ಮಣಿಪಾಲ: ದಲಿತ ಮಹಿಳೆಯೋರ್ವರು ಪರಿಶಿಷ್ಟ ಜಾತಿ /ಪಂಗಡ ನಿಗಮದಿಂದ ಸಾಲ ಪಡೆದು ತನಗೆ ನೀಡಲಿಲ್ಲ ಎಂಬ ದ್ವೇಷದಿಂದ ಜಿಲ್ಲಾ ಕರವೇ ಸದಸ್ಯನೋರ್ವ ಮಹಿಳೆಯ ಬಗ್ಗೆ ಸುಳ್ಳು ಮೆಸೇಜ್ ಹರಿಯಬಿಟ್ಟು ಮಾನ ಹಾನಿ ಮಾಡಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಪೊಲೀಸರಿಗೆ ದೂರು ನೀಡಿದ್ದಾರೆ. ನೊಂದ ಮಹಿಳೆಯು ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯೆಯಾಗಿದ್ದು, ಆರೋಪಿ ಪ್ರಭಾಕರ ಕೂಡ ಇದರ ಸದಸ್ಯನಾಗಿದ್ದಾನೆ. ಮಹಿಳೆಗೆ ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಪಡೆದು ನೀಡುವಂತೆ ಒತ್ತಾಯಿಸುತ್ತಿದ್ದನು ಎನ್ನಲಾಗಿದೆ. ಮಹಿಳೆಯೂ ಸಾಲ ನೀಡಲು ನಿರಾಕರಿಸಿದ್ದು, ಈ ದ್ವೇಷದಿಂದ ಆರೋಪಿ ಮಹಿಳೆಯ ನಡತೆಯ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪ್ರಚಾರ ಮಾಡಿ ಮತ್ತೋರ್ವ ಕರವೇ ಸದಸ್ಯೆಯ ಮೊಬೈಲ್‌ಗೆ ದಲಿತ ಮಹಿಳೆಯ ಕುರಿತು ಅವಹೇಳನಕಾರಿ ವಾಯ್ಸ ಮೆಸೇಜ್ ಕಳುಹಿಸಿದ್ದಾನೆ. ಆ ಮೆಸೇಜ್‌ನಲ್ಲಿ ನೊಂದ ಮಹಿಳೆಯ ಮಾನಕ್ಕೆ ಕುಂದು ಬರುವಂತಹ ಅವಾಚ್ಯ ಮಾತುಗಳಿದ್ದು, ಆಕೆಯ ಮನೆಗೆ ಬೆಂಕಿ ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಮಣಿಪಾಲ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
Author: main-admin
ಮೂಡುಬಿದಿರೆ: ಕಾರುಗಳಲ್ಲಿ ಹೋಗಿ ವಿವಿಧ ಕಡೆಗಳಿಂದ ದನಗಳನ್ನು ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಜ್ಪೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಕಿನ್ನಿಮಜಲು ನಿವಾಸಿ ಚಂದನ್ ಉಪಾಧ್ಯಾಯ ಎಂಬವರು ಡಿ. 14 ರಂದು ಬೆಳಿಗ್ಗೆ ಮೇಯಲು ಬಿಟ್ಟ ದನಗಳ ಪೈಕಿ 2 ಹಸುಗಳು ಮತ್ತು 1 ಕರುವನ್ನು ಯಾರೋ ಕಳ್ಳರು ಕಳವು ಮಾಡಿರುವ ಬಗ್ಗೆ ನೀಡಿರುವ ದೂರಿನ ಆಧಾರದಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್ ಅವರ ಆದೇಶದಂತೆ ಬುಧವಾರ ಬೆಳಗ್ಗಿನ ಜಾವ ಸುಮಾರು 03-30 ಗಂಟೆಗೆ PSI ಕುಮಾರೇಶನ್ ಅವರು ಸಿಬ್ಬಂದಿಗಳ ಜೊತೆ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮೂಡುಬಿದಿರೆಯ ಗಂಟಲಾಕಟ್ಟೆಯ ನಿವಾಸಿ ನಾಸೀರ್ ಯಾನೆ ನಾಚಿ ಮತ್ತು ಪಡುಕೊಣಾಜೆ ಗ್ರಾಮ ನೀರಲ್ಕೆ ನಿವಾಸಿ ಇಮ್ರಾನ್ ಇಬ್ರಾಹಿಂ ಎಂಬವರಿಂದ ದನ ಕಳವು ಮಾಡಲು…
