Author: main-admin

ಮಹಾ ಮಳೆ ನಕ್ಷತ್ರಗಳಲ್ಲಿ ಎರಡನೆಯದಾದ ಪುನರ್ವಸು ಆರಂಭದ ಮುನ್ನಾದಿನ ಮಂಗಳವಾರ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಬೆಳಗ್ಗೆ ಆರಂಭವಾದ ಮಳೆ ದಿನಪೂರ್ತಿ ಬಿಡದೆ ಸುರಿದಿದೆ. ನದಿ, ಹೊಳೆಗಳು ಉಕ್ಕಿ ಹರಿದಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇಗುಲದ ಅಂಗಣಕ್ಕೆ ಮಧು ವಾಹಿನಿ ನದಿಯ ಪ್ರವಾಹ ಪ್ರವೇಶಿಸಿತ್ತು. ಉಡುಪಿ ಜಿಲ್ಲೆಯ ಮಾರಣಕಟ್ಟೆ, ಕಮಲಶಿಲೆ ದೇಗುಲಗಳೂ ಜಲಾವೃತಗೊಂಡಿದ್ದವು. ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಗೆ ಅಪಾಯ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಕಲ್ಲಡ್ಕ – ಕಾಂಞಂಗಾಡ್‌ ಅಂತಾರಾಜ್ಯ ಹೆದ್ದಾರಿಯಲ್ಲಿಯೂ ಸಾರಡ್ಕ ಬಳಿ ಗುಡ್ಡ ಕುಸಿದು ಸಂಚಾರ ಸ್ವಲ್ಪ ಕಾಲ ಸ್ಥಗಿತಗೊಂಡಿತ್ತು. ಉಡುಪಿ -ಶಿವಮೊಗ್ಗ ಸಂಪರ್ಕಿಸುವ ರಾ.ಹೆ. 169 ಎ ರಸ್ತೆಯ ಹೆಬ್ರಿ ಸೀತಾನದಿ ಬಳಿ ನೆರೆನೀರು ರಸ್ತೆಯ ಮೇಲೆ ಉಕ್ಕಿ ಹರಿದು ಒಂದು ತಾಸು ಕಾಲ ಸಂಚಾರ ಬಂದ್‌ ಆಗಿತ್ತು. ಭಾರೀ ಮಳೆಯಿಂದಾಗಿ ಆಗುಂಬೆ, ಬಾಳೆಬರೆ ಸಹಿತ ಘಾಟಿ ರಸ್ತೆಗಳು…

Read More

ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆ ಬೀಳುವ ಸಂಭವವಿದ್ದು ರಾಜ್ಯದ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆ ಮುಂದುವರಿಯಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಮೂರು ಜಿಲ್ಲೆಯಲ್ಲಿ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.ಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಮತ್ತು ಶನಿವಾರದಂದು ಆರೆಂಜ್ ಅಲರ್ಟ್ ಘೋಷಿಸಿದೆ.ಈ ವೇಳೆ 115.6 ಮಿಮೀಯಿಂದ 204.4 ಮಿಮಿವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ತೀವ್ರವಾಗಿ ಮಳೆಯಾಗುತ್ತಿದ್ದು, ರಸ್ತೆ ಸಂಪರ್ಕ ಕಡಿತ, ಮನೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡು, ಹಲವೆಡೆ ಭಾರೀ ಹಾನಿ ಸಂಭವಿಸಿದೆ.

Read More

ಬೆಳ್ತಂಗಡಿ; ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ನಲ್ಲಿ ಅನ್ಯಕೋಮಿನ ಅಪ್ರಾಪ್ತ ಜೋಡಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಜಿಲ್ಲೆಯ ದೇವನಹಳ್ಳಿಯ ವ್ಯಾಪ್ತಿಯ ಒಂದೇ ಕಾಲೇಜಿನ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಬ್ಬರು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ರಾತ್ರಿ ವಾಪಾಸ್ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಮಾಹಿತಿ ತಿಳಿದ ಹಿಂದೂ ಸಂಘಟನಾ ಕಾರ್ಯಕರ್ತರು ಧರ್ಮಸ್ಥಳ ಪೊಲೀಸರಿಗೆ‌ ಮಾಹಿತಿ ನೀಡಿದ್ದರು. ಅದರಂತೆಯೇ ಧರ್ಮಸ್ಥಳ ಪೊಲೀಸರು ಬೆಂಗಳೂರು ದೇವನಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ‌ ಎಂದು ವರದಿಯಾಗಿದೆ.

Read More

ಬೆಳ್ತಂಗಡಿ: ತೀವ್ರ ರಕ್ತದ ಒತ್ತಡದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರು ಕೊನೆಯುಸಿರೆಳೆದ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸನ್ನ ಕಾಲೇಜಿನ ಫೈನಲ್ ಇಯರ್ ಐಟಿಐ ವಿದ್ಯಾರ್ಥಿ ಕಾಲೇಜ್ ವಿದ್ಯಾರ್ಥಿ ಸುಮಂತ್ (20) ಮೃತಪಟ್ಟ ದುರ್ದೈವಿ. ಬಾರ್ಯ ಗ್ರಾಮದ ಗಿರಿಗುಡ್ಡೆ ಸುಶೀಲ ಎಂಬುವವರ ಸುಮಂತ ಮಡಿವಾಳ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಒಂದು ವಾರದ ಹಿಂದೆ ಕಾಲೇಜಿನಲ್ಲಿ ಬಿದ್ದಿದ್ದ ಸುಮಂತ್‌ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸುಮಂತ್ ಸಾವನ್ನಪ್ಪಿದ್ದಾರೆ.

