Author: main-admin

ಮಂಗಳೂರು: ಉಳ್ಳಾಲ ಸಮೀಪದ ಸೋಮೇಶ್ವರ ಬೀಚ್‌ನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ನಡೆದ ಅನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ವಿದ್ಯಾರ್ಥಿಗಳ ಮೇಲೆಯೇ ಉಳ್ಳಾಲ ಎಸ್ಸೈ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅನೈತಿಕ ಪೊಲೀಸ್ ಗಿರಿಗೆ ಸಂಬಂಧಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿರುವ ಮಧ್ಯೆಯೇ ದೂರು ನೀಡಿದ ವಿದ್ಯಾರ್ಥಿಗಳ ಮೇಲೆಯೇ ಉಳ್ಳಾಲ ಎಸ್ಸೈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಚಾರಣೆಗಾಗಿ ನಮ್ಮನ್ನು ಠಾಣೆಗೆ ಕರೆಯಿಸಿದ ಉಳ್ಳಾಲ ಎಸ್ಸೈ ಸಂತೋಷ್ ಖಾಲಿ ಕಾಗದಕ್ಕೆ ಬಲವಂತವಾಗಿ ಸಹಿ ಹಾಕಿಸಿದ್ದಾರೆ. ಇದನ್ನು ಪ್ರಶ್ನಿಸಿದ ತನಗೆ ಹಲ್ಲೆಗೈದಿದ್ದಾರೆ ಎಂದು ವಿದ್ಯಾರ್ಥಿಯೊಬ್ಬ ಕಮಿಷನರ್ ಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾನೆ. ವಿದ್ಯಾರ್ಥಿನಿಯರನ್ನು ಕೂಡಾ ಪೊಲೀಸರು ಠಾಣೆಗೆ ಕರೆಯಿಸಿ, ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Read More

ಮಂಗಳೂರು; ರಾಡ್ ನಿಂದ ಚುಚ್ಚಿ ಯುವಕನನ್ನು ಬರ್ಬರ‌ವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಕೂಳೂರು ರಾಯಿಕಟ್ಟೆಯಲ್ಲಿ ನಡೆದಿದೆ. ಪಶ್ಚಿಮ‌ ಬಂಗಾಳದ ನಿವಾಸಿ ಬಿಕಾಸ್ ಗುನಿಯಾ(22) ಮೃತ ದುರ್ದೈವಿ. ವಾಸುದೇವ ಗುನಿಯಾ(33) ಕೊಲೆ ಮಾಡಿದಾತ. ಈತನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ‌ ರಾಡ್‌ನಿಂದ ಎದೆಗೆ ಚುಚ್ಚಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಕೊಲೆ‌ಯಾದವರು & ಕೊಲೆ ಆರೋಪಿ ಇಬ್ಬರು ಕೂಡ ಬಂಗಾಳದವರು. ಇಬ್ಬರು ಕೂಡ ಕುಳೂರಿನಲ್ಲಿ ಗಾರೆ ಕೆಲಸ ಮಾಡಿ ಕೊಂಡಿದ್ದರು. ಆರೋಪಿ ವಾಸುದೇವ ಗುನಿಯಾನಿಗೆ ಮೃತ ಬಿಕಾಸ್ ಗುನಿಯಾ ಊರಿನ ಯುವತಿಯ ಜೊತೆ ಮದುವೆಯಾಗಿತ್ತು. ಆತನ ಪತ್ನಿ ಜೊತೆ ಬಿಕಾಸ್ ಗೆ ಅಕ್ರಮ‌ ಸಂಬಂಧ ಇದೆ ಎಂದು ಶಂಕಿಸಿ ಭಾನುವಾರ ಮಧ್ಯಾಹ್ನ ವಾಸುದೇವ ಗುನಿಯಾ ಪಾನಮತ್ತನಾಗಿ ಅಕ್ರಮ ಸಂಬಂಧದ ಬಗ್ಗೆ ಗಲಾಟೆ ಮಾಡಿ ಬಿಕಾಸ್‌ನ ಎದೆಗೆ ರಾಡ್ ನಿಂದ ಚುಚ್ಚಿದ್ದಾನೆ ಎನ್ನಲಾಗಿದೆ.‌ ಇದರಿಂದ ಗಂಭೀರ ಗಾಯಗೊಂಡ ಬಿಕಾಸ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಬಂಧಿಸಿ…

