Author: main-admin

ರಾಜ್ಯದ ಪದವೀಧರರು, ಡಿಪ್ಲೋಮಾದಾರರು ಎದುರು ನೋಡುತ್ತಿರುವಂತ ಯುವನಿಧಿ ಯೋಜನೆಗೆ ಡಿ.26ರಿಂದ ನೋಂದಣಿ ಆರಂಭಗೊಳ್ಳಲಿದೆ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಐದನೇ ಗ್ಯಾರಂಟಿ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ. ಯುವನಿಧಿ ಯೋಜನೆಯಡಿ ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ಹಾಗೂ ಪದವೀಧರರಿಗೆ 3000 ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಈ ಯುವನಿಧಿಗೆ ಸುಮಾರು 5 ಲಕ್ಷದ 30 ಸಾವಿರ ಫಲಾನುಭವಿಗಳು ಇರುವುದಾಗಿ ಅಂದಾಜಿಸಲಾಗಿದೆ. ಇವರಲ್ಲಿ 4 ಲಕ್ಷದ 81 ಸಾವಿರ ಪದವೀಧರರು ಹಾಗೂ 48,153 ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರುವ ಯುವಕರಿದ್ದಾರೆ. ಇವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲು 250 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಪದವಿ ಹಾಗೂ ಡಿಪ್ಲೋಮಾ ಮುಗಿಸಿದ ಆರು ತಿಂಗಳವರೆಗೆ ಯಾವುದೇ ಕೆಲಸ ಸಿಗದವರು ಈ ಯುವನಿಧಿ ಯೋಜನೆಯ ಲಾಭ ಪಡೆಯುವ ಫಲಾನುಭವಿಗಳಾಗಿದ್ದಾರೆ. ಎರಡು ವರ್ಷದೊಳಗೆ ಕೆಲಸ ಸಿಕ್ಕರೆ ಭತ್ಯೆ ಸ್ಥಗಿತಮಾಡಲಾಗುತ್ತದೆ. ಅಭ್ಯರ್ಥಿಗಳು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ, 2023ರಲ್ಲಿ ತೇರ್ಗಡೆ ಹೊಂದಿರಬೇಕು. ಕನಿಷ್ಠ 6 ವರ್ಷಗಳ ಕಾಲ ರಾಜ್ಯದಲ್ಲಿ ನೆಲೆಸಿ, ವ್ಯಾಸಂಗ…

Read More

ಉಪ್ಪಿನಂಗಡಿ: ಆಟೊ ರಿಕ್ಷಾ ಹಾಗೂ ಲಾರಿಯ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೊದಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಕುಮಾರಧಾರಾ ನದಿಯ ಸೇತುವೆಯಲ್ಲಿ ನಡೆದಿದೆ. ಗಾಯಗೊಂಡವರನ್ನು ಆಟೊ ಚಾಲಕ ಪ್ರಾಂಕ್ಲಿನ್ ಗ್ಲನ್ ಲೋಬೋ(23), ಪ್ರಯಾಣಿಕರಾದ ಉತ್ತರ ಭಾರತ ಮೂಲದ ಅಜಯ್‌ ಖಾರ್ವಾಲ್ (17), ಪೂರನ್ ಸಿಂಗ್ ಖಾರ್ವಾಲ್ (29) ಎಂದು ಗುರುತಿಸಲಾಗಿದೆ. ಪೆರ್ನೆಯ ಪ್ರಾಂಕ್ಲಿನ್ ಗ್ಲನ್ ಲೋಬೊ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಉಪ್ಪಿನಂ ಗಡಿಯ ಆ್ಯಂಬುಲೆನ್ಸ್ ಚಾಲಕ ಫಾರೂಕ್ ಜಿಂದಗಿ ಪುತ್ತೂರು ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ.

