Author: main-admin

ಬೆಂಗಳೂರು : ಚುನಾವಣೆ ಹೊತ್ತಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಮತ್ತು ದಾವಣಗೆರೆ ಎಸ್ಪಿ ರಿಷ್ಯಾಂತ್ ವರ್ಗಾವಣೆ ಮಾಡಲಾಗಿದೆ. ವೈಟ್ ಫೀಲ್ಡ್ ವಿಭಾಗಕ್ಕೆ ಧರ್ಮೇಂದ್ರ ಕುಮಾರ್ ಮೀನಾ ನೂತನ ಡಿಸಿಪಿ. ಅರೂಣ್ ಕೆ ದಾವಣಗೆರೆ ನೂತನ ಡಿಸಿಪಿಯಾಗಿ ನೇಮಕವಾಗಿದ್ದಾರೆ.

Read More

ಬೆಂಗಳೂರು : ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಹೈಕೋರ್ಟ್ ರಿಲೀಫ್ ನೀಡಿದ್ದು, ನಟ ಚೇತನ್ ಗೆ ಷರತ್ತುಬದ್ದ ರಿಲೀಫ್ ನೀಡಿದೆ. ನಟ ಚೇತನ್ ಗೆ ನೀಡಿದ್ದ OCI ರದ್ದು ಹಿನ್ನೆಲೆ ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಹೈಕೋರ್ಟ್ ರಿಲೀಫ್ ನೀಡಿದೆ.ನ್ಯಾಯಾಂಗದ ಬಗ್ಗೆ ಚೇತನ್ ಟ್ವೀಟ್ ಮಾಡುವಂತಿಲ್ಲ, ವಿಚಾರಣೆಗೆ ಬಾಕಿ ಇರುವ ಕೇಸ್ ಗಳ ಬಗ್ಗೆ ಟ್ವೀಟ್ ಮಾಡುವಂತಿಲ್ಲ. ಜೂನ್ 2 ರವರೆಗೆ ಕ್ರಮ ಬೇಡ ಎಂದು ಹೈಕೋರ್ಟ್ ನ್ಯಾಯಮೂರ್ತಿ M. ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಸಾಗರೋತ್ತರ ಭಾರತೀಯ ನಾಗರಿಕ ಪತ್ರ (ಓಸಿಎ) ನಿಯಮಗಳನ್ನು ಚೇತನ್ ಉಲ್ಲಂಘನೆ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯು ಸರಕಾರಕ್ಕೆ ವರದಿ ಸಲ್ಲಿಸಿತ್ತು. ಚೇತನ್ ಅಹಿಂಸಾ ಅವರಿಗೆ ಭಾರತದಲ್ಲಿ ಬಂದು ವಾಸಿಸಲು ನೀಡಲಾಗಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು (Overseas Citizenship of India – OCI) ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.. ಹಿಂದುತ್ವದ ಬಗ್ಗೆ ಟ್ವೀಟ್ ಮಾಡಿ ಅರೆಸ್ಟ್ ಆಗಿದ್ದ ಚೇತನ್, ಜಾಮೀನು ಪಡೆದು…

Read More

ತಲೆಮರೆಸಿಕೊಂಡಿದ್ದ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ. ಖಲಿಸ್ತಾನ್ ಮುಖಂಡ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪಂಜಾಬ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನಿ ಉಗ್ರ ಅಮೃತ್ಪಾಲ್ ಸಿಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇತ್ತೀಚೆಗಷ್ಟೇ ಅಮೃತ್ ಪಾಲ್ ಸಿಂಗ್ ಪತ್ನಿಯನ್ನು ವಶಕ್ಕೆ ಪಡೆಯಲಾಗಿತ್ತು. ಮಾರ್ಚ್ 18 ರಿಂದ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ಗಾಗಿ ದೇಶದಲ್ಲಿ ಹುಡುಕಾಟ ನಡೆಯುತ್ತಲೇ ಇತ್ತು. ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದೂ ಹೇಳಲಾಗಿತ್ತು.

Read More

ಮೂಡಬಿದಿರೆ: ಜೈನ ಕಾಶಿ ಮೂಡಬಿದಿರೆಯಲ್ಲಿರುವ ವಿಶ್ವ ಪ್ರಸಿದ್ಧಿ ಪಡೆದ ಸಾವಿರ ಕಂಬದ ಬಸದಿಯಲ್ಲಿ ʼಮತದಾನ ಮಾಡಬನ್ನಿʼ ಎಂಬ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು ಪರಮ ಪೂಜ್ಯ ಭಾರತ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮೂಡಬಿದಿರೆ ಇ.ಡಿ ದಯಾವತಿ ಹಾಗೂ ಮೂಡಬಿದಿರೆ ತಾಲೂಕು ಪಂಚಾಯತ್‌ ಸಹಾಯಕ ನಿರ್ದೇಶಕರಾದ ರಮೇಶ್‌ ರಾಥೋಡ್‌ ಮತ್ತು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪು ಮತದಾನದ ಪ್ರಾಮುಖ್ಯತೆ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು.ಮೂಡಬಿದಿರೆ ಪುರಸಭೆಯ ಬಿಲ್‌ ಕಲೆಕ್ಟರ್‌ ದಯಾ ಪ್ರಕಾಶ್‌, ಜೈನ್‌ ಮಿಲನ್‌ ಮೂಡಬಿದಿರೆಯ ಅಧ್ಯಕ್ಷರಾದ ನೇಮಿರಾಜ್ ಜೈನ್‌ ಮತ್ತು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಶಾರದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Read More

