ಮಂಗಳೂರು: ಉದ್ಯೋಗಿಯಿಂದಲೇ ಬ್ಯಾಂಕ್ ಹಣ ದುರುಪಯೋಗ ದೇರಳಕಟ್ಟೆಯ ವಿಜಯಾಬ್ಯಾಂಕ್ ಯೆನೆಪೊಯ ಯುನಿವರ್ಸಿಟಿಯ ಬ್ರ್ಯಾಂಚ್ ನೌಕರ ವಿಕಾಸ್ ವಿ. ಶೆಟ್ಟಿಗೆ 2ನೇ ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್ ಗದ್ದೆಯವರು 2017ರ ಡಿಸೆಂಬರ್ 28-30 ರವರೆಗೆ ರಜೆಯಲ್ಲಿದ್ದರು. ಈ ವೇಳೆ ವಿಕಾಸ್ ವಿ. ಶೆಟ್ಟಿ ಪ್ರಭಾರದಲ್ಲಿದ್ದರು. ಆದರೆ 2017ರ ಡಿಸೆಂಬರ್ 29ರಂದು ಸಂಜೆ ಬ್ಯಾಂಕ್ ಸಿಬ್ಬಂದಿ ಕ್ಲೋಸಿಂಗ್ ಕ್ಯಾಶ್‌ನ್ನು ಬ್ಯಾಂಕ್‌ನ ಫಿನಾಕಲ್ ಸ್ವಾಫ್ಟ್ ವೇರ್‌ನಲ್ಲಿ ಟ್ಯಾಲಿ ಮಾಡಿದಾಗ ಕ್ಲೋಸಿಂಗ್ ಕ್ಯಾಶ್ ಟ್ಯಾಲಿಯಾಗದೆ 27,29,875 ರೂ. ಕಡಿಮೆ ಇತ್ತು. ಈ ಬಗ್ಗೆ ವಿಕಾಸ್ ವಿ.ಶೆಟ್ಟಿಯಲ್ಲಿ ವಿಚಾರಿಸಿದಾಗ, ಈ ಹಣವನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡಿದ್ದನು. ಹಾಗೂ ಈ ಹಣವನ್ನು ಡಿಸೆಂಬರ್ 31ರಂದು ಬ್ಯಾಂಕಿಗೆ ಮರು ಪಾವತಿ ಮಾಡಿದ್ದಾನೆ. ಆದರೆ ಆರೋಪಿ ಸಾರ್ವಜನಿಕ ಹಣವನ್ನು ತನ್ನ ಸ್ವಂತ ಉಪಯೋಗಕ್ಕೆ ದುರುಪಯೋಗ ಪಡಿಸಿ ನಂಬಿಕೆ ದ್ರೋಹ ಎಸಗಿರುವುದಾಗಿ ಮಂಗಳೂರು ಇಕಾನಮಿಕ್ & ನಾರ್ಕೋಟಿಕ್…
Author: main-admin
ಬೈಂದೂರು: ಅತಿವೇಗದಿಂದ ಚಲಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಶಿರೂರಿನ ಟೋಲ್ ಗೇಟ್‌ನ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ರೋಗಿಯನ್ನು ಕರೆತರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಶಿರೂರಿನ ಟೋಲ್ ಗೇಟ್‌ನ ಕಂಬಕ್ಕೆ ಢಿಕ್ಕಿ ಹೊಡೆದ ಬಳಿಕ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂವರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೈಂದೂರು (ಉಪ್ಪುಂದ): ಕವರ್ ಸಹಿತ ಚಾಕಲೇಟ್ ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳವಾಡಿಯಲ್ಲಿ ಬುಧವಾರ ನಡೆದಿದೆ. ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬವಳಾಡಿ ಗ್ರಾಮದ ನಿವಾಸಿ ಸಮನ್ವಿ ಮೃತ ಬಾಲಕಿ ಎಂದು ತಿಳಿದುಬಂದಿದೆ. ಘಟನೆ ವಿವರ: ಸಮನ್ವಿ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. ಮಗಳನ್ನು ಸಮಧಾನಪಡಿಸಲು ಅಮ್ಮ ಚಾಕಲೇಟ್ ನೀಡಿದ್ದಾರೆ. ಈ ವೇಳೆ ಶಾಲಾ ವಾಹನ ಬಂದಿದ್ದು, ವಿದ್ಯಾರ್ಥಿನಿ ಕವರ್ ಸಹಿತ ಚಾಕಲೇಟ್ ನುಂಗಿದ್ದಾಳೆ. ಚಾಕಲೇಟ್ ಗಂಟಲಲ್ಲಿ ಸಿಲುಕಿಕೊಂಡು, ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ: ನಗರದ ಕೋರ್ಟ್ ಹಿಂಬದಿ ರಸ್ತೆಯ ವಕೀಲರೊಬ್ಬರ ಮನೆಗೆ ಜು.19 ರಂದು ಹಾಡಹಗಲೇ ನುಗ್ಗಿದ ಕಳ್ಳರು 25 ಲಕ್ಷ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಉಡುಪಿಯ ವಕೀಲೆ ವಾಣಿ ವಿ. ರಾವ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಪರ್ಸ್ ನಲ್ಲಿದ್ದ 45,000 ರೂ. ನಗದು ಮತ್ತು ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್, 6 ಪವನ್ ತೂಕದ 2 ಮುತ್ತಿನ ಬಳೆ, ಐದೂವರೆ ಪವನ್ ತೂಕದ 2 ಚಿನ್ನದ ಖಡಗ ಬಳೆಗಳು, 6 ಪವನ್ ತೂಕದ ಚಿನ್ನದ ಸರ ಮತ್ತು 1 ಪವನ್ ತೂಕದ ಪೆಂಡೆಂಟ್, 6 ಪವನ್ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, ಒಂದೂವರೆ ಪವನ್ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್, ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಮರಳಿನ 2 ಬೆಂಡೋಲೆ, ಜುಮ್ಕಿ ಮತ್ತು 2…
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿದೆ. ನಗರದ ಎಕ್ಕೂರು ನಿವಾಸಿ ಧೀರಜ್ ಕುಮಾರ್(27), ಬಜಾಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಗೂಂಡಾ ಕಾಯ್ದೆ ಜಾರಿಗೊಂಡ ಆರೋಪಿಗಳು. ಆರೋಪಿಗಳಿಬ್ಬರೂ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯದಲ್ಲಿ ಪದೇ ಪದೇ ತೊಡಗಿಕೊಂಡಿರುತ್ತಾರೆ. ಇವರುಗಳು ಕೊಲೆಯತ್ನ, ಸುಲಿಗೆ, ದರೋಡೆಗೆ ಯತ್ನ, ಹಲ್ಲೆ ಅಪರಾಧಕ್ಕೆ ಒಳಸಂಚು ಪ್ರಕರಣಗಳಲ್ಲಿ ಪದೇ ಪದೇ ನಡೆಸುತ್ತಿದ್ದ ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಕೃತ್ಯದಲ್ಲಿ ತೊಡುಗುತ್ತಿರುವುದರಿಂದ ಸಾಮಾನ್ಯ ಕಾನೂನುಗಳಿಂದ ಇವರ ಅಪರಾಧ ಕೃತ್ಯಗಳಿಗೆ ನಿಯಂತ್ರಣ ಹೇರುವುದು ಕಷ್ಟಕರವಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಇಬ್ಬರೂ ಆರೋಪಿಗಳನ್ನು ಗೂಂಡಾ ಕಾಯ್ದೆಯನ್ವಯ ಗರಿಷ್ಠ ಅವಧಿಗೆ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ. ಸದ್ಯ ಇವರಿಬ್ಬರೂ ಮಂಗಳೂರು ಕಾರಾಗೃಹದಲ್ಲಿ ಬಂಧಿಗಳಾಗಿದ್ದಾರೆ.