Read More

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬ ಬೀಡಿ ಸೇರಿದ್ದು, ಆರ್.ಐ.ಸಿ.ಯು.ನಲ್ಲಿ ಬೆಂಕಿ ಕಿಡಿ ಹೊತ್ತಿ ಹಾನಿಯಾಗಿದೆ. ಜಾಮ್ ನಗರದ ಸರ್ಕಾರಿ ಬಿಜಿ ಆಸ್ಪತ್ರೆಯ ಸಿಬ್ಬಂದಿ ಗುರುವಾರ ಬೆಳಗಿನ ಜಾವ ತಗುಲಿದ್ದ ಬೆಂಕಿ, ದಟ್ಟ ಹೊಗೆಯನ್ನು ಸಕಾಲದಲ್ಲಿ ನಂದಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗೆ ಬೀಡಿ ಸೇದುವ ಚಟ ಬಂದಿದೆ. ಕೃತಕ ಉಸಿರಾಟದ ಆರೈಕೆ ಘಟಕದಲ್ಲಿ ಆಕ್ಸಿಜನ್ ಬೆಂಬಲದಲ್ಲಿದ್ದ ರೋಗಿ ಆಸ್ಪತ್ರೆ ಎನ್ನುವುದನ್ನು ಮರೆತು ಅಲ್ಲೇ ಬಿಡಿ ಸೇದಲು ಮುಂದಾಗಿದ್ದಾನೆ. ಬೀಡಿಗೆ ಬೆಂಕಿ ಹಚ್ಚುತ್ತಿದ್ದಂತೆ ಕಿಡಿ ಹೊತ್ತಿ ಹೊಗೆ ಆವರಿಸಿದೆ. ಕೂಡಲೇ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ದೀಪಕ್ ತಿವಾರಿ, ರೋಗಿಗೆ ಸಣ್ಣ ಗಾಯವಾಗಿದ್ದು, ಉಳಿದ ಎಲ್ಲಾ ರೋಗಿಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

Read More

ಕುಂದಾಪುರ : 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಬಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದ ಕೋಣಿ ಎಂಬಲ್ಲಿ ಡಿಸೆಂಬರ್ 20ರ ಬುಧವಾರ ಸಂಜೆ ನಡೆದಿದೆ. ಮೃತ ಬಾಲಕಿಯನ್ನು ಕೋಣಿ ನಿವಾಸಿ ರಾಜಶೇಖರ ಎಂಬವರ ಪುತ್ರಿ ರಿಷಿತಾ (13) ಎಂದು ಗುರುತಿಸಲಾಗಿದೆ. ರಿಷಿತಾ ನಿನ್ನೆ ಸಂಜೆ ಶಾಲೆ ಮುಗಿಸಿ ಬಂದು ಮನೆ ಬಳಿ ಇದ್ದ ಬೊಬ್ಬರ್ಯ ದೇವಸ್ಥಾನದ ಬಳಿ ತೆರಳಿದ್ದು, ಸ್ವಲ್ಪ ಹೊತ್ತಾದರು ವಾಪಾಸು ಬಾರದೇ ಇದ್ದಾಗ ತಾಯಿ ಹುಡುಕಾಡಿದಾಗ ಮನೆಯ ಬಾವಿ ಬಳಿ ಆಕೆಯ ಮೃತದೇಹ ಪತ್ತೆಯಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ರಿಷಿತಾಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ

Read More

ಪುತ್ತೂರು: ಮಾರುತಿ ಓಮ್ನಿ ಮತ್ತು ಆಲ್ಟೋ ಕಾರು ನಡುವೆ ಬುಧವಾರ ತಡ ರಾತ್ರಿ ಅಪಘಾತ ಸಂಭವಿಸಿ ಯಕ್ಷಗಾನ ಕಲಾವಿದರು ಸೇರಿದಂತೆ ನಾಲ್ವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನೆಹರುನಗರದ ಕಲ್ಲೇಗದಲ್ಲಿ ನಡೆದಿದೆ. ಯಕ್ಷಗಾನ ಕಾರ್ಯಕ್ರಮ ಮುಗಿಸಿ ಪುತ್ತೂರಿಗೆ ಬರುತ್ತಿದ್ದ ಕಲಾವಿದರು ಇದ್ದ ಮಾರುತಿ ಓಮ್ನಿ ಮತ್ತು ವಿರುದ್ಧ ಧಿಕ್ಕಿನಿಂದ ಮಂಗಳೂರು ತೆರಳುತ್ತಿದ್ದ ಆಲ್ಟೋ ಕಾರು ನಡುವೆ ನೆಹರುನಗರ ಕಲ್ಲೇಗ ಸಮೀಪ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಖಾಸಗಿ ಬಸ್‌ಗೂ ಡಿಕ್ಕಿಯಾಗಿದೆ ಎನ್ನಲಾಗಿದೆ. ಮಾರುತಿ ಓಮ್ನಿಯಲ್ಲಿದ್ದ ಮೂವರು ಯಕ್ಷಗಾನ ಕಲಾವಿದರು ಮತ್ತು ಆಲ್ಟೋದಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಗಾಯವಾಗಿದೆ. ತೀವ್ರ ಗಾಯಗೊಂಡ ಆಲ್ಟೋದಲ್ಲಿ ಪ್ರಯಾಣಿಕರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Read More

