ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟಕ್ಕೆ ನೀಡಲಾಗಿದ್ದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಹಿಂಪಡೆದ ಪೊಲೀಸ್ ಇಲಾಖೆಯ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಬೆಂಗಳೂರಿನಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ ಎಂಬ ಆದೇಶವನ್ನು ಎತ್ತಿ ಹಿಡಿದಿದೆ. ಇದೇ ಮೊದಲ ಬಾರಿಗೆ ಪಟಾಕಿಗಳಿಂದ ಗಾಯಗೊಂಡವರ ಫೋಟೋಗಳನ್ನು ತೀರ್ಪಿನ ಪ್ರತಿಗಳಲ್ಲಿ ಬಳಸಲಾಗಿದೆ. ಪಟಾಕಿ ಗಾಯಗಳಿಂದ ದೃಷ್ಟಿ ಕಳೆದುಕೊಂಡ ಯುವಕರು ಮತ್ತು ಮಕ್ಕಳ ಫೋಟೋಗಳು ಇದರಲ್ಲಿವೆ. ಬೆಂಗಳೂರಲ್ಲಿ ಪಟಾಕಿ ಮಾರುವಂತಿಲ್ಲ ಎಂಬ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್, “ಈ ಫೋಟೋಗಳು ಸಂವಿಧಾನ ರಚನಾಕಾರರನ್ನು ಅವರ ಸಮಾಧಿಯಲ್ಲೇ ನಡುಗಿಸುವಂತಿವೆ. ಬದುಕುವ ಹಕ್ಕು, ಅಂಗ ಮತ್ತು ಸ್ವಾತಂತ್ರ್ಯದ ಹೆಚ್ಚಿನ ಉಲ್ಲಂಘನೆ ಸಾಧ್ಯವಿಲ್ಲ” ಎಂದು ಹೇಳಿದೆ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಪೊಲೀಸ್ ಇಲಾಖೆಯ ನಿರ್ಧಾರವನ್ನು ಪ್ರಶ್ನಿಸಿದ ಪಟಾಕಿ ವ್ಯಾಪಾರಿಗಳ ವಾದವನ್ನು ತಿರಸ್ಕರಿಸಿದೆ. ಬೆಂಗಳೂರಿನ ಪೊಲೀಸ್ ಆಯುಕ್ತರು 2012ರಲ್ಲಿ ಈ ವ್ಯಾಪಾರಿಗಳ ಎನ್‌ಒಸಿ ಹಿಂಪಡೆದಿದ್ದರು. ಕರ್ನಾಟಕ ಪೊಲೀಸ್ ಮಹಾನಿರ್ದೇಶಕರು 2013ರಲ್ಲಿ ಆಯುಕ್ತರ ಆದೇಶವನ್ನು ಎತ್ತಿ ಹಿಡಿದಿದ್ದರು. ವ್ಯಾಪಾರಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ…
Author: main-admin
ಉಡುಪಿ: ಕರಾವಳಿ ಕಡಲ ತೀರದಲ್ಲಿ ಪ್ರತಿ ಗಂಟೆಗೆ 45ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆ. 5ರಂದು ರಾತ್ರಿ 11.30ರ ತನಕ ಕಡಲ ತೀರದಲ್ಲಿ 3ರಿಂದ 3.8ಮೀ. ಎತ್ತರದ ಅಲೆಗಳು ಮಂಗಳೂರಿನಿಂದ ಕಾರವಾರ ತನಕದ ಕಡಲ ತೀರಕ್ಕೆ ಅಪ್ಪಳಿಸಲಿವೆ. ಆ. 5, 7 ರಂದು ಉಡುಪಿ ಸಹಿತ ಕರಾವಳಿಯ ಅಲ್ಲಲ್ಲಿ ಗಾಳಿ, ಗುಡುಗಿನೊಂದಿಗೆ 115.6ರಿಂದ 204.4 ಮಿ.ಮೀ. ಮಳೆ ಬೀಳಲಿದೆ. ಆ.6ರಂದು 204.5 ಮಿ.ಮೀ. ಮಳೆಯಾಗಲಿದೆ. ಆ, 8, 9ರಂದು 64.5ರಿಂದ 115.5 ಮಿ.ಮೀ. ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಭಾರಿ ದುರಂತ ತಪ್ಪಿದೆ. ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಬೃಹತ್ ಮರ ಉರುಳಿ ಬಿದ್ದಿದೆ. ಆದರೆ ಅದೃಷ್ಟವಾಶತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದ ಆಗುಂಬೆ ಘಾಟಿನಲ್ಲಿ ವಾಹನ ಸಂಚಾರರಿಗೆ ಅಡಚಣೆ ಉಂಟಾಗಿತ್ತು.ಸೋಮೇಶ್ವರ ಕಡಿಯಿಂದ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ.