ಕಡಬ: ಒಕ್ಕಲಿಗ ಸಮಾಜದ ಕಾರ್ಯಕ್ರಮವೊಂದರಲ್ಲಿ ನಾನು ಹೇಳಿದ್ದ ಒಂದು ಮಾತಿನಿಂದ ನನ್ನ ಸಿಎಂ ಸ್ಥಾನಕ್ಕೆ ಕುತ್ತು ಬಂತು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ. ಮಂಗಳವಾರ ಕಡಬದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಒಕ್ಕಲಿಗ ಮುಖಂಡರು ಸೇರಿ ಭೈರವೈಕ್ಯ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರಿಗಾಗಿ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. “ನಾನು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿ ಆದಿಚುಂಚನಗಿರಿ ಸ್ವಾಮೀಜಿಯವರ ಆಶೀರ್ವಾದ ಪಡೆದು ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ” ಎಂದು ಹೇಳಿದ್ದೇ ನನ್ನ ಸ್ಥಾನಕ್ಕೆ ಮುಳುವಾಯಿತು ಎಂದು ಬೇಸರ ವ್ಯಕ್ತಪಡಿಸಿದರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಅಂದಿನ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸದಾನಂದ ಗೌಡ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನಾನು ಚುನಾವಣೆಗೆ ಸ್ಪರ್ಧಿಸುವುದರಿಂದ ನಿವೃತ್ತನಾಗುತ್ತಿದ್ದೇನೆ, ನನಗೆ ಇನ್ನು ಯಾವ ಚುನಾವಣೆಗಳಲ್ಲಿ ಸ್ಪರ್ಧಿಸುವ ಇಚ್ಛೆ ಇಲ್ಲ. ಆದರೂ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ ಈಗಿನ ರಾಜಕೀಯ ವ್ಯವಸ್ಥೆಯನ್ನು ಸಹಿಸಲಾಗದಿದ್ದರೂ ಪಕ್ಷವೇ ನನ್ನ ಸರ್ವಸ್ವ ಎಂದು ಹೇಳುತ್ತೇನೆ ಎಂದರು.…
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೋರ್ವರು ಬಲಿಯಾಗಿದ್ದಾರೆ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ 51 ವರ್ಷದ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ. ಮಂಗಳೂರು ನಿವಾಸಿಯಾಗಿದ್ದ ಇವರು ಡಿ.22ರಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇವರಿಗೆ ಕೊರೊನಾ ಸೋಂಕು ದೃಢಗೊಂಡಿತ್ತು. ಜ್ವರ, ಕಫ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದೆ ಪಾರ್ಶ್ವವಾಯು ಪೀಡಿತರಾಗಿದ್ದ ಇವರಿಗೆ ಬಿ.ಪಿ, ಅಸ್ತಮಾ ಸಮಸ್ಯೆಯೂ ಇತ್ತು. ಹೀಗೆ ಅನೇಕ ಕಾಯಿಲೆಯಿಂದ ಬಳಲುತ್ತಿದ್ದ ಇವರು ಕೊರೊನಾ ಸೋಂಕು ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಸದ್ಯ ಮೃತರ ಮನೆಯಲ್ಲಿರುವ ಮೂವರು ಕುಟುಂಬ ಸದಸ್ಯರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ. ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಪಾಸಣೆ ಮಾಡಬೇಕೆಂದು ಸೂಚಿಸಲಾಗಿದೆ. ಅಲ್ಲದೆ, ಕೊರೊನಾ ಸೋಂಕು ದೃಢಗೊಂಡಲ್ಲಿ ಹೋಮ್ ಕ್ವಾರಂಟೈನ್ ಆಗಬೇಕೆಂದು ಸೂಚಿಸಲಾಗಿದೆ. ಸದ್ಯ ದ.ಕ.ಜಿಲ್ಲೆಯಲ್ಲಿ ಎಂಟು ಮಂದಿ ಕೊರೊನಾ ಸೋಂಕಿತರಿದ್ದಾರೆ.
