ಮಂಗಳೂರು: ಸರಗಳ ಕಳವುಗೈದ ಕುಖ್ಯಾತ ಆರೋಪಿಯನ್ನು ಹೆಡೆಮುರಿಕಟ್ಟಿ ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು 2.41 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯ ಚಂದ್ರಶೇಖರ (29) ಬಂಧಿತ ಆರೋಪಿ. ಮಂಗಳೂರು ನಗರದ ಬಿಜೈ ಚರ್ಚ್ ಮೈನ್ ರೋಡ್ ನಲ್ಲಿ ಅ.21ರ ಮುಂಜಾನೆ ಮಹಿಳೆಯೊಬ್ಬರು ವಾಕಿಂಗ್ ಮಾಡುತ್ತಿದ್ದರು. ಆಗ ಇಬ್ಬರು ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಕತ್ತಿನಲ್ಲಿದ್ದ ಸರ ಎಳೆದೊಯ್ದು ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಿಸಿಬಿ ಪೊಲೀಸ್ ಘಟಕದಿಂದ ವಿಶೇಷ ತಂಡವನ್ನು ರಚಿಸಿ ಇಂದು ಆರೋಪಿ ಚಂದ್ರಶೇಖರನನ್ನು ಬಂಗ್ರ ಕೂಳೂರು ಬಳಿ ಬಂಧಿಸಿದ್ದಾರೆ. ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ 21.300 ಗ್ರಾಂ ತೂಕದ ತುಂಡಾದ ಚಿನ್ನದ ಕರಿಮಣಿ ಸರ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮೇಲೆ ಈ ಹಿಂದೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ಪೊಲೀಸ್ ಠಾಣೆ, ಕುಂಬ್ಳಗೋಡು, ಬಿಡದಿ ಹಾಗೂ ಬೆಂಗಳೂರು ಗ್ರಾಮಾಂತರ…
Author: main-admin
ಸುಳ್ಯ: ಶುಕ್ರವಾರ ಸುರಿದ ಭಾರಿ ಮಳೆಯ ಮಧ್ಯೆ ಸುಳ್ಯದ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಬಾವಿ ಗಾತ್ರದಲ್ಲಿ ಭೂಮಿ ಇದ್ದಕ್ಕಿದ್ದಂತೆ ಕುಸಿದು ನಿರ್ಮಾಣವಾದ ಘಟನೆಗೆ ನೆಲದೊಳಗಿದ್ದ ಮೋರಿ ಕುಸಿತ ಕಾರಣ ಎಂದು ತಿಳಿದು ಬಂದಿದೆ.ಕುಸಿತದ ವೇಳೆ ಬೃಹತ್ ಗಾತ್ರದಲ್ಲಿ ಗುಂಡಿ ನಿರ್ಮಾಣವಾಗಿತ್ತು. ಪಕ್ಕದಲ್ಲೇ ಇದ್ದ ವಿದ್ಯುತ್ ಪರಿವರ್ತಕ ವಾಲಿ ನಿಂತಿದ್ದು ಕೆಲವೇ ಹೊತ್ತಿನಲ್ಲಿ ಅದೂ ಮುರಿದು ಧರೆಗುರುಳಿತು. ಈ ವೇಳೆ ಕರೆಂಟ್ ಸರಬರಾಜು ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.ಕುಸಿತದ ವೇಳೆ ಬೃಹತ್ ಗಾತ್ರದಲ್ಲಿ ಗುಂಡಿ ನಿರ್ಮಾಣವಾಗಿತ್ತು. ಪಕ್ಕದಲ್ಲೇ ಇದ್ದ ವಿದ್ಯುತ್ ಪರಿವರ್ತಕ ವಾಲಿ ನಿಂತಿದ್ದು ಕೆಲವೇ ಹೊತ್ತಿನಲ್ಲಿ ಅದೂ ಮುರಿದು ಧರೆಗುರುಳಿತು. ಈ ವೇಳೆ ಕರೆಂಟ್ ಸರಬರಾಜು ಇಲ್ಲದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.