ಮಂಗಳೂರು/ಉಡುಪಿ: ಮುಂಗಾರು ಬಿರುಸು ಪಡೆದು ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಆ. 4ರಿಂದ 6ರ ವರೆಗೆ ಕರಾವಳಿ ಭಾಗದಲ್ಲಿ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಭಾರೀ ಮಳೆ, ಗಾಳಿ ಮತ್ತು ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ. ದ.ಕ. ಜಿಲ್ಲೆಯಾದ್ಯಂತ ಗುರುವಾರ ದಿನವಿಡೀ ಉತ್ತಮ ಮಳೆಯಾಗಿದೆ. ಮಂಗಳೂರು ನಗರ ದಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ರಾತ್ರಿ ವೇಳೆ ಮಳೆಯ ಬಿರುಸು ಹೆಚ್ಚಿತ್ತು. ಉಡುಪಿಯಲ್ಲಿ ಹಗಲು ಮೋಡದ ವಾತಾವಣ ಇದ್ದು, ಸಂಜೆಯ ಬಳಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ನಿರ್ವಹಿಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸನ್ನದ್ಧವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣ ದಳ (ಎನ್‌ಡಿಆರ್‌ಎಫ್)ದ 20 ಮಂದಿಯ ತಂಡ ಸುಬ್ರಹ್ಮಣ್ಯದಲ್ಲಿ ಸನ್ನದ್ಧವಾಗಿದೆ. ರಾಜ್ಯ ವಿಪತ್ತುದಳ (ಎಸ್‌ಡಿಆರ್‌ಎಫ್)ದ 55 ಮಂದಿಯ ತಂಡ ತಯಾರಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿದೆ.
ಮಂಗಳೂರು; ತ್ರಿವಳಿ ಕೊಲೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೇರಲಾದ ನಿರ್ಬಂಧ ಕ್ರಮಗಳನ್ನು ಆ.5 ರಿಂದ ಮುಂದಿನ ಮೂರು ದಿನಗಳ ಕಾಲ ಕೊಂಚ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ. ಆ.5ರಿಂದ ಅಂಗಡಿ ಮುಂಗಟ್ಟುಗಳನ್ನು ರಾತ್ರಿ 9 ರವರೆಗೆ ತೆರೆಯಲು ಅವಕಾಶ ನೀಡಲಾಗಿದ್ದು, ಮದ್ಯದಂಗಡಿಗಳನ್ನು ನಾಳೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ.
ಮಂಗಳೂರು: ತ್ರಿವಳಿ ಕೊಲೆ ಹಿನ್ನೆಲೆ ಈಗಾಲೆ ವಿಧಿಸಲಾಗಿದ್ದ ನಿಷೇಧಾಜ್ಞೆ ಹಂತ ಹಂತವಾಗಿ ಸಡಿಲಗೊಳಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿಕೊಂಡಿದೆ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ಎಡಿಜಿಪಿ ಅಲೋಕ್ ಕುಮಾರ್ ಈ ಬಗ್ಗೆ ಸೂಚನೆ ನೀಡಿದ್ದಾರೆ. ಇನ್ನು ಆ.5 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.ಆ.5 ರ ಬಳಿಕ ಹಂತಹಂತವಾಗಿ ನಿಷೇಧಾಜ್ಞೆ ಸಡಿಲಿಕೆಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಸಡಿಲಿಕೆ ಬಳಿಕ ಒಂದು ವಾರ ಕಾಲ ಬೈಕ್ ನಲ್ಲಿ ಯುವಕರಿಗೆ ಹಿಂಬದಿ ಸವಾರಿಗೆ ಅವಕಾಶವಿಲ್ಲ. ಈ ವೇಳೆ ಮಕ್ಕಳು, ಮಹಿಳೆಯರು ಹಾಗೂ ಹಿರಿಯರ ನಾಗರಿಕರಿಗೆ ಬೈಕ್ ನಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಆದರೆ ಇಬ್ಬರು ಯುವಕರು ಹಿಂಬದಿ ಸವಾರಿ ಮಾಡದಂತೆ ಸೂಚನೆ ನೀಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಈ ನಿಯಮ ಜಾರಿಯಲ್ಲಿರಲಿದೆ ಎನ್ನಲಾಗಿದೆ.
