ಬೆಂಗಳೂರು : ಕಾಯಂ ನಿರೀಕ್ಷೆಯಲ್ಲಿದ್ದ 12,000 ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವೆ ಕಾಯಂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರವು ಅತಿಥಿ ಉಪನ್ಯಾಸಕರ ಪರವಾಗಿ ನಾಲ್ಕು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದು, ಮುಷ್ಕರ ಕೈಬಿಟ್ಟು ತಕ್ಷಣ ಕರ್ತವ್ಯಕ್ಕೆ ಹಾಜರಾಗದಿದ್ದರೆ ತಮ್ಮ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಒತ್ತಾಯಿಸಿ ಅತಿಥಿ ಉಪನ್ಯಾಸಕರ ಮುಷ್ಕರ ಕೈಗೊಂಡಿದೆ. ಆದರೆ ಸರ್ಕಾರವು ಅತಿಥಿ ಉಪನ್ಯಾಸಕರ ಸೇವೆ ಕಾಯಂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇದರ ಬದಲಿಗೆ ಜನವರಿಯಿಂದ 5 ಸಾವಿರ ರೂ. ವೇತನ ಹೆಚ್ಚಳ, ವಾರ್ಷಿಕ 5 ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ, ಕನಿಷ್ಟ 10ವರ್ಷ ಸೇವೆ ಮಾಡಿರುವವರಿಗೆ 50 ಸಾವಿರ ರೂ.ನಂತೆ 5 ಲಕ್ಷ ರೂ. ನಿಧಿ, ನಿತ್ಯ 15 ಗಂಟೆ ಕಾರ್ಯಭಾರ ಇರುವವರಿಗೆ ಮಾಸಿಕ ಒಂದು ರಜೆ ನೀಡುವ…
Author: main-admin
ಉಳ್ಳಾಲ : ಸಮುದ್ರದಲ್ಲಿ ನೀರಾಟಕ್ಕಿಳಿದ ಮೂವರು ಯುವಕರನ್ನ ರಕ್ಕಸ ಅಲೆಗಳು ಕೊಚ್ಚಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದ್ದು,ಓರ್ವ ಯುವಕ ಮೃತ ಪಟ್ಟರೆ,ಮತ್ತೋರ್ವ ಸಮುದ್ರ ಪಾಲಾಗಿದ್ದು ಇನ್ನೋರ್ವನನ್ನ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಚಿಕ್ಕ ಮಂಗಳೂರು ನಿವಾಸಿ ಸಲ್ಮಾನ್(19) ಮೃತ ಪಟ್ಟ ಯುವಕನಾಗಿದ್ದು ,ಆತನ ಸಂಬಂಧಿ ಬಶೀರ್(23)ನೀರು ಪಾಲಾಗಿದ್ದು ಮತ್ತೋರ್ವ ಯುವಕ ಸೈಫ್ ಆಲಿ(27) ಆಸ್ಪತ್ರೆಯಲ್ಲಿ ಚೇತರಿಸಿದ್ದಾನೆ. ಚಿಕ್ಕ ಮಂಗಳೂರು ಮೂಲದ ಬಶೀರ್,ಸಲ್ಮಾನ್ ಮತ್ತು ಸೈಫ್ ಅಲಿ ಎಂಬವರು ಕುಟುಂಬಸ್ಥರೊಂದಿಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಇಂದು ಮಧ್ಯಾಹ್ನದ ವೇಳೆ ಉಳ್ಳಾಲ ಕಡಲ ಕಿನಾರೆಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಬಶೀರ್, ಸಲ್ಮಾನ್,ಸೈಫ್ ಅಲಿ ನೀರಾಟಕ್ಕಿಳಿದಿದ್ದು ರಕ್ಕಸ ಅಲೆಗಳು ಮೂವರನ್ನ ಎಳೆದೊಯ್ದಿದೆ.ತಕ್ಷಣ ಸ್ಥಳೀಯ ಈಜುಗಾರರು ಸಲ್ಮಾನ್ ಮತ್ತು ಸೈಫ್ ಅಲಿಯನ್ನ ಎಳೆದು ದಡಕ್ಕೆ ಹಾಕಿದ್ದಾರೆ. ಸಲ್ಮಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು,ಸೈಫ್ ಅಲಿ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಶೀರ್ ನೀರು ಪಾಲಾಗಿದ್ದು ಉಳ್ಳಾಲ ಪೊಲೀಸರು,ಅಗ್ನಿ ಶಾಮಕ ದಳದವರು ಆತನಿಗಾಗಿ ಶೋಧ ಕಾರ್ಯ…
