ಪಣಜಿ: ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಗೋವಾದಲ್ಲಿ ನಡೆಯುವ ಶಾಂಘಾಯ್ ಸಹಕಾರ ಸಂಘದ ಸಮಾವೇಶದಲ್ಲಿ (ಎಸ್‌ಸಿಒ) ಪಾಲ್ಕೊಳ್ಳಲು ಗುರುವಾರ ಆಗಮಿಸಿದ್ದಾರೆ. ಗೋವಾಕ್ಕೆ ಬಂದಿಳಿದ ಬಳಿಕ ಸಲಾಮ್ ಫಮ್ ಗೋವಾ ಎಂದು ಟ್ವೀಟ್ ಮಾಡಿದ್ದು, ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಝಾಂಗ್ ಮಿಂಗ್ ಜತೆಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮಾತುಕತೆ ನಡೆಸಿದ್ದಾರೆ. ಇನ್ನು ಭಾರತ ಆಗಮನಕ್ಕೂ ಮುನ್ನ ಟ್ವೀಟ್ ಮಾಡಿದ ಬಿಲಾವಲ್ ಭುಟ್ಟೊ, ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನನ್ನ ನಿರ್ಧಾರವು ಶಾಂಘಾಯ್ ಸಹಕಾರ ಒಕ್ಕೂಟದ ಬಗ್ಗೆ ಪಾಕಿಸ್ಥಾನದ ಬದ್ಧತೆಯನ್ನು ತೋರಿಸುತ್ತದೆ ಎಂದು ಬರೆದು ಕೊಂಡಿದ್ದಾರೆ.
Author: main-admin
ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್(Transgender Bodybuilder) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ಪ್ರವೀಣ ನಾಥ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಪ್ರವೀಣ್ ನಾಥ್ ಅವರು ನಗರದ ಉಪನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪ್ರವೀಣ್ ಈ ವರ್ಷ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ಕೆಲ ಮಾಧ್ಯಮಗಳ ವರದಿ ಪ್ರಕಾರ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿರಲಿಲ್ಲ ಎನ್ನಲಾಗಿತ್ತು, ಆದರೆ ಈ ವರದಿಗಳನ್ನು ಪ್ರವೀಣ್ ನಿರಾಕರಿಸಿದ್ದರು. ಪ್ರವೀಣ್ ರಿಶಾನಾ ಆಯೇಶು ಅವರನ್ನು ಮದುವೆಯಾಗಿದ್ದರು, ಇವರು ಮಿಸ್ಟರ್ ಕೇರಳ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ರಿಶಾನಾ ಮಿಸ್ ಮಲಬಾರ್ ಪಟ್ಟ ಗೆದ್ದಿದ್ದಾರೆ. ಆರಂಭದಲ್ಲಿ ಇಬ್ಬರ ಮನೆಯವರು ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ನಂತರ ಅವರು ಈ ಮದುವೆಗೆ ಒಪ್ಪಿದ್ದರು.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಹುಟ್ಟಿದ್ದು ಹೆಣ್ಣಾದರೂ ಗಂಡಾಗಿ ಇರಬೇಕೆಂಬ ಆಸೆ. ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು, ಬಳಿಕ ತಮಗೆ ತಾವು ಸಮಾಧಾನ…
ಮಂಗಳೂರು : ಕಳವು ಮಾಡಿದ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದ ಕೇರಳದ ನಾಲ್ವರನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಎರ್ನಾಕುಳಂ ಜಿಲ್ಲೆಯ ಆಲುವಾ ನಿವಾಸಿ ರಿಯಾಝ್ (23), ಅದಿಪಿಲಿಕವಮ್ ಗ್ರಾಮದ ತಸ್ಸೀನ್ ಟಿ. ಎಚ್. ಯಾನೆ ತಸ್ಸೀರ್(25), ಕಲ್ಲಿಕೋಟೆಯ ತಾಯದಿಮ್ ಪರಂಬುವಿನ ಎಂ.ಕೆ. ಕ್ರಿಸ್ಟೋಪರ್ (30) ಮತ್ತು ಎರ್ನಾಡ್ ಗ್ರಾಮದ ಅಜಿತ್ ಕೆ. (22) ಎಂದು ಗುರುತಿಸಲಾಗಿದೆ. ಪಾಂಡೇಶ್ವರ ಎಸ್‌ಐ ಮನೋಹರ್ ಪ್ರಸಾದ್ ಪಿ. ಸಂಜೆ ಸಿಬಂದಿ ಜತೆ ಗಸ್ತು ನಿರತರಾಗಿದ್ದ ಸಂದರ್ಭ ಬಂದರು ದಕ್ಷಿಣ ಪರಿಸರದಲ್ಲಿ ಒಂದು ಸಿಲ್ವರ್ ಬಣ್ಣದ ಕಾರಿನಲ್ಲಿ ನಾಲ್ಕು ಮಂದಿ ಯುವಕರು ಸಂಶಯಾಸ್ಪದ ರೀತಿಯಲ್ಲಿ ಇರುವ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಇನ್ನು ಈ ಸಂದರ್ಭ ಆರೋಪಿಗಳು ಈ ಕಾರನ್ನು ವಾರದ ಹಿಂದೆ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಾರನ್ನು ಕೇರಳದಲ್ಲಿ ಕಳವು ಮಾಡಿ ಮಂಗಳೂರಿನಲ್ಲಿ ಮಾರಾಟಕ್ಕೆಂದು ತಂದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.
