ಮಂಗಳೂರು : ಮಂಗಳೂರು ಹೊರವಲಯದ ಜೋಕಟ್ಟೆಯ ಯುವಕ ಇರ್ಷಾದ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ದಾರುಣ ಅಂತ್ಯ ಕಂಡಿದ್ದಾನೆ. ಜೋಕಟ್ಟೆಯ ಕೆಬಿಎಸ್‌ಸಿ ನಿವಾಸಿ ಇರ್ಷಾದ್ (33) ಸೌದಿ ಅರೆಬಿಯಾದ ಅಲ್ ಕೋಬರ್ ನಲ್ಲಿ ಮೃತಪಟ್ಟ ಯುವಕನಾಗಿದ್ದಾನೆ. ಕೆಬಿಎಸ್ ನಿವಾಸಿ ಅಬ್ದುಲ್ ರಝಾಕ್ ಅವರ ಮಗ ಇರ್ಶಾದ್ 7ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದರು. ಇತ್ತೀಚೆಗೆ ಒಂದೂವರೆ ವರ್ಷಗಳ ಹಿಂದೆ ಊರಿಗೆ ಬಂದು ತೆರಳಿದ್ದರು. ಗುರುವಾರ ಬೆಳಗ್ಗೆ ಇರ್ಶಾದ್ ಅವರಿಗೆ ತೀವೃ ತರಹದ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರ ಸ್ನೇಹಿತರು ಅಲ್ ಕೋಬರ್ ನ ಅಲ್ ಸಲಾಮ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇರ್ಶಾದ್ ಹೃದಯಾಘಾತ ಕ್ಕೊಳಗಾಗಿ ಮೃತಪಟ್ಟಿದ್ದಾಗಿ ಘೋಷಿಸಿದರು ಎಂದು ಅವರ ಕುಟುಂಬ ಮೂಲ ಮಾಹಿತಿ ನೀಡಿದೆ. ಮೃತ ಇರ್ಶಾದ್ ವಿವಾಹಿತರಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯನ್ನು ಅಗಲಿದ್ದಾರೆ. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಸಹೋದರ ಇಮ್ರಾನ್ ರಿಗೆ…
Author: main-admin
ಸುಬ್ರಹ್ಮಣ್ಯ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸುಬ್ರಹ್ಮಣ್ಯ ಪೊಲೀಸರು ಬೆಳ್ಳಾರೆಯ ಯುವಕನನ್ನು ಬಂಧಿಸಿದ್ದಾರೆ. ಬೆಳ್ಳಾರೆಯ ಅಟೋ ಚಾಲಕ ಮಹೇಶ್ ಬಂಧಿತ ಆರೋಪಿ, ಪಂಜದ ಬಾಲಕಿಯನ್ನು ಆಟೋ ಚಾಲಕ ಮಹೇಶ್ ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡ ಬಗ್ಗೆ ಆರೋಪಿಸಲಾಗಿದೆ. ಇದರಿಂದ ಮನನೊಂದ ಆ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ಸುಬ್ರಹ್ಮಣ್ಣ ಠಾಣೆಯಲ್ಲಿ ಫೊಕ್ಕೊ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಉಜಿರೆ: ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿದ್ದು ಕೊಲೆ ಮಾಡಿ ಬಾವಿಗೆ ಹಾಕಿರುವ ಆರೋಪ ಕೇಳಿಬರುತ್ತಿದೆ. ಬೆಳಾಲು ಮತ್ತು ಉಜಿರೆ ಗ್ರಾಮದ ಗಡಿ ಪ್ರದೇಶ ಮಾಚಾರು ಸಮೀಪ ಕೆಂಪನೊಟ್ಟುವಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮಾಚಾರು ನಿವಾಸಿ ಶಶಿಕಲಾ ಅವರ ಶವ ಬಾವಿಯಲ್ಲಿ ಇದ್ದು, ಇದು ಆಕಸ್ಮಿಕ ಘಟನೆಯೇ, ಅಥವಾ ಕೊಲೆಯೇ ಎಂಬ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ತನ್ನ ಲವರ್ ಔಟಿಂಗ್ ಗೆ ಕರೆದರೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಯುವಕನೊಬ್ಬ ಆಕೆ ಕೆಲಸಕ್ಕಿದ್ದ ಪಿಜಿಗೆ ಕಲ್ಲು ತೂರಿದ ಘಟನೆ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಬಳಿ ನಡೆದಿದೆ. ಕಲ್ಲು ಹೊಡೆ ಯುವಕನನ್ನು ಸುಳ್ಯ ನಿವಾಸಿ ವಿವೇಕ್ (18) ಎಂದು ಗುರುತಿಸಲಾಗಿದೆ. ಈತ ಸೆಂಟ್ ಆಗ್ನೇಸ್ ಕಾಲೇಜ್ ಬಳಿ ಇರುವ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆಗೆ ಔಟಿಂಗ್ ಗೆ ಬರಲು ಹೇಳಿದ್ದ ಆದರೆ ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ನನ್ನು ಹಿಡಿದು ಥಳಿಸಿದ್ದಾರೆ.