ಮಂಗಳೂರು : ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ವಿರುದ್ಧ ದೂರು ದಾಖಲಾಗಿದೆ. ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡ ವಿರುದ್ದ ಮೂಡಬಿದ್ರೆ ಪೊಲೀಸ್ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬುವವರು ದೂರು ನೀಡಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ದೂರು ನೀಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 18 ದಿನಗಳಲ್ಲಿ 910 ಮಂದಿಗೆ ಡೆಂಘಿ ಜ್ವರ ಕಾಣಿಸಿಕೊಂಡಿದ್ದು, ಒಟ್ಟೂ ಪ್ರಕರಣಗಳ ಸಂಖ್ಯೆ 3,384ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ 176, ಉಡುಪಿ 356, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 585, ಮೈಸೂರು 349, ಚಿತ್ರದುರ್ಗ 163, ಶಿವಮೊಗ್ಗ 158, ಹಾಸನ 124, ದಾವಣಗೆರೆ 114, ವಿಜಯಪುರ 110, ಬೆಳಗಾವಿ 103, ಕಲಬುರಗಿ 101, ಕೊಪ್ಪಳ 100 ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ವರದಿಯಾಗಿವೆ. ಇನ್ನು ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಜನರಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಈ ವರ್ಷ ಜ.1 ರಿಂದ ಜೂ. 24ರವರೆಗೆ 62,357 ಡೆಂಘಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 26,719 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. 3,384 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ
ದಕ್ಷಿಣಕನ್ನಡ : ಭಾರೀ ಮಳೆಯಿಂದಾಗಿ ಮಣ್ಣು ಕುಸಿತ ಗೊಂಡ ಹಿನ್ನೆಲೆ ಬಂದ್ ಆಗಿದ್ದ ಶಿರಾಡಿಘಾಟ್, ಮುಂದಿನ ವಾರದಿಂದ ತಾತ್ಕಾಲಿಕವಾಗಿ ಒನ್ ವೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಕಾಮಾಗಾರಿ ಬಳಿಕ ಭಾರೀವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ವಾರದಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ: ಪತಿಯ ಮರಣಾನಂತರ ಮಾನಸಿಕ ಖಿನ್ನತೆ ಉಲ್ಬಣಗೊಂಡು ಹೆರ್ಗ ಗ್ರಾಮದ ಈಶ್ವರನಗರ ನಿವಾಸಿ ಸುಮತಿ(72) ಎಂಬುವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವರ್ಷ ಇವರ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಬಳಿಕ ಮಾನಸಿಕ ಖಿನ್ನತೆ ಸಮಸ್ಯೆ ಉಲ್ಬಣಗೊಂಡಿತ್ತು. 25 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಕೂಟೇಲು ಸೇತುವೆ ಬಳಿ ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಒಂದು ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕೆಮ್ಮಾರದ ಮುಹಮ್ಮದ್ ನವಾಝ್ ಹಾಗೂ ಅನ್ಸಾರ್ ಗಾಯಗೊಂಡವರಾಗಿದ್ದಾರೆ. ಸ್ವಿಫ್ಟ್ ಡಿಸೈರ್ ಕಾರಿನಲ್ಲಿದ್ದ ಸಾಮೆತ್ತಡ್ಕದ ನಿವಾಸಿ ಅಬ್ದುಲ್ ಮಜೀದ್ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಕಡೆಯಿಂದ ಹಳೆಗೇಟು ಕಡೆ ಹೋಗುತ್ತಿದ್ದ ಕಾರು ಕೂಟೇಲು ಸೇತುವೆಯ ಬಳಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬಂದು ಹಳೆಗೇಟಿನಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ಹಳೆಗೇಟು ಕಡೆ ಮುಖ ಮಾಡಿ ರಸ್ತೆಯಂಚಿನ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದರೆ, ಮಾರುತಿ 800 ಕಾರು ರಸ್ತೆಯ ಇನ್ನೊಂದು ಬದಿ ಉಪ್ಪಿನಂಗಡಿ ಕಡೆಗೆ ಮುಖ ಮಾಡಿ ನಿಂತಿದೆ. ಮಾರುತಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.