ನೌಮಿಯಾ: ಫ್ರೆಂಚ್ ಭೂಪ್ರದೇಶ ನ್ಯೂ ಕ್ಯಾಲೆಡೋನಿಯಾದ ಲಾಯಲ್ಟಿ ಐಲ್ಯಾಂಡ್ಸ್‌ನ ಆಗ್ನೇಯ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಹಿನ್ನಲೆಯಲ್ಲಿ ದಕ್ಷಿಣ ಪೆಸಿಫಿಕ್ ರಾಷ್ಟ್ರಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ವನುವಾಟು, ಫಿಜಿ ಮತ್ತು ನ್ಯೂ ಕ್ಯಾಲೆಡೋನಿಯಾಗಳಿಗೆ ಸಂಭಾವ್ಯ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ (ಪಿಟಿಡಬ್ಲ್ಯೂಸಿ) ತಿಳಿಸಿದೆ.ಭೂಕಂಪನದ ಕೇಂದ್ರಬಿಂದು ಲಾಯಲ್ಟಿ ಐಲ್ಯಾಂಡ್ಸ್‌ನ ಆಗ್ನೇಯ ಭಾಗದಲ್ಲಿ 38 ಕಿಮೀ (24 ಮೈಲಿ) ಆಳದಲ್ಲಿ ಕಂಡುಬಂದಿದೆ. ಇದು ದಕ್ಷಿಣ ಪೆಸಿಫಿಕ್ ರಾಷ್ಟ್ರಗಳಿಗೆ ಸುನಾಮಿ ಆತಂಕ ತಂದೊಡ್ಡುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಪ್ರಾಥಮಿಕ ಭೂಕಂಪನ ಮಾಪನದ ಅಧ್ಯಯನ ಆಧಾರದಲ್ಲಿಸಂಜೆ 5 ಗಂಟೆ ಸುಮಾರಿಗೆ ನ್ಯೂಜಿಲ್ಯಾಂಡ್‌ನ ನಾರ್ತ್ ಕೇಪ್ ಸುತ್ತಲಿನ ಪ್ರದೇಶಗಳಿಗೆ ಅಲೆಗಳು ತಲುಪುವ ಸಾಧ್ಯತೆ ಇದೆ. ಮೊದಲ ಸುನಾಮಿ ಚಟುವಟಿಕೆ ಅಷ್ಟೊಂದು ಪ್ರಬಲವಾಗಿರುವುದಿಲ್ಲ ಅಪಾಯವಿರುವ ಕರಾವಳಿ ಪ್ರದೇಶಗಳಲ್ಲಿನ ಜನರು ಜಾಗರೂಕತೆಯಿಂದ ಇರಬೇಕು ನ್ಯೂಜಿಲ್ಯಾಂಡ್ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆ ನೀಡಿದೆ.
Author: main-admin
ನವದೆಹಲಿ: ಹಿಂಡೆನ್ ಬರ್ಗ್ ಪ್ರಕರಣದಲ್ಲಿ ಅದಾನಿ ಗ್ರೂಪ್’ಗೆ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಕ್ಲೀನ್ ಚಿಟ್ ನೀಡಿದೆ ಎಂದು ತಿಳಿದು ಬಂದಿದೆ. ಹಿಂಡೆನ್ಬರ್ಗ್ ಪ್ರಕರಣದ ತನಿಖೆಗಾಗಿ ನೇಮಿಸಲಾದ ಸಮಿತಿಯ ವರದಿಯು ಸಾರ್ವಜನಿಕವಾಗಿದ್ದು, ಅದಾನಿ ಗ್ರೂಪ್ ಷೇರುಗಳ ಬೆಲೆಗಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.ಇನನು ಸಮಿತಿಯ ವರದಿಯ ಪ್ರಕಾರ, ಅದಾನಿ ಗ್ರೂಪ್ ಕಂಪನಿಗಳಲ್ಲಿ ಅಕ್ರಮ ಹೂಡಿಕೆಯ ಯಾವುದೇ ಪುರಾವೆಗಳಿಲ್ಲ, ಸಂಬಂಧಿತ ಪಕ್ಷದಿಂದ ಹೂಡಿಕೆಯಲ್ಲಿ ಯಾವುದೇ ನಿಯಮಗಳನ್ನ ಉಲ್ಲಂಘಿಸಲಾಗಿಲ್ಲ. ಅದಾನಿ ಗ್ರೂಪ್ ಪ್ರಯೋಜನಗಳನ್ನ ಪಡೆದ ಮಾಲೀಕರ ಹೆಸರುಗಳನ್ನ ಬಹಿರಂಗಪಡಿಸಿದೆ ಮತ್ತು ಅದಾನಿ ಗ್ರೂಪ್ ನೀಡಿದ ಮಾಹಿತಿಯನ್ನ ಸೆಬಿ ನಿರಾಕರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಸಮಿತಿ ಹೇಳಿದೆ.
ಬೆಳ್ಳಾರೆ: ತ೦ದೆ – ಮಗನ ಹೊಡೆದಾಟದಲ್ಲಿಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಮೃತಪಟ್ಟ ಘಟನೆ ನಡೆದಿದೆ. ಅಮರಮುಡ್ಡೂರು ಗ್ರಾಮದ ಕುಕ್ಕುಜಡ್ಕದಲ್ಲಿ ಕಳೆದ ಒಂದು ವಾರದ ಹಿಂದೆ ಘಟನೆ ನಡೆದಿದ್ದು ಕಿಟ್ಟು ಹಾಗೂ ಮಗ ಹರ್ಷಿತ್ ಹೊಡೆದಾಟ ನಡೆಸಿಕೊಂಡಿದ್ದರು. ಹಳೆಯ ದ್ವೇಷದ ಕಾರಣದಿಂದ ಕಿಟ್ಟುರವರ ಮೊದಲನೆ ಹೆ೦ಡತಿಯ ಮಗ ಹರ್ಷಿತ್ ಎಂಬಾತ ಮನೆಗೆ ಬ೦ದು ಅಡಿಕೆ ಮರದಸಲಾಕೆಯಿಂದ ತಂದೆಗೆ ಹೊಡೆದಿದ್ದ . ಗಾಯಗೊಂಡಿದ್ದ ಕಿಟ್ಟುರವರನ್ನು ಆಂಬ್ಯುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ನಿತ್ಯಾನ೦ದರವರು ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಚ್ಚಿ: ತನ್ನನ್ನು ಮದುವೆಯಾಗುವಂತೆ ವಿವಾಹಿತ ಮೇಕಪ್ ಆರ್ಟಿಸ್ಟ್‌ವೊಬ್ಬಳನ್ನು ವಿವಾಹಿತ ಪ್ರಿಯಕರ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಾಡ್ನಲ್ಲಿರುವ ಲಾಡ್ಜ್‌ವೊಂದರಲ್ಲಿ ನಡೆದಿದೆ. ಉದ್ಮಾ ಪಂಚಾಯಿತಿಯ ಮುಕ್ಕುನೋಥ್ ನಿವಾಸಿ ಪಿ.ಬಿ. ದೇವಿಕಾ (34) ಕೊಲೆಯಾದ ಮಹಿಳೆ. ಹಂತಕ ಪ್ರಿಯಕರ ಸತೀಶ್ (36) ಕೊಲೆ ಮಾಡಿದ ಬಳಿಕ ಲಾಡ್ಜ್ ರೂಮ್ ಲಾಕ್ ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿ ಸತೀಶ್ ಮುಲ್ಲಿಯಾರ್ ಗ್ರಾಮ ಪಂಚಾಯಿತಿಯ ಬೊವಿಕನಮ್ ಮೂಲದ ನಿವಾಸಿ. ಈತ ಕನ್ಹಂಗಾಡ್ ಪಟ್ಟಣದಲ್ಲಿ ಖಾಸಗಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದಾನೆ. ಈಗಾಗಲೇ ಈತನಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ದೇವಿಕಾಗೂ ಮದುವೆ ಆಗಿತ್ತು. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಗೆ ಡಿವೋರ್ಸ್ ನೀಡಿ ತನ್ನೊಂದಿಗೆ ಇರುವಂತೆ ದೇವಿಕಾ ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿರುವುದಾಗಿ ಸತೀಶ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ತಿಂಗಳಿನಿಂದ ಸತೀಶ್ ಲಾಡ್ಜ್ನಲ್ಲಿ ವಾಸವಿದ್ದ. ಕನ್ಹಂಗಾಡ್ನಿಂದ 20 ಕಿಮೀ ದೂರದಲ್ಲಿರುವ ತನ್ನ ಊರಿನಿಂದ ದೇವಿಕಾ ಲಾಡ್ಜ್ಗೆ…