ಉತ್ತರಪ್ರದೇಶ : ಉತ್ತರಪ್ರದೇಶದ ಕೊಲೆ ಸುಲಿಗೆ ಕಿಡ್ನ್ಯಾಪ್ ಕೇಸ್‌ನಲ್ಲಿ ಭಾಗಿಯಾಗಿದ್ದ ಉತ್ತರಪ್ರದೇಶದ ಮತ್ತೊಬ್ಬ ಗ್ಯಾಂಗ್ ಸ್ಟರ್ ಅನಿಲ್ ದುಜಾನಾನನ್ನು ಎನ್‌ಟಿಎಫ್‌ನಿಂದ ಎನ್ಕೌಂಟರ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ, ಹಲವಾರು ಪೋಲೀಸರು ಸುದ್ದಿಗಾರರೊಂದಿಗೆ ಸಂವಾದ ನಡೆಸುತ್ತಿದ್ದಾಗ ಗುಂಡು ಹಾರಿಸಲಾಯಿತು. ಘಟನೆಯ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆಸ್ಪತ್ರೆಗೆ ತಪಾಸಣೆಗೆಂದು ಕರೆದೊಯ್ಯುತ್ತಿದ್ದಾಗ ದಾಳಿ ನಡೆಸಲಾಗಿದೆ.ಇದು ಎದುರಾಳಿ ಗ್ಯಾಂಗ್‌ನ ಕೆಲಸ ಎಂದು ಮೂಲಗಳು ಸುದ್ದಿ ತಿಳಿಸಿವೆ.
ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ ಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51 ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್ ಮತ್ತು ಗಣ್ಯ ಅತಿಥಿಗಳು ಮಂಗಲಸೂತ್ರವನ್ನು ವಿತರಿಸಿದರು. 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವೇದ, ಮಂತ್ರ ಘೋಷ ಪಠಣದೊಂದಿಗೆ ವರನು ವಧುವಿಗೆ ಮಂಗಲಸೂತ್ರಧಾರಣೆ ಮಾಡಿ, ಆಯಾ ಜಾತಿ ಸಂಪ್ರದಾಯದಂತೆ ಮದುವೆಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.
ವಿಧಾನಸಭಾ ಚುನಾವಣೆಗೆ ಮೇ 10 ರ ಬುಧವಾರದಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 8, 9, 10 ಮತ್ತು 13ರಂದು ಮದ್ಯ ಮಾರಾಟ ಬಂದ್ ಆಗಲಿದ್ದು, ಮೇ 8ರ ಬೆಳಿಗ್ಗೆ 6 ಗಂಟೆಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿದ್ದು, ಮೇ 10ರ ಮಧ್ಯರಾತ್ರಿ 12 ಗಂಟೆಯವರೆಗೆ ಇದು ಮುಂದುವರಿಯಲಿದೆ.ಎಣಿಕೆ ದಿನವಾದ ಮೇ 13 ರಂದು ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮದ್ಯದಂಗಡಿಗಳು ಬಂದ್ ಇರಲಿದ್ದು, ಒಂದು ವೇಳೆ ಮರು ಮತದಾನ ನಡೆದ ಸಂದರ್ಭದಲ್ಲಿ ಅಲ್ಲಿಗೂ ಸಹ ಈ ಆದೇಶ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ತುಮಕೂರು;ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ರಿಹರ್ಸಲ್ ವೇಳೆ ಅನಾಹುತ ಸಂಭವಿಸಿದೆ. ಮೇ.5ಕ್ಕೆ ತುಮಕೂರಿಗೆ ಮೋದಿ ಆಗಮಿಸಲಿದ್ದಾರೆ. ಆದ್ದರಿಂದ ಎರಡು ದಿನಗಳ ಮುಂಚಿತವಾಗಿ ಎಸ್‌ಪಿಜಿ ತಂಡದೊಂದಿಗೆ ಹೆಲಿಕಾಪ್ಟರ್ ರಿಹಸರ್ಲ್ ನಡೆಸುತ್ತಿದ್ದರು. ಈ ವೇಳೆ ತುಮಕೂರು ನಗರ ಡಿವೈಎಸ್ ಪಿ ಶ್ರೀನಿವಾಸ್ ಕಾನ್ ವೇ ರಿಹಸರ್ಲ್ ಪರಿಶೀಲನೆ ನಡೆಸುತ್ತಿದ್ದರು.