Author: main-admin

ಮಂಗಳೂರು :ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಮತ್ತು ಮಗು ಅಪಾಯದಿಂದ ಪಾರಾಗಿದ್ದು, ಫರಂಗೀಪೇಟೆ ಸಮೀಪದ ಅರ್ಕುಳ ದ್ವಾರದ ಬಳಿ ಇಂದು ನಡೆದಿದೆ. ಕುಕ್ಕಾಜೆ ನಿವಾಸಿ ಹಂಝ ಯಾನೆ ರಮ್ಲಾನ್ ಎಂಬವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರು ಮಂಗಳೂರು ಕಡೆಯಿಂದ ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಂಝ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಇದೇ ಬೈಕ್ ನಲ್ಲಿ ರಮ್ಲಾನ್ ಅವರ ಪತ್ನಿ ರೈಹಾನ ಮತ್ತು ಅವರ ಮಗು ಇದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಗ್ಗೆ ಪ್ರಕರಣ ದಾಖಲಾಗಿದೆ.

Read More

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡ್ ನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿಯ ಅಂಗಡಿಯೊಂದರಲ್ಲಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರ ಕಸಿದ ಇಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ‌ಬೈಕಂಪಾಡಿಯ ಅಶೋಕ, ಮಂಗಳೂರು ದಂಬೇಲ್ ನಿವಾಸಿ ಸಚಿನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದೂವರೆ ಪವನಿನ ಚಿನ್ನದ ಸರ ಮತ್ತು ಬೈಕನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.14 ರಂದು ಬಿ.ಸಿ.ರೋಡಿನ ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿರುವ ಅಂಗಡಿಯೊಂದಕ್ಕೆ ಬಂದ ಆರೋಪಿಗಳು ಅಂಗಡಿ ಮಾಲಕಿ ಸರೋಜಿನಿ ಅವರ ಕುತ್ತಿಗೆಯಿಂದ ಚೈನ್ ಎಗರಿಸಿ ಪರಾರಿಯಾಗಿದ್ದರು. ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ನಿರ್ದೇಶನದಂತೆ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರ ಮಾರ್ಗದರ್ಶನದಲ್ಲಿ‌ ಪಿ.ಎಸ್.ಐ ಗಳಾದ ರಾಮಕೃಷ್ಣ, ಕಲೈಮಾರ್ ಮತ್ತವರ ಸಿಬ್ಬಂದಿ ಇರ್ಷಾದ್, ರಾಜೇಶ್, ಗಣೇಶ್, ಮೋಹನ, ವಿವೇಕ್ ಅವರು ಬೆಂಜನಪದವಿನ ಕರಾವಳಿ ಸೈಟ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ‌…

Read More

ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ‘ಯುವನಿಧಿ’ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು. ಯುವನಿಧಿ ಅನುಷ್ಠಾನ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು. ಬೆಳಗಾವಿ ಜಿಲ್ಲೆಯಲ್ಲಿ 2023 ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರು ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತರಿಗೆ ಕರ್ನಾಟಕ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗುವುದು ಎಂದು ತಿಳಿಸಿದರು. ಡಿಸೆಂಬರ್ 26 ರಿಂದ ಸೇವಾಸಿಂಧು ಪೋರ್ಟಲ್ ಮೂಲಕ ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಜನವರಿ 2024 ರಿಂದ ಯೋಜನೆ ಜಾರಿಗೊಳ್ಳಲಿದ್ದು, ಅರ್ಹ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ‌ ನಿತೇಶ್ ಪಾಟೀಲ…

