Author: main-admin

ಪುತ್ತೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರ್(32) ಅವರನ್ನು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಖಂಡಿಸಿ ಪುತ್ತೂರು ಬೆಳ್ಳಾರೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡು ಬಸ್‌ನ ಮೇಲೆ ಕಲ್ಲೆಸೆದಿರುವ ಘಟನೆ ನಡೆದಿದೆ.ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌‌ಆರ್‌‌ಟಿಸಿ ಬಸ್ ಮೇಲೆ ಬೊಳುವಾರಿನಲ್ಲಿ ಕಲ್ಲೆಸೆದಿದ್ದು, ಬಸ್‌ನ ಮುಂಬಾಗದ ಗಾಜು ಹುಡಿಯಾಗಿದೆ.ಇನ್ನು ಪ್ರವೀಣ್ ಹತ್ಯೆ ಖಂಡಿಸಿ ಹಿಂದೂ ಸಂಘಟನೆಗಳೂ ಕರೆ ನೀಡಿರುವ ಬಂದ್ ಗೆ ಬೆಂಬಲಿಸಿ ಪುತ್ತೂರಿನ ವಿವೇಕಾನಂದ ಕಾಲೇಜು ಮತ್ತು ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಿಗೆ, ಪ್ರಗತಿ ಸ್ಟಡಿ ಸೆಂಟರ್‌‌ಗೆ ರಜೆ ಘೋಷಣೆ ಮಾಡಲಾಗಿದೆ.ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರವೀಣ್ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಪ್ರವೀಣ್ ಮೃತದೇಹ ಇಡಲಾಗಿದ್ದು, ಮೆರವಣಿಗೆ ಮೂಲಕ ಮೃತದೇಹ ಸಾಗಿಸಲು ಬಿಜೆಪಿ ಕಾರ್ಯಕರ್ತರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.ಪ್ರವೀಣ್ ನೆಟ್ಟಾರು ಅವರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಬೆಳ್ಳಾರೆ ಪೇಟೆಯಲ್ಲಿ ತನ್ನ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಬರ್ಬರವಾಗಿ ಹತ್ಯೆ…

Read More

ಸುಳ್ಯ: ಬೆಳ್ಳಾರೆಯಲ್ಲಿ ಹಿಂದೂ ಸಂಘಟನೆಯ ಮುಖಂಡನನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೌದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆದಿರುವ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ. ಪ್ರವೀಣ್ ನೆಟ್ಟಾರು (32) ಮೃತ ವ್ಯಕ್ತಿಯಾಗಿದ್ದಾರೆ. ಬೈಕ್ ನಲ್ಲಿ ಬಂದ ತಂಡ ತಲವಾರಿನಿಂದ ದಾಳಿ ಮಾಡಿದೆ. ದಾಳಿಗೊಳಗಾದ ಪ್ರವೀಣ್ ರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾದರು ಪ್ರಯೋಜನವಾಗಿಲ್ಲ. ಬೆಳ್ಳಾರೆ ಪೆಟ್ರೋಲ್ ಪಂಪ್ ಬಳಿಯ ಮಾಸ್ತಿ ಕಟ್ಟೆ ಎಂಬಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಇತ್ತೀಚೆಗಷ್ಟೇ ಬೆಳ್ಳಾರೆಯ ಕಳಂಜ ಎಂಬಲ್ಲಿ ಮಸೂದ್ ಎಂಬ ಮುಸ್ಲಿಂ ಯುವಕನನ್ನು ಸಂಘಪರಿವಾರದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಗೈದಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ರಿವೆಂಜ್ ಪಡೆದುಕೊಂಡಿರಬಹುದು ಎಂದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Read More

