ಮಂಗಳೂರು: ಡ್ರಗ್ ಅಡಿಕ್ಟ್ ಹೆಸರಲ್ಲಿ ಮಾನಸಿಕ ಸಮಸ್ಯೆಯ ಯುವತಿಯ ವಿಡಿಯೋವೊಂದು ವೈರಲ್ ಆಗಿದೆ. ಮಂಗಳೂರಿನ ಕದ್ರಿ ಠಾಣೆಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸುವ ವಿಡಿಯೋ ವೈರಲ್ ಆಗಿದೆ. ಯುವತಿಯೊಬ್ಬಳನ್ನ ನಾಲ್ಕೈದು ಮಹಿಳಾ ಪೊಲೀಸ್ ಸಿಬ್ಬಂದಿ ನಿಯಂತ್ರಿಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂದಿಗೆ ತುಳಿದು ಹಲ್ಲೆಗೆ ಯತ್ನಿಸಿದ್ದಾರೆ.ಈ ವೇಳೆ ಯುವತಿ ನಿಯಂತ್ರಿಸಲು ಪೊಲೀಸರು ಕೈ ಗೆ ಕೋಳ ತೊಡಿಸಲು ಮುಂದಾಗಿದ್ದಾರೆ. ಘಟನೆ ಬಳಿಕ ವೈರಲ್ ವಿಡಿಯೋ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದು, ಸೆ.1 ರ ಬೆಳಿಗ್ಗೆ 06.50ಕ್ಕೆ ಪಂಪವೆಲ್ ಗಣೇಶ್ ಮೆಡಿಕಲ್ ನಲ್ಲಿ ಈ ಯುವತಿ ಸಿಕ್ಕಿದ್ದಾಳೆ.ಅಸಾಮಾನ್ಯವಾಗಿ ಹಾಗೂ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸಿದ್ದಾಳೆ. ಇದನ್ನು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಗಮನಿಸಿ ಮಾದಕ ದ್ರವ್ಯ ಸೇವನೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಹಲ್ಲೆಗೆ ಯತ್ನಿಸಿದ್ದಾಳೆ. ಬಳಿಕ ಕದ್ರಿ ಪೊಲಿಸರ ಸಹಾಯದಿಂದ ಠಾಣೆಗೆ ಅಬಕಾರಿ ಅಧಿಕಾರಿ ಕರೆ ತಂದಿದ್ದಾರೆ. ಈ…
Author: main-admin
ಕಾರ್ಕಳ : ಕಾರ್ಕಳದ ಉಮಿಕಲ್ ನಲ್ಲಿರುವ ಪರುಶುರಾಮ ಪ್ರತಿಮೆಯ ರಿಯಾಲಿಟಿ ಚೆಕ್ ಗೆ ಆಗ್ರಹಿಸಿ ಕಳೆದ 8 ದಿನಗಳಿಂದ ದಿವ್ಯಾನಾಯಕ್ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಆರೋಗ್ಯ ಏರುಪೇರಾದ ಹಿನ್ನಲೆ ಹಿಂತೆಗೆದುಕೊಳ್ಳಲಾಗಿದೆ. ಬೈಲೂರು ಪರಶುರಾಮ ಮೂರ್ತಿಯ ಗುಣಮಟ್ಟ ಪರಿಶೀಲನೆಯಾಗಬೇಕೆಂದು ಆಗ್ರಹಿಸಿ ಕಳೆದ 8 ದಿನಗಳಿಂದ ದಿವ್ಯಾ ನಾಯಕ್ ನೇತೃತ್ವದ ತಂಡ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿತ್ತು. ಇಂದು ದಿವ್ಯಾ ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು.ದಿವ್ಯಾ ನಾಯಕ್ ಮತ್ತು ವಿವೇಕ್ ಶೆಟ್ಟಿ ಉಪವಾಸದಲ್ಲಿದ್ದು, ಪರಶುರಾಮ ಮೂರ್ತಿಯ ಗುಣಮಟ್ಟ ಪರಿಶೀಲನೆ ಯಾವತ್ತು ನಡೆಸುತ್ತಾರೆ ಎಂದು ಜಿಲ್ಲಾಧಿಕಾರಿಯವರು ದಿನಾಂಕ ತಿಳಿಸುವವರೆಗೆ ಉಪವಾಸವನ್ನು ಕೈ ಬಿಡುವುದಿಲ್ಲ ಎಂದಿದ್ದರು. ಆದರೆ ಇಂದು ದಿವ್ಯಾ ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆ ವೈದ್ಯಕೀಯ ಪರಿಶೀಲನೆ ನಡೆಸಿ ವರದಿಯನ್ನು ತಹಶೀಲ್ದಾರಿಗೆ ನೀಡಲಾಗಿತ್ತು. ಈ ಕುರಿತು ತಹಶೀಲ್ದಾರರು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದು, ನಂತರ ಪ್ರತಿಭಟನಕಾರರ ಮನವಿಯಂತೆ ಜಿಲ್ಲಾಧಿಕಾರಿಯವರಿಗೆ ಫೋನ್ ಕರೆ ಮಾಡಿಕೊಡಲಾಯಿತು. ಫೋನ್…
