ಬೆಂಗಳೂರು: ಸ್ವಿಗ್ಗೀ, ಝೋಮ್ಯಾಟೋ ಸೇರಿದಂತೆ ಎಲ್ಲಾ ಗಿಗ್ ಕಾರ್ಮಿಕರಿಗೆ 4 ಲಕ್ಷ ರೂ. ವಿಮೆ ಘೋಷಣೆ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. 2 ಲಕ್ಷ ರೂ. ಅಪಘಾತ ವಿಮೆ, 2 ಲಕ್ಷ ರೂ. ಜೀವವಿಮೆ ಸೇರಿದಂತೆ 4 ಲಕ್ಷ ರೂ. ವಿಮೆ ಘೋಷಣೆ ಮಾಡಿ ಕರ್ನಾಟಕ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಗೆ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ರೂಪಿಸಲಾಗಿದೆ. ಗಿಗ್ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬೇಕಾಗುತ್ತದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ರಿಂದ 60 ವರ್ಷದ ಎಲ್ಲ ಪ್ಲಾಟ್‌ಫಾರಂ ಆಧಾರಿತ ಗಿಗ್ ಕಾರ್ಮಿಕರು ಯೋಜನೆಗೆ ಒಳಪಡುತ್ತಾರೆ.
Author: main-admin
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗಣೇಶೋತ್ಸವದ ಬಗ್ಗೆ ಎದ್ದಿರುವ ವಿವಾದದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಕಳೆದ 40 ವರ್ಷಗಳಿಂದ ಅಲ್ಲಿ ಗಣೇಶೋತ್ಸವ ಆಚರಿಸುತ್ತಾರೆಂಬ ಮಾಹಿತಿ ಇದೆ. ಈಗ ಯಾಕೆ ವಿವಾದ ಮಾಡಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಮುಖ್ಯ ಚುನಾವಣೆ ಹತ್ತಿರ ಬಂದಾಗ ಈ ರೀತಿ ಅಶಾಂತಿ ಸೃಷ್ಟಿಸುವುದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಗಳೂರು ವಿಶ್ವವಿದ್ಯಾನಿಲಯ ಈಗಾಗಲೇ ಬಿ. ಗ್ರೇಡ್‌ಗೆ ಹೋಗಿದೆ. ಅದನ್ನು ಎ ಗ್ರೇಡ್‌ಗೆ ತರಲು ಅಗತ್ಯ ಕ್ರಮಗಳನ್ನ ನಾವು ಮೊದಲು ಮಾಡಬೇಕಾಗಿದೆ. ಗಣೇಶೋತ್ಸವದ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯದ ವಿಸಿ ಹಾಗೂ ರಾಜ್ಯಪಾಲರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ ಏನು ಮಾತನಾಡುತ್ತಾರೋ ಅದು ನಮಗೆ ಸಂಬಂಧಿಸಿದ್ದಲ್ಲ. ವಿವಿ ಶೈಕ್ಷಣಿಕವಾಗಿ ಬೆಳೆಯಬೇಕು. ಅಭಿವೃದ್ಧಿಯಾಗಬೇಕು. ಅನಗತ್ಯ ವಿಚಾರಗ ಬಗ್ಗೆ ಹೊರಗಿನವರು ಯಾಕೆ ಮಾತನಾಡಬೇಕು ಎಂದು ಪ್ರಶ್ನಿಸಿದರು.
ಬೆಳ್ತಂಗಡಿ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಅಟೋ ರಿಕ್ಷಾವೊಂದು ಮಗುಚಿ ಬಿದ್ದು ಒಂಬತ್ತು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂರುಗೋಳಿಯಲ್ಲಿ ಇಂದು ಸಂಭವಿಸಿದೆ. ಕಲ್ಲೇರಿ ಆಸುಪಾಸಿನಿಂದ ಮೂಡಡ್ಕದ ಅಲ್ ಮದೀನಾತುಲ್ ಮುನಾವರ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಅಟೋ ರಿಕ್ಷಾಕ್ಕೆ ಮೂರುಗೋಳಿ ಬಳಿ ಮಗುಚಿ ಬಿದ್ದಿದೆ. ದ್ವಿಚಕ್ರ ವಾಹನವೊಂದು ಅಡ್ಡ ಬಂದಿದ್ದು, ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಅಟೋ ರಿಕ್ಷಾ ಮಗುಚಿ ಬಿದ್ದಿದೆ. ಘಟನೆಯಿಂದ ರಿಕ್ಷಾದಲ್ಲಿದ್ದ 8 ಮಂದಿ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ.
