Author: main-admin

ಮಂಗಳೂರು : ಅಡುಗೆ ಉದ್ಯಮಕ್ಕೆ ಬೇಕಾದ ಪರಿಕರಗಳನ್ನು ಕಳುಹಿಸುವುದಾಗಿ ನಂಬಿಸಿ ಆನ್‌ಲೈನ್ ವಂಚನೆ ನಡೆಸಿದ ವ್ಯಕ್ತಿಯೊಬ್ಬ 1.16 ಲಕ್ಷ ರೂಪಾಯಿ ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ದೂರುದಾರರು ಜುಲೈ 15 ರಂದು ಬಿಗ್‌ಬಾಸ್ಕೆಟ್ ಅಪ್ಲಿಕೇಶನ್‌ನಲ್ಲಿ ಅಡುಗೆಗೆ ಬೇಕಾದ ಉಪಕರಣಗಳನ್ನು ನೋಡಿದ ನಂತರ ಆಪಾದಿತ ಬಿಗ್‌ಬಾಸ್ಕೆಟ್ ಫೇಸ್‌ಬುಕ್ ಖಾತೆದಾರರೊಂದಿಗೆ ಚಾಟ್ ಮಾಡಿದ್ದರು. ಅಪರಿಚಿತರು ಸಂತ್ರಸ್ತರಿಗೆ ಕಡಿಮೆ ಬೆಲೆಗೆ ಅಡುಗೆ ಸಲಕರಣೆಗಳನ್ನು ಪೂರೈಸುವ ಭರವಸೆ ನೀಡಿದರು. ನಂತರ, ಅವರು ಬಿಗ್‌ಬಾಸ್ಕೆಟ್ ಹೆಸರಿನ ಫೇಸ್‌ಬುಕ್ ಲಿಂಕ್ ಅನ್ನು ಕಳುಹಿಸಿದರು ಮತ್ತು ದೂರುದಾರರಿಗೆ ತಮ್ಮ ವಿವರಗಳನ್ನು ನೀಡುವಂತೆ ಕೇಳಿದರು. ವ್ಯಕ್ತಿ ತನ್ನ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ ನಂತರ, ಅವನ ಖಾತೆಯಿಂದ 1.16 ಲಕ್ಷ ರೂಪಾಯಿಗಳನ್ನು ಹಂತಹಂತವಾಗಿ ಪಡೆಯಲಾಗಿದೆ.ಈ ಸಂಬಂಧ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳ್ತಂಗಡಿ: ರವಿವಾರದ ರಜಾದಿನವಾದ ಕಾರಣ ಮನೆಯಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಜು.16 ರಂದು ದಿಡುಪೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಪ್ರಥಮ ಪುತ್ರ, 8 ನೇ ತರಗತಿ ವಿದ್ಯಾರ್ಥಿ ಶ್ರೀಶ (14) ಎಂಬವರೇ ಮೃತರಾದವರು. ಇವರು ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು, ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿಗಳು ಆಗಮಿಸಿ ಅಗತ್ಯ ಕಾನೂನು ಕ್ರಮ ಜರುಗಿಸಿದ್ದಾರೆ.

Read More

ಮಂಗಳೂರು: ಕ್ಯಾಟರಿಂಗ್ ಮಾಡೋಕೇ ಬೇಕಾಗುವ ವಸ್ತುಗಳನ್ನು ನೀಡುವುದಾಗಿ ನಂಬಿಸಿ 1.16 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಂಗಳೂರಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರ ಆ್ಯಪ್‌ ನಲ್ಲಿ ಕ್ಯಾಟರಿಂಗ್ ವ್ಯವಹಾರಕ್ಕೆ ಬೇಕಾದ ವಸ್ತುಗಳನ್ನು ನೋಡಿ ಫೇಸ್‌ ಬುಕ್ ಖಾತೆದಾರರೊಂದಿಗೆ ಚಾಟಿಂಗ್ ಮಾಡಿದ್ದರು. ಆಗ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡುವುದಾಗಿ ಚಾಟಿಂಗ್ ನಡೆಸಿದ ಅಪರಿಚಿತ ವ್ಯಕ್ತಿ ಫೇಸ್‌ ಬುಕ್ ಲಿಂಕ್‌ ವೊಂದನ್ನು ಕಳುಹಿಸಿ ಅದರಲ್ಲಿ ಮಾಹಿತಿಯನ್ನು ನೀಡುವಂತೆ ತಿಳಿಸಿದ್ದ. ಅದರಂತೆ ದೂರುದಾರರು ಅವರ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ್ದರು. ಬಳಿಕ ಅವರ ಕ್ರೆಡಿಟ್ ಕಾರ್ಡ್ ಖಾತೆಯಿಂದ ಹಂತ ಹಂತವಾಗಿ 1.16 ಲಕ್ಷ ರೂಪಾಯಿ ವರ್ಗಾಯಿಸಿ ವಂಚಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