ಮುಂಬೈ: ಮಂಕಿಪಾಕ್ಸ್‌ ವೈರಸ್‌ ಸೋಂಕು ಪತ್ತೆಗಾಗಿ ಜೀನ್ಸ್‌2ಮಿ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿಯು ಆರ್‌ಟಿ- ಪಿಸಿಆರ್‌ ಆಧರಿತ ಕಿಟ್ ಬಿಡುಗಡೆ ಮಾಡಿದೆ. ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ವೈರಸ್‌ನ ಸೋಂಕು ಇರುವುದನ್ನು ಈ ಕಿಟ್ ಬಳಸಿ ನಡೆಸುವ ಪರೀಕ್ಷೆಯಿಂದ 50 ನಿಮಿಷಕ್ಕೂ ಕಡಿಮೆ ಸಮಯದಲ್ಲಿ ತಿಳಿಯಬಹುದಾಗಿದೆ ಎಂದು ಕಂಪನಿ ಮೂಲಗಳು ಹೇಳಿವೆ. ‘ಕಂಪನಿ ತಯಾರಿಸುವ ಕಿಟ್‌ಗಳು ಗರಿಷ್ಠ ಮಟ್ಟದ ನಿಖರತೆಯ ಫಲಿತಾಂಶ ನೀಡುತ್ತವೆ. ಅಲ್ಪಸಮಯದಲ್ಲಿಯೇ ಸೋಂಕು ಪತ್ತೆ ಹಚ್ಚುವುದು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ಈ ಆರ್‌ಟಿ-ಪಿಸಿಆರ್‌ ಆಧರಿತ ಪರೀಕ್ಷಾ ಕಿಟ್‌ಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ಜೀನ್ಸ್‌2ಮಿ ಕಂಪನಿಯ ಸಿಇಒ ಹಾಗೂ ಸಂಸ್ಥಾಪಕ ನೀರಜ್‌ ಗುಪ್ತಾ ಹೇಳಿದ್ದಾರೆ. ಮಾನವ ದೇಹದಿಂದ ಸಂಗ್ರಹಿಸಿದ ಮಾದರಿಗಳ ಪರೀಕ್ಷೆಗೆ ಬಳಸುವ ಸಾಧನಗಳ (ಐವಿಡಿ) ತಯಾರಿಕೆಯಲ್ಲಿ ಜೀನ್ಸ್‌2ಮಿ ಪ್ರೈವೇಟ್‌ ಲಿಮಿಟೆಡ್‌ ಮುಂಚೂಣಿಯಲ್ಲಿದೆ. ಕಂಪನಿಯು ಎರಡು ವಿಧದ ಕಿಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಬಳಸಬಹುದಾದ ಪಿಸಿಆರ್‌ ಆಧಾರಿತ ಕಿಟ್‌ ಹಾಗೂ ಆಸ್ಪತ್ರೆಗಳು, ವಿಮಾನನಿಲ್ದಾಣಗಳು, ಡಯಾಗ್ನೊಸ್ಟಿಕ್‌ ಕೇಂದ್ರಗಳು, ಪ್ರಯೋಗಾಲಯಗಳು ಹಾಗೂ ಆರೋಗ್ಯ ಶಿಬಿರಗಳಲ್ಲಿ ಬಳಸಬಹುದಾದ…

Read More

ಮಂಗಳೂರು: ಪಬ್ ಮೇಲೆ ಭಜರಂಗದಳ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಬಲ್ಮಠ ಬಳಿಯ ಪಬ್ ನ ಒಳಗೆ ಅಪ್ರಾಪ್ತರಿಗೂ ಪ್ರವೇಶ ನೀಡಲಾಗಿತ್ತು, ಇದಲ್ಲದೆ ಮದ್ಯ ನೀಡಿದ ವಿಚಾರವಾಗಿ ಪಬ್ ನ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಮಂಗಳೂರು ಬಂದರು ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಬ್ನಲ್ಲಿ ಪಾರ್ಟಿ ನಡೆಯುತಿದ್ದು, ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿಯಲ್ಲಿ ತೊಡಗಿದ್ದ ವಿಚಾರವಾಗಿ ಭಜರಂಗದಳ ಕಾರ್ಯಕರ್ತರು ಪಬ್ ಪ್ರವೇಶ ಖಂಡಿಸಿ ನಿನ್ನೆ ಪಬ್ ಮುಂದೆ ಜಮಾವಣೆಗೊಂಡಿದ್ದರು.