Read More

ಕೇರಳ; ಹಾಸ್ಯ ಪಾತ್ರಗಳಿಗೆ ಹೆಸರಾದ ಮಲಯಾಳಂ ನಟ ಕೊಲ್ಲಂ ಸುಧಿ ಸೋಮವಾರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸುಧಿ ಅವರು ಸಹ ಕಲಾವಿದರಾದ ಮಹೇಶ್, ಬಿನು ಅಡಿಮಾಲಿ ಮತ್ತು ಉಲ್ಲಾಸ್ ಅರೂರ್ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರ ಕಾರು ತ್ರಿಶೂರ್ ಕಯ್ಪಮಂಗಲಂ ಪಣಾಂಬಿಕುನ್‌ನಲ್ಲಿ ಮುಂಜಾನೆ 4:30 ಕ್ಕೆ ಅಪಘಾತಕ್ಕೀಡಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ, ಅಪಘಾತದ ಗಾಯಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಸುಧಿ ಅವರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಸುಧಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೂವರು ಮಿಮಿಕ್ರಿ ಕಲಾವಿದರಾದ ಬಿನು ಆದಿಮಾಲು, ಉಲ್ಲಾಸ್ ಮತ್ತು ಮಹೇಶ್ ಗಾಯಗೊಂಡಿದ್ದಾರೆ ವರದಿ ತಿಳಿಸಿದೆ. ಕೇರಳದ ಕೈಪಮಂಗಲಂನಲ್ಲಿ ಸೋಮವಾರ ಮುಂಜಾನೆ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಅವರೆಲ್ಲರೂ ವಡಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂತಿರುಗುತ್ತಿದ್ದಾಗ ಕಾರು ಪಿಕಪ್ ಗೆ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ…

Read More

ಬಿಹಾರ:ಭಾನುವಾರದಂದು ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ.ವೈರಲ್ ವಿಡಿಯೋಗಳು ಸೇತುವೆಯ ಎರಡು ಭಾಗಗಳು ಒಂದರ ನಂತರ ಒಂದರಂತೆ ಕುಸಿಯುತ್ತಿರುವುದನ್ನು ತೋರಿಸಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಬಿಹಾರ ರಾಜ್ಯದ ಖಗರಿಯಾದ ಆಗುವನಿ ಸುಲ್ತಾನ್ ಗಂಜ್ ನ ಗಂಗಾ ಸೇತುವೆಯನ್ನು 1,717 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಈ ಕುಸಿತ ಸಂಭವಿಸಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಕುಸಿತಕ್ಕೆ ಕಾರಣರಾದವರನ್ನು ಗುರುತಿಸುವಂತೆ ಹೇಳಿದ್ದಾರೆ. ವರದಿಗಳ ಪ್ರಕಾರ, ಸೇತುವೆಯ ಕನಿಷ್ಠ 3 ಅಡಿ ಭಾಗವು ನದಿಗೆ ಕುಸಿದಿದೆ. 2022 ರ ಏಪ್ರಿಲ್‌ನಲ್ಲಿ ಚಂಡಮಾರುತದಿಂದಾಗಿ ಸೇತುವೆಯು ಸ್ವಲ್ಪ ಹಾನಿಗೊಳಗಾಗಿತ್ತು. ಸೇತುವೆ ಕುಸಿತದ ಬಗ್ಗೆ ನಿತೀಶ್ ಕುಮಾರ್ ಅವರನ್ನು ಬಿಜೆಪಿ ನಿಂದಿಸಿದೆ.ಸೇತುವೆ ಕುಸಿತದ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಭಾರತೀಯ ಜನತಾ ಪಕ್ಷ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಕ್ರಮವಾಗಿ ಸಿಎಂ…