ಉಡುಪಿ: “ಆಧಾರ್ ಲಿಂಕ್ ಮಾಡಿಸಿ, ಇ-ಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಬರುವುದಿಲ್ಲ, ಗೃಹ ಬಳಕೆಯ ಸಂಪರ್ಕ ವಾಣಿಜ್ಯ ಬಳಕೆಯ ಗ್ಯಾಸ್ ಸಂಪರ್ಕವಾಗಿ ಬದಲಾಗಲಿದೆ, ಗ್ಯಾಸ್ ಸಂಪರ್ಕ ರದ್ದಾಗಲಿದೆ ಎಂಬ ಇತ್ಯಾದಿ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸಿಕೊಳ್ಳಲು ಜನರು ಗ್ಯಾಸ್ ಏಜೆನ್ಸಿಗಳ ಕಚೇರಿಗಳನ್ನು ಮುತ್ತಿಗೆ ಹಾಕಿರುವ ದೃಶ್ಯ ಕರಾವಳಿಯ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಹಿನ್ನೆಲೆ ಜನರು ಗೊಂದಲಕ್ಕೀಡಾಗಿದ್ದು, ಕಳೆದೊಂದು ವಾರದಿಂದ ಗ್ಯಾಸ್ ಏಜೆನ್ಸಿಗಳ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲೆಯ ಪ್ರಮುಖ ಗ್ಯಾಸ್ ಏಜೆಂಟ್ ಒಬ್ಬರು, ಗ್ರಾಹರೆಲ್ಲರಿಗೂ ಇ-ಕೆವೈಸಿ ಮಾಡಲು ಸೂಚನೆ ಬಂದಿರುವುದರಿಂದ ಎಲ್ಲಾ ಗ್ಯಾಸ್ ಏಜೆನ್ಸಿಗಳಲ್ಲಿ ಗ್ರಾಹಕರ ಬೆರಳಚ್ಚು ಪಡೆದು ಆಧಾರ್ ಲಿಂಕ್ ಹಾಗೂ ಇ-ಕೆವೈಸಿ ಮಾಡಿಸಲಾಗುತ್ತಿದೆ. ಆದರೆ ಮತ್ತೆ ಸಬ್ಸಿಡಿ ಸಿಗಲಿದೆ, ಡಿ. 31ರೊಳಗೆ ಈ ಪ್ರಕ್ರಿಯೆ ಮುಗಿಸಬೇಕು ಎಂಬ ವಿಷಯಗಳಿಗೂ ಇ-ಕೆವೈಸಿಗೂ ಯಾವ ಸಂಬಂಧವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ…