ನವದೆಹಲಿ: ಭಾರತದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ವಕೀಲರು ಪ್ರಕರಣಗಳ ಕುರಿತಂತೆ ವಾದ ಮಂಡಿಸುವಾಗ ‘ಮೈ ಲಾರ್ಡ್’ ಮತ್ತು ‘ಯುವರ್ ಲಾರ್ಡ್‌ಶಿಪ್’ ಎಂದು ಹೇಳುತ್ತಾರೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಬುಧವಾರ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಕುತೂಹಲದ ಘಟನೆ ನಡೆಯಿತು.ಪ್ರಕರಣವೊಂದರ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರೊಂದಿಗೆ ಪೀಠದಲ್ಲಿದ್ದ ನ್ಯಾ.ಪಿ.ಎಸ್.ನರಸಿಂಹ ಅವರು ಹಿರಿಯ ವಕೀಲರೊಬ್ಬರಿಗೆ ‘ಮೈ ಲಾರ್ಡ್ಸ್’ ಎಂದು ಎಷ್ಟು ಬಾರಿ ಹೇಳುತ್ತೀರಿ? ಹೀಗೆ ಹೇಳುವುದನ್ನು ನಿಲ್ಲಿಸಿದರೆ ನನ್ನ ಸಂಬಳದಲ್ಲಿ ಅರ್ಧದಷ್ಟು ನಿಮಗೆ ಕೊಡುತ್ತೇನೆ ಎಂದುಬಿಟ್ಟರು.ನ್ಯಾ.ನರಸಿಂಹ ಅವರು, “ಸರ್ ಎಂದು ಏಕೆ ಬಳಸಬಾರದು?, ಇಲ್ಲದಿದ್ದರೆ ಹಿರಿಯ ವಕೀಲರು ಮೈ ಲಾರ್ಡ್ಸ್ ಎಂಬ ಪದವನ್ನು ಎಷ್ಟು ಬಾರಿ ಉಚ್ಚರಿಸಿದ್ದಾರೆ ಎಂದು ಲೆಕ್ಕ ಹಾಕಬೇಕಾಗುತ್ತದೆ” ಎಂದರು. ನ್ಯಾಯಾಲಯದಲ್ಲಿ ಯಾವುದೇ ಪ್ರಕರಣದ ವಿಚಾರಣೆ ಅಥವಾ ಚರ್ಚೆಯ ಸಮಯದಲ್ಲಿ ವಕೀಲರು ನ್ಯಾಯಾಧೀಶರನ್ನು ‘ಮೈ ಲಾರ್ಡ್’ ಅಥವಾ ‘ಯುವರ್ ಲಾರ್ಡ್‌ಶಿಪ್’ ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಪದ್ಧತಿಯನ್ನು ವಿರೋಧಿಸುವವರು ಇದನ್ನು ವಸಾಹತುಶಾಹಿ ಯುಗದ…
ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ, ಸೊರಕೆ ಸಮೀಪ ಪೆರಂಟೋಳು ನಿವಾಸಿ ಸುಪ್ರೀತ್(13) ಅವರು ದಿಢೀರ್ ಅನಾರೋಗ್ಯದಿಂದ ನ. 1ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾದ ಸುಪ್ರೀತ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ. ಸುಪ್ರೀತ್ ಅವರು ಮುಂಡೂರು ಗ್ರಾ.ಪಂ.ನ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಮತ್ತು ಕುಂಞ ಮೇಸ್ತ್ರಿ ಅವರ ಪುತ್ರ. ಅವರು ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮೀ ಯೋಜನೆಯ ಅಡಿಯಲ್ಲಿ 2000 ಸಹಾಯ ಧನ ನೀಡಲಾಗುತ್ತಿದೆ. ಹೀಗೆ ನೀಡಲಾಗುತ್ತಿರುವ ಹಣದಲ್ಲಿ ಅಕ್ಟೋಬರ್ ತಿಂಗಳ ಹಣ ಸಂದಾಯ ಕೆಲ ಯಜಮಾನಿ ಮಹಿಳೆಯರಿಗೆ ಆಗಿಲ್ಲ. ಇವರಿಗೆ ಗುಡ್ ನ್ಯೂಸ್ ಅನ್ನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ಗೃಹಲಕ್ಷ್ಮೀ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದಂತ ಅವರು, ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವವರ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ನೋಂದಣಿಯಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸಬೇಕು. ಆಗಸ್ಟ್ ನಲ್ಲಿ ಶೇ.88ರಷ್ಟು ಮಂದಿಗೆ ಹಣ ಸಂದಾಯವಾಗಿದೆ. ಸೆಪ್ಟೆಂಬರ್ ನಲ್ಲಿ ಹಂತ ಹಂತವಾಗಿ ಹಣ ಹಾಕಲಾಗಿದೆ. ಅಕ್ಟೋಬರ್ ನಲ್ಲಿ ಶೇ.100ರಷ್ಟು ಫಲಾನುಭವಿಗಳಇಗೆ ಸಂದಾಯವಾಗುವಂತೆ ಮಾಡಬೇಕು ಎಂದು ತಿಳಿಸಿದರು. ಬ್ಯಾಂಕ್ ಖಾತೆಯ ಸಮಸ್ಯೆಯಿಂದ ಕೆಲ ಗೃಹಲಕ್ಷ್ಮಿಯರಿಗೆ ಅಕ್ಟೋಬರ್ ತಿಂಗಳ ಹಣ ಸಂದಾಯ ಆಗಿಲ್ಲ. ಅದನ್ನು ಸರಿಪಡಿಸಿ,…
ಮಂಗಳೂರು: ರೋಹನ್ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತೀದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಬರುವ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಜೈ ಮುಖ್ಯ ರಸ್ತೆಯಲ್ಲಿನ ‘ರೋಹನ್ ಸಿಟಿ’ ವಾಣಿಜ್ಯ ಮಳಿಗೆಗಳ ಹೂಡಿಕೆದಾರರಿಗೆ ಖಚಿತ 7.50% ಪ್ರತಿಫಲ ನೀಡುವ ಸ್ಟೀಮನ್ನು ಎರಡು ತಿಂಗಳ ಅವಧಿಗೆ ಹಮ್ಮಿಕೊಳ್ಳಲಾಗಿದೆ. ಈ ಎರಡು ತಿಂಗಳುಗಳಲ್ಲಿ ವಿಶೇಷ ದರ ಕಡಿತದೊಂದಿಗೆ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಲಾಗುವುದು. ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಖಚಿತ 7.50% ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ” ಎಂದು ರೋಹನ್ ಕಾರ್ಪೋರೇಶನ್ ಸಿಎಂಡಿ ರೋಹನ್ ಮೊಂತೇರೋ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. “ವಾಣಿಜ್ಯ ಮಳಿಗೆಗಳ ಮೌಲ್ಯವು ವರ್ಷಗಳು ಕಳೆದಂತೆ ಏರಿಕೆಯಾಗುತ್ತಾ ಸಾಗುತ್ತಿವೆ. ‘ರೋಹನ್ ಸಿಟಿ’ ರೋಹನ್…
