ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ಮಣಿಮಜಲು ನಿವಾಸಿ ಯತೀಶ ಮೃತ ಯುವಕ. ಇವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು ಎ. 13 ರಂದು ರಾತ್ರಿ ತಾನಿದ್ದ ರೂಮ್ ನ ಬಳಿ ಮಹಡಿಯಿಂದ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ. ಈ ವೇಳೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕಳೆದೊಂದು ವಾರದಿಂದ ನೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಿನ್ನೆ ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
Author: main-admin
ಮಂಗಳೂರು: ಅಪರಿಚಿತ ವ್ಯಕ್ತಿಯೋರ್ವ ಕೋರಿಯರ್ ಕಂಪೆನಿಯವನೆಂದು ನಂಬಿಸಿದ ಲಿಂಕ್ ಕಳುಹಿಸಿ 72,444 ರೂ. ಬ್ಯಾಂಕ್ ಖಾತೆಯಿಂದ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರು ಪಾರ್ಸೆಲ್‌ಗಾಗಿ ಗೂಗಲ್‌ನಲ್ಲಿ ಕೋರಿಯರ್ ಕಂಪೆನಿಯೊಂದರ ಬಗ್ಗೆ ಮಾಹಿತಿ ಹುಡುಕಾಡುತ್ತಿದ್ದಾಗ ಅವರಿಗೆ 9827698553 ಮೊಬೈಲ್ ಸಂಖ್ಯೆ ದೊರೆತಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ಆತ ಕೊರಿಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಲಿಂಕ್‌ವೊಂದನ್ನು ಕಳುಹಿಸಿದ್ದ. ಬಳಿಕ ಗೂಗಲ್ ಪೇನಲ್ಲಿ 5 ರೂ. ಕಳುಹಿಸುವಂತೆ ತಿಳಿಸಿದ. ದೂರುದಾರ ವ್ಯಕ್ತಿ ಹಣ ಪಾವತಿಸಿದರೂ, ಅವರಲ್ಲಿದ್ದ ಪಾರ್ಸೆಲ್ ಕೊಂಡು ಹೋಗಲು ಯಾರೂ ಬಂದಿರಲಿಲ್ಲ.ಎ.15ರಂದು ದೂರುದಾರರ ಬ್ಯಾಂಕ್ ಖಾತೆಗೆ ಪರ್ಸನಲ್ ಲೋನ್ ಮಂಜೂರಾದ ಸಂದೇಶ ಬಂದಿತ್ತು. ಅವರು ಖಾತೆಯನ್ನು ಪರಿಶೀಲಿಸಿದಾಗ 72,444 ರೂ. ಕಡಿತಗೊಂಡಿರುವುದು ಗಮನಕ್ಕೆ ಬಂದಿತ್ತು. ಕೊರಿಯರ್ ಕಂಪೆನಿಯವನೆಂದು ಪರಿಚಯಿಸಿಕೊಂಡ ವ್ಯಕ್ತಿ ಕಳುಹಿಸಿದ ಲಿಂಕ್‌ಗೆ ಬ್ಯಾಂಕ್‌ನ ವಿವರ ನೀಡಿದ್ದರಿಂದ ಮೋಸದಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಳ್ಯ: ಜೇನು ತೆಗೆಯುವಾಗ ಮರದಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಏ.18 ರ ಸಂಜೆ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ನಡೆದಿದೆ. ಕರಿಕೆ ಮೂಲದ ವಿಜಯ್ ಮೃತ ಯುವಕ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದ್ದರು. ಈ ವೇಳೆ ವಿಜಯ್ ಜೇನು ತೆಗೆಯುತ್ತಿದ್ದ ಸಂದರ್ಭ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೆ ಜೊತೆಗಿದ್ದವರು ಅವರನ್ನು ಆಸ್ಪತ್ರೆಗೆ ಸಾಗಿಸಲು ತಯಾರಿಯಲ್ಲಿದ್ದಾಗಲೇ ಆತ ಮೃತಪ್ಪಟ್ಟಿದ್ದರು ಎನ್ನಲಾಗಿದೆ.
ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ನೆಹರು ಮೈದಾನದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಜನಾರ್ದನ್ ಎಂದು ಗುರುತಿಸಲಾಗಿದೆ. ಜನಾರ್ದನ್ ಪೊಳಲಿ ಮೂಲದವರಾಗಿದ್ದು ಡ್ರೈವರ್ ವೃತ್ತಿ ನಿರ್ವಹಿಸುತ್ತಿದ್ದರು. ಇವರು ಬಿಜೆಪಿ ಕಾರ್ಯಕರ್ತರಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ. ‘ಮೃತದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಜನಾರ್ದನ ಅವರ ಜತೆ ನಾಲ್ವರು ಜಗಳವಾಡಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ
ಮೈಸೂರು : ನಗರ ಟಿ. ಕೆ ಬಡಾವಣೆಯ ವರುಣ ವಿಧಾನ ಸಭೆ ಕ್ಷೇತ್ರದಲ್ಲಿ ರಾಜಕೀಯ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರು ಚಾಲಕ ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರು ಚಾಲಕ ನಾಪತ್ತೆಯಾಗಿರುವುದನ್ನು ಕಂಡು ತಬ್ಬಿಬ್ಬಾಗಿದ್ದು, ಕಾರು ಬಿಟ್ಟು ಸಿದ್ದರಾಮಯ್ಯ ಮಗ ಯತೀಂದ್ರ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಸಭೆಯೂ ತುಂಬ ಸಮಯ ಇರಬಹುದೆಂದು ಕಾರು ಚಾಲಕ ಎಲ್ಲೋ ಹೋದ ಕಾರಣದಿಂದಾಗಿ ಸಿದ್ದರಾಮಯ್ಯ ಕಾರು ಚಾಲಕನನ್ನು ಕಾದು ಕಾದು ಸುಸ್ತಾಗಿದ್ದಾರೆ. ಅಲ್ಲಿದ್ದ ಸ್ಥಳೀಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದೀಗ ಸುದ್ದಿ ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕಡಬ: ತೂಫಾನ್ ಹಾಗೂ ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನೆಟ್ಟಣದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಮಂಗಳೂರು: ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದ ಮೇಲೆ ಕೇವಲ ತುಳುನಾಡಿನ ಇಬ್ಬರು ಮುಖ್ಯ ಮಂತ್ರಿಗಳನ್ನು ಹೊರತು ಪಡಿಸಿ ಬಹುತೇಕ ಬೇರೆಯವರಿಗೇ ಸ್ಥಾನ ಮಾನ ದೊರಕಿದೆ.ಹಾಗೂ ತುಳುನಾಡಿಗೆ ಯಾವುದೇ ಸಹಕಾರ ದೊರಕಿರುವುದಿಲ್ಲ ಹಲವಾರು ಸಮಯದ ಈ ಕೆಳಗಿನ ಬೇಡಿಕೆಗಳು ಇದುವರೆಗೆ ಈಡೇರದೇ ಇರುವುದು ವಿಪರ್ಯಾಸವೇ ಸರಿ.ಈ ಹಿನ್ನೆಲೆ ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಯೋಗೀಶ್ ಶೆಟ್ಟಿ ಜಪ್ಪು ರವರು ತುಳುನಾಡಿನಲ್ಲಿ ಆಯ್ಕೆಯಾದ ಶಾಸಕರೊಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿ ಎಂದರು. ಹಲವಾರು ಸಮಯಗಳಿಂದ ಇಟ್ಟುಕೊಂಡು ಬಂದತುಳುವರ ಬೇಡಿಕೆಗಳನೆಂದರೆ :1. ತುಳುನಾಡಿನಲ್ಲಿ ಆಯ್ಕೆಯಾದಜನಪ್ರತಿನಿಧಿಗಳು ತುಳುವಪ್ಪೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಬೇಕು.2. ತುಳು ಭಾಷೆಯನ್ನುರಾಜ್ಯದ ಅಧಿಕೃತ ಎರಡನೇ ಭಾಷೆಯಾಗಿ ಘೋಷಿಸುವುದು.3. ತುಳು