ಉಳ್ಳಾಲ : ಸರಣಿ ಅಪಘಾತದಲ್ಲಿ ವ್ಯಾಗನರ್ ಕಾರೊಂದು ಅಪ್ಪಚ್ಚಿಯಾದ ಘಟನೆ ರಾಷ್ಟ್ರೀಯ 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲೇ ಸಂಭವಿಸಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಸಿಯಾಝ್ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾರೆ.ಇದರಿಂದಾಗಿ ಹಿಂಬದಿಯಲ್ಲಿದ್ದ ಲಾರಿ ಸಿಯಾಝ್ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ಲಾರಿ ಹಿಂಭಾಗದಲ್ಲಿದ್ದ ವ್ಯಾಗನಾರ್ ಕಾರು ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಅದೇ ವೇಳೆ ವ್ಯಾಗನರ್ ಕಾರಿನ ಹಿಂಭಾಗದಲ್ಲಿದ್ದ ಕೇರಳ ಸಾರಿಗೆ ಬಸ್ಸು ವ್ಯಾಗನಾರ್ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಹಾಗೂ ಬಸ್ ನಡುವೆ ಸಿಲುಕಿದ ವ್ಯಾಗನಾರ್ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿ ಅಪ್ಪಚ್ಚಿಯಾಗಿದೆ. ಉಳಿದ ವಾಹನಗಳ ಹಿಂಭಾಗಕ್ಕೆ ಹಾನಿಯಾಗಿದೆ. ವ್ಯಾಗನಾರ್ ಕಾರಿನ ಲ್ಲಿ ಚಾಲಕ ಮಾತ್ರ ಇದ್ದು, ಆತ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಎಲ್ಲಾ ವಾಹನಗಳಲ್ಲಿದ್ದ ಐದು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 500ಕ್ಕೂ ಹೆಚ್ಚು ಪಬ್, ಬಾರ್ ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದಾದ್ಯಂತ ಇರುವ ಅನಧಿಕೃತ ಪಬ್, ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ಪೊಲೀಸರು ತಡ ರಾತ್ರಿ ದಾಳಿ ನಡೆಸಿದ್ದು, ನಕಲಿ ಆಧಾರ್ ಕಾರ್ಡ್ ಗಳನ್ನು ಬಳಸಿ ಅಪ್ರಾಪ್ತರು ಪಬ್ ಗಳಿಗೆ ತೆರಳುತ್ತಿರುವುದು ಹಾಗೂ ಡ್ರಗ್ಸ್ ಸೇವನೆ ಮಾಡುತ್ತಿರುವುದುಪತ್ತೆಯಾಗಿದೆ. ದಾಳಿ ವೇಳೆ ಹಲವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿ ಮಾಡಲು ಶೇ. 50 ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಇಂದು ಕೊನೆಯ ದಿನಾಂಕವಾಗಿದ್ದು, ಇಂದು ಸೆಪ್ಟೆಂಬರ್ 9 ರೊಳಗೆ ವಾಹನ ಸವಾರರು ರಿಯಾಯಿತಿ ದರದಲ್ಲಿ ದಂಡ ಕಟ್ಟಬೇಕು.ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶಿಸಿದೆ.ಸೆಪ್ಟೆಂಬರ್ 9 ರೊಳಗೆ ವಾಹನ ಸವಾರರು ರಿಯಾಯಿತಿ ದರದಲ್ಲಿ ದಂಡ ಕಟ್ಟಬಹುದಾಗಿದೆ. ಸಂಚಾರಿ ಪೊಲೀಸ್ ಇಲಾಖೆಯ ಇ-ಚಲನ್ನಲ್ಲಿ ಫೆಬ್ರವರಿ 11, 2023ರ ಒಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ. ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿತ್ತು. ರಿಯಾಯಿತಿ ದರದಲ್ಲಿ ದಂಡ ಕಟ್ಟೋದು ಹೇಗೆ..? 1) ಕರ್ನಾಟಕ ರಾಜ್ಯ ಪೊಲೀಸ್ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಪಾವತಿ ಮಾಡಬಹುದು. 2) ಪೇಟಿಎಂ ಅಪ್ಲಿಕೇಶನ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ. 3) ಕರ್ನಾಟಕ ಒನ್ ಅಥವಾ ಬೆಂಗಳೂರು…