Read More

ಮಂಗಳೂರಿಗೆ ಸೌದಿ ಅರೆಬಿಯಾದಿಂದ ಕಚ್ಚಾ ತೈಲ ಹೊತ್ತು ಬರುತ್ತಿದ್ದ MV Chem Pluto ಹಡಗಿನ ಮೇಲೆ ಶನಿವಾರ ದ್ರೋನ್ ದಾಳಿ ನಡೆದಿದ್ದು ಅದರಲ್ಲಿದ್ದ 20 ಮಂದಿ ಅಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ. ಪೂರ್‌ಬಂದರ್ ಕರಾವಳಿಯಿಂದ 217ನಾಟಿಕಲಗ್ ಮೈಲ್ ದೂರದಲ್ಲಿ ದಾಳಿ ನಡೆದಿದ್ದು ಆ ವೇಳೆ ದೊಡ್ಡ ಸ್ಫೋಟದ ಶಬ್ದ ಕೇಳಿಸಿದೆ. ಕೂಡಲೇ ಗಸ್ತು ತಿರುಗುತ್ತಿದ್ದ ಕರಾವಳಿ ಕಾವಲು ಪಡೆ ನೌಕೆ ನೆರವಿಗೆ ಧಾವಿಸಿದೆ. ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ನಂದಿಸಲಾಗಿದೆ. ಆದರೆ ಹಡಗಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಿರುವುದಾಗಿ ವರದಿಯಾಗಿದೆ.

Read More

ಮಂಗಳೂರು: ನಗರದಲ್ಲಿ ಕೇರಳದ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿರುವ ಪ್ರಕರಣದಲ್ಲಿ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಿವಾಸಿ ಸಂದೇಶ್ (28) ಪ್ರಶಾಂತ್ (31) ಮತ್ತು ರೋನಿತ್ (31) ಬಂಧಿತ ಆರೋಪಿಗಳು. ಡಿಸೆಂಬರ್ 21ರಂದು ಮಧ್ಯಾಹ್ನ 1ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಹಂಪನಕಟ್ಟೆಯ ಗುಡ್ ಟೈಮ್ ಶಾರ್ಟ್ ಈಟ್ಸ್ ಶಾಪ್ ಬಳಿ ಕೇರಳದ ಯುವಕ ಮತ್ತು ಯುವತಿಯನ್ನು ಸಂದೇಶ್ ಎಂಬಾತ ತಡೆದಿದ್ದಾನೆ. ಯುವಕ ಮುಸ್ಲಿಂ ಹಾಗೂ ಹಿಂದೂ ಯುವತಿ ಎಂದು ಪರಿಶೀಲಿಸುವ ನೆಪದಲ್ಲಿ ಅವರ ಮೇಲೆ ಕೂಗಾಡಿ ಐಡಿ ಕಾರ್ಡ್ ಕೇಳಿದ್ದಾನೆ. ಈ‌ ಸಂದರ್ಭ ಯುವಕ ಹಾಗೂ ಯುವತಿ ಆಟೋ ರಿಕ್ಷಾವನ್ನು ಹತ್ತಿ ಅಲ್ಲಿಂದ ತೆರಳಲು ಯತ್ನಿಸಿದ್ದಾರೆ. ಆಗ ಆಟೋ ನಿಲ್ಲಿಸಲು ಯತ್ನಿಸಿದ ಸಂದೇಶ್ ಆಟೋ ಚಾಲಕನಿಗೂ ಗದರಿಸಿದ್ದಾನೆ. ಅಷ್ಟರಲ್ಲಿ ಇನ್ನಿಬ್ಬರು ಮಧ್ಯ ಪ್ರವೇಶಿಸಿದ್ದಾರೆ. ತಮ್ಮನ್ನು ರೈಲ್ವೇ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಹೇಳಿದಂತೆ ಆಟೋ ಚಾಲಕ ಅವರನ್ನು ಅಲ್ಲಿಗೆ ತಲುಪಿಸಿದ್ದಾರೆ. ಬಳಿಕ ಆಟೋ ಚಾಲಕನು ನೀಡಿದ ದೂರಿನನ್ವಯ…