Read More

ಕಾರ್ಕಳ: ಮರ್ಣೆ ಗ್ರಾಮ ಕಾಡುಹೊಳೆ ಸೇತುವೆಯ ಬಳಿಯ ಅಪಾಯಕಾರಿ ತಿರುವಿನಲ್ಲಿ ಅತಿವೇಗವಾಗಿ ಬಂದ ಕಾರೊಂದು ಬೈಕ್ ಹಾಗೂ ಸ್ಕೂಟರ್‌ಗೆ ಡಿಕ್ಕಿಯಾಗಿ ಮಕ್ಕಳು ಸಹಿತ 6 ಜನರಿಗೆ ಗಾಯಗಳಾದ ಘಟನೆ ಜೂನ್ 4ರಂದು ಭಾನುವಾರ ಸಂಜೆ ಸಂಭವಿಸಿದೆ. ಕಾರು ಚಾಲಕಿಯ ಅವಾಂತರದಿಂದ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಹಠಾತ್ ಬಲಕ್ಕೆ ತಿರುಗಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಸ್ಕೂಟರ್‌ಗೆ ಅಪ್ಪಳಿಸಿ ಮಕ್ಕಳಿಬ್ಬರು ಸೇರಿದಂತೆ 6 ಜನರಿಗೆ ಗಾಯಗಳಾಗಿದ್ದು ಈ ಪೈಕಿ ಓರ್ವ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಈ ಅಪಘಾತದಿಂದ ಮುದ್ರಾಡಿಯ ನಿವಾಸಿ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಮನೋಹರ ಪ್ರಸಾದ್(37) ಹಾಗೂ ಅವರ ಪತ್ನಿಗೆ ತೀವ್ರ ಗಾಯಗಳಾಗಿವೆ. ಅವರು ಮದುವೆ ಕಾರ್ಯಕ್ರಮಕ್ಕೆ ತೆರಳಿ ಮುದ್ರಾಡಿಗೆ ವಾಪಾಸು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವರ ಹಿಂದಿನಿಂದ ಸ್ಕೂಟರಿಗೆ ಡಿಕ್ಕಿ ಹೊಡೆದು ಸ್ಕೂಟರ್ ಚಲಾಯಿಸುತ್ತಿದ್ದ ಮುದ್ರಾಡಿ ನಿವಾಸಿ ಶರತ್ ಶೆಟ್ಟಿಗಾರ್ (46) ಹಾಗೂ ಅವರ ಪತ್ನಿ ಮಕ್ಕಳಿಬ್ಬರಿಗೆ ಗಾಯಗಳಾಗಿವೆ. ಕಾರನ್ನು…

Read More

ಬೆಳ್ತಂಗಡಿ :ನಡ ಗ್ರಾಮದ ದೇರ್ಲಕ್ಕಿಯ ಭೀಮಂಡೆ ಎಂಬಲ್ಲಿ ರಸ್ತೆ ವಿಚಾರದಲ್ಲಿ ಸಂಬಂಧಿಕರೇ ಹೊಡೆದಾಟ ನಡೆಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮಾರ್ಗ ದುರಸ್ತಿ ಮಾಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕತ್ತಿ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದು ಇತ್ತಂಡಗಳ 7 ಮಂದಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದೆರ್ಲಕ್ಕಿ ಸಮೀಪದ ಭೀಮಂಡೆ ಎಂಬಲ್ಲಿ ಕಳೆದ 32 ವರ್ಷಗಳಿಂದ ಮಾರ್ಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಾಗದ ತಕರಾರು ಇದ್ದು ಇಂದು ಬೆಳಗ್ಗೆ ಓಬಯ್ಯ ಗೌಡ (60)ಹಾಗೂ ಅವರ ತಮ್ಮಂದಿರಾದ ಕೃಷ್ಣಪ್ಪ ಗೌಡ(50), ಕೇಶವ ಗೌಡ (47)ಹಾಗೂ ಕೃಷ್ಣಪ್ಪ ಅವರ ಪತ್ನಿ ಭವಾನಿ (40) ಅವರು ಮನೆಗೆ ಹೋಗುವ ರಸ್ತೆಗೆ ಪಿಕಪ್‌ನಲ್ಲಿ ಚರಲು ತಂದು ಹಾಕಿ ದುರಸ್ತಿ ಮಾಡಲು ತೆರಳಿದ ಸಂದರ್ಭ ಅವರ ಸಂಬಂಧಿಕರಾದ ಪೂವಪ್ಪ ಗೌಡ(70) ಅವರ ಪತ್ನಿ ಲಲಿತ(65) ಹಾಗೂ ಅವರ ಮಗ ವಿಜಯ ಗೌಡ(38) ಇವರುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಲಲಿತಾ ಕಡೆಯವರು ಕತ್ತಿ…