ಮಂಗಳೂರು : ಕರಾವಳಿಯಲ್ಲಿ ಹಿಂಗಾರು ಮಳೆ ಮುಂದುವರಿದಿದ್ದು, ನವೆಂಬರ್ 7ರವರೆಗೆ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ಕರಾವಳಿಯಲ್ಲಿ ಸಂಜೆ ಬಳಿಕ ಗುಡುಗು, ಸಿಡಿಲು, ಮಿಂಚು ಸಹಿತ ಸಾಧಾರಣ ಮಳೆ ಸುರಿಯುತ್ತಿದೆ.ಶುಕ್ರವಾರ ರಾತ್ರಿ ಕೂಡ ದ.ಕ.ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗುಡುಗು, ಮಿಂಚಿನ ಮಳೆಯಾಗಿದೆ. ಅಪರಾಹ್ನ ಮಂಗಳೂರು ಮಾತ್ರವಲ್ಲ ಗ್ರಾಮಾಂತರಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ನವೆಂಬರ್ 5ರಿಂದ ನವೆಂಬರ್ 7ರ ವರೆಗೆ ದ.ಕ.ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಮಳೆ ನಿರೀಕ್ಷಿಸಲಾಗಿದೆ. ಕಡಬ ಗರಿಷ್ಠ ಮಳೆ: ಶನಿವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಕಡಬದಲ್ಲಿ ಗರಿಷ್ಠ 52.2 ಮಿಲಿ ಮೀಟರ್ ಮಳೆಯಾಗಿದ್ದು, ದಿನದ ಸರಾಸರಿ ಮಳೆ 28.8 ಮಿ.ಮೀ. ಆಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 27.2 ಮಿ.ಮೀ, ಬಂಟ್ವಾಳ 17.5 ಮಿ.ಮೀ, ಮಂಗಳೂರು ತಾಲೂಕಿನಲ್ಲಿ 8.3 ಮಿ.ಮೀ, ಪುತ್ತೂರು 36.4 ಮಿ.ಮೀ, ಸುಳ್ಯ 36.9 ಮೂಡುಬಿದಿರೆ 15.4 ಮಿ.ಮೀ, ಮೂಲ್ಕಿ 7.4 ಮಿ.ಮೀ,…
ಮಂಗಳೂರು : ಮಂಗಳೂರು ನಗರದ ಮನೆಯೊಂದಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಬೆಲೆಬಾಳುವ ಕರಿಮಣಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ನಗರದ ಕದ್ರಿ ಬಿ ಗ್ರಾಮದ ಬಾರೆಬೈಲ್ ಎಂಬಲ್ಲಿನ ಮನೆಯೊಂದರಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕಾವ್ಯ ಎಂಬಾಕೆ ಕರಿಮಣಿ ಸರದೊಂದಿಗೆ ಪರಾರಿಯಾದ ಹೋಂ ನರ್ಸ್ ಆಗಿದ್ದಾರೆ. ಈ ಬಗ್ಗೆ ನಗರದ ಉರ್ವ ಠಾಣೆಗೆ ದೂರು ನೀಡಿದ್ದಾರೆ. ಅ.6 ರಿಂದ 30ರ ಮಧ್ಯೆ ಹೋಂ ನರ್ಸ್ ಆಗಿದ್ದ ಮಂಡ್ಯ ಜಿಲ್ಲೆಯ ಕಾವ್ಯ ಅನಾರೋಗ್ಯದ ನೆಪ ಹೇಳಿ ಹೋಗಿದ್ದರು. ಈ ಸಂದರ್ಭ ಸುಮಾರು 2 ಲಕ್ಷ ರೂ.ಮೌಲ್ಯದ 35 ಗ್ರಾಂ ತೂಕದ ಕರಿಮಣಿ ಸರ ಕಾಣೆಯಾಗಿದೆ. ಹಾಗಾಗಿ ಕಾವ್ಯಳನ್ನು ಸಂಪರ್ಕಿಸಿದಾಗ ಸರಿಯಾಗಿ ಸ್ಪಂದಿಸಲಿಲ್ಲ. ಹಾಗಾಗಿ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಟ್ಲ: ಇನ್ ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡ ಬಾಲಕಿಯರಿಬ್ಬರಿಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧ ಪಟ್ಟಂತೆ ಯುವಕನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಾಲೆತ್ತೂರು ಮೂಲದ ಬಾಲಕಿಗೆ ಇನ್ ಸ್ಟಾಗ್ರಾಂನಲ್ಲಿ ಕೇರಳ ಮೂಲದ ಯುವಕನೋರ್ವ ಹುಡುಗಿಯ ಹೆಸರಿನಲ್ಲಿ ಪರಿಚಯವಾಗಿದ್ದನು. ಬಳಿಕ ಇವರಿಬ್ಬರ ಮಧ್ಯೆ ಆತ್ಮೀಯತೆ ಬೆಳೆದು, ದೈಹಿಕ ಸಂಬಂಧದ ಹಂತಕ್ಕೆ ತಲುಪಿದೆ. ಇನ್ನು ಇದೇ ರೀತಿ ಬಾಲಕಿಯ ಪಕ್ಕದ ಮನೆಯಲ್ಲಿ ವಾಸವಿದ್ದ ಇನ್ನೋರ್ವ ಬಾಲಕಿಗೂ ಇದೇ ವ್ಯಕ್ತಿಯ ಪರಿಚಯವಾಗಿದೆ. ನಂತರ ಬಾಲಕಿಯರಿಬ್ಬರೂ ಈ ವಿಷಯವಾಗಿ ಮಾತನಾಡಿಕೊಂಡಾಗ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕ ಒಬ್ಬನೇ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಇಬ್ಬರು ಬಾಲಕಿಯೊಂದಿಗೆ ದೈಹಿಕ ಸಂಪರ್ಕ ನಡೆಸಿದ ಯುವಕನ ವಿರುದ್ಧ ಬಾಲಕಿಯರ ಮನೆಯವರು ದೂರು ನೀಡಿದ್ದರು. ಇನ್ನು ಪ್ರತ್ಯೇಕ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇಬ್ಬರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ,…
