ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದ ಕಾರೊಂದು ಹೊಳೆಗೆ ಉರುಳಿದ ಘಟನೆ ತಡರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ನಾಪತ್ತೆಯಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಹೊಳೆಯಿಂದ ಕಾರನ್ನು ಹೊರತೆಗೆಯಲಾಗಿದೆ, ಆದರೆ ಅದರಲ್ಲಿದ್ದ ಇಬ್ಬರು ಮಾತ್ರ ಪತ್ತೆಯಾಗಿಲ್ಲ. ಇಬ್ಬರೂ ಏನಾದರೂ ಎಂಬುದೇ ತಿಳಿಯುತ್ತಿಲ್ಲ. ಘಟನಾ ಸ್ಥಳದಿಂದ ಸುಮಾರು500 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದೆ, ಆದರೆ ಕಾರಿನಲ್ಲಿದ್ದ ವಿಟ್ಲದ ಧನುಷ್ (25) ಮತ್ತು ಕನ್ಯಾನ ನಿವಾಸಿ ಧನುಷ್ (24) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ನಿನ್ನೆ ರಾತ್ರಿ 12:05 ಗಂಟೆಯ ವೇಳೆಗೆ ಕಾಣಿಯೂರು ಸಮೀಪದ ಬೈತಡ್ಕದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ ಮಸೀದಿ ಸಿಸಿ ಕ್ಯಾಮರಾ ಚೆಕ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ.
Author: main-admin
ಸುಳ್ಯ : ಅತಿ ವೇಗವಾಗಿ ಬಂದ ಕಾರೊಂದು ಉಕ್ಕಿ ಹರಿಯುವ ಹೊಳೆಗೆ ಬಿದ್ದಿರುವ ಘಟನೆ ಕಳೆದ ರಾತ್ರಿ ನಡೆದಿದ್ದು ಸಿಸಿ ಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಸುಳ್ಯ ತಾಲೂಕಿನ ಮಂಜೇಶ್ವರ – ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ಈ ಘಟನೆ ನಡೆದಿದ್ದು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅತಿ ವೇಗವಾಗಿ ಬಂದಿರುವ ಈ ಕಾರು ತಿರುವು ಪಡೆದುಕೊಳ್ಳದೆ ನೇರವಾಗಿ ಗೌರಿ ಹೊಳೆಗೆ ಬಿದ್ದಿದೆ. ಘಟನೆಯ ಸಿಸಿ ಟಿವಿ ದೃಶ್ಯವನ್ನು ವೀಕ್ಷಿಸಿದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದು ಕಾರು ಪತ್ತೆಯಾಗಿಲ್ಲ. ಕಾರಿನಲ್ಲಿ ಎಷ್ಟು ಜನರಿದ್ದರು. ಅವರಿಗೆ ಏನಾದರೂ ಅಪಾಯ ಸಂಭವಿಸಿದೆಯೋ ಎಂಬುದರ ಕುರಿತು ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ.
ಶಿವಮೊಗ್ಗ: ಮಳೆಯ ಅರ್ಭಟಕ್ಕೆ ಆಗುಂಬೆ ಘಾಟಿಯ ಸೋಮೇಶ್ವರ ಕಡೆಯಿಂದ ಬರುವ ಮೂರನೇ ತಿರುವಿನಲ್ಲಿ ರಸ್ತೆಯ ಮೇಲೆ ಭಾನುವಾರ ನಸುಕಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ತೀರ್ಥಹಳ್ಳಿ- ಹೆಬ್ರಿ ನಡುವಿನ ರಾಷ್ಟ್ರೀಯ ಹೆದ್ದಾರಿ 169 ಎ ಸಂಪರ್ಕ ಕಡಿತಗೊಂಡಿದೆ. ಆಗುಂಬೆ ಹಾಗೂ ಸೋಮೇಶ್ವರ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳನ್ನು ಮರಳಿ ಕಳುಹಿಸಲಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದವರು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸುಳ್ಯ: ಭಾರೀ ಶಬ್ದದೊಂದಿಗೆ ಇಂದು ಬೆಳ್ಳಂ ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಘಟನೆ ಸಂಪಾಜೆ ಹಾಗು ಸಮೀಪದ ಪ್ರದೇಶ, ಅರಂತೋಡು, ತೊಡಿಕಾನ, ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಗಡಿ ಪ್ರದೇಶಗಳಾದ ಚೆಂಬು, ಕಲ್ಲಪಳ್ಳಿ ಭಾಗದಲ್ಲಿ ಜನರ ಅನುಭವಕ್ಕೆ ಬಂದಿದೆ. ಹೌದು ಜೂ.10 ರಂದು ಬೆಳಿಗ್ಗೆ 6.23ಕ್ಕೆ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನ ತಮ್ಮ ಅನುಭವವನ್ನು ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಕಲ್ಲಪಳ್ಳಿ ಭಾಗದಲ್ಲಿ ಸ್ವಲ್ಪ ಹೆಚ್ಚು ತೀವ್ರತೆ ಇರುವಂತೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವ ಆಯಿತು ಎಂದು ಹಲವರು ಹೇಳಿದ್ದಾರೆ. ವಾರದ ಬಳಿಕ ಇದೀಗ ಮತ್ತೆ ಭೂಮಿ ನಡುಗಿದೆ. ಜೂ.25 ಮತ್ತು ಜುಲೈ 1 ರ ನಡುವೆ ಹಲವು ದಕ್ಷಿಣ ಕನ್ನಡ ಹಾಗು ಕೊಡಗಿನ ಗಡಿ ಭಾಗದಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂ ಕಂಪನ ಉಂಟಾಗಿತ್ತು. ಇದೀಗ ಭೂಮಿ ಮತ್ತೆ ಕಂಪಿಸಿದ್ದು ಜನರ ಆತಂಕ ಹೆಚ್ಚಿದೆ.
ಮಂಗಳೂರು;ಗಾಂಜಾವನ್ನು ಹೊಂದಿದ್ದ 12 ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅನಂತು ಕೆ ಪಿ(18), ಅಮಲ್(21), ಅಭಿಷೇಕ(21), ನಿದಾಲ್(21), ಶಾಹೀದ್(21) ಶಾನೂಫ್ (21), ಮುಹಮ್ಮದ್ ರಸೀನ್(22), ಗೋಕುಲ ಕೃಷ್ಣನ್ (22), ಶಾರೂನ್ ಆನಂದ(19), ಫಹಾದ್ ಹಬೀಬ್(22), ಮುಹಮ್ಮದ್ ರಿಶಿನ್(22), ರಿಜಿನ್ ರಿಯಾಝ್(22) ಬಂಧಿತರು. ಮಂಗಳೂರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಹಾಗೂ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮತ್ತು ಪಿಎಸ್ ಐ ರಾಜೇಂದ್ರ ಬಿ ರವರ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರು ವೆಲೆನ್ಸಿಯಾ ಬಳಿ ವಸತಿಗೃಹಕ್ಕೆ ದಾಳಿ ನಡೆಸಿ ಗಾಂಜಾವನ್ನು ಹೊಂದಿದ 12 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು 900 ಗ್ರಾಂ ತೂಕದ ರೂ. 