ಪುತ್ತೂರು: ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರ ಭೇಟಿ ಮಾಡುವ ಸಲುವಾಗಿ ಇಂದು ಪುತ್ತೂರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭೇಟಿ ನೀಡಿ ಮಾತನಾಡಿಸಲಿದ್ದಾರೆ. ಇದೇ ವೇಳೆ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯತ್ನಾಳ್ ಅವರು ಪುತ್ತಿಲರಿಗೆ ದೂರವಾಣಿ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಇನ್ನು ಪೊಲೀಸರ ದೌರ್ಜನ್ಯ ವಿರುದ್ದ ಪೊಲೀಸರ ದೌರ್ಜನ್ಯ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.ಪೊಲೀಸರ ದೌರ್ಜನ್ಯ ಪುತ್ತೂರು ಡಿವೈಎಸ್‌ಪಿ ವೀರಯ್ಯ ಹೀರೇಮಠ್ ವಿರುದ್ಧ ಇಲಾಖೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ.ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಿ ಅದಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಹಿನ್ನಲೆಯಲ್ಲಿ 9 ಜನ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಒಂಬತ್ತು ಮಂದಿ ಆರೋಪಿಗಳ ವಿರುದ್ದ ಪೊಲೀಸರು ದೌರ್ಜನ್ಯವೆಸಗಿರುವ ಚಿತ್ರ ವ್ಯಾಪಕವಾಗಿ ವೈರಲ್ ಆಗಿತ್ತು. ಇದಲ್ಲದೇ ದೌರ್ಜನ್ಯಕ್ಕೊಳಗಾದ ಅವಿನಾಶ್ ನೀಡಿದ ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದು…
ಬೆಂಗಳೂರು : ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಕಾರಣ, ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತವಾರಣವಿರಲಿದೆ. ಉಳಿದ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಿರಲಿದೆ. ಮಡಿಕೇರಿ ಜಿಲೆಯಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ಬೆಂಗಳೂರು : ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಮೇ 20ರಂದು ಮಧ್ಯಾಹ್ನ 12.30 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಭಾಗಿಯಾಗುವಂತೆ ವಿವಿಧ ರಾಜ್ಯಗಳ ಬಿಜೆಪಿಯೇತರ ಮುಖ್ಯಮಂತ್ರಿಗಳು ಹಾಗೂ ಪಕ್ಷಗಳ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ನೀಡಿದ್ದಾರೆ. ಸಿದ್ದರಾಮಯ್ಯ ಅವರ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೆಲ ಸಚಿವರು ಸಹ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞೆ ಸ್ವೀಕರಿಸಲಿದ್ದು, ಲಕ್ಷಕ್ಕೂ ಹೆಚ್ಚಿನ ಮಂದಿ ಸಾಕ್ಷಿಯಾಗಲಿರುವ ಬೃಹತ್ ಕಾರ್ಯಕ್ರಮಕ್ಕೆ ಗುರುವಾರದಿಂದಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಕುರ್ಚಿಗಳು ಮತ್ತು ವೇದಿಕೆಯ ನಿರ್ಮಾಣ ಸಾಮಗ್ರಿ ತಂದಿಡಲಾಗಿದೆ. ಜತೆಗೆ ಮ್ಯಾಟ್ ಅಳವಡಿಕೆಯನ್ನೂ ಮಾಡಲಾಗುತ್ತಿದೆ. ಶುಕ್ರವಾರದಿಂದಲೇ ವೇದಿಕೆ ಜೋಡಿಸುವ ಕಾರ್ಯ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ರೀಡಾಂಗಣದಲ್ಲಿ ಸುಮಾರು 35,000 ಸೀಟುಗಳ ವ್ಯವಸ್ಥೆ ಇದೆ. ಇದರಲ್ಲಿ ಗಣ್ಯರು, ಜನಪ್ರತಿನಿಧಿಗಳು ಹಾಗೂ…
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲು ಅದು ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳೇ ಕಾರಣ ಎನ್ನಲಾಗುತ್ತಿದೆ. ಈ ಮಧ್ಯೆ ಆ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಹಲವು ಜೋಕುಗಳು ಹರಿದಾಡುತ್ತಿವೆ. ಕಾಂಗ್ರೆಸ್ ‘ಗ್ಯಾರಂಟಿ’ ಹೆಸರಿನಲ್ಲಿ ನೀಡಿದ್ದ ಐದು ಪ್ರಮುಖ ಆಶ್ವಾಸನೆಗಳ ಪೈಕಿ 200 ಯುನಿಟ್ ಉಚಿತ ವಿದ್ಯುತ್ ಕೂಎ ಪ್ರಮುಖವಾದುದು. ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಹಲವರು ನಾವಿನ್ನು ವಿದ್ಯುತ್ ಬಿಲ್ ಪಾವತಿಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳಲಾರಂಭಿಸಿದ್ದಾರೆ. ಇವೆಲ್ಲದರ ನಡುವೆ ಕಾಂಗ್ರೆಸ್ ಘೋಷಿಸಿದ್ದ ‘ಗ್ಯಾರಂಟಿ’ಗಳು ಗ್ಯಾರಂಟಿ ಸಿಗುತ್ತವೆಯಾ? ಅವು ಜಾರಿಗೆ ಬರಲಿವೆಯಾ? ಕೊಡಲು ಸಾಧ್ಯವೇ? ಪಕ್ಷದವರು ಮಾತು ಉಳಿಸಿಕೊಳ್ಳುವರೇ? ಎಂಬೆಲ್ಲ ಮಾತುಗಳೂ ಕೇಳಿ ಬರಲಾರಂಭಿಸಿವೆ. ಅವೆಲ್ಲವಕ್ಕೂ ಸ್ಪಷ್ಟನೆ ಎಂಬಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. ‘ಟೀಮ್ ಕಾಂಗ್ರೆಸ್ ಕರ್ನಾಟಕದ ಜನರ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯವನ್ನು ತರಲು ಬದ್ಧವಾಗಿದೆ. ಆರೂವರೆ ಕೋಟಿ ಕನ್ನಡಿಗರಿಗೆ ಭರವಸೆ ನೀಡಿದ ಐದೂ ‘ಗ್ಯಾರಂಟಿ’ಗಳನ್ನು ನಾವು ಜಾರಿಗೆ ತರುತ್ತೇವೆ’ ಎಂದು ಮಲ್ಲಿಕಾರ್ಜುನ ಖರ್ಗೆ…