Read More

ವಿಟ್ಲ: ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದಿಂದ ನಾಪತ್ತೆಯಾಗಿದ್ದ ಯುವತಿಯನ್ನು ವಿಟ್ಲ ಠಾಣಾ ಪೊಲೀಸರು ಚಿಕ್ಕಮಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ. ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಬಸಬೆಟ್ಟು ನಿವಾಸಿ ರಝಾಕ್ ರವರ ಪುತ್ರಿ  ಜು.22 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಅಬ್ದುಲ್ ಶರೀಫ್‌ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಕೆ ವಿಟ್ಲದ ನೆಲ್ಲಿಗುಡ್ಡೆಯಲ್ಲಿರುವ ಪುತ್ತೂರು ಮುಕ್ವೆ ಮೂಲದ ಮಂತ್ರವಾದಿ ಜೊತೆ ತೆರಳಿರುವುದಾಗಿ ಅಬ್ದುಲ್ ಶರೀಫ್‌ ರವರು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದರು. ಇದರಂತೆ ನಾಪತ್ತೆ ಪ್ರಕರಣ ದಾಖಲಿಸಿದ ಪೊಲೀಸರು ಹುಡುಕಾಟ ಆರಂಭಿಸಿ ಆಕೆಯನ್ನು ಚಿಕ್ಕಮಗಳೂರಿನಿಂದ ಪತ್ತೆ ಹಚ್ಚಿದ್ದಾರೆ. ಬಳಿಕ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಯುವತಿಯನ್ನು ಆಕೆಯ ಪೋಷಕರೊಂದಿಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.

Read More

ಮಂಗಳೂರು: ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಹಿಡಿದು ಬಂಧಿಸಿದ್ದಾರೆ. ಕಟ್ಟೆಬಯಲ್ ಅಡ್ಯಾರ್ ಪಡೀಲ್ ನಿವಾಸಿ ಸದ್ದಾಂ ಹುಸೇನ್ ತಂದೆ ಹೆಸರು ಉಮಾರಬ್ಬ ಎಂಬ ಆರೋಪಿಯ ಮೇಲೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಾಲಂ 307.504.506ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯು ಸುಮಾರು 6 ತಿಂಗಳಿನಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದು,ದಸ್ತಗಿರಿಗಾಗಿ ನ್ಯಾಯಲಯ ಅರೆಸ್ಟ್ ವಾರೆಂಟ್ ಹೊರಡಿಸಲಾಗಿತ್ತು. ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದು,ದಕ್ಷಿಣ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಾದ ಪಿ.ಐ.ಮಂಜುನಾಥ್,ಪಿ.ಎಸ್.ಐ.ಮನೋಹರ್,ಪಿ.ಎಸ್.ಐ.ಶೀತಲ್ ಅಲುಗೂರು,ಹೆಚ್.ಸಿ.ಪುಟ್ಟರಾಮ್,ಹೆಚ್.ಸಿ.ಲಕ್ಷ್ಮಣ್,ಪಿ.ಸಿ.ರವಿಕುಮಾರ್,ಪಿ.ಸಿ.ಪರಶುರಾಮ್, ಪಿ.ಸಿ. ಬಾಸ್ಕರ್ ನೇತೃತ್ವದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.ಆರೋಪಿಗೆ ಜಾಮೀನು ರಹಿತ ಪ್ರಕರಣವಾದ ಕಾರಣ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ಆರೋಪಿಯ ಮೇಲೆ ಕಂಕನಾಡಿ ಠಾಣೆ,ಮತ್ತು ಗ್ರಾಮಾಂತರ ಠಾಣೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ದೂರು ದಾಖಲಾಗಿರುತ್ತದೆ.

Read More

ಮಂಗಳೂರು: ಪಬ್ ಗೆ ನುಗ್ಗಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳದ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸಿ ತಡೆ ಒಡ್ಡಿದ ಘಟನೆ ಇದೀಗ ನಡೆದಿದೆ. ಮಂಗಳೂರಿನ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿದ್ದಲ್ಲಿಗೆ ಭಜರಂಗದಳದ ಕಾರ್ಯಕರ್ತರು ನುಗ್ಗಿ ಪಾರ್ಟಿಯನ್ನು ತಡೆದಿದ್ದಾರೆ. ಕಾಲೇಜು ಫೇರ್ ವೆಲ್ ಹಿನ್ನೆಲೆ ಪಬ್ ನಲ್ಲಿ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದಿದ್ದು, ವಿದ್ಯಾರ್ಥಿಗಳು ತೆರಳಿದ್ದು, ಬಜರಂಗದಳದ ಕಾರ್ಯಕರ್ತರು ಕಾಲ್ಕಿತ್ತಿದ್ದಾರೆ.