Read More

ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಅನ್ಯಕೋಮಿನ ಜೋಡಿ ಮೇಲೆ ಹಲ್ಲೆಗೆ ಯತ್ನ ಮಾಡಿರುವ ಘಟನೆ ನಡೆದಿದ್ದು, ಘಟನೆ ಸಂಬಂಧ ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಹಿನ್ನಲೆ: ಅನ್ಯಕೋಮಿನ ಯುವಕನ ಜೊತೆ ಯುವತಿ ನಿಂತಿದ್ದನ್ನು ಅನ್ಯಕೋಮಿನ ಯುವಕನ ಜೊತೆ ಯುವತಿ ನಿಂತಿದ್ದನ್ನು ಪ್ರಶ್ನೆ ಮಾಡಿದ ಹಿಂದೂ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ, ಈ ನಡುವೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

Read More

ಶೀಘ್ರವೇ APL, BPL ಕಾರ್ಡ್ ವಿತರಣೆ ಮಾಡಲು ಆಹಾರ ಇಲಾಖೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಆಹಾರ ಮತ್ತು ನಾಗರೀಕರ ಪೂರೈಕೆ ಇಲಾಖೆಯವರು ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಈ ನಡುವೆ ರಾಜ್ಯದಲ್ಲಿ2.95 ಅರ್ಜಿಗಳು ಬಾಕಿಯಿದ್ದು, ಶೀಘ್ರವೇ ಪರಿಶೀಲಿಸಿ ಕಾರ್ಡ್ ವಿತರಣೆ ಮಾಡುವಂತೆ ಸಚಿವ ಕೆ.ಹೆಚ್‌ ಮುನಿಯಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ನಡುವೆ ಒಂದು ವೇಳೆ ನೀವು ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಿದ್ದರೆ, ರೇಷನ್‌ ಕಾರ್ಡ್‌ ನಲ್ಲಿ ಹೆಸರು ಬಂದಿದೆಯಾ ಎನ್ನುವುದನ್ನು ಕಂಡುಕೊಳ್ಳಬಹುದಾಗಿದೆ.ಆಧಾರ್ ಅಧಿಕೃತ ವೆಬ್ಸೈಟ್ನಿಂದ ಕರ್ನಾಟಕ ಪಡಿತರ ಚೀಟಿ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ? ಕರ್ನಾಟಕ ಪಡಿತರ ಚೀಟಿ ಪಟ್ಟಿಯನ್ನು ಪರಿಶೀಲಿಸಲು, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು: ಹಂತ 1 – ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ (ahara.kar.nic.in) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಹಂತ 2 – ‘ಇ-ಸೇವೆಗಳು’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಹಂತ 3 – ನಂತರ, ‘ಇ-ರೇಷನ್’ ಲಿಂಕ್…

Read More

ಹುಬ್ಬಳ್ಳಿ: ಎರಡು ವರ್ಷದ ಮಗುವೊಂದು ಅಂಗನವಾಡಿ ಸಿಬ್ಬಂದಿಗಳು ಕೊಟ್ಟ ಲಸಿಕೆ ಡೋಸ್ ಎಫೆಕ್ಟ್ ನಿಂದ ಮೃತಪಟ್ಟಿರುವ ಆರೋಪದ ಘಟನೆ ಹುಬ್ಬಳ್ಳಿಯ ಉಣಕಲ್ ಎಂಬಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್ ನಿವಾಸಿ ಜಟ್ಟೆಪ್ಪ ಮತ್ತು ಮಲ್ಲಮ್ಮ ಎಂಬವರ ಎರಡು ವರ್ಷದ ಮೊಮ್ಮಗ ಧೃವ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ. ಧೃವ ಮಗು ತಾತ ಹಾಗೂ ಅಜ್ಜಿ ಮನೆಯಲ್ಲಿ ವಾಸವಿದ್ದರು. ಮಗುವಿಗೆ ಲಸಿಕೆ ಕೊಡಲು ಎಂದು ಅಜ್ಜಿ ಸಾಯಿನಗರದ ಅಂಗನವಾಡಿಗೆ ಮಗುವನ್ನು ಕರೆದುಕೊಂಡು ಹೋಗಿದ್ದರು. ಲಸಿಕೆ ಕೊಡಿಸಿದ ಬಳಿಕ ಮಗುವಿಗೆ ತೀವ್ರ ಜ್ವರ ಬಂದಿತ್ತು. ಮಗು ಹೊಟ್ಟೆನೋವಿನಿಂದ ಬಳಲುತ್ತಿದ್ದಂತೆ ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗು ಆಸ್ಪತ್ರೆಯಲ್ಲಿ ದಾಖಲಾಗುತ್ತಿದ್ದಂತೆಯೇ ಮೃತಪಟ್ಟಿದೆ. ಲಸಿಕೆ ಓವರ್ ಡೋಸ್ ನಿಂದಾಗಿ ಮಗು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಮಗುವಿನ ಪೋಷಕರು ಆರೋಪ ಮಾಡಿದ್ದು, ಕಿಮ್ಸ್ ಆವರಣದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read More