ಬೆಳ್ತಂಗಡಿ : ಬೆಳ್ತಂಗಡಿಯ ಉಜಿರೆಯ ಬಾವಿಯಲ್ಲಿ ಸಿಕ್ಕ ವಿವಾಹಿತ ಮಹಿಳೆಯ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ ಹೆಂಡತಿಯನ್ನೇ ಗಂಡ ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಎಂದು ಪೊಲೀಸ್ ತನಿಖೆಯಿಂದ ಪತ್ತೆಯಾಗಿದ್ದು ಆರೋಪಿ ಸುಧಾಕರನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಾಲು ಗ್ರಾಮದಲ್ಲಿ ಈ ಪ್ರಕೃಣ ನಡೆದಿದ್ದು ಶುಕ್ರವಾರ ವಿವಾಹಿತ ಮಹಿಳೆ ಶಶಿಕಲರ ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣವೆಂದು ಭಾವಿಸಲಾಗಿತ್ತು. ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಹೇಳಿದ್ದರು. ಆದರೆ, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಹೊರತೆಗೆದು ಪರಿಶೀಲನೆ ಮಾಡಿದ್ದರು. ನಂತರ ಸಾವಿಗೆ ಕಾರಣವೇನೆಂದು ತನಿಖೆ ಮಾಡಿದಾಗ ಗಂಡನೇ ತನ್ನ ಹೆಂಡತಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಮದುವೆಯಾಗಿ ಮಕ್ಕಳಿದ್ದರೂ ತನ್ನ ಗಂಡ ಬೇರೊಂದು ಯುವತಿಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದನ್ನು ಪ್ರಶ್ನಿಸಿದ ಪತ್ನಿ ಶಶಿಕಲ ಮೇಲೆ ಆರೋಪಿ…
ನವದೆಹಲಿ: ಇತ್ತೀಚೆಗಿನ ವರದಿಯೊಂದರಲ್ಲಿ ಗುಜರಾತ್‌ನಲ್ಲಿ 15 ವರ್ಷದ ಬಾಲಕಿಯೊಬ್ಬಳು ತನ್ನ ಶಾಲೆಯ ಪರೀಕ್ಷೆ ಹಾಲ್‌ಗೆ ಪ್ರವೇಶಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಯುವಕರಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತದ ಪ್ರವೃತ್ತಿ ದಿನದಿಂದ ದಿನಕ್ಕೆ ಏರುತ್ತಿದೆ. ಜಡ ಜೀವನಶೈಲಿ ಮತ್ತು ಕಳಪೆ ಆಹಾರದ ಆಯ್ಕೆಗಳು, ಒತ್ತಡ ಮತ್ತು ಆತಂಕ ಸೇರಿದಂತೆ ಹಲವಾರು ಅಪಾಯಕಾರಿ ಅಂಶಗಳನ್ನು ತಜ್ಞರು ಸೂಚಿಸಿದ್ದಾರೆ. ಒತ್ತಡ ಮತ್ತು ಆತಂಕವು ಹೃದಯಕ್ಕೆ ಅಪಾಯವಾಗಿದೆ ಅದು ಅಪಾಯಕಾರಿ ಫಲಿತಾಂಶಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಆತಂಕದ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು ಹೃದಯ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ವೇಗದ ಹೃದಯ ಬಡಿತ ಸೇರಿದಂತೆ ಹೃದ್ರೋಗ ಮತ್ತು ಹೃದಯದ ಅಪಾಯಕಾರಿ ಅಂಶಗಳೊಂದಿಗೆ ಆತಂಕವು ಸಂಬಂಧಿಸಿದೆ ಎಂದು ತಜ್ಞರು ಹೇಳಿದ್ದಾರೆ. ತೀವ್ರತರವಾದ ಪ್ರಕರಣಗಳಲ್ಲಿ, ಇದು ಹೃದಯದ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ ಮತ್ತು ಹಠಾತ್ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಮೂಡಿಗೆರೆ: ಧರ್ಮಸ್ಥಳಕ್ಕೆ ಹೊರಟ್ಟಿದ್ದ ಪ್ರವಾಸಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ.ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟ್ಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಇಂದು ಬೆಳಗ್ಗೆ ಸುಮಾರು 4.45 ರ ಹೊತ್ತಿಗೆ ಮೂಡಿಗೆರೆ ತಾಲೂಕಿನ ಚೀಕನ ಹಳ್ಳಿ ಕ್ರಾಸ್ ಬಳಿ ಬಸ್ ಪ್ರಪಾತಕ್ಕೆ ಉರುಳಿದೆ. ಪರಿಣಾಮ ಬೆಂಗಳೂರಿನ ಯಲಹಂಕ ನಿವಾಸಿ ಸುರೇಖಾ(45) ಸಾವನ್ನಪ್ಪಿದ್ದುಐವರು ಗಂಭೀರ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ 10ಕ್ಕೂ ಹೆಚ್ಚು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹಾಸನ ಜಿಲ್ಲೆಯ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸ್ಕೆಬೈಲು-ಚೀಕನಹಳ್ಳಿ ಈ ತಿರುವಿನಲ್ಲಿ ಈ ಮೊದಲು ಸಾಕಷ್ಟು ಅಪಘಾತಗಳು ಸಂಭವಿಸಿವೆ. ಕಳೆದ 10 ತಿಂಗಳಲ್ಲಿ 70ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಚೀಕನಹಳ್ಳಿಯ ಕ್ರಾಸ್‍ಗೆ ತಡೆಗೋಡೆ ನಿರ್ಮಿಸಿ ಎಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿದ್ದರೂ…
ಪಡುಬಿದ್ರೆ: ಟ್ಯಾಂಕರ್ ಹರಿದ ಪರಿಣಾಮ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರೆ ಪೇಟೆಯ ಬಸ್ ನಿಲ್ದಾಣದ ಬಳಿ ಶುಕ್ರವಾರ ಸಂಜೆ ನಡೆದಿದೆ. ಮೃತನನ್ನು ಕಂಚಿನಡ್ಕ ನಿವಾಸಿ ಪ್ರಜ್ವಲ್ ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಗೆ ತೆರಳುವ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸೊಂದು ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ವೇಳೆ ಹಿಂದಿನಿಂದ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಪ್ರಜ್ವಲ್ ರಸ್ತೆಗೆ ಎಸೆಯಲ್ಪಟ್ಟಿದ್ದರು. ಈ ವೇಳೆ ಟ್ಯಾಂಕರ್ ಅವರ ಮೇಲೆ ಹರಿದ ಪರಿಣಾಮ ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟರು ಎಂದು ಸ್ಥಳೀಯರು ತಿಳಿಸಿದ್ದಾರೆ. ಪಡುಬಿದ್ರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸುಳ್ಯ : ಸುಳ್ಯ ಪೇಟೆಯಲ್ಲಿ ಏಕಾ ಏಕಿ ಭೂಕುಸಿತವುಂಟಾದ ಘಟನೆ ನಡೆದಿದೆ. ಸುಳ್ಯ ಪೇಟೆಯ ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಬಳಿ ಭೂಕುಸಿತ ಉಂಟಾಗಿದ್ದು, ಭೂಕುಸಿತವಾದ ಸ್ಥಳದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಒಂದು ನೆಲಕ್ಕಪ್ಪಳಿಸಿದೆ. ಆದರೆ ವಿದ್ಯುತ್ ಕಂಬ ಬೀಳುವ ಸಂದರ್ಭ ಕರೆಂಟ್ ಇಲ್ಲದ ಕಾರಣ ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ. ಘಟನಾ ಸ್ಥಳಕ್ಕೆ ಮೆಸ್ಕಾ ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ಕಂಬ ತೆರವುಗೊಳಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ, ಭೂಕುಸಿತ ಉಂಟಾದ ಭಾಗಕ್ಕೆ ಯಾರೂ ಹೋಗದಂತೆ ತಡೆ ಮಾಡಿದ್ದಾರೆ. ಏಕಾಏಕಿ ಉಂಟಾದ ಭೂಕುಸಿತಕ್ಕೆ ಸುಳ್ಯದ ಜನರು ಬೆಚ್ಚಿಬಿದ್ದಿದ್ದಾರೆ. ಭೂ ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ.