Read More

ಪಶ್ಚಿಮಬಂಗಾಳ;ವಿದ್ಯಾರ್ಥಿನಿಗೆ ಕಪಾಳ ಮೋಕ್ಷ ಮಾಡಿದ ಶಿಕ್ಷಕಿಗೆ ಪೋಷಕರು ಶಾಲೆಗೆ ನುಗ್ಗಿ ಥಳಿಸಿ ವಿವಸ್ತ್ರಗೊಳಿಸಿದ ಘಟನೆ ದಕ್ಷಿಣ ದಿನಾಜ್‌ಪುರನಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೋರ್ವರು ತರಗತಿಗೆ ಗೈರಾದ ವಿದ್ಯಾರ್ಥಿನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣದಲ್ಲಿ ಪೋಷಕರ ಗುಂಪು ಶಾಲೆಗೆ ನುಗ್ಗಿ ಮಹಿಳಾ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿದೆ. ಘಟನೆ ಕುರಿತು ಶಾಲಾ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಶಾಲೆಗೆ ದೌಡಾಯಿಸಿ, ಶಿಕ್ಷಕರಿಗೆ ಭದ್ರತೆಯ ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಹಲ್ಲೆ ನಡೆಸಿದ ನಾಲ್ವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

Read More

ಕಾರ್ಕಳ: ತಾಲೂಕು ಕಚೇರಿಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಶ್ಮಿತಾ ದೇವಾಡಿಗ(26) ಎಂಬವರು ಭಾನುವಾರ ತಡರಾತ್ರಿ ತಾವು ವಾಸವಿದ್ದ ಹುಡ್ಕೋ ಕಾಲೊನಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವಿವಾಹಿತರಾಗಿದ್ದ ಸುಶ್ಮಿತಾ ಮೂಲತಃ ಕಾರ್ಕಳದ ಪೆರ್ವಾಜೆಯವರಾಗಿದ್ದು ತಂದೆ ತಾಯಿವರ ಜತೆ ಸರಕಾರಿ ವಸತಿಗೃಹದಲ್ಲಿ ವಾಸವಾಗಿದ್ದರು. ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಸುಶ್ಮಿತಾ ಅವರ ಪೋಷಕರಿಗೆ ಪೆರ್ವಾಜೆಯಲ್ಲಿ ಸ್ವಂತ ಜಾಗವಿಲ್ಲದ ಹಿನ್ನೆಲೆಯಲ್ಲಿ ಅವರ ಅಜ್ಜಿ ಮನೆಯಾದ ಹೆಬ್ರಿ ತಾಲೂಕಿನ ಚಾರ ಎಂಬಲ್ಲಿನ ಜಾಗದಲ್ಲಿ ಹೊಸ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಗೃಹಪ್ರವೇಶದ ಬಳಿಕ ಅವರ ಮದುವೆಯ ಬಗ್ಗೆ ಪೋಷಕರು ನಿರ್ಧರಿಸಿದ್ದರು ಎನ್ನಲಾಗಿದೆ. ಕಾರ್ಕಳ ತಾಲೂಕು ಕಚೇರಿಯಲ್ಲಿ ಪಿಂಚಣಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅತ್ಯಂತ ಸರಳ ಸ್ವಭಾವದ ಸುಶ್ಮಿತಾ ಅವರ ಈ ದುಡುಕಿನ ನಿರ್ಧಾರ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.

Read More

ದೆಹಲಿ: ‘ಮಹಿಳಾ ಸಬಲೀಕರಣವೇ ನನ್ನ ಮೊದಲ ಆದ್ಯತೆ’ ಎಂದು ಭಾರತದ ನೂತನ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು ಹೇಳಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಾಷಣ ಮಾಡಿದ ದ್ರೌಪದಿ ಮುರ್ಮು, ಭಾರತದ ವಿಕಾಸ ಯಾತ್ರೆಯ ವೇಗ ಹೆಚ್ಚಿಸಬೇಕು. ಸ್ವಾತಂತ್ರ್ಯ ಅಮೃತೋತ್ಸವ ಹೊತ್ತಲ್ಲಿ ಇದು ಹೊಸ ಚರಿತ್ರೆ. ಬಡವರ ಕನಸು ನನಸು ಮಾಡಲು ಬದ್ಧವಾಗಿದ್ದೇನೆ ಎಂದಿದ್ದಾರೆ. ಇನ್ನು ಮಹಿಳಾ ಸಬಲೀಕರಣವೇ ನನ್ನ ಮೊದಲ ಆದ್ಯತೆಯಾಗಿದ್ದು, ಅದರೊಂದಿಗೆ ಬಡವರ ಕನಸು ನನಸು ಮಾಡಲು ಬದ್ಧವಾಗಿದ್ದೇನೆ ಎಂದರು. ನಾನು ರಾಷ್ಟ್ರಪತಿಯಾಗಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

Read More