Read More

ಬ್ರಹ್ಮಾವರ: ಬೈಕ್ ನಿಂದ ಬಿದ್ದು ಹಿಂಬದಿ ಸವಾರೆಯೊಬ್ಬರು ಸಾವನಪ್ಪಿರುವ ಘಟನೆ ಹೆಬ್ರಿ- ಬ್ರಹ್ಮಾವರ ರಸ್ತೆಯ ಕೊಳಂಬೆ ಎಂಬಲ್ಲಿ ನಿನ್ನೆ ನಡೆದಿದೆ. ಮೃತರನ್ನು ಕೋಟೇಶ್ವರ ನಿವಾಸಿ, ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಕಾಲೇಜಿನ ಲೈಬ್ರೆರಿಯನ್ ಶಾಂಭವಿ ಪಿ.(59) ಎಂದು ಗುರುತಿಸಲಾಗಿದೆ. ಕಾಲೇಜು ಬಿಟ್ಟ ನಂತರ ಇವರು ಕಾಲೇಜಿನ ಲ್ಯಾಬ್ ಟೆಕ್ನಿಷಿಯನ್ ಸುಧೀಂದ್ರ ಎಂಬವರ ಬೈಕಿ ನಲ್ಲಿ ಬ್ರಹ್ಮಾವರದವರೆಗೆ ಹೊರಟಿದ್ದರು. ದಾರಿ ಮಧ್ಯೆ ಇವರು ಬೈಕಿನಿಂದ ಆಯತಪ್ಪಿ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಪ್ರಕರಣವೊಂದರಲ್ಲಿ ಭಾಗಿಯಾಗಿ ಪೊಲೀಸರ ಕೈಗೆ ಸಿಗದೆ 9 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.ಕಣ್ಣೂರಿನ ಅಡ್ಯಾರ್, ಕರ್ಮರ್ ನಿವಾಸಿ ಸೈಯದ್ ಹಸೈನಾರ್ ಅಲಿಯಾಸ್ ಹಸೈನ್(35) ಶಿಕ್ಷೆಗೊಳಗಾದ ಅಪರಾಧಿ. ಆರೋಪಿಗೆ ಜೆಎಂಎಫ್ ಸಿ 3ನೇ ನ್ಯಾಯಾಲಯ ಹಸೈನಾರ್ ಗೆ 2014ರ ಅಕ್ಟೋಬರ್ 18ರಂದು 4 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 1,500ರೂ. ದಂಡ ವಿಧಿಸಿರುತ್ತದೆ. ಆದರೆ ಆರೋಪಿ ಆ ಬಳಿಕ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಆದ್ದರಿಂದ ಪೊಲೀಸರು ನಿನ್ನೆ(ಜುಲೈ 15) ಉರ್ವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ದಸ್ತಗಿರಿ ಮಾಡಿದ್ದಾರೆ.

Read More

ಕಾರ್ಕಳ: ನಗರ ಠಾಣೆಯ ಪೊಲೀಸ್ ಸಿಬಂದಿಯೊಬ್ಬರು ಇಲ್ಲಿನ ಮಿಯ್ಯಾರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ. ಕಾರ್ಕಳ ನಗರ ಠಾಣೆಯ ಪೊಲೀಸ್ ಸಿಬಂದಿ ಎಚ್ ಸಿ ಪ್ರಶಾಂತ್ ಕಾರ್ಕಳದ ಮಿಯ್ಯಾರಿನ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಪ್ರಶಾಂತ್ ಅವರು ರಜೆಯಲ್ಲಿದ್ದರು. ಮನೆಯ ಹಿಂಬಾಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Read More

ಸುಳ್ಯ: ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರುಹತ್ಯೆ ಪ್ರಕರಣದ ಆರೋಪಿಗಳು ಶರಣಾಗಬೇಕು ಎನ್ನುವ ಎಚ್ಚರಿಕೆಯ ಸಂದೇಶವನ್ನು ಸುಳ್ಯದಲ್ಲಿ ಮತ್ತೊಮ್ಮೆ ಎನ್‌ಐಎ (NIA) ಹೊರಡಿಸಿದೆ. ಇದು ತಲೆಮರೆಸಿಕೊಂಡಿರುವ ಹಂತಕರಿಗೆ ಎರಡನೇ ಎಚ್ಚರಿಕೆಯ ಸಂದೇಶವಾಗಿದೆ. ಈ ಎಚ್ಚರಿಕೆಗೂ ಬಗ್ಗದಿದ್ದರೆ ಮೂರನೇಯ ಎಚ್ಚರಿಕೆಯ ಸಂದೇಶವನ್ನು ಹೊರಡಿಸಲಾಗುತ್ತದೆ. ಆ ಎಚ್ಚರಿಕೆಯ ಸಂದೇಶದಲ್ಲೂ ಶರಣಾಗದೆ ಹೋದರೆ ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿಪಾಸ್ತಿಗಳನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಳ್ಳಲಿದೆ ಅನ್ನುವ ಮಾಹಿತಿ ಸಿಕ್ಕಿದೆ. ಆಗಸ್ಟ್‌ 18ರೊಳಗೆ ಶರಣಾಗಲೇಬೇಕು ಎಂದು ಸೂಚಿಸಿದೆ. ಈ ಹಿಂದೆ ಜೂ.30ರೊಳಗೆ ಶರಣಾಗಬೇಕು. ಇಲ್ಲದೇ ಹೋದಲ್ಲಿ ಅವರ ಮನೆಯನ್ನು ಜಪ್ತಿ ಮಾಡುವುದಾಗಿ ಎನ್‌ಐಎ(NIA) ಅಧಿಕಾರಿಗಳು ಧ್ವನಿ ವರ್ಧಕದ ಮೂಲಕ ತಿಳಿಸಿದ್ದರು. ಆದರೆ ಇದುವರೆಗೆ ಪ್ರವೀಣ್ ನೆಟ್ಟಾರು ಹಂತಕರು ಶರಣಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಎರಡು ವಾರಗಳ ಹಿಂದೆ ಎನ್‌ಐಎ ಅಧಿಕಾರಿಗಳು ಸುಳ್ಯ ನಗರದಲ್ಲಿ ಸಾರ್ವಜನಿಕವಾಗಿ ಧ್ವನಿವರ್ಧಕದ ಮೂಲಕ ಅನೌನ್ಸ್‌ ಮಾಡುತ್ತಿದ್ದು, ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಸುಳ್ಯದ (Sullia) ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್…

Read More

ಬೆಂಗಳೂರು: ಲಂಚ ಪಡೆದು ಎಸ್ಕೇಪ್ ಆಗುತ್ತಿದ್ದ ಅಧಿಕಾರಿಯನ್ನು ಸಿನಿಮಾ ಶೈಲಿಯಲ್ಲಿ ಚೇಸ್ ಮಾಡಿ ಲೋಕಾಯುಕ್ತ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ನೆಲಮಂಗಲ ಬಳಿಕ ಸೊಂಡೇಕೊಪ್ಪದಲ್ಲಿ ಈ ಘಟನೆ ನಡೆದಿದೆ. ರಂಗಧಾಮಯ್ಯ ಎನ್ನುವ ವ್ಯಕ್ತಿ ಕೆಜಿ ಸರ್ಕಲ್ ಬಳಿ ಇರುವ ತಾಲೂಕು ಕಚೇರಿಯಲ್ಲಿ ಫುಡ್ ಇನ್‌ಸ್ಪೆಕ್ಟರ್ ಆಗಿರುವ ಮಹಂತೇಗೌಡ ಬಳಿ ಟ್ರೇಡ್ ಲೈಸೆನ್ಸ್ ಮಾಡಿಸಲು ತೆರಳಿದ್ದರು. ಲೈಸೆನ್ಸ್ ಕೊಡಲು ಅಧಿಕಾರಿ 1 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಧಿಕಾರಿ ಲಂಚ ಕೇಳಿದ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಂತೇಗೌಡನನ್ನು ಬಲೆಗೆ ಬೀಳಿಸಲು ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದರು. ಮುಂಗಡವಾಗಿ 43 ಸಾವಿರ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಹಣ ಪಡೆಯುವ ಸಂದರ್ಭದಲ್ಲಿ ಮಹಂತೇಗೌಡ ಅವರನ್ನು ಬಂಧಿಸಲು ಯತ್ನಿಸಿದ್ದಾರೆ. ಟ್ಯ್ರಾಪ್‌ನಲ್ಲಿ ಸಿಕ್ಕಿಕೊಂಡಿರುವ ಬಗ್ಗೆ ಅನುಮಾನ ಬರುತ್ತಿದ್ದಂತೆ ಫುಡ್ ಇನ್‌ಸ್ಪೆಕ್ಟರ್ ಮಹಂತೇಗೌಡ ಪರಾರಿಯಾಗಲು ಯತ್ನಿಸಿದ್ದಾರೆ. ಹಣ ಪಡೆದು ತನ್ನ ಕಾರಿನಲ್ಲಿ ಸುಮಾರು…

Read More

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪಕ್ರಿಯೆಯನ್ನು ಜುಲೈ 19 ರಿಂದ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಗಸ್ಟ್ ತಿಂಗಳಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ . ಅರ್ಜಿ ಸ್ವೀಕಾರ ಜುಲೈ 19 ರಿಂದ ಆರಂಭವಾಗಲಿದ್ದು, ಆಗಸ್ಟ್ 15ಕ್ಕೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳಲ್ಲಿ ಯಜಮಾನಿ ಎಂದು ಗುರುತಿಸಿಕೊಂಡ ಮಹಿಳೆಯರಿಗೆ ಈ ಯೋಜನೆಯ ಲಾಭ ಸಿಗಲಿದೆ’ ಎಂದರು. ಗೃಹಲಕ್ಷ್ಮಿ ಯೋಜನೆ ಜಾರಿಗೆ ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಮಾರ್ಗಸೂಚಿ ಪ್ರಕಟಿಸಿದೆ.ಪ್ರಜಾಪ್ರತಿನಿಧಿಗಳನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರತಿ ಒಂದು ಸಾವಿರ ಜನಸಂಖ್ಯೆ ಅಥವಾ ಗ್ರಾಮಕ್ಕೆ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಓರ್ವ ಮಹಿಳಾ ಪ್ರಜಾಪ್ರತಿನಿಧಿ ಸೇರಿ ಇಬ್ಬರು ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಒಂದು ತಿಂಗಳ ಅವಧಿಗೆ…

Read More

ವಿಟ್ಲ : ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯ್ಯ ಎಜುಕೇಶನ್ ಟ್ರಸ್ಟ್ ಇದರ ಅದೀನದ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಇದರ ನೂತನ ಶಾಲಾ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು. ಕನ್ಯಾನ ಜಮಾಅತ್ ಖಾಝಿ ಸಯ್ಯದ್ ಫಝಲ್ ಕೊಯಮ್ಮ ತಂಙಳ್ ಕೂರತ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುದರ್ರಿಸ್ ಇಬ್ರಾಹಿಂ ಫೈಝಿ ಕನ್ಯಾನ. ಜಮಾಅತ್ ಕಮಿಟಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಬಾಳ್ತ್ರೊಡಿ, ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಂ.ಕೆ. ಮಹಮ್ಮದ್ ಕುಂಞಿ ಹಾಜಿ, ಜಮಾಅತ್ ಕಮಿಟಿ ಪದಾಧಿಕಾರಿಗಳು, ಟ್ರಸ್ಟ್ ನ ಸದಸ್ಯರು ಹಾಗೂ ಜಮಾಅತರು ಉಪಸ್ಥಿತರಿದ್ದರು.

Read More