಾರಕ್ಕೆ ತೊಡಕಾಗಿದೆ. ಭೀಮನಡಿ ಗ್ರಾಮದ ಕೂರನಗುಂದದಲ್ಲಿ ಕೃಷಿಕ ರವೀಂದ್ರನ್ ಅವರ ಪತ್ನಿ, ನಿವೃತ್ತ ಶಿಕ್ಷಕಿ ಲತಾ ಅವರು ತೋಟಕ್ಕೆ ಬಾಳೆ ಎಲೆ ತರಲು ಹೋಗಿದ್ದಾಗ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಅವರ ಮೃತದೇಹ ಪ್ಲಾಚಿಕರ ಮೀಸಲು ಅರಣ್ಯದ ತೋಡಿಗೆ ನಿರ್ಮಿಸಿದ ಅಣೆಕಟ್ಟಿನಲ್ಲಿ ಪತ್ತೆಯಾಗಿದೆ. ಮೃತರು ಪತಿ, ಪುತ್ರನನ್ನು ಅಗಲಿದ್ದಾರೆ. ಇವರು ಎರಡು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು. ಮಳೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲ ಶಾಲೆ ಮತ್ತು ಅಂಗನವಾಡಿಗಳಿಗೆ ಜಿಲ್ಲಾಧಿಕಾರಿ ರಜೆ ಸಾರಲಾಗಿತ್ತು. ಮಂಗಲ್ಪಾಡಿ ಪಂಚಾಯತ್‌ನ ಇಚ್ಲಂಗೋಡು ವಳಯಂ ರಸ್ತೆಯ ಹೊಳೆ ಭಾಗ ಕುಸಿದಿದೆ. ಇತ್ತೀಚೆಗಷ್ಟೇ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆ ಇದಾಗಿದ್ದು, ಇನ್ನಷ್ಟು ಮಳೆ ಸುರಿದಲ್ಲಿ ಹೊಳೆ ಪಕ್ಕದ ರಸ್ತೆ ಕುಸಿಯಲಿದೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಪುತ್ತೂರು: ಇಲ್ಲಿನ ಬೊಳುವಾರು ವಸತಿ ಸಮುಚ್ಚಯ ಮಹಡಿಯಿಂದ ಶುಕ್ರವಾರ ಸಂಜೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಧಾನ ವಸತಿ ಶಾಲೆಯ ಪ್ರೌಢಶಾಲೆಯ 9ನೇ ತರಗತಿಯ ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಸುಹಾನ್ ಬೊಳುವಾರಿನ ಮನೆಯಿರುವ ಫ್ಲಾಟ್ ನ 5ನೇ ಮಹಡಿಯಿಂದ ಕೆಳಗೆ ಬಿದ್ದಿದ್ದು, ಗಂಭೀರ ಗಾಯಗೊಂಡ ಆತನನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮುಲ್ಕಿ: ಇಲ್ಲಿನ ಪ್ರತಿಷ್ಠಿತ ವಿಜಯ ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ನಡುವೆ ಹೊಡೆದಾಟ ಸಂಭವಿಸಿದ್ದು ಓರ್ವ ಗಾಯಗೊಂಡು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗಾಯಗೊಂಡವನನ್ನು ಮುಲ್ಕಿ ಸಮೀಪದ ಕರ್ನೀರೆ ನಿವಾಸಿ ಸುಜನ್ ಶೆಟ್ಟಿ (20) ಎಂದು ಗುರುತಿಸಲಾಗಿದೆ. ವಿಜಯ ಕಾಲೇಜಿನಲ್ಲಿ ಕಾಲೇಜು ಡೇ ಫಂಕ್ಷನ್ ನಡೆಯುತ್ತಿದ್ದು ಈ ಸಂದರ್ಭ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಹಳೆ ವೈಷಮ್ಯದಿಂದ ಮಾತಿನ ಚಕಮಕಿ ನಡೆದು ಕ್ಷುಲ್ಲಕ ಕಾರಣಕ್ಕೆ ನೂಕಾಟ ತಳ್ಳಾಟ ನಡೆದಿದೆ. ಈ ಸಂದರ್ಭ ಒಂದು ಗುಂಪಿನ ಸುಮಾರು 10ಮಂದಿ ವಿದ್ಯಾರ್ಥಿಗಳು ಹಾಗೂ ಹೊರಗಿನವರು ಸೇರಿ ಕರ್ನೀರೆ ನಿವಾಸಿ ಸುಜನ್ ಶೆಟ್ಟಿ ಎಂಬವರ ಮೇಲೆ ಹಿಗ್ಗಾ ಮುಗ್ಗ ಕೈಯಿಂದ ಹಾಗೂ ಕಾಲಿನಿನಿಂದ ಹಲ್ಲೆ ನಡೆಸಿದ್ದು ಗಾಯಗೊಂಡ ಸುಜನ್ ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಕಾಲೇಜಿನಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ…