ಉಳ್ಳಾಲ: ಮನೆಯೊಂದಕ್ಕೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳು ಸುಟ್ಟುಹೋಗಿ ಅಪಾರ ನಷ್ಟ ಉಂಟಾದ ಘಟನೆ ಉಳ್ಳಾಲ ಬಂಡಿಕೊಟ್ಯದ ನೇಲ್ಯ ಇಲ್ ಎಂಬಲ್ಲಿ ಸಂಭವಿಸಿದೆ. ಉಳ್ಳಾಲ ಬಂಡಿಕೊಟ್ಯದ ಪ್ರವೀಣ್ ಗುರಿಕಾರ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಲಕರಣೆಗಳಿಗೆ ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ವಿದ್ಯುತ್ ವೈರ್, ಸೇರಿದಂತೆ ಹಲವು ಸಲಕರಣೆಗಳು ಸಂಪೂರ್ಣ ಸುಟ್ಟು ನಷ್ಟ ಸಂಭವಿಸಿದೆ. ಬೆಳಗ್ಗೆ ಮನೆಮಂದಿ ಮನೆಯಲ್ಲಿದ್ದ ಸಂದರ್ಭ ಘಟನೆ ನಡೆದಿದೆ. ಕಂದಾಯ ಇಲಾಖೆಗೆ ಈ ಕುರಿತು ದೂರು ನೀಡಲಾಗಿದೆ.
Author: main-admin
ಎದೆಗೆ ಗುಂಡು ಹೊಡೆದುಕೊಂಡು ವಿದ್ಯಾರ್ಥೀಯೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು ವಿಷು ಉತ್ತಪ್ಪ (19) ಎಂದು ಗುರುತಿಸಲಾಗಿದೆ. ಕೊಡಗು ಮೂಲದ ಮೃತ ವಿಷು ಉತ್ತಪ್ಪ (19) ನ ತಂದೆ ತಮ್ಮಯ್ಯ ರೇಷನ್ ತರಲು ಹೋದಾಗ ಪುತ್ರ ವಿಷು ಉತ್ತಪ್ಪ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಎದೆಗೆ ಶೂಟ್ ಮಾಡಿಕೊಂಡು ತಂದೆಗೆ ಕರೆ ಮಾಡಿ ಇನ್ಮುಂದೆ ತಪ್ಪು ಮಾಡುವುದಿಲ್ಲ ಅಂತ ಹೇಳಿದ್ದಾನೆ ಎನ್ನಲಾಗಿದೆ. ಈ ನಡುವೆ ಕೂಡಲೇ ಮನೆಗೆ ಬಂದ ತಮ್ಮಯ್ಯ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗಮಧ್ಯವೇ ವಿಷು ಉತ್ತಪ್ಪ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ನಡುವೆ ಘಟನೆ ಸಂಬಂಧ ಮಾಧನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನೂ ಘಟನೆಗೆ ಕಾರಣ ವಿಷು ಉತ್ತಪ್ಪ ಸರಿಯಾಗಿ ಓದುತಿಲ್ಲ ಎನ್ನಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ವಿಷು ಉತ್ತಪ್ಪ ಮತ್ತು ಆತನ ತಂದೆ ತಮ್ಮಯ್ಯ ನಡುವೆ ಆಗ್ಗಾಗ್ಗೆ ಗಲಾಟೆ ನಡೆಯುತಿತ್ತು ಎನ್ನಲಾಗಿದೆ. ಆದರೆ ಎಲ್ಲವೂ ತನಿಖೆ ಬಳಿಕವೇ ಎಲ್ಲವೂ ಹೊರ…
ಕಾಸರಗೋಡು : ಉಸಿರಾಟ ಮತ್ತು ತೀವ್ರ ಹೊಟ್ಟೆ ನೋವಿನಿಂದ ಎರಡು ತಿಂಗಳ ಗರ್ಭಿಣಿ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಕಳಚನದುಕ್ಕಂ ಮೂಲದ ಸಿದ್ದಿಕ್ ಎಂಬವರ ಪತ್ನಿ ಫೌಜಿಯಾ (35) ಮೃತ ದುರ್ದೈವಿ. ಎರಡು ತಿಂಗಳ ಗರ್ಭಿಣಿಯಾಗಿರುವ ಫೌಜಿಯಾ ಕಾಞಂಗಾಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾತ್ರಿ ತೀವ್ರ ಹೊಟ್ಟೆನೋವು ಮತ್ತು ಉಸಿರಾಟದ ತೊಂದರೆಯಿಂದ ಮಂಗಳೂರಿಗೆ ಕರೆದೊಯ್ಯಲಾಯಿತು. ಉಪ್ಪಳ ತಲುಪಿದಾಗ ಪರಿಸ್ಥಿತಿ ಬಿಗಡಾಯಿಸಿತು. ನಂತರ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಆಗಲೇ ಸಾವು ಸಂಭವಿಸಿತ್ತು. ಫೌಜಿಯಾ ಹಮೀದ್ ಮತ್ತು ಖದೀಜಾ ದಂಪತಿಯ ಪುತ್ರಿ. ಓರ್ವ ಮಗ ಮತ್ತು ಪತಿಯನ್ನು ಅಗಲಿದ್ದಾರೆ.
ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ದಿನಾಂಕ 31-12-2023ರ ಒಳಗೆ ತಮ್ಮ ಅಡುಗೆ ಅನಿಲ ಗ್ರಾಹಕರ ಸಂಖ್ಯೆಗೆ ಇ-ಕೆವೈಸಿಯನ್ನು ಮತ್ತು ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ಯಾಸ್ ಏಜೆನ್ಸಿಯಲ್ಲಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಅಂತಹ ಗ್ರಾಹಕರಿಗೆ ಸಹಾಯಧನ ನಿಲ್ಲಿಸಲಾಗುತ್ತದೆ. ಗೃಹ ಬಳಕೆ ಅಡುಗೆ ಅನಿಲ ವಾಣಿಜ್ಯ ಬಳಕೆಯಾಗಿ ಪರಿವರ್ತನೆಯಾಗುತ್ತದೆ ಮತ್ತು ಅನಿಲ ಸಂಪರ್ಕ ಕಡಿತವಾಗುತ್ತದೆ ಹಾಗೂ ಇ-ಕೆವೈಸಿ ಕಾರ್ಯಕ್ಕೆ ಹಣ ನೀಡಬೇಕೆಂಬ ವದಂತಿ ಸಾರ್ವಜನಿಕರ ವಲಯದಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿರುತ್ತದೆ. ಅಡುಗೆ ಅನಿಲ ಗ್ರಾಹಕರಿಗೆ ತಿಳಿಯಪಡಿಸುವುದೇನೆಂದರೆ ಈ ವಿಷಯಗಳು ಕೇವಲ ವದಂತಿಯಾಗಿದ್ದು, ಗ್ರಾಹಕರು ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರವು/ ಅನಿಲ ಕಂಪನಿಗಳು ಯಾವುದೇ ಕೊನೆಯ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ ಹಾಗೂ ಇ-ಕೆವೈಸಿ ಮಾಡಿಸುವುದಕ್ಕೆ ಯಾವುದೇ ಶುಲ್ಕ ನಿಗಧಿಯಾಗಿರುವುದಿಲ್ಲ. ಇಕೆವೈಸಿ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ. ಇ-ಕೆವೈಸಿ ಮಾಡಿಸುವುದು ನಿರಂತರ ಪ್ರಕ್ರಿಯೆಯಾಗಿದ್ದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವವರು ಮತ್ತು ಸಹಾಯಧನ ಪಡೆಯುವ ಗ್ರಾಹಕರು ಮಾತ್ರ ಇ-ಕೆವೈಸಿಯನ್ನು ಆದ್ಯತೆ ಮೇಲೆ ನೀಡುವಂತೆ ಆಹಾರ, ನಾಗರಿಕ…
ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಹಾಗೂ ಮಗು ಇಬ್ಬರನ್ನು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಾಗೊಂಡನಹಳ್ಳಿಯಲ್ಲಿ ನಡೆದಿದೆ. ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಮಹಿಳೆ ಗ್ಯಾಸ್ ಲೀಕ್ ಮಾಡಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕುಟುಂಬದವರು ಎಷ್ಟೇ ಬಾಗಿಲು ಬಡಿದರೂ ಮನೆ ಬಾಗಿಲು ತೆಗೆದಿಲ್ಲ. ಈ ವೇಳೆ ಗಾಬರಿಯಾದ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಧಾವಿಸಿದ ಪೊಲೀಸರು ಮನೆ ಬಾಗಿಲು ಒಡೆದು ಮಹಿಳೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಗ್ಯಾಸ್ ಲೀಕ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದು ಬಯಲಾಗಿದೆ.
ಮಲ್ಪೆ: ಮಲ್ಪೆ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ವೇಳೆ ಅವಘಡ ಸಂಭವಿಸಿದ್ದು, ಕೆಂಡ ಸೇವೆ ವೇಳೆ ಬೆಂಕಿಗೆ ಬಿದ್ದು ಅಯಪ್ಪ ಮಾಲಾಧಾರಿಯೊಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಮಾಲಾಧಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಅಯ್ಯಪ್ಪ ಮಾಲಾಧಾರಿಗಳ ಕೆಂಡ ಸೇವೆ ನಡೆಯುತ್ತಿರುತ್ತದೆ. ಅದರಂತೆ ಕೆಂಡ ಹಾಯುವ ವೇಳೆ ಅಯ್ಯಪ್ಪ ಮಾಲಾಧಾರಿ ಆಯತಪ್ಪಿ ಬೆಂಕಿಗೆ ಬಿದ್ದಿದ್ದಾರೆ. ಕೂಡಲೇ ಇತರೆ ಮಾಲಾಧಾರಿಗಳು ಇವರ ಸಹಾಯಕ್ಕೆ ಬಂದಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಮಾಲಾಧಾರಿ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಪುತ್ತೂರು: ಕರ್ನಾಟಕ ರಾಜ್ಯಾದ್ಯಂತ ಮನೆಮಾತಾಗಿರುವ ಅತೀ ದೊಡ್ಡ ಉಳಿತಾಯದೊಂದಿಗೆ ಅದೃಷ್ಟ ಪರೀಕ್ಷೆಯ ಯೋಜನೆಯನ್ನು ಆಶೀರ್ವಾದ ಎಂಟರ್ಪ್ರೈಸಸ್ ನಿಮಗೆ ಪರಿಚಯಿಸುತ್ತಿದೆ. ಮಾಸಿಕ ರೂ.1000/- ದಂತೆ ಇಪ್ಪತ್ತು ತಿಂಗಳು ಉಳಿತಾಯ ಮಾಡಿ ಪ್ರತೀ ತಿಂಗಳು ನಡೆಯಲಿದೆ ಲಕ್ಕಿ ಡ್ರಾ ದಲ್ಲಿ ಅದೃಷ್ಟಶಾಲಿಗಳಿಗೆ ಸಿಗಲಿದೆ ಸ್ಕೂಟರ್, ಬೈಕ್, ಚಿನ್ನ, ನಗದು ಬಹುಮಾನ , ಗೃಹ ಉಪಯೋಗಿ ವಸ್ತುಗಳು, ಕಾರುಗಳು ಹಾಗೂ ಕೊನೆಯ ಮೂರು ಡ್ರಾ ಗಳಲ್ಲಿ ಮೂರು ವೈಯುಕ್ತಿಕ ಎರಡು ಬೆಡ್ ರೂಮ್ ನ ಮನೆಗಳು. ಅದಲ್ಲದೇ ಪ್ರತೀ ತಿಂಗಳು ಐವತ್ತು ಅದೃಷ್ಟಶಾಲಿಗಳಿಗೆ ಸರ್ಪ್ರೈಸ್ ಗಿಫ್ಟ್ ಗಳು ಹಾಗೂ ಯಾವುದೇ ಬಹುಮಾನ ಸಿಗದ ಸದಸ್ಯರಿಗೆ ಕೊನೆಗೆ ಸಿಗಲಿದೆ ಆಯ್ಕೆಯ ಪ್ರೋತ್ಸಾಹಕ ಬಹುಮಾನ. ಆಶೀರ್ವಾದ ಎಂಟರ್ಪ್ರೈಸಸ್ ನ ಈ ಉಳಿತಾಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಈ ಕೆಳಗಿನ ನಂಬರ್ ಗಳಿಗೆ ನೇರವಾಗಿ ಕರೆ ಅಥವಾ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ಸಂಪರ್ಕಿಸಿ.+917022646143+917022645143
ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಣಿಕೆ ನಿಯಂತ್ರಿಸಲು ಮತ್ತು ಸಾರ್ವಜನಿಕರ ಮರಳಿನ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಈ ಹಿಂದೆ ಜಾರಿಯಲ್ಲಿದ್ದ https://dksandbazar.comತಂತ್ರಾಂಶವನ್ನು ಮರುಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಆ್ಯಪ್ ಮೂಲಕ ಸಾಮಾನ್ಯ ಮರಳನ್ನು ನೇರವಾಗಿ ಖರೀದಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಮರಳಿನ ಕೊರತೆ ಎದುರಾಗಿದ್ದು, ಇ-ಸ್ಯಾಂಡ್ ನಲ್ಲಿ ಮರಳು ಲಭ್ಯವಾಗುತ್ತಿಲ್ಲ. ಕೆಲದಿನಗಳ ಹಿಂದೆ ಕುಂದಾಪುರ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿದ್ದ ಮರಳು ಬೇಡಿಕೆ ಹೆಚ್ಚಿದಂತೆ ಕಾದಿರಿಸಿದವರಿಗೆ ಮರಳು ಪೂರೈಕೆಯಾಗುತ್ತಿದ್ದು, ಇ-ಸ್ಯಾಂಡ್ ವೆಬ್‌ಸೈಟ್‌ನಲ್ಲಿ ಸದ್ಯಕ್ಕೆ ಆನೈನ್ ಬುಕ್ಕಿಂಗ್‌ಗೆ ತೆರೆದುಕೊಳ್ಳುತ್ತಿಲ್ಲ. ಮತ್ತೆ ಮರಳು ಲಭ್ಯವಾದಲ್ಲಿ ಬುಕ್ಕಿಂಗ್ ಆಪ್ಸನ್ ತೆರೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಾರಿಕೆಗೆ ಕಡಿವಾಣಕ್ಕೆ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನಧಿಕೃತ ಮರಳುಗಾರಿಕೆ ಕಂಡುಬಂದಲ್ಲಿ ಸಾರ್ವಜನಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದೂರವಾಣಿ ಸಂಖ್ಯೆ: 8762339932ಗೆ ತಿಳಿಸುವಂತೆ ಎಂದು ಗಣಿ ಮತ್ತು…
ಮಂಗಳೂರು: ಸ್ಕೂಟರ್ ನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಘಟನೆ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ಬಳಿ ಜನವರಿ 1 ರಂದು ನಡೆದಿದೆ.ಬಜಾಲ್ನ ಅಶ್ಪಾಕ್ ಯಾನೆ ಜುಟ್ಟು ಅಶ್ಪಾಕ್ (27) ಮತ್ತು ಕಾಟಿಪಳ್ಳದ ಉಮರ್ ಫಾರೂಕ್ ಇರ್ಫಾನ್ (26) ಬಂಧಿತ ಆರೋಪಿಗಳು.ಆರೋಪಿಗಳಿಂದ ಮಾದಕವಸ್ತು ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಫೋನ್ ಸೇರಿ ಒಟ್ಟು 1,92,800 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪಡೀಲ್ ಬಳಿ ಸ್ಕೂಟರ್ ನಲ್ಲಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಇನ್ನು ಆರೋಪಿ ಅಶ್ಫಾಕ್ ಮೇಲೆ ಮಂಗಳೂರು ನಗರದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಕಂಕನಾಡಿ ನಗರ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ ,ದರೋಡೆ ಸುಲಿಗೆ ದೋಂಬಿಯಂತಹ ಒಟ್ಟು 12…
ಪುಂಜಾಲಕಟ್ಟೆ: ಮಡಂತ್ಯಾರು ನಾವುಂಡ ರಸ್ತೆ ಬದಿಯಿರುವ ಅಡಿಕೆ ವ್ಯಾಪಾರಿಯೋರ್ವರ ಅಂಗಡಿಯಿಂದ ಕೆಲಸಗಾರನ ಗಮನ ಬೇರೆಡೆ ಸೆಳೆದು ಪೆಟ್ಟಿಗೆಯಲ್ಲಿದ್ದ 2.31 ಲಕ್ಷ ರೂ. ನಗದು ಕಳವು ಮಾಡಿದ ಘಟನೆ ನಡೆದಿದೆ. ಜ. 1ರಂದು ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಅವರಲ್ಲಿ ಕ್ಯಾಶ್ ಡ್ರಾವರ್‌ನ ಕೀ ನೀಡಿ ಮಾಲಕರು ಅನ್ಯ ಕೆಲಸದ ನಿಮಿತ್ತ ತೆರಳಿದ್ದರು. ಮಧ್ಯಾಹ್ನ ಅಂಗಡಿ ಮಾಲಕ ಪುಷ್ಪರಾಜ್ ಅವರಿಗೆ ಕೆಲಸಗಾರ ಇಸ್ಮಾಯಿಲ್ ಕರೆ ಮಾಡಿ, ಅಂಗಡಿಗೆ ಮಧ್ಯಾಹ್ನ ಅಪರಿಚಿತರಿಬ್ಬರು ಸ್ಕೂಟರಿನಲ್ಲಿ ಬಂದಿದ್ದು, ಅಂಗಡಿಯಲ್ಲಿದ್ದವರ ಗಮನ ಬೇರೆಡೆಗೆ ಸೆಳೆದು ಪೆಟ್ಟಿಗೆಯಲ್ಲಿÉದ್ದ ಹಣವನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ತತ್‌ಕ್ಷಣ ಪುಷ್ಪರಾಜ್ ಅಂಗಡಿಗೆ ಬಂದು ಪರಿಶೀಲಿಸಿ ಒಟ್ಟು 2,31,000 ರೂ. ಹಣ ಕಳವಾಗಿರುವ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.