ಮೊರಾಕೊ:ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ ಮರ್ಕೆಚ್ ಬಳಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಸಮೀಪದ ಮರಕೇಶ್‌ನಲ್ಲಿ ಕಟ್ಟಡಗಳು ಅ ಲುಗಾಡುತ್ತಿವೆ ಮತ್ತು ಭಯಭೀತರಾದ ನಿವಾಸಿಗಳು ಬೀದಿಗಿಳಿದಿದ್ದಾರೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಆದರೆ, ಅಧಿಕಾರಿಗಳು ಇನ್ನೂ ಹಾನಿಯ ಪ್ರಮಾಣವನ್ನು ಲೆಕ್ಕಾಚಾರ ಮಾಡಬೇಕಾಗಿದೆ. ಭೂಕಂಪದ ಕೇಂದ್ರಬಿಂದುವು ತುಲನಾತ್ಮಕವಾಗಿ 18.5 ಕಿಮೀ ಆಳದಲ್ಲಿದೆ ಮತ್ತು ಯುಎಸ್‌ಜಿಎಸ್ ಪ್ರಕಾರ, ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಯ ನಂತರ ಮರಕೇಶ್‌ನ ನೈರುತ್ಯಕ್ಕೆ 72 ಕಿಮೀ ಮತ್ತು ಅಟ್ಲಾಸ್ ಪರ್ವತ ಪಟ್ಟಣವಾದ ಒಕೈಮೆಡೆನ್‌ನಿಂದ 56 ಕಿಮೀ ಪಶ್ಚಿಮಕ್ಕೆ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಕೆಲವು ವೀಡಿಯೊಗಳು, ಒಂದು ಕಟ್ಟಡವು ಕುಸಿದುಬೀಳುವುದನ್ನು ಮತ್ತು ಬೀದಿಗಳಲ್ಲಿ ಕಲ್ಲುಮಣ್ಣುಗಳನ್ನು ತೋರಿಸಿದೆ.ಜನರು ಶಾಪಿಂಗ್ ಸೆಂಟರ್, ರೆಸ್ಟೋರೆಂಟ್‌ಗಳು ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳಿಂದ ಓಡಿಹೋಗುವುದನ್ನು ಮತ್ತು ಹೊರಗೆ ಒಟ್ಟುಗೂಡುವುದನ್ನು ತೋರಿಸಿದೆ. ಮರಕೇಶ್‌ನಲ್ಲಿ, ನಿವಾಸಿ ಬ್ರಾಹಿಂ ಹಿಮ್ಮಿ ಅವರು “ಹಳೆಯ ಪಟ್ಟಣದಿಂದ ಆಂಬ್ಯುಲೆನ್ಸ್‌ಗಳು ಬರುತ್ತಿರುವುದನ್ನು ನೋಡಿದ್ದಾರೆ…
ಮಂಗಳೂರು: 2023-24 ಸಾಲಿನಲ್ಲಿ ಪಿ.ಎಂ.ಇ.ಜಿ.ಪಿ ಯೋಜನೆ ಗ್ರಾಮೀಣ ಹಾಗೂ ನಗರ ಭಾಗದ ನಿರುದ್ಯೋಗಿಗಳಿಗೆ ಹೊಸದಾಗಿ ಸ್ವಂತ ಉದ್ಯೋಗ ಪ್ರಾರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ. ಸ್ವಉದ್ಯೋಗ ಮಾಡಿಕೊಳ್ಳುವವರಿಗೆ ಗ್ರಾಮೀಣ, ಪಟ್ಟಣ, ನಗರ ಪ್ರದೇಶದಲ್ಲಿ ಹೊಸ ಉದ್ದಿಮೆ ಘಟಕಗಳನ್ನು ಪ್ರಾರಂಭಿಸುವವರಿಗೆ ಬ್ಯಾಂಕಿನಿಂದ ಉತ್ಪಾದನೆ ಘಟಕಕ್ಕೆ ಗರಿಷ್ಠ 50 ಲಕ್ಷ ಹಾಗೂ ಸೇವಾ ಘಟಕಕ್ಕೆ ಗರಿಷ್ಠ ಮೊತ್ತ 20 ಲಕ್ಷ ರೂಗಳ ವರೆಗೆ ಸಾಲ ಪಡೆಯಲು ಅರ್ಹರಿದ್ದು, ಈ ಸಾಲಕ್ಕೆ ಗರಿಷ್ಟ ಶೇ.25ರಿಂದ 35ರವರೆಗೆ ಇಲಾಖಾ ವತಿಯಿಂದ ಸಹಾಯಧನ ನೀಡಲಾಗುವುದು.ಅರ್ಹ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಗಳನ್ನು ಕೆವಿಐಬಿ ಇಲಾಖೆಗೆ ಈ ಕೆಳಗೆ ತಿಳಿಸಿರುವ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಭಾವಚಿತ್ರ, ಆಧಾರ್ ಪ್ರತಿ, ಯೋಜನಾ ವರದಿ, ವಿದ್ಯಾರ್ಥಿ ಪ್ರಮಾಣ ಪತ್ರ, ಘಟಕ ಸ್ಥಳ ಗ್ರಾಮೀಣ ಪ್ರದೇಶವಾಗಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ ದೃಡೀಕರಣ, ಜಾತಿ ಪ್ರಮಾಣ ಪತ್ರ, ವಾಸ ಸ್ಥಳ ದೃಢೀಕರಣ, ಮನೆ ತೆರಿಗೆ ಬಾಡಿಗೆ ಕರಾರು ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಕೊಟೇಶನ್…