ಹೊಸ ಮನೆಯ ಮೇಲ್ಛಾವಣಿ ಕಾಮಗಾರಿ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಲಂಕಾರು ಗ್ರಾಮದ ಬಾರ್ಕುಲಿ ನಿವಾಸಿ ಉದಯ ಕುಮಾರ್ (27) ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಆಲಂಕಾರು ಗ್ರಾಮದ ಬಾರ್ಕುಲಿ ನಿವಾಸಿ ಉದಯ ಕುಮಾರ್ (27) ಮೃತ ಯುವಕ. ಮಂಗಳವಾರ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ನ. 12ರಂದು ಕಾಮಗಾರಿ ನಡೆಯುತ್ತಿದ್ದ ಅವರ ನೂತನ ಮನೆಯ ಮೇಲ್ಛಾವಣಿಗೆ ತೆರಳಿ ಕೆಳಗಿಳಿಯುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ಕುತ್ತಿಗೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು.ತತ್‌ಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಬಳಿಕ ಮಂಗಳೂರು ವೆನ್ಲಾಕ್ ಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಮಂಗಳವಾರ ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಅವರು ವಿವಿಧ ಸಂಘಟನೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದುಕೊಂಡು ಸಮಾಜಸೇವಕರಾಗಿದ್ದರು. ಓರ್ವ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಬಂಟ್ವಾಳ: ರಸ್ತೆ ದಾಟುತ್ತಿದ್ದಾಗ KSRTC ಬಸ್ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮಿತ್ತ ಬೈಲು ಎಂಬಲ್ಲಿ ನಡೆದಿದೆ. ಡಿಸೆಂಬರ್ 25 ರಂದು ರಾತ್ರಿ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಮಿತ್ತ ಬೈಲು ಎಂಬಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಬಂದ KA-21-F-0218 ನೇ KSRTC ಬಸ್ಸನ್ನು ಅದರ ಚಾಲಕ ರಾಮಕೃಷ್ಣ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯನ್ನು ದಾಟುತ್ತಿದ್ದ ಅಪರಿಚಿತ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪಾದಚಾರಿಯು ಡಾಮಾರು ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಆತನ ತಲೆಗೆ ರಕ್ತಗಾಯ, ಕೈ ಕಾಲುಗಳಿಗೆ ತರಚಿದ ಗಾಯಗೊಂಡಿರುತ್ತಾರೆ. ಸದ್ರಿ ಅಪರಿಚಿತ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಬಂಟ್ವಾಳ ನಿವಾಸಿ ಅಬ್ದುಲ್ ಸಮದ್ ಎಂಬವರು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಯ ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ವೈದ್ಯರ ಸಲಹೆಯಂತೆ ಮಂಗಳೂರು ಜಿಲ್ಲಾ…
ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ಇಬ್ಬರು ಮಕ್ಕಳ ಶವಗಳನ್ನು ಪೋಷಕರು ಉಪ್ಪಿನ ಗುಡ್ಡೆಯಲ್ಲಿ ಹೂತಿಟ್ಟು ಬದುಕಿಸಲು ಯತ್ನಿಸಿದ ವಿಚಿತ್ರ ಘಟನೆ ತಾಲೂಕಿನ ಘಾಳಪುಜಿ ಗ್ರಾಮದಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಯ್ಯನಕೆರೆಯಲ್ಲಿ ಭಾನುವಾರ ಈಜಲು ಹೋಗಿದ್ದನಾಗರಾಜ ಲಂಕೇರ(11) ಮತ್ತು ಹೇಮಂತ ಹರಿಜನ(12) ಎಂಬ ಇಬ್ಬರು ಬಾಲಕರು ಮುಳುಗಿ ಮೃತಪಟ್ಟಿದ್ದರು. ಕೆಲ ದಿನಗಳಿಂದ ನೀರಲ್ಲಿ ಮುಳುಗಿಸತ್ತವರನ್ನು ಉಪ್ಪಿನಲ್ಲಿ ಮುಚ್ಚಿಟ್ಟರೆ ಬದುಕುತ್ತಾರೆ ಎಂಬ ವಿಡಿಯೊ ಹಿಂದೆ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನೇ ನಂಬಿಕೊಂಡು ಹಲವು ದಿನಗಳಿಂದ ಕೂಡ, ಇದೇ ರೀತಿಯ ಘಟನೆ ನಡೆಯುತ್ತಿದ್ದಾವೆ. ಈ ನಡುವೆ ಭಾನುವಾರ ಕೂಡ ನೀರಿಗೆ ಬಿದ್ದು ಸಾವನ್ನಪ್ಪಿದ್ದ ಮಕ್ಕಳು ಕೂಡ ಸಾವನ್ನಪ್ಪಿದ್ದವರು. ಈ ನಡುವೆ ವೈರಲ್ ಸುಳ್ಳು ಮಾಹಿತಿಯನ್ನು ನಂಬಿದ ಪೋಷಕರು ಮಕ್ಕಳ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆದು ಕ್ವಿಂಟಾಲ್‌ಗಟ್ಟಲೇ ಉಪ್ಪಿನ ರಾಶಿಯಲ್ಲಿ ಸತತ 6 ತಾಸು ಇಟ್ಟು ಬದುಕಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಭಾನುವಾರ ರಾತ್ರಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಪೋಲಿಸ್ ಸಿಬ್ಬಂದಿ ಮೃತ ಬಾಲಕರ…