ಭಾಷೆಯನ್ನುಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು.4. ಮಂಗಳೂರಿನಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ5. ತುಳುನಾಡು ಅಭಿವೃದ್ಧಿ ಪ್ರಾಧಿಕಾರ ರಚನೆ6. ಕಚೇರಿ, ಕೋರ್ಟುಗಳಲ್ಲಿ ತುಳು ಭಾಷೆಗೆ ಪ್ರಾಧಾನ್ಯತೆ7. ತುಳುನಾಡಿಗೆ ಪ್ರತ್ಯೇಕ ಹೈಕೋರ್ಟು ಪೀಠ ಸ್ಥಾಪನೆ8. ತುಳುನಾಡಿನ ಜನಪದಕಲಾವಿದರಿಗೆ ಮಾಶಾಸನ ನೀಡುವುದು9. ತುಳುನಾಡಿನ ಜಾತಿ, ಮತ, ಭಾಷಾ ಸಾಮರಸ್ಯಕ್ಕೆಒತ್ತುಕೊಡುವುದು10.…
ಬೆಂಗಳೂರು : ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಜಿಗಿದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆಸಿದೆ ಎಂದು ವರದಿಯಾಗಿದೆ. ಸೋನು ಪೂಜಾರಿ ಎಂಬುವವರು ಆತ್ಮಹತ್ಯೆಗೈದು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಸೋನು ಪೂಜಾರಿ ಅವರ ಪತಿ ನಿರಂಜನ್ ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ 4ನೇ ಮಹಡಿಯಿಂದ ಜಿಗಿದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ರಾತ್ರಿ 1 ಗಂಟೆಗೆ ಫೋನ್‌ನಲ್ಲಿ ಜೋರಾಗಿ ಮಾತನಾಡಿದ್ದಾರೆಂದು ಅಪ್ಪಪಕ್ಕದ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ವಿಚಾರವನ್ನು ಸೋನು ಪೂಜಾರಿಪತಿ ನಿರಂಜನ್ ಅವರಿಗೆ ಮಾಹಿತಿಯನ್ನು ನೀಡಲಾಗಿದೆ.
ಪಡುಬಿದ್ರಿ: ಒಂದೇ ದಿನ ಒಂದೇ ಮನೆಯಲ್ಲಿ ತಂದೆ ಮತ್ತು ಮಗ ಮೃತಪಟ್ಟ ಘಟನೆ ನಡೆದಿದೆ. ಪಡುಬಿದ್ರಿ ಕಂಚಿನಡ್ಕದ ಸಂಜೀವ(72) ಹಾಗೂ ಅವರ ಪುತ್ರ ಉದಯ (45) ಒಂದೇ ದಿನ ಸಾವನ್ನಪ್ಪಿದ ಅಪರೂಪದ ಘಟನೆ ನಡೆದಿದೆ. ಸಂಜೀವ ಹಾಗೂ ಉದಯ್ ಅವರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.ಸಂಜೀವ ಅವರು 40 ವರ್ಷ ಹಾಗೂ ಉದಯ 20 ವರ್ಷ ಚಾಲಕರಾಗಿ ದುಡಿದಿದ್ದರು. ಸಂಜೀವ್ ಅವರು ಕೆಲವು ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಉದಯ ಕೆಲವು ದಿನಗಳ ಹಿಂದೆ ಜ್ವರದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರ ಪೂರ್ಣಗೊಂಡ ಬಳಿಕ ಹಾಸಿಗೆ ಹಿಡಿದಿದ್ದ ಸಂಜೀವ ಅವರೂ ಸಾವನ್ನಪ್ಪಿದ್ದಾರೆ. ಬಡತನದಲ್ಲಿ ಜೀವಿಸುತ್ತಿದ್ದ ಈ ಕುಟುಂಬಕ್ಕೆ ಇಬ್ಬರ ಅಗಲಿಕೆ ದೊಡ್ಡ ಆಘಾತವನ್ನು ನೀಡಿದೆ.
ಸುಳ್ಯ;ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಎಡಮಂಗಲ ಗ್ರಾಮದ ಕೊಳಂಬೆ ಶಿವರಾಮ ವಿರುದ್ಧ ಕೇಸ್ ದಾಖಲಾಗಿದೆ. ಶಿವರಾಮ್ ಎಂಬಾತ ಬಾಲಕಿ ಮನೆಯಲ್ಲಿ ಒಬ್ಬಳೆ ಇದ್ದ ಸಂದರ್ಭ ಮನೆಯೊಳಗೆ ನುಗ್ಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಶಿವರಾಮ ವಿರುದ್ಧ ಇದೀಗ ಪೋಕ್ಸೋ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