ಹೊಸ ವರ್ಷದ ಮುನ್ನಾ ದಿನದ ಆಚರಣೆಗಳ ಬಗ್ಗೆ ಡಿಸೆಂಬರ್ 28 ರಂದು ಸಂಜೆ 5 ಗಂಟೆಯೊಳಗೆ ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಅಗತ್ಯ ಅನುಮತಿಯನ್ನು ಪಡೆಯಬೇಕು ಎಂದು ಪೊಲೀಸ್‌ ಕಮೀಷನರ್‌ ಅಗರ್‌ವಾಲ್‌ ಹೇಳಿದ್ದಾರೆ. ಹಾಗೆಯೇ ಡಿಸೆಂಬರ್ 31 ರ ಮಧ್ಯರಾತ್ರಿಯೊಳಗೆ ಎಲ್ಲಾ ಕಾರ್ಯಕ್ರಮಗಳು ಮುಕ್ತಾಯ ಮಾಡಲು ಸೂಚಿಸಿದ್ದಾರೆ. ಹೋಟೆಲ್‌, ರೆಸ್ಟೋರೆಂಟ್‌, ಕ್ಲಬ್‌, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕ ಹೊಸ ವರ್ಷಾಚರಣೆ ಮಾಡುವ ಸಂದರ್ಭ ಕೆಲವೊಂದು ನಿಯಮಗಳನ್ನು ಅನುಸರಿಸಬೇಕೆಂದು ಪೊಲೀಸ್‌ ಕಮೀಷನರ್‌ ಸೂಚನೆಗಳನ್ನು ಹೊರಡಿಸಿದ್ದಾರೆ. ಕಡಲತೀರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಚರಿಸುವವರಿಗೆ ಯೋಗ್ಯ ವಾತಾವರಣವನ್ನು ಕಾಪಾಡಿಕೊಳ್ಳುವುದು, ಅಶ್ಲೀಲ ನೃತ್ಯ ನಿಷೇಧ, ಯಾವುದೇ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗದಂತೆ ಖಾತ್ರಿ ಪಡಿಸುವ ಕುರಿತು ಪ್ರಾಮುಖ್ಯತೆಯನ್ನು ಹೇಳಿದ್ದಾರೆ. ಶಬ್ದಮಾಲಿನ್ಯ ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಎಲ್ಲರೂ ಪಾಲಿಸಬೇಕು, ಡಿಜೆ ಸಂಗೀತಕ್ಕೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ಇಡಲು ಟ್ರಾಫಿಕ್‌ ಪೊಲೀಸರು ಇರಲಿದ್ದಾರೆ. ವೀಲಿಂಗ್‌, ಡ್ರ್ಯಾಗ್‌ ರೇಸಿಂಗ್‌, ಕಿರುಚಾಟ ಅಥವಾ…

Read More

ಬೆಂಗಳೂರು : ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಕೋವಿಡ್ ಭೀತಿ ಹಿನ್ನೆಲೆ ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವ ಜಿ. ಪರಮೇಶ್ವರ್ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ‘ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಇಂತಹ ಸಂದರ್ಭದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು ಎಂದರು. ಬೆಂಗಳೂರಿನ ಎಲ್ಲಾ ಕಡೆ ಭದ್ರತೆ ವಹಿಸುತ್ತೇವೆ. ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗುತ್ತದೆ’ ಎಂದರು.

Read More