ಹೆಲಿಕಾಪ್ಟರ್ ನ ಗಾಳಿಯ ರಭಸಕ್ಕೆ ತುಮಕೂರು ವಿಶ್ವವಿದ್ಯಾಲಯದ ಗೇಟ್ ಅಲುಗಾಡಿ ಪಕ್ಕದಲ್ಲಿಯೇ ನಿಂತುಕೊಂಡಿದ್ದ ಡಿವೈಎಸ್‌ಪಿ ಶ್ರೀನಿವಾಸ್ ತಲೆಗೆ ಬಡಿದಿದೆ. ಘಟಮೆಯಲ್ಲಿ ತೀವ್ರವಾಗಿ ಗಾಯಗೊಂಡು ಡಿವೈಎಸ್‌ಪಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ತುಮಕೂರು ಯುನಿವರ್ಸಿಟಿ ಹೆಲಿಪ್ಯಾಡ್ ಬಳಿ ಹೆಲಿಕಾಪ್ಟರ್ ಲ್ಯಾಂಡಿಂಗ್ ನಿಂದ 100 ಮೀಟರ್ ದೂರದಲ್ಲಿ ಡಿವೈಎಸ್ ಪಿ ಶ್ರೀನಿವಾಸ್ ನಿಂತಿದ್ದರು. ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಬಿಸಿದ ಗಾಳಿ ರಭಸಕ್ಕೆ ಯುನಿವರ್ಸಿಟಿ ಗೇಟ್ ಅಲುಗಾಡಿ ಪಕ್ಕದಲ್ಲಿಯೇ ಇದ್ದ ಶ್ರೀನಿವಾಸ್ ತಲೆಗೆ ಬಡಿದಿದೆ. ಇದರಿಂದ ಗಾಯಗೊಂಡಿದ್ದ ಶ್ರೀನಿವಾಸ್ ಅವರನ್ನ ಕೂಡಲೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿವೈಎಸ್ಪಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅವರಿಗೆ ವೈದ್ಯರು ವಿಶ್ರಾಂತಿ…
ಮಂಗಳೂರು: ಬೆಸಿಗೆ ಜೊತೆಗೆ ಮಳೆ ಬಾರದ ಕಾರಣ ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ ತೀವ್ರ ಕುಸಿತಗೊಂಡಿದ್ದು ಇದೀಗ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಲಾರಂಭಿಸಿದೆ. ಈ ಹಿನ್ನಲೆ (ಮೇ 4) ರಿಂದ ಮಂಗಳೂರು ನಗರ ವ್ಯಾಪ್ತಿಯಲ್ಲಿ ರೇಷನಿಂಗ್ ಮೂಲಕ ನೀರಿನ ಪೂರೈಕೆ ಮಾಡಲಾಗುವುದು ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ತುಂಬೆ ಡ್ಯಾಂನಲ್ಲಿ ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ (ಮಂಗಳೂರು ಉತ್ತರ) ಭಾಗಕ್ಕೆ ʻಪರ್ಯಾಯ ದಿನʼಗಳಲ್ಲಿ ನೀರು ಬಿಡಲು ಸೂಚಿಸಲಾಗಿದೆ. ಈ ಸೂಚನೆಯಂತೆ ದಿನಾಂಕ 05- 05- 2023 ರಂದು ಮಂಗಳೂರು ನಗರ ಉತ್ತರಕ್ಕೆ, ದಿನಾಂಕ 06-05-2023 ರಂದು ಮಂಗಳೂರು ನಗರ ದಕ್ಷಿಣ ಹೀಗೆ ಕ್ರಮಾನುಗತವಾಗಿ ಈ ಮೇಲೆ ತಿಳಿಸಿದಂತೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ.ಲಭ್ಯವಿರುವ ನೀರನ್ನು ಈ ರೀತಿಯಾಗಿ ಪೂರೈಕೆ ಮಾಡುವುದು ಅನಿವಾರ್ಯವಾಗಿದ್ದು ಸಾರ್ವಜನಿಕರು ನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.