Read More

 ಪುತ್ತೂರು : ಹೆಬ್ಬಾವೊಂದನ್ನು ಕೊಂದು ಅದನ್ನು ಪೆರ್ಲಂಪಾಡಿಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ತಾಲೂಕಿನ ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ (38) ಮತ್ತು ಜಯ(36) ಬಂಧಿತ ಆರೋಪಿಗಳು.ಅವರು ಮನೆಗೆ ಬಂದಿದ್ದ ಹೆಬ್ಬಾವನ್ನು ಕೊಂದು ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ್ದರು. ಹೆಬ್ಬಾವನ್ನು ಕೊಲ್ಲುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗಿರುವ ಕಾರಣ ಪ್ರಕರಣ ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.ನ್ಯಾಯಾಲಯವು ಆರೋಪಿಗಳಿಗೆ ಜು.15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಬೈಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಚಲಿಸುತ್ತಿದ್ದ ಬಸ್‌ಗೆ ಕುಂದಾಪುರದಿಂದ ಭಟ್ಕಳ ಕಡೆಗೆ ಹೋಗುವ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿ.ಎಸ್.ಐ ಪವನ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Read More

ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ಸೈಂಟ್ ಸಿಸಿಲಿಯ ಹೈಸ್ಕೂಲು ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ತೀವ್ರವಾಗಿ ಗಾಯಗೊಂಡಿದ್ದಾನೆ.ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ. ಘಟನೆಯ ವಿವರ: ಎಂದಿನಂತೆ ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ ಆದಿತ್ಯನಿಗೆ ಅಂಬಲಪಾಡಿ ಜಂಕ್ಷನ್‌ನಲ್ಲಿ ಅತೀ ವೇಗದಿಂದ ಬಂದ ಬೊಲೆರೋ ಟೆಂಪೊ ಡಿಕ್ಕಿ ಹೊಡೆದಿದೆ. ಬಾಲಕ ತೀವ್ರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ತಕ್ಷಣ ಸಮೀಪದ ಹೈಟೆಕ್ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಅಲ್ಲಿನ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಟೆಂಪೋ ಚಾಲಕನ ಅತೀ ವೇಗದ ಚಾಲನೆಯೇ ದುರ್ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶು ಶೆಟ್ಟಿ ಅವರ ದೂರಿನ ಮೇರೆಗೆ ಪ್ರಕರಣ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More

ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್‌ಪೋಸ್ಟ್‌ ಬಳಿ ಗುಡ್ಡ ಕುಸಿತಗೊಂಡು ಕರ್ನಾಟಕ-ಕೇರಳ ನಡುವಿನ ಸಂಚಾರ ಮೊಟಕುಗೊಂಡಿದೆ.ಗುಡ್ಡ ಕುಸಿತದಿಂದಾಗಿ ರಸ್ತೆಗೆ ಅಪಾರ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಅಲ್ಲದೆ, ಬೈಕೊಂದು ಮಣ್ಣಿನಡಿ ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ. ಗಿಡಗಂಟಿಗಳೂ ರಸ್ತೆಗೆ ಬಿದ್ದಿದೆ. ಮಣ್ಣು ರಸ್ತೆಗೆ ಕುಸಿದಿರುವುದರಿಂದ ಎರಡೂ ಕಡೆಯಿಂದ ಬರುವ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ವಿಟ್ಲ ಮಾರ್ಗವಾಗಿ ಪೆರ್ಲ, ಬದಿಯಡ್ಕ, ಕಾಸರಗೋಡು ನಡುವೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕುಡ್ತಮುಗೇರು ಬಳಿ ನದಿ ನೀರು ಪ್ರಮಾಣ ಜಾಸ್ತಿಯಾಗುತ್ತಿದ್ದು, ರಸ್ತೆಗೆ ನೀರು ಬಂದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

Read More

ಬಂಟ್ವಾಳ:ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡ ಕತ್ತಿ ಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ.ಅತನ ಸ್ನೇಹಿತ ನೌಫಾಲ್ ಸೇರಿ ಇಬ್ಬರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೊಟೇಲ್ ಒಂದರ ಸಮೀಪದಲ್ಲಿ ರಾತ್ರಿ ಒಂದು ಗಂಟೆಯ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ ಘಟನಾ ಸ್ಥಳಕ್ಕೆ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಎಸ್.ಐ.ಅವಿನಾಶ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಮಳೆಯು ಬಿರುಸು ಪಡೆಯುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿದ್ದು, ಇಂದು ಬೆಳಗ್ಗೆಯೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಮುನ್ನೆಚ್ಚರಿಕಾ ದೃಷ್ಟಿಯಿಂದ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು, ಡಿಪ್ಲೊಮಾ/ಐಟಿಐಗಳಿಗೆ ದ.ಕ.ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಇಂದು ಮಳೆಯ ತೀವ್ರತೆ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಕರಾವಳಿಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದೆ.

Read More