ಉಪ್ಪಿನಂಗಡಿ‌: ಭೀಕರ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿಯಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಇಲ್ಲಿನ ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು ಗುರುತಿಸಲಾಗಿದೆ. ಈದುಲ್ ಫಿತರ್ ಸಂಭ್ರಮದಲ್ಲಿ ನೆಂಟರಿಷ್ಟರ ಮನೆಗೆ ತನ್ನೆರೆಡು ಮಕ್ಕಳ ಜತೆ ತೆರಳುತ್ತಿದ್ದ ಜಾಫರ್ ರವರ ಸ್ಕ್ಯೂಟರ್ ಗೆ ಎದುರಿನಿಂದ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಜಾಫರ್ ರವರ ಸ್ಕೂಟರ್ ಪೊದೆಗೆ ಹೋಗಿ ಬಿದ್ದಿದ್ದು ಜಾಫರ್ ರವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಈ ಅಪಘಾತ ನಿಜಕ್ಕೂ ಆಘಾತ ಮೂಡಿಸಿದೆ.

Read More

ಬೆಂಗಳೂರು : ಹ್ಯಾಂಡ್ ಬ್ರೇಕ್ ಹಾಕಲು ಮರೆತ ಲಾರಿ ಚಾಲಕನ ಎಟವಟ್ಟಿನಿಂದ ಬೆಂಗಳೂರಿನಲ್ಲಿ ಸರಣಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಮುಂಜಾನೆ ಈ ಘಟನೆ ನಡೆದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟೈಲ್ಸ್ ಲೋಡ್ ಆಗಿದ್ದ ಲಾರಿಯನ್ನು ಚಾಲಕ ನಿಲ್ಲಿಸಿದ್ದಾನೆ. ಆದರೆ ಹ್ಯಾಂಡ್ ಬ್ರೇಕ್ ಹಾಕೋದನ್ನು ಮರೆತಿದ್ದಾನೆ. ಇದರಿಂದ ಲಾರಿ ಮುಂದೆ ಹೋಗಿದ್ದು ಸರಣಿ ಅಪಘಾತ ಸಂಭವಿಸಿದೆ.ಲಾರಿ ನೇರವಾಗಿ ಕಾರು, ಟಾಟಾ ಏಸ್ ವಾಹ ನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ವಿಟ್ಲ: ಮಹಿಳೆಯೋರ್ವರಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಪಟ್ಟಣ ಪಂಚಾಯತ್‌ ಸದಸ್ಯಯೋರ್ವರಿಗೆ ಸಾರ್ವಜನಿಕರ ಎದುರಲ್ಲೇ ಗೂಸಾ ನೀಡಿದ ಘಟನೆ ನಡೆದಿದೆ. ಮಾಜಿ ಪಟ್ಟಣ ಪಂಚಾಯತ್‌ ಸದಸ್ಯ ಶ್ರೀಕೃಷ್ಣ ಪುತ್ತೂರು ಮೂಲದ ಮಹಿಳೆಗೆ ಪದೇ ಪದೇ ಅವಾಚ್ಯವಾಗಿ ಮೆಸೇಜ್‌ ಮಾಡುತ್ತಾ ಕಿರುಕುಳ ನೀಡುತ್ತಿದ್ದ. ವಿಷಯ ತಿಳಿದ ಮಹಿಳೆಯ ಪತಿ ಸಾರ್ವಜನಿಕರ ಎದುರೇ ವಿಟ್ಲ ಬಸ್‌ ನಿಲ್ದಾಣದಲ್ಲಿ ಮಾಜಿ ಪಟ್ಟಣ ಪಂಚಾಯತ್‌ ಸದಸ್ಯನಿಗೆ ಧರ್ಮದೇಟು ನೀಡಿದ್ದಾರೆ. ಈ ಮೊದಲು ಶ್ರೀಕೃಷ್ಣ ಪುತ್ತೂರು ಶಾಸಕ ಸಂಜೀವ ಮಠಂದೂರುರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಮತ್ತೊಂದು ಪ್ರಕರಣದಲ್ಲಿ ಪಟ್ಟಣ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ ಆರೋಪದಲ್ಲಿ ಈತನ ಮೇಲೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಸಾರ್ವಜನಿಕರ ಮಾಹಿತಿಯಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕದ ಬಡ ಟೈಲರ್‌ಗೆ ಕೇರಳ ಲಾಟರಿಯ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪಟ್ಟಣದ ಬಡ ಟೈಲರ್‌ ಆನಂದ್‌ ಅವರು ಅನಾರೋಗ್ಯದಿಂದ ವೃತ್ತಿ ನಿಲ್ಲಿಸಿದ್ದರು. ಅಪರೂಪಕ್ಕೆ ಕೇರಳಕ್ಕೆ ಹೋದಾಗ ಲಾಟರಿ ಖರೀದಿಸುತ್ತಿದ್ದರು. ನೀಲೇಶ್ವರದಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದಾಗ ಟಿಕೆಟ್ ಖರೀದಿಸಿದ್ದರು. ಈ ಕೇರಳ ರಾಜ್ಯ ಲಾಟರಿಗೆ 80 ಲಕ್ಷ ರೂ. ಮೊದಲ ಬಹುಮಾನವಿತ್ತು. ಎಪ್ರಿಲ್ 15ರಂದು ಡ್ರಾ ಆಗಿದೆ.