20,000 ಮೌಲ್ಯದ ಗಾಂಜಾ ಸೇರಿ 2 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಟ್ವಾಳ: ಅಮರನಾಥ ಯಾತ್ರೆ ಕೈಗೊಂಡಿರುವ ಬಂಟ್ವಾಳದ 30 ಮಂದಿಯ ತಂಡ ಸುರಕ್ಷಿತವಾಗಿದೆ. ಈ ಕುರಿತು ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ ಬಂಟ್ವಾಳ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಅವರು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಬಂಟ್ವಾಳದ ಯಶೋಧರ ಕರ್ಬೆಟ್ಟು, ಸಂತೋಷ್ ರಾಯಿಬೆಟ್ಟು, ಸುರೇಶ್ ಕೋಟ್ಯಾನ್ ಸಹಿತ ಮೂವತ್ತು ಮಂದಿಯೂ ಸೇಫ್ ಆಗಿ ದರ್ಶನ ಪಡೆದು ಬರುವ ವಿಶ್ವಾಸವನ್ನು ಹೊಂದಿದ್ದಾರೆ. ನಾವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಿಂದ ಬಂದಿದ್ದೇವೆ. ಕೇವಲ 28 ಕಿಲೊ ಮೀಟರ್ ಅಂತರದಲ್ಲಿ ನಾವು ಅಮರನಾಥ ತಲುಪಲಿದ್ದು, ಸೈನ್ಯದ ಸಹಾಯದಿಂದ ನಾವು ನಾಳೆ ಬೆಳಗ್ಗೆ ತಲುಪುವ ನಿರೀಕ್ಷೆಯಲ್ಲಿದ್ದೇವೆ. ಇಲ್ಲಿ ಸೈನಿಕರು ನಮ್ಮನ್ನು ಸುರಕ್ಷಿತವಾಗಿಟ್ಟಿದ್ದು, ನಿನ್ನೆ ನಡೆದ ದುರ್ಘಟನೆಯಿಂದ ದೂರದ ಪ್ರದೇಶದಲ್ಲಿ ನಾವಿದ್ದು, ಯಾವುದೇ ಅಪಾಯ ಇಲ್ಲಿಲ್ಲ ಎಂದು ತಂಡದ ಸದಸ್ಯ ಬಿ.ಸಿ.ರೋಡ್ ನರಿಕೊಂಬು ನಿವಾಸಿ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ. ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದಾರೆ, ನಾಳೆ ಬೆಳಿಗ್ಗೆ ಅಮರನಾಥ ದಲ್ಲಿ ದರ್ಶನ ಭಾಗ್ಯ…
ಕಾರ್ಕಳ: ದನಗಳನ್ನು ಕದ್ದು ಅವುಗಳನ್ನು ಹತ್ಯೆಗೈದು ಮಾಂಸ ಮಾರಾಟ ಮಾಡುತ್ತಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಸಾಣೂರು ಮೈಲೊಟ್ಟು ನಿವಾಸಿ ಅಬ್ದುಲ್ ರಹಿಮಾನ್(30), ಸಾಣೂರು ನಿವಾಸಿ ರಜಾಕ್ ಹಾಗೂ ಶರೀಫ್ ಬಂಧಿತ ಆರೋಪಿಗಳು. ಸಾಣೂರು ಗ್ರಾಮದ ಸಾಣೂರು ಸೇತುವೆಯ ಬಳಿಯ ಅಬ್ದುಲ್ ರಹಿಮಾನ್ ಮನೆಯ ಶೆಡ್‌ನಲ್ಲಿ ಕಳವು ಮಾಡಿ ತಂದ ದನವನ್ನು ಕಡಿದು ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣವೇ ಕಾರ್ಕಳ ನಗರ ಠಾಣಾ ಪಿಎಸ್‌ಐ ಪ್ರಸನ್ನ ನೇತೃತ್ವದಲ್ಲಿ ಪೊಲೀಸ್ ತಂಡವು ಶುಕ್ರವಾರ ಸಂಜೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 10 ಸಾವಿರ ರೂ ಮೌಲ್ಯದ 27 ಕೆಜಿ ದನದ ಮಾಂಸ ಹಾಗೂ ಕತ್ತಿ, ದನ ಸಾಗಾಟಕ್ಕೆ ಬಳಸಲಾದ ಗೂಡ್ಸ್ ವಾಹನ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಎಸೈ ದಾಮೋದರ, ಕಾನ್ಸ್‌ಟೇಬಲ್ ಗಳಾದ ಸಿದ್ದರಾಯಪ್ಪ, ಪ್ರತಾಪ್ ಹಾಗೂ ಪ್ರಭು ಅಥಣಿ ಪಾಲ್ಗೊಂಡಿದ್ದರು. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಡಬ: ಶಿರಾಡಿ ಗ್ರಾಮದ ಗುಂಡ್ಯ ಬಳಿಕ ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನದಿಂದ ತುಸು ದೂರ ಗುಂಡ್ಯ ಹೊಳೆ ಬದಿ ಗಂಡು ಆನೆ ಮರಿಯ ಶವವೊಂದು ನಿನ್ನೆ (ಜು.8ರಂದು) ಪತ್ತೆಯಾಗಿದೆ. ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯ ಮಾರನಹಳ್ಳಿ ಶಾಖೆ ಕೆಂಪುಹೊಳೆ ಮೀಸಲು ಅರಣ್ಯ ಪ್ರದೇಶದಲ್ಲಿ ಆನೆಮರಿ ಶವ ಪತ್ತೆಯಾಗಿದೆ. ಆನೆ ಮರಿಗೆ ಸುಮಾರು 5 ತಿಂಗಳು ಆಗಿರಬಹುದು. ತಾಯಿ ಆನೆಯೊಂದಿಗೆ ಮರಿ ಆನೆ ಆಹಾರ ಹುಡುಕುತ್ತಾ ಬರುವ ವೇಳೆ ಗುಡ್ಡದಿಂದ ಜಾರಿ ಬಿದ್ದಿರಬಹುದು ಅಥವಾ ಹೊಳೆ ದಾಟುವಾಗ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಾರನಹಳ್ಳಿ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್, ಉಪ್ಪಿನಂಗಡಿ ಅರಣ್ಯ ವಲಯ ವ್ಯಾಪ್ತಿಯ ಶಿರಾಡಿ ಅರಣ್ಯಾಧಿಕಾರಿ ಧೀರಜ್, ಅರಣ್ಯ ರಕ್ಷಕ ಸುನಿಲ್‌ರವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಈ ನಡುವೆಯೇ ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 9ರಿಂದ ಮೂರು ದಿನ ಭಾರೀ ಮಳೆಯಾಗಲಿದೆ. ಹಲವು ಜಿಲ್ಲೆಯಲ್ಲಿ ಭಾರೀ ಮಳೆಯ ಕಾರಣ ಯೆಲ್ಲೋ ಅಲರ್ಟ್ ಕೂಡ ಹವಾಮಾನ ಇಲಾಖೆ ಘೋಷಿಸಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಹಲವಡೆ ಭಾರೀ ಮಳೆಯಾದರೇ, ಇನ್ನುಳಿದೆಡೆ ಜಿಟಿ ಜಿಟಿ ಮಳೆಯಾಗಿದೆ. ಇಂದೂ ಸಹ ನಗರದಲ್ಲಿ ತುಂತುರು ಮಳೆ ನಿರೀಕ್ಷೆ ಮಾಡಲಾಗಿದೆ.
ದಕ್ಷಿಣ ಕನ್ನಡ : ವಿಪರೀತ ಮಳೆಯ ಪ್ರಭಾವದಿಂದ ಅನೇಕ ಮನೆಗಳು, ರಸ್ತೆಗಳು, ಸೇತುವೆಗಳು ಹಾನಿಯಾಗಿದೆ. ಅಷ್ಟೇ ಅಲ್ಲದೇ, ಅನೇಕ ಅಪಘಾತಗಳು ನಡೆಯುತ್ತಿದೆ. ಇದರ ಪರಿಣಾಮವಾಗಿ ನಮ್ಮ ಜಿಲ್ಲಾಧಿಕಾರಿಗಳು ಈ ರೀತಿ ಘಟನೆಗಳು ಸಂಭವಿಸಿದರೆ, ಆಯಾಯ ಕಚೇರಿಗಳಿಗೆ ಮಾಹಿತಿಯನ್ನು ತಿಳಿಸಲು ಹೇಳಿದ್ದಾರೆ. ಕಚೇರಿಗಳ ದೂರವಾಣಿ ಸಂಖ್ಯೆಯನ್ನು ಕೊಟ್ಟಿದ್ದು, ಸಹಾಯಕ್ಕಾಗಿ ಈ ನಂಬರ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ. ಜಿಲ್ಲಾಧಿಕಾರಿ ಕಚೇರಿ ಮತ್ತು ಜಿಲ್ಲಾವಿಪತ್ತು ನಿರ್ವಹಣಾ ಪ್ರಾಧಿಕಾರ, ನಿಯಂತ್ರಣ ಕೊಠಡಿ 1077/ 0824-2442590 ಮೊ.9483908000 ಮಂಗಳೂರು ಮಹಾನಗರ ಪಾಲಿಕೆ : 0824-2220306, 0824-2220319 ಮೆಸ್ಕಾಂ ದ. ಕ. ಜಿಲ್ಲೆ 1912 ಮಂಗಳೂರು ತಾಲೂಕು ಕಚೇರಿ 0824 -2220587/596 ಬಂಟ್ವಾಳ ತಾಲೂಕು ಕಚೇರಿ 08255-232129/232500 ಪುತ್ತೂರು ತಾಲೂಕು ಕಚೇರಿ 08251-230349/232799 ಬೆಳ್ತಂಗಡಿ ತಾಲೂಕು ಕಚೇರಿ 08256-232047/233123 ಸುಳ್ಯ ತಾಲೂಕು ಕಚೇರಿ : 08257-230330,1231231/298339 ಮೂಡುಬಿದ್ರೆ ತಾಲೂಕು ಕಚೇರಿ 08258-238109/239900 ಕಡಬ ತಾಲೂಕು ಕಚೇರಿ : 08251-269435 ಮೂಲ್ಕಿ ತಾಲೂಕು ಕಚೇರಿ 0824-2294496 ಉಳ್ಳಾಲ ತಾಲೂಕು ಕಚೇರಿ:…