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪಮೇಯರ್ ಹುದ್ದೆಗೆ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುಧೀರ್ ಶೆಟ್ಟಿ ಮೇಯರ್ ಆಗಿ ಮತ್ತು ಉಪಮೇಯರ್ ಆಗಿ ಬಿಜೆಪಿಯ ಸುನಿತಾ ಆಯ್ಕೆಯಾಗಿದ್ದಾರೆ. ಶುಕ್ರವಾರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಚುನಾವಣಾಧಿಕಾರಿ ಮೈಸೂರು ಉಪವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಚುನಾವಣೆ ನಡೆಸಿದರು. ಈ ಅವಧಿಯ ನಾಲ್ಕನೇ ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ ಹಾಗೂ ಉಪಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಇಬ್ಬರು ಎಸ್‌ಡಿಪಿಐ ಸದಸ್ಯರು ಇದ್ದಾರೆ. ಹಿಂದಿನ ಅವಧಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರು ಮೇಯರ್ ಹುದ್ದೆಗೆ ಆಯ್ಕೆಯಾಗಿದ್ದರು. ಈ ಬಾರಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಮೇಯರ್ ಹುದ್ದೆ, ಮಂಗಳೂರು ಉತ್ತರಕ್ಕೆ ಉಪಮೇಯರ್ ಹುದ್ದೆ ಸಿಕ್ಕಿದೆ. ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಕಾಂಗ್ರೆಸ್ನಿಂದ ನವೀನ್ ಆರ್.ಡಿಸೋಜ ನಾಮಪತ್ರ ಸಲ್ಲಿಸಿದ್ಧರು.
ಧರ್ಮಸ್ಥಳ ಸೌಜನ್ಯಾ ಹತ್ಯೆ ಹಾಗೂ ಹತ್ಯಾಚಾರ ಪಕರಣ ಕುರಿತಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು (ಸೆಪ್ಟೆಂಬರ್ 08) ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ನಡೆದ ಉಜಿರೆ ಎಸ್.ಡಿ.ಎಂ.ಕಾಲೇಜು ವಿದ್ಯಾರ್ಥಿನಿ, ಪಾಂಗಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಸಿಐಡಿ ಮತ್ತು ಸಿಬಿಐಯಿಂದ ತನಿಖೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಸಂತೋಷ್ ರಾವ್ ನಿರಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ತೀರ್ಪು ನೀಡಿತ್ತು. ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಬೇಕು. ತನಿಖೆಯ ಆರಂಭದಲ್ಲಿ ಲೋಪ ಎಸಗಿರುವ ತನಿಖಾಧಿಕಾರಿ ಮತ್ತು ವೈದ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ…
ಪುತ್ತೂರಿನಿಂದ ಕಾಣಿಯೂರು ಕಡೆಗೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಯುವಕನೋರ್ವ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆಯೋರ್ವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಟ್ವೀಟರ್ ಖಾತೆಗೆ ಟ್ವೀಟ್ ಮೂಲಕ ದೂರಿದ್ದು, ಇದಕ್ಕೆ ಸ್ಪಂದಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.ಮಹಿಳೆ ಪುತ್ತೂರಿನಿಂದ ನಿಂತಿಕಲ್ಲಿಗೆ ಬಸ್ಸಲ್ಲಿ ಸಂಜೆ ಬರುತ್ತಿರುವಾಗ ಯುವಕನೋರ್ವ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದು ಈ ಬಗ್ಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ಆ ಯುವಕ ಫೋನ್ ನಂಬರನ್ನು ಮಹಿಳೆಗೆ ನೀಡಿದ್ದು ಬಳಿಕ ಸವಣೂರಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದರು.ಈ ಬಗ್ಗೆ ಮಹಿಳೆಯಿಂದ ದೂರನ್ನು ಸ್ವೀಕರಿಸಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯಿಸಿದ್ದಾರೆ.