Read More

ಉಡುಪಿ: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಎಪ್ರಿಲ್ 27ರಂದು ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಅಂದು ಅವರು ಉಚ್ಚಿಲದಲ್ಲಿ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿರುವರು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದ್ದಾರೆ. ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ 40 ಮಂದಿ ಸ್ಟಾರ್ ಕ್ಯಾಂಪೆನರ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಲವು ಮಂದಿ ನಾಯಕರು ಜಿಲ್ಲೆಗೆ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಅಚ್ಚರಿ ಫಲಿತಾಂಶ ಹೊರಬೀಳಲಿದೆ ಎಂದರು.

Read More

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಂತ ಯುವತಿಯೊಬ್ಬಳು, ನ್ಯಾಯಾಲಯದ ಆವರಣದಲ್ಲೇ ವಕೀಲರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವಂತ ಆಘಾತಕಾರಿ ಘಟನೆ ಇಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ನಡೆದಿದೆ. ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿಯಿರುವಂತ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹರೀಶ್ ಎಂಬುವರಿಂದ ಕಾಂಚನಾ ಎಂಬುವರು 3 ಲಕ್ಷ ಸಾಲ ಪಡೆದ ಚೌಕ್ ಬೌನ್ಸ್ ಪ್ರಕರಣದ ವಿಚಾರಣೆ ನಡೆಸಲಾಗುತ್ತಿತ್ತು. ಮೊದಲ ಹಂತದ ವಿಚಾರಣೆ ವೇಳೆ ಹರೀಶ್ ಚೆಕ್ ಬೌನ್ಸ್ ಪ್ರಕರಣದ ಪರವಾಗಿ ಕೇಸ್ ಮುಂದುವರೆಸುವುದಾಗಿ ನ್ಯಾಯಾಲಯಕ್ಕೆ ಮನವರಿಕೆಯನ್ನು ವಕೀಲ ಕೃಷ್ಣಾರೆಡ್ಡಿ ಮಾಡಿದ್ದರು. ಈ ಬಳಿಕ ವಿರಾಮವನ್ನು ನ್ಯಾಯಾಲಯ ನೀಡಿತ್ತು. ಈ ವೇಳೆ ನ್ಯಾಯಾಲಯದ ಆವರಣಕ್ಕೆ ಹೊರಬಂದಿದ್ದಂತ ವಕೀಲ ಕೃಷ್ಣಾರೆಡ್ಡಿಯೊಂದಿಗೆ ಚೌಕ್ ಬೌನ್ಸ್ ಪ್ರಕರಣದ ಆರೋಪಿ ಕಾಂಚಾನ ಜಗಳ ತೆಗೆದಿದ್ದರು. ನೀನು ಕೇಸ್ ಮುಂದುವರೆಸುತ್ತೀಯ ಎಂಬುದಾಗಿ ಗಲಾಟೆ ಮಾಡಿದ್ದಾರೆ. ಅಲ್ಲದೇ ದಿಢೀರ್ ತಾವು ತಂದಿದ್ದಂತ ಚಾಕುವಿನಿಂದ ವಕೀಲ ಕೃಷ್ಣಾರೆಡ್ಡಿಗೆ ಹಲ್ಲೆ ಮಾಡಿದ್ದಾರೆ. ಈ ಬಳಿಕ ಅಲ್ಲಿಂದ ಎಸ್ಕೇಫ್ ಆಗಿರೋದಾಗಿ ತಿಳಿದು ಬಂದಿದೆ. ಕಾಂಚಾನ ಚಾಕುವಿನಿಂದ…

Read More