Read More

ಬೆಂಗಳೂರು : ಕಾಂಗ್ರೆಸ್‌ ನ ಚುನಾವಣಾ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಸದ್ಯ ಈ ಗ್ಯಾರಂಟಿಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಎರಡೂ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿವೆ. ಅನ್ನ ಭಾಗ್ಯ ಯೋಜನೆ ಮಾರ್ಗಸೂಚಿ * ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ತಿಂಗಳಿಗೆ 35 ಕೆ.ಜಿ. ಆಹಾರಧಾನ್ಯ ಉಚಿತವಾಗಿ ಒದಗಿಸುತ್ತಿದೆ. * ಇನ್ನು ಮುಂದೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ದೊರೆಯಲಿದೆ. * ಈ ಕುಟುಂಬಗಳಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿ.ಯಂತೆ ಒಟ್ಟು 40 ಕೆ.ಜಿ., ಐವರು ಇದ್ದರೆ ಒಟ್ಟು 50 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ.ಯಂತೆ ಉಚಿತ ಅಕ್ಕಿ ಸಿಗಲಿದೆ. * ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ…

Read More

ಬೆಂಗಳೂರು : ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಮೆಜೆಸ್ಟಿಕ್ನ ಬಸ್ ನಿಲ್ದಾಣದ ಬಾಲಾಜಿ ಲಾಡ್ಜ್ನ ಮ್ಯಾನೇಜರ್ ಮಹೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 1400 ರೂ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹೆಣ್ಣು ಮಕ್ಕಳಿಗೆ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಓರ್ವ ಮಹಿಳೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Read More

ಚಿಕ್ಕಮಗಳೂರು: ನೂತನ ಶಾಸಕರ ಅಭಿನಂದನಾ ಕಾರ್ಯಕ್ರಮದ ವೇಳೆ ಯುವಕನೊಬ್ಬ ಬರ್ಬರ ಹತ್ಯೆಯಾಗಿರುವ ಆತಂಕಕಾರಿ ಘಟನೆ ತರೀಕೆರೆ ಪಟ್ಟಣದಲ್ಲಿ ನಿನ್ನೆ (ಜೂ.3) ನಡೆದಿದೆ.ವರುಣ್​ (28) ಕೊಲೆಯಾದ ಯುವಕ. ಶಾಸಕರ ಅಭಿನಂದನಾ ಸಮಾರಂಭ ಹಿನ್ನೆಲೆಯಲ್ಲಿ ಆರ್ಕೆಸ್ಟ್ರಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಹಾಡು ಬದಲಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಕಿಡಿಗೇಡಿಯೊಬ್ಬ ವರುಣ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮಂಜು ಹಾಗೂ ಸಂಜು ಎಂಬುವರಿಗೆ ಗಾಯಗಳಾಗಿವೆ. ಕಬಾಬ್ ಮೂರ್ತಿಯಿಂದ ಕೃತ್ಯ ಘಟನೆಯ ವಿವರಣೆಗೆ ಬರುವುದಾದರೆ, ತರೀಕೆರೆ ಶಾಸಕ ಜಿ.ಎಚ್​. ಶ್ರೀನಿವಾಸ್​ ಅವರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅಭಿನಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಆರ್ಕೆಸ್ಟ್ರಾ ತಂಡವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ವೇಳೆ ಹಾಡು ಬದಲಿಸುವ ವಿಚಾರಕ್ಕೆ ಆರೋಪಿ ಕಬಾಬ್ ಮೂರ್ತಿ ಹಾಗೂ ವರುಣ್ ಮಧ್ಯೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಉಂಟಾಗಿದೆ. ಹೊಟ್ಟೆ, ಪಕ್ಕೆಲುಬಿಗೆ ಇರಿತ ಇತ್ತ ಆರ್ಕೆಸ್ಟ್ರಾ ಮುಗಿಯುತ್ತಿದ್ದಂತೆ ಆಕ್ರೋಶಭರಿತ ಕಬಾಬ್​ ಮೂರ್ತಿ, ವರುಣ್​ನ…

