ಮಂಗಳೂರು: ನಿಷೇಧಿಕ ಡ್ರಗ್ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತರನ್ನು 1.ಮುಸ್ತಫಾ(37) 2. ಶಂಶುದ್ದೀನ್ ಎ(38) ಎಂದು ಗುರುತಿಸಲಾಗಿದೆ. ಆರೋಪಿಗಳು ದಿನಾಂಕ 09-11-2023 ರಂದು ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ ಸಿ ರೋಡ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಲ್ಲಿ ಮಾದಕವಸ್ತು ಎಂಡಿಎಂಎ ಅನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.ಬಂಧಿತ ಆರೋಪಿಗಳಿಂದ 75 ಸಾವಿರ ರೂ ಮೌಲ್ಯದ 15 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
Author: main-admin
ಪುತ್ತೂರು: ಕಲ್ಲೇಗ ಟೈಗರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದಿದ್ದಾರೆ. ನವೆಂಬರ್ 6 ರಂದು ಪುತ್ತೂರಿನ ಹೊರವಲಯದ ನೆಹರೂನಗರದಲ್ಲಿ ಅಕ್ಷಯ್ ಕಲ್ಲೇಗ ಅವರನ್ನು ನಾಲ್ವರು ದುಷ್ಕರ್ಮಿಗಳು ತಲವಾರ್ ನಿಂದ ಹಲ್ಲೆ ನಡೆಸಿದ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿಬಿ ಅಕ್ಷಯ್ ಕಲ್ಲೇಗ ಹತ್ಯೆ ವೇಳೆ ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ಯಾವುದೇ ವರದಿ ಬಂದಿಲ್ಲ ಎಂದರು. ಸದ್ಯದ ವಿಚಾರಣೆಯಲ್ಲಿ ತಿಳಿದು ಬಂದಿರುವುದು ಅಪಘಾತದ ವಿಚಾರಕ್ಕೆ ನಡೆದ ಗಲಾಟೆಗೆ ಹತ್ಯೆಯಾಗಿದೆ ಎಂಬ ಮಾಹಿತಿ ಇದೆ ಎಂದರು. ಕೊಲೆ ಮಾಡಿದ ಆರೋಪಿಗಳೆಲ್ಲರೂ ಅಕ್ಷಯ್ ಕಲ್ಲೇಗ ಅವರ ಪರಿಚಯಸ್ಥರೇ ಎಂದರು. ಇನ್ನು ಹಳೇ ವೈಷಮ್ಯದಿಂದ ಅಕ್ಷಯ್ ಕಲ್ಲೇಗ ಹತ್ಯೆ ನಡೆಯಿತಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ,…
ಮಂಗಳೂರು: ಟೆಲಿಗ್ರಾಂ ಆ್ಯಪ್‌ನಲ್ಲಿ ‘ಸ್ಟಾರ್ ರೇಟಿಂಗ್’ ಟಾಸ್ಕ್ ನೀಡಿ 21.51 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದಾಖಲಾಗಿವೆ. ನ.4ರಂದು ತನ್ನ ವಾಟ್ಸ್‌ಆಪ್ ಸಂಖ್ಯೆಗೆ +84334590184 ಸಂಖ್ಯೆಯಿಂದ ಬಂದ ಮೆಸೇಜ್‌ನ ಲಿಂಕ್ ತೆರೆದಾಗ ತನ್ನ ಸಂಖ್ಯೆ ಟೆಲಿಗ್ರಾಂ ಆ್ಯಪ್‌ಗೆ ಸೇರ್ಪಡೆಗೊಂಡಿತು. ಬಳಿಕ ತನಗೆ ಸ್ಟಾರ್ ರೇಟಿಂಗ್ ಆ್ಯಪ್ ಮೂಲಕ ಟಾಸ್ಕ್ ಪೂರ್ಣಗೊಳಿಸಿ ಹಣಗಳಿಸುವಂತೆ ಸೂಚಿಸಲಾಯಿತು. ಅದನ್ನು ನಂಬಿದ ತಾನು 5,000 ರೂ. ಸಂದಾಯ ಮಾಡಿದ್ದು, ಅದಕ್ಕೆ ಪ್ರತಿಯಾಗಿ ತನ್ನ ಖಾತೆಗೆ 6,500 ರೂ ಜಮೆಯಾಯಿತು. ಬಳಿಕ ಗ್ರೂಪ್ ಮರ್ಚೆಂಟ್ ಟಾಸ್ಕ್ ಪೂರ್ಣಗೊಳಿಸಲು ಸೂಚಿಸಲಾಯಿತು. ಅದಕ್ಕೆ ಹಣ ಪಾವತಿಸಿದರೆ ಹೆಚ್ಚು ಹಣ ವಾಪಸ್ ನೀಡುವುದಾಗಿ ತಿಳಿಸಲಾಯಿತು. ಅದನ್ನು ನಂಬಿದ ತಾನು ಮತ್ತಷ್ಟು ಹಣ ಪಾವತಿಸಿದೆ. ಬಳಿಕ ತನ್ನ ಖಾತೆಯಿಂದ ಹಂತ ಹಂತವಾಗಿ ನ.4ರಿಂದ ನ.7ರವರೆಗೆ 21.51 ಲಕ್ಷ ರೂ. ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ: ಜಲ್ಲಿ ಸಾಗಿಸುವ ಬೃಹತ್ ಗಾತ್ರದ ಲಾರಿಯೊಂದು ಕಾರಿಗೆ ಡಿಕ್ಕಿಯಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಕಾರು ಚಾಲಕ ಅಪಾಯದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ನಡೆದಿದೆ. ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಕೆ.ಎನ್.ಆರ್.ಸಿ.ಕಂಪೆನಿಯ ಲಾರಿ ಡಿಕ್ಕಿಯಾಗಿದೆ. ಕೃಷ್ಣ ಅರಸ ಅವರು ಮೈಸೂರಿನಿಂದ ಬಂಟ್ವಾಳ ಕಡೆಯಿಂದ ಮೂಡಬಿದಿರೆ ಅಳ್ವಾಸ್ ಕಾಲೇಜಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೃಷ್ಣ ಅರಸ ಅವರ ಮಗಳು ಮೂಡಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ದೀಪಾವಳಿ ರಜೆ ನಿಮಿತ್ತ ಊರಿಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ಮೂಡಬಿದಿರೆಯ ಕಡೆಗೆ ತೆರಳುವ ವೇಳೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ ಲಾರಿ ಎದುರಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದ ಕೃಷ್ಣ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮಂಗಳೂರಿನಲ್ಲಿಭೂಗತ ಪಾತಕಿ ರವಿ ಪೂಜಾರಿಯ ವಿರುದ್ದ ಧಾಖಲಾಗಿದ್ದ ಬಿಜೈ ರಾಜನ ಕೊಲೆ ಪ್ರಕರಣ ದಲ್ಲಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.2012 ನೇ ಇಸವಿಯಲ್ಲಿ ನಗರದ ಫಳ್ನೀರ್ ವೆಸ್ಟ್ಗೇಟ್ ಟವರ್ಸ್ ಕಟ್ಟಡದಲ್ಲಿರುವ ನ್ಯಾಷನಲ್ ಮೆಡಿಕಲ್ ಬಳಿಯಲ್ಲಿರುವ ಕಾಯಿನ್ ಬೂತ್ ನ ಬಳಿ ರವಿಪೂಜಾರಿಯು ಒಳಸಂಚು ನಡೆಸಿ ಶೈಲೇಶ್ ರಾಜ ಅಲಿಯಾಸ್ ಬಿಜೈ ರಾಜನನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಿಸಿದ ರವಿ ಪೂಜಾರಿ ಮತ್ತು ಅತನ ಸಹಚರರ ವಿರುದ್ದ ಮಂಗಳೂರಿನ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ಮತ್ತು ಅತನ ಸಹಚರರ ಮೇಲೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಸದ್ರಿಘಟನೆಗಳ ಸಮಯ ರವಿಪೂಜಾರಿ ವಿದೇಶದಲ್ಲಿ ತಲೆಮರೆಸಿ ಕೊಂಡಿದ್ದು, 2021 ನೇ ಇಸವಿಯಲ್ಲಿ ರವಿ ಪೂಜಾರಿಯನ್ನು ಸೆನೆಗಲ್‌ನಲ್ಲಿ ಬಂಧಿಸಿದ್ದು, ತದನಂತರ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಭಾರತಕ್ಕೆ ಹಸ್ತಾಂತರಿಸಿದ ನಂತರ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು…
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಂದ ಕೋಟಿ ಕೋಟಿ ಹಣ ಪಡೆದು, ವಂಚನೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವಂತ ಅಭಿನವ ಹಾಲಶ್ರೀಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪದಲ್ಲಿ ಚೈತ್ರಾ ಅಂಡ್ ಟೀಂ ಅನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಪ್ರಕರಣದಲ್ಲಿ ಜೈಲು ಸೇರಿದ್ದಂತ ಅಭಿನವ ಹಾಲಶ್ರೀ ಜಾಮೀನಿಗಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠದಲ್ಲಿ ಅಭಿನವ ಹಾಲಶ್ರೀ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ಈ ಬಳಿಕ ಅಭಿನವ ಹಾಲಶ್ರೀಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಅಭಿನವ ಹಾಲಶ್ರೀಗೆ ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.