ಕುಂದಾಪು: ಸರ್ವೀಸ್ ಸ್ಟೇಷನ್‌ನಿಂದ ಹೆದ್ದಾರಿಗೆ ಬಂದು ಯೂ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್‌ನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಗಾಯಗೊಂಡಿರುವ ಘಟನೆ ಕುಂದಾಪುರ ತಾಲೂಕಿನ ತಲ್ಲೂರು ಸಮೀಪ ಪ್ರವಾಸಿ ಪೆಟ್ರೋಲ್ ಬಂಕ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ನಡೆದಿದ್ದು, ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಕುಮುಟಾ ಡಿಪೋದ ಕೆಎಸ್ಆರ್‌ಟಿಸಿ ಬಸ್ ಚಾಲಕ ಅಶೋಕ ಎಂಬುವರು ತಲ್ಲೂರಿನಲ್ಲಿರುವ ಅಶೋಕ ಲೇಲ್ಯಾಂಡ್ ಶೋ ರೂಮಿಗೆ ಬಸ್ಸನ್ನು ಕೊಂಡೊಯ್ದಿದ್ದು, ಸರ್ವೀಸ್ ಮಾಡಿಸಿಕೊಂಡು ವಾಪಾಸ್ಸು ಕುಮುಟಾಕ್ಕೆ ಹೋಗಲೆಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರ ಕಡೆಗೆ ಬಂದು ಪ್ರವಾಸಿ ಪೆಟ್ರೋಲ್ ಬಂಕ್ ಸಮೀಪ ಯೂಟರ್ನ್ ತೆಗೆದುಕೊಳ್ಳುತ್ತಿದ್ದರು. ಇದೇ ಸಂದರ್ಭ ಕುಂದಾಪುರದಿಂದ ಗಂಗೊಳ್ಳಿಗೆ ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿದ್ದ ಭಾರತಿ ಬಸ್ ಚಾಲಕ ಮನೋಹರ ನೇರವಾಗಿ ಬಂದು ಸರ್ಕಾರೀ ಬಸ್ಸಿನ ಹಿಂದುಗಡೆಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಖಾಸಗಿ ಬಸ್ಸಿನಲ್ಲಿದ್ದವರ ಪೈಕಿ ಒಂದು ಮಗು ಸಹಿತ ಮೂವರು…
ಮೂಲ್ಕಿಯ ಕೋಳ್ನಾಡುವಿನಲ್ಲಿ ನವಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರ ನಡೆಸಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಮೂಲ್ಕಿಯ ಕಾರ್ನಾಡಿನ ಗುಂಡಾಲು ಪ್ರದೇಶದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪರಶುರಾಮ ಸೃಷ್ಟಿ ಎಂದು ತುಳುವಿನಲ್ಲಿ ಮಾತನಾಡಿದರು. ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಮೀನುಗಾರರ ಸಂಕಷ್ಟಗಳು ಕಣ್ಣಿಗೆ ಕಾಣಲಿಲ್ಲ. ಉಡುಪಿಯಲ್ಲಿ ನನ್ನ ಸಹೋದರರ ಮೀನುಗಾರರ ಕುಟುಂಬಗಳಿವೆ ಎಂದು ಮೋದಿಗೆ ಗೊತ್ತಿತ್ತು. ಇದೇ ಕಾರಣಕ್ಕೆ ಮೀನುಗಾರರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲಾಗಿದೆ ಎಂದರು.ಕರ್ನಾಟಕದ ಮೀನುಗಾರರಿಗೆ ಕಾಂಗ್ರೆಸ್ ದ್ರೋಹ ಬಗೆದಿದೆ. ದೆಹಲಿಯಲ್ಲಿ ಕುಳಿತಿರುವ ಸರ್ಕಾರಕ್ಕೆ ಮೀನುಗಾರಿಕೆ ಅಸ್ತಿತ್ವದಲ್ಲಿದೆ ಎಂದು ತಿಳಿದಿರಲಿಲ್ಲ! ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ನಾವು ಪ್ರತ್ಯೇಕ ಮೀನುಗಾರಿಕೆ ಸಚಿವಾಲಯವನ್ನು ಸ್ಥಾಪಿಸಿದ್ದೇವೆ ಎಂದರು. ಸ್ವಾತಂತ್ರ್ಯದ ನಂತರ 2014 ರವರೆಗೆ ಒಳನಾಡು ಮೀನುಗಾರಿಕೆಯು 60 ಲಕ್ಷ ಟನ್‍ಗಳಷ್ಟು ಉತ್ಪಾದನೆಯನ್ನು ಹೊಂದಿತ್ತು. ಆದಾಗ್ಯೂ, ನಂತರ ಬಿಜೆಪಿ ನೇತೃತ್ವದ ಸರಕಾರ 2014ರಲ್ಲಿ ಬಂದ ಸರಕಾರ ಕೇವಲ 9 ವರ್ಷಗಳಲ್ಲಿ 120 ಲಕ್ಷ…