ಬಂಟ್ವಾಳ : ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದ ಘಟನೆ ಮೈಂದಾಳ ಎಂಬಲ್ಲಿ ಶನಿವಾರ ರಾತ್ರಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದವರನ್ನು ಮೈಂದಾಳ ನಿವಾಸಿ ನಿಸಾರ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ನಿಸಾರ್ ರಸ್ತೆ ಬದಿ ನಡೆದುಕೊಂಡು ಮೈಂದಾಳ ಸೇತುವೆ ಬಳಿಯ ಗುರಿಮಜಲು ಎಂಬಲ್ಲಿ ಅಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭ ರಿಕ್ಷಾದ ಬಳಿ ತಲವಾರು ಹಿಡಿದುಕೊಂಡು ನಿಂತಿದ್ದ ಮೂವರ ಪೈಕಿ ಓರ್ವ ನಿಸಾರ್ ಗೆ ದಾಳಿ ಮಾಡುವಂತೆ ಹೇಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭ ನಿಸಾರ್ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿ ಓಡಿ ಹೋಗಿದ್ದು, ಸ್ನೇಹಿತನಿಗೆ ಕರೆ ಮಾಡಿ ತಿಳಿಸಿ ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಮಂಗಳೂರು: ನಗರದ ಪ್ರತಿಷ್ಠಿತ ಹೊಟೇಲ್ ನ ಈಜು ಕೊಳದಲ್ಲಿ ಮೃತ ದೇಹ ಪತ್ತೆಯಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬ್ಯಾಂಕ್ ಅಧಿಕಾರಿ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್ ನಾಯರ್ ಎಂದು ತಿಳಿದುಬಂದಿದೆ. ಯೂನಿಯನ್ ಬ್ಯಾಂಕ್ ಅಧಿಕಾರಿಯಾದ ಗೋಪು ಆರ್ ನಾಯರ್ ಅವರು ನಿನ್ನೆ ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದರು. ಬ್ಯಾಂಕ್ ಅಧಿಕಾರಿ ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು: ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಬಜರಂಗದಳದ ಕಾರ್ಯಕರ್ತರು ಭಾನುವಾರ ಮುಂಜಾನೆ ತಡೆದು ನಿಲ್ಲಿಸಿ, ವಾಹನದಲ್ಲಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ಕಳವಾರು ಗ್ರಾಮದ ದಾವೂದ್, ಜೋಕಟ್ಟೆಯ ಬದ್ರುದ್ದೀನ್ ಮತ್ತು ಯಾಸೀನ್ ಎಂದು ಗುರುತಿಸಲಾಗಿದೆ. ವಾಹನದಲ್ಲಿ 2.5 ಕ್ವಿಂಟಾಲ್‌ಗಿಂತಲೂ ಹೆಚ್ಚಿನ ಪ್ರಮಾಣದ ದನದ ಮಾಂಸವನ್ನು ಜೋಕಟ್ಟೆಯಿಂದ ನಗರದ ಬೀಫ್ ಸ್ಟಾಲ್‌ಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಗೋ ಹತ್ಯಾ ನಿಷೇಧ ಕಾಯ್ದೆಯಡಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಬಗ್ಗೆ ವಿದ್ಯಾರ್ಥಿನಿ ತಾಯಿ ಕದ್ರಿ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ನಗರದ ಬಿಜೈಯ ಅಪಾರ್ಟ್ ಮೆಂಟ್ ಒಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ ದಂಪತಿ ಮಗಳು ಈಕೆಯಾಗಿದ್ದು ನಗರದ ಕಾಲೇಜ್ ಒಂದರಲ್ಲಿ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ರಾತ್ರಿ ತಾಯಿ ಅಪಾರ್ಟ್ ಗಳ ಕಸ ಸಂಗ್ರಹಿಸಲು ತೆರಳಿದ್ದಾಗ ರೂಮ್ ನಲ್ಲಿ ಒಬ್ಬಳೇ ಇದ್ದ ವಿದ್ಯಾರ್ಥಿನಿ ಬಾಗಿಲು ಲಾಕ್ ಮಾಡಿ ಫ್ಯಾನಿಗೆ ನೇಣಾಕಿ ಆತ್ಮಹತ್ಯೆ ಕೊಂಡಿದ್ದಾಳೆ. ಕಸ ಬಿಸಾಡಿ ವಾಪಸ್ ಬಂದಾಗ ರೂಂ ಬಾಗಿಲು ಲಾಕ್ ಆಗಿದ್ದು ಎಷ್ಟೇ ಬಡಿದರೂ ಬಾಗಿಲು ತೆರೆಯದನ್ನು ನೋಡಿ ಕಿಟಿಕಿಯಿಂದ ಗಮನಿಸಿದಾಗ ಮಗಳು ಫ್ಯಾನ್‌ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೂಡಲೇ ಅಪಾರ್ಟ್ ಮೆಂಟ್ ನವರು ಬಾಗಿಲು ಒಡೆದು ಕುಣಿಕೆಯಿಂದ ಕೆಳಗಿಸಿ ಉಪಚರಿಸಲು ಯತ್ನಿಸಿದ್ದರೂ ಅದಾಗಲೇ ಆಕೆಯ ಪ್ರಾಣ…
ಉಳ್ಳಾಲ : ನಾನು ಅರೆಸ್ಟ್ ಆಗದೆ ತುಂಬಾ ಸಮಯ ಆಯ್ತು. ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ ಮಂಗಳೂರು ವಿವಿ ಮಂಗಳ ಸಭಾಂಗಣದಲ್ಲಿ ಗಣೇಶೋತ್ಸವ ಮಾಡಿಯೇ ಸಿದ್ಧ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ. ಮಂಗಳೂರು ವಿವಿ ಗಣೇಶೋತ್ಸವಕ್ಕೆ ವಿರೋಧ ಹಾಗೂ ಸ್ಟಾಲಿನ್ ಹೇಳಿಕೆ ಖಂಡಿಸಿ ಅಸೈಗೋಳಿಯ ಮೈದಾನದಲ್ಲಿ ಸಂಘ ಪರಿವಾರ ಹಮ್ಮಿಕೊಂಡ ಸಾಮೂಹಿಕ ಭಜನಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹೊರಗಿನವರೆಂದರೆ ಯಾರು ಸ್ವಾಮಿ? ನಾವೆಲ್ಲರೂ ಗಣೇಶನ ಭಕ್ತರೇ ಅಲ್ವಾ? ಒಳಗಿರೋರು ಅಂದ್ರೆ ವಿದ್ಯಾರ್ಥಿಗಳು, ಅವರು ಬೇರೆ ಬೇರೆ ಜಾಗದಿಂದ ಬಂದವರು. ಇಡೀ ರಾಜ್ಯದಿಂದ ಅಲ್ಲಿಗೆ ಜನ ಬಂದಿರ್ತಾರೆ, ಇದರಲ್ಲಿ ಹೊರಗಿನವರು ಅಂತ ಇಲ್ಲ. ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ, ಅಲ್ಲಿ ಇರ್ತೇವೆ, ಅದರಲ್ಲಿ ಎರಡು ಪ್ರಶ್ನೆ ಇಲ್ಲ. ಬಂದರೆ ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ? ಅರೆಸ್ಟ್ ಆಗದೇ ತುಂಬಾ ಸಮಯ ಆಯ್ತು.ಅರೆಸ್ಟ್ ಮಾಡಿದರೆ ಮಾಡಲಿ ಎಂದರು. ವಿವಿ ಅನ್ನೋದು ಹಿಂದೂ ಮೆಜಾರಿಟಿ ಇರೋ ಒಂದು ಸಂಸ್ಥೆ.…