ನವದೆಹಲಿ: ಜನಪ್ರಿಯ ಕ್ರೀಡೆಗಳಾದ ಕರ್ನಾಟಕದ ಕರಾವಳಿಯ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಹಾಗು ಮಹಾರಾಷ್ಟ್ರ ಎತ್ತಿನ ಬಂದಿ ಓಟಕ್ಕೆ ಅನುಮತಿ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಇನ್ನುಮುಂದೆ ಕರ್ನಾಟಕದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವು ಯಾವುದೇ ಅಡೆ-ತಡೆಗಳಿಲ್ಲದೆ ನಡೆಯಲಿದೆ ಇಂಥ ಕ್ರೀಡೆಗಳಲ್ಲಿ ಪ್ರಾಣಿಗಳನ್ನು ಹಿಂಸಿಸಲಾಗುತ್ತದೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠವು, ” ಶಾಸಕಾಂಗವು ಜಲ್ಲಿಕಟ್ಟು ಕ್ರೀಡೆಯನ್ನು ತಮಿಳುನಾಡು ರಾಜ್ಯದ ಸಾಂಸ್ಕೃತಿಕ ಮತ್ತು ಪರಂಪರೆಯ ಭಾಗವಾಗಿದೆ ಎಂದು ಘೋಷಿಸಿದೆ. ಹೀಗಿರುವಾಗ ನ್ಯಾಯಾಂಗವು ವಿಭಿನ್ನ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟವಾಗಿ ತಿಳಿಸಿತು. ಪ್ರಾಣಿ ಕಲ್ಯಾಣ ಮಂಡಳಿ, ಪೆಟಾ), ಕ್ಯುಪಾ , ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಸೇಶನ್ಸ್ ಮತ್ತು ಅನಿಮಲ್ ಇಕ್ವಾಲಿಟಿ, ಯೂನಿಯನ್ ಆಫ್ ಇಂಡಿಯಾ ಮತ್ತು ತಮಿಳುನಾಡು ಸೇರಿದಂತೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಪ್ರಾಣಿಗಳ ಮೇಲಿನ ಕ್ರೌರ್ಯ…
ಉಳ್ಳಾಲ: ಜನರು ತಮ್ಮ ಅದೃಷ್ಟ ಪರೀಕ್ಷೆಗೆ ವಿವಿಧ ಕಸರತುಗಳನ್ನು ಮಾಡುವುದು ಸಹಜ ಕೆಲವರು ಅದೃಷ್ಟದಾಟದಲ್ಲಿ ತೊಡಗಿಸಿಕೊಂಡು ಹಣ ಕಳೆದುಕೊಂಡವರೂ ಇದ್ದಾರೆ. ಲಕ್ಷಾಂತರ ಜನರು ದಿಡೀರ್ ಶ್ರೀಮಂತರಾಗಬೇಕು ಎಂದು ಲಾಟರಿ ತೆಗೆದು ತಮ್ಮ ಅದೃಷ್ಟ ಸಂಖ್ಯೆಗೆ ಬಂಪರ್ ಬಹುಮಾನ ಬಂದಿದೆಯಾ ಎಂದು ಜಾತಕಪಕ್ಷಿಯಂತೆ ಕಾಯುತ್ತಾರೆ. ಆದರೆ ಇಲ್ಲೊಂದು ಕಡೆ ಲಾಟರಿಯಲ್ಲಿ ಬಂಪರ್ ಬಹುಮಾನ ಬಂದರೂ, ವಿಜೇತ ಅದೃಷ್ಟವಂತ ಈವರೆಗೂ ಬಂಪರ್ ಬಹುಮಾನ ಬಂದ ಲಾಟರಿ ಏಜೆನ್ಸಿಯನ್ನು ಸಂಪರ್ಕಿಸಿಲ್ಲ. ಈ ಲಾಟರ ಏಜೆನ್ಸಿಯವರು ಬಂಪರ್ ಬಹುಮಾನ ಬಂದ ವಿಜೇತನಿಗಾಗಿ ಕಾಯುತ್ತಿದ್ದಾರೆ. ತಲಪಾಡಿಯಲ್ಲಿರವ ಅಮಲ್ ಕನಕದಾಸ ಅವರಿಗೆ ಸೇರಿದ ತಲಪಾಡಿಯ ಜಯಮ್ಮ ಲಾಟರಿ ಏಜೆನ್ಸಿಯಲ್ಲಿ ಮಾರಾಟವಾದ ಕೇರಳ ರಾಜ್ಯದ ಅಕ್ಷಯ ಲಾಟರಿಯ ಬಂಪರ್ ಬಹುಮಾನ ಬಂದಿದ್ದು, ಕೇರಳ ಗಡಿ ಭಾಗವಾಗಿರುವ ಕರ್ನಾಟಕದ ಮಂಗಳೂರು ಸೇರಿದಂತೆ ಮಂಜೇಶ್ವರರ ಸೇರಿದಂತೆ ಸುತ್ತಮುತ್ತಲಿನ ಗ್ರಾಹಕರನ್ನು ಹೊಂದಿರುವ ಈ ಏಜೆನ್ಸಿಯಲ್ಲಿ ಮಾರಟವಾದ ಮೇ 7ರ ಅಕ್ಷಯಾ ಲಾಟರಿ ಎ.ಟಿ. 317545 ಟಿಕೆಟ್‍ಗೆ ಎಪ್ಪತ್ತು ಲಕ್ಷ ಬಂಪರ್ ಬಹುಮಾನ ಬಂದಿದ್ದು, ಈ ಟಿಕೆಟ್ ಪಡದುಕೊಂಡ…