ವಿಟ್ಲ : ಗುಡ್ಡ ಜರಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ಕಾಯರಡ್ಕ ಎಂಬಲ್ಲಿ ನಡೆದಿದೆ. ಜೆಸಿಂತಾ ಮಾರ್ಟಿಸ್ ಎಂಬವರ ಮನೆಯ ಕಾಂಪೌಂಡ್ ನ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಮೇಲಿನ ಗುಡ್ಡ ಜರಿದು ಬಿದ್ದಿದೆ. ಈ ವೇಳೆ ಇಬ್ಬರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡಿದ್ದರು. ಮಣ್ಣಿನಡಿ ಸಿಲುಕಿದ ಕಾರ್ಮಿಕರನ್ನು ರಾಜೇಶ್ ನಾಯ್ಕ್ ಬಾಯಿಲ, ಉಮೇಶ್ ನಾಯ್ಕ್ ನೆಲ್ಲಿ ಎಂದು ಗುರುತಿಸಲಾಗಿದೆ. ಕೂಡಲೇ ಸ್ಥಳೀಯರು ರಕ್ಷಣೆ ಮಾಡಿ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್, ಕಂದಾಯ ಅಧಿಕಾರಿ ವಿಜಯ್ ಭೇಟಿ ನೀಡಿದ್ದಾರೆ.
ಬಂಟ್ವಾಳ: ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ. ಬಿಸಿರೋಡಿನ ಕೈಕಂಬ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿತ್ತು.ಇಲ್ಲಿನ ಸ್ಥಳೀಯ ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ.ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಅವರು ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿಈಕೆ ಕೆಲಸಕ್ಕೆ ರಜೆ ಪಡೆದುಕೊಂಡು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಪ್ಟ್ ಕಾರು ಇವಳಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯುವತಿ ಗಂಭೀರವಾಗಿ…
ಮಂಗಳೂರು: ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಿ. 26ರಂದು ಬಾಂಬ್ ಬೆದರಿಕೆಯ ಈ ಮೇಲ್ ಬಂದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಬಜಪೆ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ನಿಲ್ದಾಣದ ಸುತ್ತ ಭದ್ರತೆ ಬಿಗುಗೊಳಿಸಲಾಗಿದೆ. ಮಂಗಳೂರು ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳಿಗೆ ಈ ರೀತಿಯ ಈ ಮೇಲ್ ಸಂದೇಶ ರವಾನೆಯಾಗಿದೆ. xonocikonoci10@beeble.com ಹೆಸರಿನ ಈ ಮೇಲ್ ನಿಂದ ಡಿ. 