ವಿಟ್ಲ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಶಿವಾಜಿನಗರದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ವಿಟ್ಲ ಶಿವಾಜಿನಗರ ನೆಕ್ಕರೆ ಕಾಡು ನಿವಾಸಿ ಸುರೇಶ್(23) ಎಂದು ಗುರುತಿಸಲಾಗಿದೆ. ಸುರೇಶ್ ರವರು ಪೈಟಿಂಗ್ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ನೊಂದಿದ್ದು, ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.
ನವದೆಹಲಿ: ದೇಶದಲ್ಲಿ ಮಂಕಿಪಾಕ್ಸ್ ಸೋಂಕು ದಿನೇ ದಿನೇ ಏರಿಕೆರಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಬುಧವಾರ ಬಿಡುಗಡೆ ಮಾಡಿದೆ. ಸಾರ್ವಜನಿಕರು ಮಂಕಿಪಾಕ್ಸ್ ಸೋಂಕಿನಿಂದ ದೂರವಿರಲು ಕೈಗೊಳ್ಳಬೇಕಾದ ಅವಶ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪ್ರಮುಖವಾಗಿ ಸೋಂಕಿತರ ಜತೆಗೆ ಮಲಗುವುದು, ಊಟ ಮಾಡುವುದು, ಅವರ ಬಟ್ಟೆ, ಟವಲ್ ಬಳಸುವುದು ಇತ್ಯಾದಿ ಮಾಡಬಾರದು. ಸೋಂಕಿತರ ಬಟ್ಟೆಗಳನ್ನು, ಆರೋಗ್ಯವಂತ ವ್ಯಕ್ತಿಗಳ ಬಟ್ಟೆಗಳೊಂದಿಗೆ ಸೇರಿಸಿ ತೊಳೆಯಬಾರದು. ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಸಾಮಾಜಿಕ ಸಭೆ, ಸಮಾರಂಭಗಳಿಂದ ದೂರ ಇರಬೇಕು ಎಂದು ಕೇಂದ್ರ ತಿಳಿಸಿದೆ. ಇನ್ನು ಐಸೋಲೇಷನ್‌ನಲ್ಲಿರುವ ಸೋಂಕಿತ ವ್ಯಕ್ತಿಯನ್ನು ಯಾರೂ ಸಂಪರ್ಕಿಸಬಾರದು. ಹ್ಯಾಂಡ್ ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ಆಗಾಗ ಕೈಗಳನ್ನು ಶುಚಿಗೊಳಿಸಬೇಕು. =ಮೂಗು, ಬಾಯಿಯನ್ನು ಮಾಸ್ಕ್ ನಿಂದಲೂ, ಕೈಗಳನ್ನು ಹ್ಯಾಂಡ್ ಗ್ಲೌಸ್‌ಗಳಿಂದ ಕವರ್ ಮಾಡಿಕೊಳ್ಳಬೇಕು. ವಿಶೇಷವಬಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ, ಜನ ಇರುವಲ್ಲಿ ಈ ಮುನ್ನೆಚ್ಚರಿಕೆಗಳು ತೀರಾ ಅಗತ್ಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ಮಳೆ ಬಿರುಸು ಪಡೆದಿದ್ದು, ಮುಂದಿನ ಎರಡು ದಿನ ಭಾರೀ ಮಳೆಯಾಗುವ (Heavy rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಇಂದು ಮತ್ತು ನಾಳೆ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಶಿವಮೊಗ್ಗ, ಹಾಸನ, ತುಮಕೂರು, ಹಾವೇರಿ, ಬೆಳಗಾವಿ, ಗದಗ, ಧಾರವಾಡ, ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗುರುವಾರ ಶುಕ್ರವಾರ ಬೆಳಗಾವಿ, ಬಾಗಲಕೋಟೆ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳಾದ ಸುಹಾಸ್ ಶೆಟ್ಟಿ, ಮೋಹನ್, ಅಭಿಷೇಕ್, ಶ್ರೀನಿವಾಸ್, ದೀಕ್ಷಿತ್ ಮತ್ತು ಗಿರಿಧರ್‌ನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮೊದಲು ಬಂಧಿಸಲ್ಪಟ್ಟ ಕಾರು ಮಾಲಕ ಅಜಿತ್ ಕ್ರಾಸ್ತಾನನ್ನು ಈ ಹಿಂದೆಯೇ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು.