ಮಂಗಳೂರು : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲಾದ ಘಟನೆ ಮಂಗಳೂರು ಹೊರವಲಯದ ಮರವೂರಿನಲ್ಲಿ ಸೋಮವಾರ ಸಂಜೆ ನಡೆದಿದೆ. ಮರವೂರು ರೈಲ್ವೇ ಸೇತುವೆಯ ಕೆಳಗಿನ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಈ ಘಟನೆ ಸಂಭವಿಸಿದೆ. ಬಜ್ಪೆ ನಿವಾಸಿ ಸದ್ಯ ಸುರತ್ಕಲ್ ಸಮೀಪದ ಚೊಕ್ಕಬೊಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಾಕಿರ್ (30) ಮೃತ ದುರ್ದೈವಿಯಾಗಿದ್ದಾನೆ. ಶಾಕಿರ್ ತನ್ನ 4 ಮಂದಿ ಸ್ನೇಹಿತರೊಂದಿಗೆ ಮರವೂರು ರೈಲ್ವೇ ಸೇತುವೆಯ ಕೆಳ ಭಾಗಕ್ಕೆ ಈಜಲೆಂದು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಶಾಕಿರ್ ಕಾಲು ಜಾರಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ. ಬಳಿಕ ಜೊತೆಗಿದ್ದ ಸ್ನೇಹಿತರು ಪೊಲೀಸರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕಾವೂರು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬಂದು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: main-admin
ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರು ಹಲವು ರೀತಿಯಲ್ಲಿ ತಮ್ಮ ನೆಚ್ಚಿನ ಪ್ರಧಾನಿ ಮೇಲೆ ಪ್ರೀತಿಯನ್ನು ಮೆರೆಯುತ್ತಾರೆ. ಅಂತಹುದೇ ಪ್ರಕರಣವೊಂದು ಬೆಳ್ತಂಗಡಿಯಲ್ಲಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದ ತಿಲಕ್ ಎಂಬ ಯುವಕ ತನ್ನ ಮದುವೆಯ ಸಮಾರಂಭವನ್ನೂ ಮೋದಿಗೆ ಅರ್ಪಿಸಿದ್ದಾನೆ. ಅರ್ಥಾತ್, ಮದುವೆಯಲ್ಲೂ ಮೋದಿ ಅಭಿಮಾನವನ್ನು ಮೆರೆದಿದ್ದಾನೆ. ಮೋದಿಯದ್ದೊಂದು ಪುತ್ಥಳಿಯನ್ನು ಮಾಡಿಸಿ, ಕಲ್ಯಾಣಮಂಟಪದ ಮುಂದಿರಿಸಿ, ಅದರ ಕೆಳಗೆ, ‘ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು, ಏನಂತೀರಿ?’ ಎಂದು ಬರೆಸಿದ್ದಾನೆ. ಅಲ್ಲದೆ ಪ್ರಧಾನಿ ಮೋದಿಯವರ ಕಾರ್ಯಗಳ ಕುರಿತು ಭಿತ್ತಿಪತ್ರಗಳನ್ನು ಮಾಡಿ ಅಂಟಿಸಿದ್ದು, ಮದುವೆಗೆ ಆಗಮಿಸಿದವರ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲದೆ, ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿದ್ದು, ವೈರಲ್ ಆಗಲಾರಂಭಿಸಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆರು ಆಸ್ಪತ್ರೆಗಳಿರುವ ಪ್ರದೇಶದಲ್ಲಿ ಹಾರ್ನ್ ಬಳಕೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಅಧಿಸೂಚನೆ ಹೊರಡಿಸಿದ್ದಾರೆ. 1) ಲೇಡಿಗೋಷನ್ ಆಸ್ಪತ್ರೆ, 2) ಹಂಪನಕಟ್ಟೆ ಜಂಕ್ಷನ್, 3) ಡಾ. ಅಂಬೇಡ್ಕರ್ ವೃತ್ತ, 4) ಕೆ.ಎಂ.ಸಿ ಆಸ್ಪತ್ರೆ ಅತ್ತಾವರ,5) ಕೆ.ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮತ್ತು 6) ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಈ 6 ಪ್ರದೇಶಗಳನ್ನು“ಹಾರ್ನ್ ನಿಷೇಧಿತ ಪ್ರದೇಶ” ಎಂದು ಘೋಷಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಮಂಗಳೂರು : ಪಾದಯಾತ್ರೆ ನಡೆಸುತ್ತಿದ್ದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಜೊತೆಗೆ ಅಪರಿಚಿತ ಶ್ವಾನವೊಂದು ಸುಮಾರು 600ಕಿ.ಮೀ ಹೆಜ್ಜೆ ಹಾಕಿದ ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿದೆ. ಶಬರಿಮಲೆ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ತೆರಳಿದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೇಕ್ಕೇರಿ ಗ್ರಾಮದಿಂದ ಅಯ್ಯಪ್ಪ ಮಾಲಾಧಾರಿಗಳು ನವೆಂಬರ್ 4 ರಂದು ಪಾದಯಾತ್ರೆ ಶುರು ಮಾಡಿದ್ದರು. ಇವರು ಪಾದಯಾತ್ರೆ ಮಾಡುತ್ತಿದ್ದ ವೇಳೆ ಗೋಕಾಕ್ ತಾಲೂಕಿನ ಗ್ರಾಮವೊಂದರಲ್ಲಿ ಅಪರಿಚಿತ ಶ್ವಾನವೊಂದು ಅವರ ಜೊತೆಗೆ ಹೆಜ್ಜೆ ಹಾಕಿದೆ. ಮೊದಲು ಏನೋ ಸ್ವಲ್ಪ ದೂರ ಬರಬಹುದು ಎಂದು ಅಯ್ಯಪ್ಪ ಮಾಲಾಧಾರಿಗಳು ಅಂದುಕೊಂಡಿದ್ದರು. ಆದರೆ ಇದೀಗ ಅವರೊಂದಿಗೆ ಸುಮಾರು 600 ಕಿಲೋ ಮೀಟರ್ ಕ್ರಮಿಸಿದೆ. ಪ್ರತಿ ದಿನ ಸುಮಾರು 40 ಕಿಮೀ ನಡೆಯುತ್ತಿರುವ ಶ್ವಾನವನ್ನು ಕಂಡು ಎಲ್ಲರಿಗೂ ಇದೀಗ ಅಚ್ಚರಿ ಮೂಡಿಸಿದೆ. ಹತ್ತು ಮಂದಿ ಮಾಲಾಧಾರಿಗಳ ತಂಡ ಮಂಗಳೂರು ಮೂಲಕ ರಾಜ್ಯದ ಗಡಿದಾಟಿ ಕೇರಳದ ಕಾಸರಗೋಡಿಗೆ ತಲುಪಿದ್ದಾರೆ. ಗುರು ಸ್ವಾಮಿಗಳು ಶ್ವಾನವನ್ನು ಓಡಿಸಿದರು ಸಹ ಅದು ಹೋಗಿಲ್ಲವಾಗಿದೆ. ಅದರಿಂದ ತಪ್ಪಿಸಿಕೊಂಡು ಹೋಗುವ…
ಮಂಗಳೂರು : ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಆದೇಶದ ವಿಚಾರವಾಗಿ ಕೆಂಡಾಮಂಡಲವಾಗಿರುವ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ತಾಕತ್ತಿದ್ರೆ ಜಮೀರ್ ಅಹ್ಮದ್ ಖಾನ್‌ನನ್ನು ಗಡಿಪಾರು ಮಾಡಬೇಕು. ಇಲ್ಲೆಲ್ಲೂ ಅಲ್ಲ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು. ನಿಮಗೆ ತಾಕತ್ತಿದೆಯಾ ಎಸ್ಪಿ ಸಾಹೇಬ್ರೆ ಎಂದು ಪೊಲೀಸ್ ಇಲಾಖೆಗೆ ಸವಾಲೆಸೆದಿದ್ದಾರೆ. ಏಕವಚನದಲ್ಲಿಯೇ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರನ್ನು ಸಂಬೋಧಿಸಿರುವ ಸ್ವಾಮೀಜಿ, ಗಡಿಪಾರಾದ ಬಜರಂಗದಳದ ಕಾರ್ಯಕರ್ತರ ಪರ ಬ್ಯಾಟಿಂಗ್ ಮಾಡಿದ್ದಾರೆ. ನಿಮಗೆ ಸ್ವಲ್ಪವಾದರೂ ಕಾನೂನಿನ ಅರಿವಿದ್ದರೆ ಅನಾಮತ್ತಾಗಿ ಬಂದವ ವಕ್ಫ್ ಬೋರ್ಡ್ ಸಚಿವ ಜಮೀರ್ ನನ್ನು ಮೊದಲು ಗಡಿಪಾರು ಮಾಡಿ. ಹಿಂದೂ ಕಾರ್ಯಕರ್ತರ ಮೇಲೆ ಯಾವುದಕ್ಕೋಸ್ಕರ ಕೇಸ್ ಹಾಕೊಂಡಿದ್ದಾರೆಂದು ಅವಲೋಕನ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೋವುಗಳನ್ನು ರಕ್ಷಣೆ ಮಾಡಿ 10-20 ಕೇಸ್ ಬಿದ್ದಿದೆ. ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನು ಗಡಿಪಾರು ಮಾಡಲಿ. ಸರ್ಕಾರಕ್ಕೆ ನಮ್ಮ ಮಕ್ಕಳನ್ನು ಕಂಡರೆ ಭಯ. ಹಿಂದೂ ಕಾರ್ಯಕರ್ತ ಲತೇಶ್ ನನ್ನು ಗಡಿಪಾರು ಮಾಡಬಹುದು. ಆದರೆ, ಲತೇಶ್ ನಂತಹ ಸಾವಿರಾರು ಯುವಕರು…
ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ ಪ್ರಕರಣ ಸಂಬಂಧ ಹಫೀಜ್ ಎಂಬಾತ ಫೇಸ್ಬುಕ್ನಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾನೆ. ಈ ಹಿನ್ನೆಲೆ ಶಿವಮೊಗ್ಗ ಮೂಲದ ಹಫೀಜ್ ಮೊಹಮ್ಮದ್ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಉಡುಪಿ ನೇಜಾರಿನ ನಾಲ್ವರ ಕೊಲೆ ಪ್ರಕರಣ ಸಂಬಂಧ ಹಫೀಜ್ ಮೊಹಮದ್ ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಪ್ರಚೋದನಾಕಾರಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾನೆ. ಪ್ರಿಪರೇಶನ್ ಇಲ್ಲದೇ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು ಎಂದು ಘಟನೆ ಉಲ್ಲೇಖಿಸಿ, ಪೋಸ್ಟ್ ಹಾಕಿದ್ದಾನೆ. ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ ಸಂಬಂಧ ಪೋಸ್ಟ್ ಹಿನ್ನೆಲೆ ಐಪಿಸಿ 155, 505(2) ಕಾಯ್ದೆಯಡಿ ಸುಮೋಟೊ ಕೇಸ್ ದಾಖಲಿಸಲಾಗಿದೆ.
ಹಾಸನ : ಪತಿಯೋರ್ವ ಪೊಲೀಸ್ ಠಾಣೆಯಲ್ಲೇ ಪತ್ನಿಯ ಕತ್ತು ಸೀಳಿ ಕೊಲೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಪೊಲೀಸರ ಸಮಯ ಪ್ರಜ್ಷೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ಶಿಲ್ಪಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಏನಿದು ಘಟನೆ ಹಾಸನದ ಹರೀಶ್ ಹಾಗೂ ಶಿಲ್ಪಾ ಎಂಬ ಜೋಡಿ ಕಳೆದ 6 ವರ್ಷದ ಹಿಂದೆ ಮದುವೆಯಾಗಿದ್ದರು. ಕೆಲವು ವರ್ಷಗಳ ನಂತರ ಹರೀಶ್ ಪತ್ನಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದರಿಂದ ಬೇಸತ್ತ ಪತ್ನಿ ಶಿಲ್ಪ ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ನಂತರ ವಿಚಾರಣೆ ನಡೆಸಲು ಹರೀಶ್ ನನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ನಂತರ ಹೆಂಡತಿ ಎದುರೇ ಗಂಡನನ್ನು ವಿಚಾರಣೆ ನಡೆಸುವಾಗ ಹೆಂಡತಿ ಮೇಲೆ ಸಿಟ್ಟಿಗೆದ್ದ ಪತಿ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಪರಿಣಾಮ ಪತ್ನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬೆಳ್ತಂಗಡಿ: ಜಾಗದ ವಿಚಾರಕ್ಕೆ ಸಂಬಂದಿಸಿದಂತೆ ವ್ಯಕ್ತಿಯೋರ್ವರಿಗೆ ಅಣ್ಣನ ಮಗ ಮಾರಣಾಂತಿಕ ಹಲ್ಲೆ ನಡೆಸಿ ಜೀವಬೆದರಿಕೆಯೊಡ್ಡಿದ ಘಟನೆ ಮಲವಂತಿಗೆ ಗ್ರಾಮ ಬೆಳ್ತಂಗಡಿಯಲ್ಲಿ ನಡೆದಿದೆ. ಮಲವಂತಿಗೆ ಗ್ರಾಮ ಬೆಳ್ತಂಗಡಿ ನಿವಾಸಿ ಚಿನ್ನೇಗೌಡರಿಗೆ ಮತ್ತು ಅಣ್ಣನ ಮಗನಾದ ಆರೋಪಿ ಮಹೇಶ್ ಎಂಬಾತನಿಗೆ ಜಾಗದ ವಿಚಾರಕ್ಕೆ ಸಂಬಂದಿಸಿದಂತೆ ತಕರಾರಿದ್ದು, ದಿನಾಂಕ: 18.11.2023 ರಂದು ಬೆಳಿಗ್ಗೆ ಚಿನ್ನೇಗೌಡರು ಮಲವಂತಿಗೆ ಗ್ರಾಮದ ನಿಡ್ಲೇರಿ ಎಂಬಲ್ಲಿದ್ದಾಗ, ಆರೋಪಿ ಮಹೇಶ್ ಜೀಪಿನಲ್ಲಿ ಬಂದು ಜೀಪು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಅಲ್ಲೇ ಹತ್ತಿರದಲ್ಲಿದ್ದ ಕೋಲಿನಿಂದ ಬೆನ್ನಿಗೆ, ತೋಡೆ, ಕಾಲು, ಕೈಗಳಿಗೆ ತಲೆಗೆ ಹೊಡೆದುದಲ್ಲದೇ ಕೈಯಿಂದ ಕೆನ್ನೆಗೆ ಹೊಡೆದು, ಜೀವ ಬೆದರಿಕೆ ಒಡ್ಡಿ ಚರಂಡಿಗೆ ದೂಡಿ ಹಾಕಿರುತ್ತಾನೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅ ಕ್ರ: 115/2023 ಕಲಂ; 504,323,324,506 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಉಡುಪಿ : ನೇಜಾರು ಹತ್ಯಾಕಾಂಡದ ಆರೋಪಿ ಹಂತಕ ಪ್ರವೀಣ್ ಚೌಗುಲೆ(39) ಕೃತ್ಯ ಎಸಗಲು ಬಳಸಿದ್ದ ಚೂರಿಯನ್ನು ವಶಪಡಿಸಿಕೊಳ್ಳುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ 15 ರಂದು ಬೆಳಗಾವಿಯ ಕುಡುಚಿಯಲ್ಲಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಬಂಧಿಸಿ, ನವೆಂಬರ್ 16ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದರು. ನಂತರ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ ಆಯುಧಕ್ಕಾಗಿ ಶೋಧ ಕಾರ್ಯ ನಡೆಸಿದ್ದರು. ಆತನು ವಿಚಾರಣೆಯಲ್ಲಿ ಸಮರ್ಪಕ ಮಾಹಿತಿ ನೀಡದೆ ಆರೋಪಿ ಪೊಲೀಸರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದನು. ಮೊದಲು ಕೃತ್ಯಕ್ಕೆ ಎಸಗಿ ಉಡುಪಿಯಿಂದ ಮಂಗಳೂರಿಗೆ ಹೋಗುವಾಗ ದಾರಿ ಮಧ್ಯೆ ಸೇತುವೆಯಿಂದ ನದಿಗೆ ಎಸೆದಿದ್ದೆ ಎಂದು ಹೇಳಿದ್ದ ಪ್ರವೀಣ್, ಬಳಿಕ ಅದನ್ನು ತನ್ನ ಮಂಗಳೂರಿನ ಮನೆಯ ಬಳಿ ವಿಲೇವಾರಿ ಮಾಡಿದ್ದೆ ಎಂದು ತಿಳಿಸಿದ್ದನು. ಈ ಆಧಾರದಲ್ಲಿ ಮನೆ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಆಯುಧಕ್ಕಾಗಿ ಒಂದು ಪೂರ್ತಿ ದಿನ ತೀವ್ರ ಶೋಧ ನಡೆಸಿದಾಗ, ಆತನ ಬಿಜೈ ಫ್ಲ್ಯಾಟ್‌ನಲ್ಲಿ ಕೃತ್ಯಕ್ಕೆ ಬಳಸಿಕ ಚೂರಿ…
ಕಡಬ-ಪಂಜ ರಸ್ತೆಯ ಕೋಡಿಂಬಾಳ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ವಾಹನದಲ್ಲಿದ್ದವರು ಪವಾಡ ಸದೃಶವಾಗಿ ಪಾರಾದ ಘಟನೆ ಮುಂಜಾನೆ ಸಂಭವಿಸಿದೆ. ಸುಳ್ಯ ತಾಲೂಕಿನ ಕಲ್ಲುಗುಂಡಿಯ ಚೇತನ್ ಎಂಬವರ ಕುಟುಂಬಸ್ಥರು ಕಾರ್ಯಕ್ರಮದ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಕೋಡಿಂಬಾಳದಲ್ಲಿ ವಾಹನ ಅಪಘಾತವಾಗಿದೆ. ವಾಹನದಲ್ಲಿ ಮಗು ಸಹಿತ ಮೂರು ಮಂದಿ ಇದ್ದು ಜೀವ ಹಾನಿಯಿಂದ ಪಾರಾಗಿದ್ದಾರೆ. ವಾಹನ ಜಖಂ ಗೊಂಡಿದ್ದು ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಸ್ಥಳೀಯರು ಕೂಡಲೇ ಆಗಮಿಸಿ ವಾಹನದಲ್ಲಿದ್ದವರನ್ನು ಉಪಚರಿಸಿದ್ದಾರೆ.