ಕೊಚ್ಚಿ: ಕೇರಳ ಹಾಗೂ ಕರ್ನಾಟಕ, ತಮಿಳುನಾಡಿನಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ನಕ್ಸಲರನ್ನು ಕೇರಳದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಶೃಂಗೇರಿ ಮೂಲದ ಶ್ರೀಮತಿ ಅಲಿಯಾಸ್ ಉನ್ನಿಮಾಯಾ ಹಾಗೂ ಕೇರಳ ಮೂಲದ ಚಂದ್ರು ಅಲಿಯಾಸ್ ತಿರುವೆಂದಿಗಂ ಅವರನ್ನು ಕೇರಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಳಪ್ಪುಳ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾ ಪ್ರದೇಶದಲ್ಲಿ ಕೇರಳ ಪೊಲೀಸರ ವಿಶೇಷ ತಂಡಗಳು ಮತ್ತು ನಕ್ಸಲರ ನಡುವೆ ಚಕಮಕಿ ನಡೆದಿದೆ ಎಂದು ಮೂಲಗಳು ಬುಧವಾರ ತಿಳಿಸಿವೆ. ಐವರು ನಕ್ಸಲರ ಗುಂಪು ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಮನೆಯೊಂದರಲ್ಲಿ ಆಶ್ರಯ ಪಡೆದಾಗ ಈ ಘಟನೆ ಸಂಭವಿಸಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಮೂವರು ನಕ್ಸಲರು ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಚಂದ್ರು, ಹಾಗೂ ಶ್ರೀಮತಿ ಅವರನ್ನು ಬಂಧಿಸಲಾಗಿದೆ. ಈ ಹಿಂದೆ ಶೃಂಗೇರಿ ಮೂಲದ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳದ ಸುಲ್ತಾನ್ ಬತ್ತೇರಿ ಸಮೀಪ ಬಂಧಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು.