ಮಂಗಳೂರು: ನಗರದ ಬಂಗ್ರ ಕೂಳೂರು ಗ್ರಾಮದ ಪಡ್ಡೋಡಿ ಯಲ್ಲಿ 2018ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಮೆಕ್ರಿ ಡಿಸೋಜ ಮತ್ತು ಲ್ಯಾನ್ಸಿ ಡಿಸೋಜ ಅವರನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಖುಲಾಸೆಗೊಳಿಸಿದ್ದಾರೆ. 2018ರ ನ.5ರಂದು ಪಡ್ಡೋಡಿ ಕಡೆಗೆ ಹೋಗುವ ರಸ್ತೆಯಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಪ್ರವೀಣ್ ಡಿಸೋಜ ಎಂಬವರು ನಿಲ್ಲಿಸಿ ಅದರ ಚಾಲಕನಲ್ಲಿ ನಿಧಾನವಾಗಿ ಹೋಗುವಂತೆ ತಿಳಿಸಿದರು. ಈ ವಿಷಯನ್ನು ಲಾರಿ ಚಾಲಕ ಅದರ ಮಾಲಕರಾದ ಎಡ್ವರ್ಡ್ ಮೆಕ್ರಿ ಡಿಸೋಜ ಮತ್ತು ಲ್ಯಾನ್ಸಿ ಡಿಸೋಜ ಅವರಿಗೆ ತಿಳಿಸಿದ್ದ ಇದರಿಂದ ಕೋಪಗೊಂಡ ಇಬ್ಬರು ರಾತ್ರಿ ಸ್ಕೂಟರ್‌ನಲ್ಲಿ ಆಗಮಿಸಿ ಪ್ರವೀಣ್ ಡಿಸೋಜ ರವರಿಗೆ ಬೈದು ಕೊಲೆ ಮಾಡುವ ಉದ್ದೇಶದಿಂದ ಸ್ಫೋಟರ್‌ನಲ್ಲಿದ್ದ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿ ಮಾರಣಾಂತಿಕ ಗಾಯವನ್ನುಂಟು ಮಾಡಿ ಕೊಲೆಗೆ ಯತ್ನಿಸಿದ್ದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ…
ಬೆಂಗಳೂರು: ವನ್ಯಜೀವಿ ವಸ್ತುಗಳನ್ನು ಇಟ್ಟಿಕೊಳ್ಳೋದು, ಬಳಕೆ ಮಾಡೋದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನುಸಾರ ಅಪರಾಧವಾಗಿದೆ. ಒಂದು ವೇಳೆ ಇಟ್ಟುಕೊಂಡು ಸಿಕ್ಕಿಬಿದ್ರೇ ನಿಮಗೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಆದಂತೆ ಜೈಲಿ ಶಿಕ್ಷೆ ಫಿಕ್ಸ್. ಹೌದು ಈ ಕುರಿತಂತೆ ರಾಜ್ಯ ಸರ್ಕಾರದಿಂದ ಇಂದು ಎಲ್ಲಾ ಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಕಾಯ್ದೆಯಂತೆ ವನ್ಯಜೀವಿಗಳನ್ನು ಬೇಟೆ ಆಡೋದು, ಸ್ವಾಧೀನ ಪಡಿಸಿಕೊಳ್ಳೋದು, ಇಟ್ಟುಕೊಳ್ಳೋದು ಸೇರಿದಂತೆ ಖರೀದಿಸಿಸೋದು, ಸಾಗಾಣೆ ಮಾಡೋದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ತಿಳಿಸಿದೆ. ಇದಷ್ಟೇ ಅಲ್ಲದೇ ವನ್ಯಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ. ಹೀಗೆ ಮಾಡದಂತೆ ಎಚ್ಚರಿಕೆಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿದೆ. ನೀವು ಒಂದು ವೇಳೆ ಈ ಎಲ್ಲಾ ವನ್ಯಜೀವಿ…