ಬೆಂಗಳೂರು : ‘ಶಕ್ತಿ ಯೋಜನೆ’ ವಿರೋಧಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆ.11 ರಂದು ನಾಳೆ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಬಂದ್ ಗೆ ಕರೆ ನೀಡಿದ್ದು, ಖಾಸಗಿ ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಲಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಒಕ್ಕೂಟದ ಸದಸ್ಯರ ನಡುವೆ ನಿನ್ನೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಈ ಹಿನ್ನೆಲೆ ಸೆ.11 ರಂದು ಖಾಸಗಿ ಒಕ್ಕೂಟಗಳ ಬೆಂಗಳೂರು ಬಂದ್ ಖಚಿತವಾಗಿದೆ. ನಾಲೆ ಟ್ಯಾಕ್ಸಿ, ಆಟೋ, ಮ್ಯಾಕ್ಸಿ ಕ್ಯಾಬ್, ಖಾಸಗಿ ಬಸ್ ಗಳು ಸಂಪೂರ್ಣ ಬಂದ್ ಆಗಲಿದ್ದು, ಶಾಲಾ ವಾಹನಗಳು ಕೂಡ ಬಂದ್ ಆಗಲಿದೆ. ಆಟೋ, ಟ್ಯಾಕ್ಸಿ, ಖಾಸಗಿ ಬಸ್, ಸ್ಕೂಲ್ ಬಸ್ ಗಳನ್ನು ರಸ್ತೆಗೆ ಇಳಿಸದಿರಲು ಖಾಸಗಿ ಸಾರಿಗೆ ಒಕ್ಕೂಟ ನಿರ್ಧರಿಸಿದೆ. ಈ ಹಿನ್ನೆಲೆ ಸೆ.11 ರಂದು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಸರ್ಕಾರಿ ಬಸ್ ಗಳಾದ ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ನಾಳೆ ಎಂದಿನಂತೆ ಸಂಚಾರ ಮಾಡಲಿದ್ದು, ಪ್ರಯಾಣಿಕರಿಗೆ ತೊಂದರೆ ಇರುವುದಿಲ್ಲ.…
ನವದೆಹಲಿ : ಇಂದು ನಾವು ನಿಮಗೆ ಹೋಟೆಲ್ ಒಂದರ ಬಗ್ಗೆ ಹೇಳುತ್ತಿದ್ದೇವೆ. ಈ ಹೋಟೆಲ್ ಕಟ್ಟಿ 25 ವರ್ಷಗಳು ಕಳೆದಿವೆ. ಇನ್ನಿದಕ್ಕೆ 16 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಆದ್ರೆ, ಇಲ್ಲಿಯವರೆಗೆ ಒಬ್ಬ ಅತಿಥಿಯೂ ಇಲ್ಲಿಗೆ ಬಂದಿಲ್ಲ. ಹಾಗಾಗಿ ಈಗ ಸರ್ಕಾರ ಈ ಹೋಟೆಲ್ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಈ ಹೋಟೆಲ್‌ನ ಹೆಸರು Ryugyong. ಈ ಹೋಟೆಲ್ ಎಲ್ಲಿದೆ.?ವರದಿಯ ಪ್ರಕಾರ, Ryugyong ಹೋಟೆಲ್ ಉತ್ತರ ಕೊರಿಯಾದ ರಾಜಧಾನಿ Pyongyang ನಲ್ಲಿದೆ. ಈ ಹೋಟೆಲ್’ನ್ನ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಮನೆಯಿಂದ ಸುಮಾರು 12 ಮೈಲಿ (19.3 ಕಿಲೋಮೀಟರ್) ದೂರದಲ್ಲಿ ನಿರ್ಮಿಸಲಾಗಿದೆ. ಈ ಹೋಟೆಲ್‌ನ ಎತ್ತರ 1082 ಅಡಿಗಳು ಇದರಲ್ಲಿ 3000 ಕೊಠಡಿಗಳನ್ನ ನಿರ್ಮಿಸಲು ಯೋಜಿಸಲಾಗಿತ್ತು. ಈ ಹೋಟೆಲ್ ದೇಶದ ಆರ್ಥಿಕ ಮತ್ತು ರಾಜಕೀಯ ಶಕ್ತಿಗೆ ವಿಭಿನ್ನವಾದ ಗುರುತನ್ನ ನೀಡುತ್ತಿತ್ತು. ಆದ್ರೆ, 25 ವರ್ಷಗಳ ನಂತ್ರವೂ ಈ ಹೋಟೆಲ್ ಖಾಲಿ ಬಿದ್ದಿದೆ. ಈಗ ಈ ಹೋಟೆಲ್’ನ್ನ ‘ಹೋಟೆಲ್ ಆಫ್ ಡೂಮ್’ ಎಂದು ಕರೆಯಲಾಗುತ್ತದೆ. 1987ರಲ್ಲಿ…