Read More

ದೆಹಲಿ: ಎರಡು ಅಥವಾ ಅದಕ್ಕಿಂತ ಹೆಚ್ಚು ಸಕ್ರಿಯ ಔಷಧ ಸಂಯೋಜನೆಯನ್ನು ಒಳಗೊಂಡಿರುವ 14 ಕಾಕ್‌ಟೈಲ್ ಅಥವಾ ಸ್ಥಿರ-ಡೋಸ್ ಸಂಯೋಜನೆಯ(ಎಫ್‌ಡಿಸಿ) ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ಸರ್ಕಾರ ನಿಷೇಧಿಸಿದೆ. ಏನಿದು ಕಾಕ್​ಟೈಲ್​ ಔಷಧಿ? ಸ್ಥಿರ-ಡೋಸ್ ಸಂಯೋಜನೆಗಳು(FDCs) ಎಂದರೆ ಮಾತ್ರೆಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಔಷಧಗಳನ್ನು ತರ್ಕಬದ್ಧವಾಗಿ ಸಂಯೋಜಿಸುವ ಔಷಧಿಗಳಾಗಿವೆ ಮತ್ತು ಇವುಗಳನ್ನು ಕಾಕ್ಟೈಲ್ ಔಷಧಿಗಳೆಂದೂ ಉಲ್ಲೇಖಿಸಲಾಗುತ್ತದೆ. ಏಕೆ ಬ್ಯಾನ್​ ?ತಜ್ಞರ ಸಮಿತಿಯು, ಬ್ಯಾನ್​ ಮಾಡಿರುವ ಎಫ್‌ಡಿಸಿಗಳು ತರ್ಕಬದ್ಧ ಸಂಯೋಜನೆಯನ್ನು ಹೊಂದಿಲ್ಲ.ಇವು ಮನುಷ್ಯರಿಗೆ ಅಪಾಯವನ್ನು ತಂದೊಡ್ಡಬಹುದು. ಸಾರ್ವಜನಿಕ ಹಿತಾಸಕ್ತಿಗಾಗಿ ಈ FDC ಗಳ ತಯಾರಿಕೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅವಶ್ಯಕವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. 3 ಕೋಟಿ ಪ್ಯಾಕೇಜ್ ಗಿಟ್ಟಿಸಿದ ಎಲ್‌ಪಿಯು ಪದವೀಧರ! ನೆಗಡಿ, ಕೆಮ್ಮು, ಉಸಿರಾಟದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಮುಖ್ಯವಾಗಿ ಬಳಸಲಾಗುವ 14 ಫಿಕ್ಸೆಡ್ ಡೋಸ್ ಔಷಧಿಗಳನ್ನು ನಿಷೇಧಿಸುವುದರ ಜತೆಗೆ ಸುಮಾರು 10 ಫಿಕ್ಸೆಡ್ ಡೋಸ್ ಕಾಂಬಿನೇಷನ್ ಕೆಮ್ಮಿನ ಸಿರಪ್‌ಗಳನ್ನು ಸರ್ಕಾರ ನಿಷೇಧಿಸಿದೆ.

Read More