26ರ ರಾತ್ರಿ 11.59ಕ್ಕೆ ಮೇಲ್ ಬಂದಿದೆ. ಸಂದೇಶದಲ್ಲಿ ಒಂದು ವಿಮಾನದಲ್ಲಿ ಸ್ಫೋಟಕಗಳಿವೆ. ಮಾತ್ರವಲ್ಲದೆ ನಿಲ್ದಾಣದ ಒಳಗೂ ಗುಪ್ತ ಸ್ಥಳದಲ್ಲಿ ಸ್ಫೋಟಕ ಇರಿಸ ಲಾಗಿದೆ. ಕೆಲವೇ ಗಂಟೆಗಳಲ್ಲಿ ಅದು ಸ್ಫೋಟಿಸಲಿದೆ. ನಾನು ನಿಮ್ಮೆಲ್ಲರನ್ನೂ ಕೊಲ್ಲುತ್ತೇನೆ. ನಾವು ‘ಫ್ಯೂನಿಂಗ್’ ಹೆಸರಿನ ಉಗ್ರಗಾಮಿ ತಂಡದವರು ಎಂದು ಮೇಲ್ ತಿಳಿಸಲಾಗಿದೆ. ಈ ಸಂದೇಶವನ್ನು ಡಿ. 27ರ ಮಧ್ಯಾಹ್ನ 11.20ರ ವೇಳೆಗೆ ವಿಮಾನ ನಿಲ್ದಾಣ ಪ್ರಾಧಿಕಾರದವರು ಗಮನಿಸಿದ್ದಾರೆ. ಮೇಲ್ ಗಮನಿಸುತ್ತಿದ್ದಂತೆ ನಿಲ್ದಾಣದ ಭದ್ರತೆಯನ್ನು ಬಲಪಡಿಸಲಾಗಿದೆ. ಜತೆಗೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಿಂದ ತಪಾಸಣೆಯನ್ನೂ ನಡೆಸಲಾಗಿದೆ. ಆದರೆ…
ಹನಿ ಟ್ರ್ಯಾಪ್ ನಡೆಸಿ ಕೇರಳ ಉದ್ಯಮಿ ಬ್ಲಾಕ್ ಮೇಲ್ ಮಾಡಿ 5 ಲಕ್ಷ ರೂ. ದೋಚಿದ್ದ ಯುವತಿ ಸೇರಿ ಮೂವರನ್ನು ಮೈಸೂರು ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಮಡಿಕೇರಿ ಮೂಲದ ಯುವತಿ, ಜಲುಲ್ಲಾ ರೆಹಮಾನ್ ಮತ್ತು ರಿಜ್ವಾನ್ ಬಂಧಿತ ಆರೋಪಿಗಳು ಬಂಧಿತರಿಂದ 50,000 ರೂ. ನಗದು, ಕಾರ್ ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೇರಳದ ತಿರುನೆಲ್ಲಿಯ ಉದ್ಯಮಿ ಸುನ್ನಿ ಹನಿಟ್ರ್ಯಾಪ್ ಗೆ ಒಳಗಾದವರು. 9 ತಿಂಗಳ ಹಿಂದೆ ಕಳೆದ ಮಾರ್ಚ್ ನಲ್ಲಿ ಪ್ರಕರಣ ನಡೆದಿತ್ತು. ಕೇರಳಕ್ಕೆ ತೆರಳುತ್ತಿದ್ದ ಉದ್ಯಮಿಯನ್ನು ಮಾನಂದವಾಡಿ ರಸ್ತೆಯಲ್ಲಿ ತಡೆದ ಇಬ್ಬರು ಅಪಹರಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಯುವತಿಯೊಂದಿಗೆ ಅರೆ ನಗ್ನ ಫೋಟೋ, ವಿಡಿಯೋ ತೆಗೆದು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಸಿದ್ದಾರೆ. ಬೆದರಿದ ಉದ್ಯಮಿ ಸುನ್ನಿ 5 ಲಕ್ಷ ರೂಪಾಯಿ ನೀಡಿದ್ದಾರೆ. ನಂತರ ಅವರ ಬಳಿ ಇದ್ದ ಉಂಗುರ ಕಸಿದುಕೊಂಡು ಖದೀಮರು ಪರಾರಿಯಾಗಿದ್ದು, ತಿರುನೆಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ…
ನಗರದ ಬಂಗ್ರಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿಸೆಂಬರ್ 30ರಂದು ಮಂಗಳೂರು ಕಂಬಳ ಅದ್ಧೂರಿಯಾಗಿ ನಡೆಯಲಿದ್ದು ಇದರ ಅಂಗವಾಗಿ ಛಾಯಾಚಿತ್ರ ಸ್ಪರ್ಧೆ, ಕಲರ್ ಕೂಟ ಮತ್ತು ರೀಲ್ ಕಂಟೆಸ್ಟ್ ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕ್ಯಾ. ಬೃಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಡಿ.30ರಂದು ಬೆಳಗ್ಗೆ 8:30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಕಂಬಳ ಉದ್ಘಾಟನೆಗೊಳ್ಳಲಿದೆ. ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಉದ್ಘಾಟನೆ ನೆರವೇರಿಸಲಿದ್ದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಕೆ. ಚಿತ್ತರಂಜನ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದ ಜೀ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಎಂ.ಆರ್.ಜಿ. ಗ್ರೂಪ್ ಚೇರ್ ಮೆನ್ ಕೆ.ಪ್ರಕಾಶ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸಂಸದ ತೇಜಸ್ವಿ ಸೂರ್ಯ, ಸಂಸದ…
ನವದೆಹಲಿ: ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ 8 ಮಾಜಿ ಭಾರತೀಯ ನೌಕಾಪಡೆಗಳಿಗೆ ಗುರುವಾರ (ಡಿಸೆಂಬರ್ 28) ಹೆಚ್ಚಿನ ಪರಿಹಾರ ಸಿಕ್ಕಿದೆ. ಎಲ್ಲಾ ಎಂಟು ಜನರ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಕತಾರ್ ನಲ್ಲಿರುವ ನ್ಯಾಯಾಲಯವು ಪ್ರಕರಣದ ಬಾಗಿಲು ತಟ್ಟಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಶಿಕ್ಷೆಯನ್ನು ಕಡಿಮೆ ಮಾಡಿದೆ ಬೇಹುಗಾರಿಕೆ ಆರೋಪದ ಮೇಲೆ ಕತಾರ್ ನ್ಯಾಯಾಲಯವು ಅಕ್ಟೋಬರ್ನಲ್ಲಿ ಮರಣದಂಡನೆ ವಿಧಿಸಿದ ಎಂಟು ಮಾಜಿ ನೌಕಾಪಡೆಯ ಸಿಬ್ಬಂದಿಗೆ ಕಡಿಮೆ ಶಿಕ್ಷೆಯನ್ನ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ಇಂದು ಮಧ್ಯಾಹ್ನ ತಿಳಿಸಿದೆ. ಕಡಿಮೆ ಮಾಡಿದ ಶಿಕ್ಷೆಯ ನಿಯಮಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸರ್ಕಾರ ಹೇಳಿದೆ. “ವಿವರವಾದ ತೀರ್ಪಿಗಾಗಿ ಕಾಯಲಾಗುತ್ತಿದೆ. ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲು ನಾವು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ” ಎಂದು ಅವರು ಹೇಳಿದರು.
ಬೆಂಗಳೂರು: ನಿಗದಿತ ಕಿಲೋ ಮೀಟರ್ ಗಳಷ್ಟು ಓಡಾಟ ನಡೆಸಿ ಸಂಚಾರ ಸಾಮರ್ಥ್ಯ ಕಳೆದುಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯ ಬಸ್ ಗಳನ್ನು ಗುಜರಿಗೆ ಹಾಕಬೇಕು. ಅಂತಹ ಬಸ್ ಗಳನ್ನು ಯಾವುದೇ ಕಾರಣಕ್ಕೂ ಪುನಃ ನಗರ, ಹಳ್ಳಿಗಳ ಮಾರ್ಗ ಅಥವಾ ಮತ್ತಾವುದೇ ಮಾರ್ಗಗಳಲ್ಲಿನ ಸಂಚಾರಕ್ಕೆ ಬಳಸಲು ಅನುಮತಿ ನೀಡಬಾರದು ಎಂದು ರಾಜ್ಯ ಹೈಕೋರ್ಟ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಗುಜರಿಗೆ ಸೇರಬೇಕಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ರಸ್ತೆಗಿಳಿಸಿದ್ದರಿಂದ 2006ರ ನವೆಂಬರ್ ನಲ್ಲಿ ಅಂಕೋಲಾದಲ್ಲಿ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಬಸ್ ಗಳು ಸಂಚಾರಕ್ಕೆ ಅರ್ಹವಾಗಿರುವ ಬಗ್ಗೆ ಪ್ರತೀ ವರ್ಷವೂ ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ (RTO) ಸುಸ್ಥಿತಿ ದೃಢೀಕರಣ ಪತ್ರ (FC) ಪಡೆಯಬೇಕು. RTO ವತಿಯಿಂದ ದೃಢೀಕರಣ ಪತ್ರ ಪಡೆದ ಬಸ್ಗಳಿಗೆ ಮಾತ್ರವೇ ರಸ್ತೆಯಲ್ಲಿ ಸಂಚರಿಸಲು ಅನುಮತಿ ನೀಡಬೇಕು. ಕಾಲಕಾಲಕ್ಕೆ ಬಸ್ ಗಳನ್ನು ಪರಿಶೀಲಿಸಿ…
ವಿಟ್ಲ: ತಾಯಿಯೊಬ್ಬಳು ತನ್ನ ವಿಕಲಚೇತನ ಮಗುವಿನ ಗಂಟಳಿಗೆ ಕೋಲು ಹಾಕಿ ಕುತ್ತಿಗೆ ಹಿಡಿದುಕೊಲೆ ಮಾಡಲು ಯತ್ನಿಸಿದ ಘಟನೆ ಅನಂತಾಡಿ ಗ್ರಾಮದ ಕರಿಂಕ ಎಂಬಲ್ಲಿ ನಡೆದಿದೆ. ಬೆಳಿಯಪ್ಪಗೌಡ ಕುಸುಮ ದಂಪತಿಯ ಏಕೈಕ ಪುತ್ರ ದರ್ಶಿತ್(9)ಎಂಬಾತನೇ ತನ್ನ ಜನ್ಮದಾತೆಯ ರಾಕ್ಷಸೀಕೃತ್ಯಕ್ಕೆ ಒಳಗಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನತದೃಷ್ಟ ಬಾಲಕ. ಹುಟ್ಟಿನಿಂದಲೇ ವಿಕಲಚೇತನನಾಗಿದ್ದ ದರ್ಶಿತ್ ತನ್ನ ಪೋಷಕರಿಗೆ ಏಕೈಕ ಕರುಳಕುಡಿಯಾಗಿದ್ದಾನೆ. ಅನಂತಾಡಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿರುವ ದರ್ಶಿತ್ ಪಾಲಿಗೆ ಇಂದು ಕರಾಳ ರಾತ್ರಿಯಾಗಿದೆ. ಹೆತ್ತು, ಹೊತ್ತು ಸಾಕಿ ಸಲಹಬೇಕಾಗಿದ್ದ ತಾಯಿ ಕುಸುಮ ಯಮರಾಜನ ರೂಪದಲ್ಲಿ ಬದಲಾಗಿದ್ದಾಳೆ. ತನ್ನ ಪುತ್ರನ ಕತ್ತು ಹಿಸುಕಿದ ತಾಯಿ ಕುಸುಮಾ ಅಷ್ಟಕ್ಕೂ ತೃಪ್ತಳಾಗದೇ ಆತನ ಬಾಯಿಗೆ ದೊಣ್ಣೆ ತುರುಕಿ ಕೊಲೆಗೆ ಯತ್ನಿಸಿದ್ದಾಳೆ.ಮನೆಯೊಳಗೆ ವಿಕಲಚೇತನ ಪುತ್ರನ ಕಿರುಚಾಟ ಕೇಳಿಸಿಕೊಂಡ ತಂದೆ ಬೆಳ್ಳಿಯಪ್ಪ ಗೌಡರು ಅಂಗಳದಿಂದ ಓಡಿ ಮನೆಯೊಳಗೆ ಬರುತ್ತಿದ್ದಂತೆ ಆಘಾತ ಕಾದಿತ್ತು. ಪುತ್ರನ ಮೇಲೆ ಪತ್ನಿ ನಡೆಸುತ್ತಿದ್ದ ಕೌರ್ಯ ಕಣ್ಣಾರೆ ನೋಡುತ್ತಿದ್ದಂತೆ ತಡೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ರಾಕ್ಷಸೀ ರೂಪ ತಾಳಿದ್ದ ಪತ್ನಿ ಕುಸುಮಾ…