ಬೆಳ್ತಂಗಡಿ: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ (ಕೇಂದ್ರ ತನಿಖಾ ದಳ) ಅಧಿಕಾರಿಗಳು ಮತ್ತೊಮ್ಮೆ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಈ ಹಿಂದೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ ಹಲವು ತಿಂಗಳುಗಳ ನಂತರ, ಸಿಬಿಐ ಅಧಿಕಾರಿಗಳು ಇದೀಗ ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆಯ ಅಪರಾಧಿ ಎಂದು ಸ್ಥಾಪಿಸಲು ನಿರ್ಧರಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಕಾನೂನು ಹೋರಾಟದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ತನಿಖೆಯನ್ನು ಸಿಬಿಐಗೆ ವಹಿಸಿತು ಮತ್ತು ಸಂಸ್ಥೆಯು ನಂತರ ಸಮಗ್ರ ತನಿಖೆ ನಡೆಸಿತು. ವಿಶೇಷ ಸಿಬಿಐ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆಸಲಾಯಿತು. ಆದರೆ, ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ್ದು, ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಿಬಿಐ ಅಧಿಕಾರಿಗಳು ವಿಫಲರಾಗಿದ್ದಾರೆ. ಜುಲೈ 16, 2023 ರಂದು ನೀಡಲಾದ ತೀರ್ಪಿನ ವಿರುದ್ಧ ಈಗ ಮೇಲ್ಮನವಿ ಸಲ್ಲಿಸಲಾಗಿದೆ. ಜುಲೈ 16…
ಪುತ್ತೂರು: ಹೃದಯಾಘಾತಕ್ಕೆ ನವವಿವಾಹಿತೆಯೊಬ್ಬರು ಬಲಿಯಾದ ಘಟನೆ ಪುತ್ತೂರಿನ ಪಡುವನ್ನೂರು ಗ್ರಾಮ ಪದಡ್ಕದಲ್ಲಿ ನಡೆದಿದೆ. ಮೃತರನ್ನು ಪದಡ್ಕ ನಿವಾಸಿ ಪುಷ್ಪ(22) ಎಂದು ಗುರುತಿಸಲಾಗಿದೆ. ಇವರಿಗೆ ನವೆಂಬರ್ 7 ರಂದು ಮುಂಜಾನೆ ಎದೆನೋವು ಕಾಣಿಸಿಕೊಂಡಿತ್ತು, ಬಳಿಕ ಚಿಕಿತ್ಸೆಗೆಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದಕೊಂಡು ಬರುವಾಗ ದಾರಿ ಮಧ್ಯೆ ಸಾವನಪ್ಪಿದ್ದಾರೆ. ಪುಷ್ಪ ಅವರಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು.
ಮಂಗಳೂರು: ನಗರದ ಅಳಕೆ ಮಾರ್ಕೆಟ್ ಎದುರು 2015ರಲ್ಲಿ ನಡೆದ ಕುದ್ರೋಳಿಯ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಕೊಲೆಯತ್ನ ಪ್ರಕರಣದ 5 ಮಂದಿ ಅಪರಾಧಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ರವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ ಶಿಕ್ಷೆಗೊಳಗಾದವರನ್ನು ಮುಲ್ಕಿ ನಿವಾಸಿಗಳಾದ ರವಿಚಂದ್ರ ಅಲಿಯಾಸ್ ವಿಕ್ಕಿ ಪೂಜಾರಿ ಸೈಕೋ ವಿಕ್ಕಿ (32), ಸಹೋದರ ಶಶಿ ಪೂಜಾರಿ (30),ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ(33), ಬೋಳೂರಿನ ಮೋಕ್ಷಿತ್ ಸಾಲ್ಯಾನ್(28), ರಾಜೇಶ್(30) ಎಂದು ಗುರುತಿಸಲಾಗಿದ್ದು ಇನ್ನೋರ್ವ ಆರೋಪಿ ಗಣೇಶ್ (28) ತಲೆಮರೆಸಿಕೊಂಡಿದ್ದಾನೆ ವಾಮಂಜೂರು ಸರಕಾರಿ ಅಭಿಯೋಜಕಿ ಜುಡಿತ್ ಪೆರ್ಮಂಕಿಯ ಧನರಾಜ್ ಪೂಜಾರಿ ಓಲ್ಯ ಮಾರ್ಗರೆಟ್ ಕ್ರಾಸ್ತಾ ಅವರು (31), ಬೋಳೂರಿನ ಮೋಕ್ಷಿತ್ ವಾದಿಸಿದ್ದರು. ಸಾಲ್ಯಾನ್ (28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದವರು. ಇನ್ನೋರ್ವ ಆರೋಪಿ ಗಣೇಶ್ (28)ತಲೆಮರೆಸಿಕೊಂಡಿದ್ದಾನೆ. ಆರೋಪಿಗಳಿಗೆ ನ್ಯಾಯಾಧೀಶರು ಭಾರತೀಯ ದಂಡ ಸಂಹಿತೆ ಕಲಂ143ರಡಿ ಮೂರು ತಿಂಗಳ ಸಾದಾ ಸಜೆ ರೂ.1000 ದಂಡ, ದಂಡ…