ಮುಂಬೈನ ಆರ್ಬಿಐ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಅನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗಿದ್ದು, ಸಂಭಾವ್ಯ ಬಾಂಬ್ ದಾಳಿಯನ್ನು ಸೂಚಿಸುತ್ತದೆ. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಬೇಕು ಎಂದು ಇಮೇಲ್ನಲ್ಲಿ ಒತ್ತಾಯಿಸಲಾಗಿದೆ. ಮುಂಬೈನ 11 ಸ್ಥಳಗಳಲ್ಲಿ ಬಾಂಬ್ ಬೆದರಿಕೆ ಬಂದಿದ್ದು, ಮಧ್ಯಾಹ್ನ 1:30 ಕ್ಕೆ ಬಾಂಬ್ ಸ್ಫೋಟಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಮುಂಬೈನ ಇತರ ಎರಡು ಬ್ಯಾಂಕುಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಬೆದರಿಕೆ ಇಮೇಲ್ ಸ್ವೀಕರಿಸಿದ ಇತರ ಎರಡು ಬ್ಯಾಂಕುಗಳು – ಎಚ್ಡಿಎಫ್ಸಿ ಮತ್ತು ಐಸಿಐಸಿಐ ಬ್ಯಾಂಕುಗಳು. ಬೆದರಿಕೆ ಇಮೇಲ್ ಕಳುಹಿಸಿದ ಐಡಿ – khilafat.india@gmail.com ಆಗಿದೆ. “ನಾವು ಮುಂಬೈನ ವಿವಿಧ ಸ್ಥಳಗಳಲ್ಲಿ “11” ಬಾಂಬ್ ಗಳನ್ನು ಇರಿಸಿದ್ದೇವೆ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಭಾರತದ ಇತಿಹಾಸದಲ್ಲಿ ಅತಿದೊಡ್ಡ ಹಗರಣವನ್ನು ಕಾರ್ಯಗತಗೊಳಿಸಿವೆ” ಎಂದು ಇಮೇಲ್ನಲ್ಲಿ…
ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ, ಪ್ರತ್ಯೇಕ ಮಾರ್ಗಸೂಚಿ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದರು. ಇಂದು ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ, ಪ್ರತ್ಯೇಕ ಮಾರ್ಗಸೂಚಿ ಇಲ್ಲ. ಹಾಗಂತ ಎಚ್ಚರ ವಹಿಸದೇ ಇರಬೇಡಿ. ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡಿಲ್ಲ, ಜನರು ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸಬೇಕು. ಇದುವರೆಗೆ ಕೊರೊನಾ ಸೋಂಕಿಗೆ 7 ಮಂದಿ ಮೃತಪಟ್ಟಿದ್ದಾರೆ, 36 ಜನರಿಗೆ ಜೆಎನ್ 1 ಸೋಂಕು ತಗುಲಿರುವುದು ಧೃಡವಾಗಿದೆ. ಮಕ್ಕಳಿಗೆ ಶೀತ, ಜ್ವರ ಬಂದರೆ ಶಾಲೆಗಳಿಗೆ ಕಳುಹಿಸಬೇಡಿ. ನ್ಯೂ ಇಯರ್ ಗೆ ಯಾವುದೇ ಗೈಡ್ ಲೈನ್ಸ್ ಇರುವುದಿಲ್ಲ. ಕೋವಿಡ್ ಸೋಂಕಿತರು 1 ವಾರ ಮನೆಯಲ್ಲಿರಬೇಕು. ಕೊರೊನಾ ಸೋಂಕು ತಗುಲಿದರೆ ಉದ್ಯೋಗಿಗಳಿಗೆ ಕಡ್ಡಾಯವಾಗಿ ರಜೆ ಕೊಡಬೇಕು ಎಂಬ ಆದೇಶವನ್ನು ಶೀಘ್ರವೇ ಹೊರಡಿಸಲಾಗುತ್ತದೆ. ಕೊರೊನಾ ಸೋಂಕಿತರ ಮೇಲೆ ಆರೋಗ್ಯ ಇಲಾಖೆ ಅಧಿಕಾರಗಳು ತೀವ್ರ ನಿಗಾ ವಹಿಸಿದ್ದಾರೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು, ಬೆಡ್…
ಉಪ್ಪಿನಂಗಡಿ : ಕಾರುಗಳ ನಡುವೆ ಸರಣಿ ಅಪಘಾತವಾದ ಘಟನೆ ಉಪ್ಪಿನಂಗಡಿ ಬಳಿಯ ನೇತ್ರಾವತಿ ಸೇತುವೆಯಲ್ಲಿ ನಡೆದಿದ್ದು ಉಪ್ಪಿನಂಗಡಿಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರೊಂದು ಹಠಾತ್ ಬ್ರೇಕ್ ಹಾಕಿದ್ದು, ಈ ವೇಳೆ ಒಂದರ ಹಿಂದೆ ಒಂದರಂತೆ ಒಟ್ಟು ನಾಲ್ಕು ಕಾರುಗಳು ಡಿಕ್ಕಿ ಹೊಡೆದಿವೆ. ಅಪಘಾತದಿಂದ ಕಾರುಗಳಿಗೆ ಹಾನಿಯಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸಕಾಲದಲ್ಲಿ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.