Read More

ಉಡುಪಿ: ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿ.21ರಂದು ತಡರಾತ್ರಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಉದ್ಯಾವರದ ಐಸಿವೈಎಂ ಅಧ್ಯಕ್ಷ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತದಲ್ಲಿ ಮೃತರಾದವರನ್ನು ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ತಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ (22) ಎಂದು ಗುರುತಿಸಲಾಗಿದೆ.ಉದ್ಯಾವರದ ಐಸಿವೈಎಂ ಘಟಕದ ಸದಸ್ಯರಿದ್ದ ಫಿಗೋ ಕಾರು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ಬರುತ್ತಿದ್ದಾಗ ಕೋಟೇಶ್ವರ ಬಳಿ ಕೆಟ್ಟು ನಿಂತ ಲಾರಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಲೆಸ್ಟನ್ ಪಿಂಟೊ (22), ಜಸ್ಟಿನ್ ಕಾರ್ಡೋಜಾ (22), ವಿಲ್ಸನ್ ಮಾರ್ಟಿಸ್ (23) ಮತ್ತು ಗ್ಲಾಡೆನ್ ಡಿಸಿಲ್ವಾ (23) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಉದ್ಯಾವರದ ಐಸಿವೈಎಂ ಘಟಕದ ಸದಸ್ಯರು ಎಂದು ತಿಳಿದು ಬಂದಿದೆ.ಯುವ ನಾಯಕನ ಅಗಲಿಕೆಗೆ ಕ್ರೈಸ್ತ ಸಮುದಾಯ ಸಂತಾಪ ಸೂಚಿಸಿದೆ.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಟೆಸ್ಟಿಂಗ್ ಆರಂಭಿಸಿದ ಮೊದಲ ದಿನವೇ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.ಉಡುಪಿ ಮೂಲದ 82 ವರ್ಷದ ವೃದ್ಧರೋರ್ವರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ನರ ಸಂಬಂಧಿ ಕಾಯಿಲೆಗೆ ಬಂದಿರುವ ಅವರನ್ನು ರಾಟ್ ಟೆಸ್ಟ್ ಮಾಡಿಸಿದಾಗ ಅದರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಪಾಸಿಟಿವ್ ಬಂದಿರೋ‌ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ಅವರನ್ನು ದಾಖಲಿಸಲಾಗಿದ್ದು ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ

Read More

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಗುತ್ತಿದೆ. ಇಂದು 22 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದ್ದು, ಓರ್ವ ವೃದ್ಧ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 92 ಸಕ್ರಿಯ ಪ್ರಕರಣಗಳಿವೆ. 20 ಸೋಂಕಿತರು ಆಸ್ಪತ್ರೆಯಲ್ಲಿದ್ದು, ಈ ಪೈಕಿ 7 ಮಂದಿ ಐಸಿಯುನಲ್ಲಿದ್ದಾರೆ. ಉಳಿದ 72 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಈಗಾಗಲೇ 5 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು ಕೊರೊನಾ ಪಾಸಿಟಿವಿಟಿ ದರವು ಶೇ. 2.47 ರಷ್ಟಿದೆ. ರಾಜ್ಯದಲ್ಲಿ 808 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಈ ಪೈಕಿ 22 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

Read More

ಮಂಗಳೂರು ; ಭಾರತೀಯ ದಂಡ ಸಂಹಿತೆಯ ಕಲಂ 376 ( 2 ) ಬಾಲಕಿಯ ಅತ್ಯಾಚಾರ, ಕಲಂ 366 ಅಪಹರಣ , ಕಲಂ 363 ಅಪಹರಣಕ್ಕೆ ಶಿಕ್ಷೆ, ಕಲಂ 417 ಮೋಸ ಹಾಗೂ, ಕಲಂ 6 ಪೋಕ್ಸೋ ಕಾಯ್ದೆ 2012 ಅಡಿ ಲೈಂಗಿಕ ದೌರ್ಜನ್ಯ ಮತ್ತು ಕಲಂ 3 ( 2 ) ( V ), 3 ( 1 ) (ಡಬ್ಲ್ಯೂ) ( 1 ), ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) 1989 ಕಾಯ್ದೆ ಯಡಿ ದೌರ್ಜನ್ಯ ವನ್ನು ಎಸಗಿರುವ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಮಂಗಳೂರಿನ ಮೊದಲನೇ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯತೀರ್ಪು ನೀಡಿದೆ. ಕೇಸಿನ ಸಾರಾಂಶ ವೇನೆಂದರೆ, ನೊಂದ ಬಾಲಕಿಯವರು, ಆರೋಪಿಯಾದ ಎಮ್. ಡಿ. ಇಬ್ರಾರ್ @ ಮುನ್ನ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ 376 ( 2 )…

Read More