ಬೆಂಗಳೂರು; ಈಗಾಗಲೇ ಗಗನಕ್ಕೇರಿರುವ ಟೊಮೆಟೋ ಬೆಲೆ ಮತ್ತಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಟೊಮೆಟೋ ಬೆಲೆ ಕೆಜಿಗೆ 300 ರೂ ಏರಿಕೆ ಸಂಭವ ಇದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ. ಟೊಮೆಟೋ ಬೆಲೆ ಇಳಿಕೆಯಾಗಲಿದೆ ಎಂದು ಕಾಯುತ್ತಿದ್ದವರಿಗೆ ಶಾಕಿಂಗ್ ಎದುರಾಗಿದೆ.ಅಡುಗೆ ಮಾಡಲು ಟೊಮೆಟೋ ಬಳಕೆ ಮತ್ತಷ್ಟು ದುಬಾರಿಯಾಗಲಿದೆ. ಮಳೆಯಿಂದಾಗಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ವೈರಸ್ ಸೋಂಕಿಗೆ ಟೊಮೆಟೋ ಬೆಳೆ ನಾಶಗೊಂಡಿದೆ. ಉತ್ತರ ಭಾರತದಲ್ಲಿ ಸುಳಿಯುತ್ತಿರುವ ಮಳೆಯ ಹಾಗೂ ಹವಾಮಾನ ವೈಪರಿತ್ಯದಿಂದ ಟೊಮೊಟೋ ಬೆಳೆ ನಾಶವಾಗಿದೆ.ಇದರಿಂದ ಟೊಮೇಟೋ ಬೆಲೆ ಸಧ್ಯ ಇಳಿಕೆ ಕಾಣುವುದು ಕಷ್ಟ ಎಂದು ಹೇಳಲಾಗಿದೆ.
Author: main-admin
ಬೆಂಗಳೂರು: ಸೈಬರ್ ವಂಚನೆಯಂತ ( Cyber Crime ) ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಕೇವಲ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ( Cyber Police Station ) ತೆರಳಿಯೇ ದೂರು ಸಲ್ಲಿಸಬೇಕಾಗಿತ್ತು. ಆದ್ರೇ ಇನ್ಮುಂದೆ ಸಿವಿಲ್ ಪೊಲೀಸ್ ಠಾಣೆಗಳಲ್ಲಿಯೂ ( Civil Police Station ) ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ದೂರು ನೀಡಬಹುದಾಗಿದೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದು, ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ಮುಂದೆ ಈ ಕುರಿತ ಸೈಬರ್ ಅಪರಾಧಗಳ ದೂರುಗಳನ್ನು ನಾಗರಿಗ ಪೊಲೀಸ್ ಠಾಣೆಗಳಲ್ಲೂ ನೀಡಬಹುದು ಎಂದಿದ್ದಾರೆ. ಅಂದಹಾಗೇ ಈ ಮೊದಲು ಡಿಸಿಪಿ ಮತ್ತು ಎಸ್ ಪಿ ಮಟ್ಟದಲ್ಲಿ ತೆರೆಯಲಾಗಿದ್ದ ಸೈಬರ್, ಆರ್ಥಿಕ, ನಾರ್ಕೋಟಿಕ್ ಠಾಣೆಗಳಲ್ಲಿ ಅಷ್ಟೇ ದೂರು ದಾಖಲಿಸಲು ಅವಕಾಶ ಇತ್ತು. ಈಗ ಸಿವಿಲ್ ಠಾಣೆಗಳಲ್ಲೂ ಸೈಬರ್ ಕ್ರೈಂಗೆ ಸಂಬಂಧ ಪಟ್ಟಂತ ದೂರುಗಳನ್ನು ಸಲ್ಲಿಸಬಹುದಾಗಿದೆ. ಅಂದಹಾಗೇ 2022ನೇ ಸಾಲಿನಲ್ಲಿ ರಾಜ್ಯದಲ್ಲಿ 12,548 ಸೈಬರ್ ಪರಾಧಗಳು ದಾಖಲಾಗಿದ್ದಾವೆ.…
ಉಡುಪಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ಅಫೇರ್ಸ್ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದು ಶ್ರೀ ಕೃಷ್ಣ ದೇವರ ದರ್ಶನ ಪಡೆದರು.ಮಣಿಪಾಲದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮೊದಲು ಕೃಷ್ಣಮಠಕ್ಕೆ ಭೇಟಿ ನೀಡಿ ಬಳಿಕ ಅದಮಾರು ಮಠಕ್ಕೆ ತೆರಳಿದರು. ಅಲ್ಲಿ ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು.ಅದಮಾರು ಮಠದ ವತಿಯಿಂದ ಕೇಂದ್ರ ಸಚಿವೆಗೆ ಗೌರವಾರ್ಪಣೆ ಮಾಡಲಾಯಿತು.ದೇವಾಲಯ ಭೇಟಿಯ ಬಳಿಕ ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಪ್ರಬುದ್ಧರ ಸಭೆಯಲ್ಲಿ ಕೇಂದ್ರ ಸಚಿವರು ಭಾಗಿಯಾದರು.
ಸುಳ್ಯ : ಜಾಗದ ತಕರಾರಿಗೆ ಸಂಬಂಧಿಸಿದಂತೆ ತಮ್ಮಂದಿರು ಸೇರಿ ಅಣ್ಣನನ್ನು ಇರಿದು ಕೊಲೆಗೈದ ಘಟನೆ ಸುಳ್ಯ ಸಂಪಾಜೆಯ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ಕುದ್ರೆಪಾಯ ನಿವಾಸಿ ಉಸ್ಮಾನ್ ಎಂದು ಗುರುತಿಸಲಾಗಿದೆ. ಸತ್ತಾರ್, ರಫೀಕ್, ಇಸುಬು,ಅಬ್ಬಾಸ್, ಉಸ್ಮಾನ್ ಮೊದಲಾದ ಅಣ್ಣತಮ್ಮಂದಿರ ಕೃಷಿ ಭೂಮಿ ಸುಮಾರು 50 ಎಕ್ರೆ ಜಾಗ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವಿತ್ತು. ಶುಕ್ರವಾರ ಇವರು ಚೆಂಬು ಗ್ರಾಮದ ಕುದ್ರೆಪಾಯದ ಸಮೀಪ ಇರುವ ಜಾಗಕ್ಕೆ ಹೋಗಿದ್ದರು. ಈ ವೇಳೆ ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ತೀವ್ರ ಚರ್ಚೆ ನಡೆದು ಕೋಪದ ತೀವ್ರತೆಯಲ್ಲಿ ಸಹೋದರರು ಸೇರಿ ಚೂರಿಯಿಂದ ಇರಿದು ಉಸ್ಮಾನ್ ನನ್ನು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಸಂಪಾಜೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಆಹಾರ ಸುರಕ್ಷತ ಮತ್ತು ಗುಣಮಟ್ಟ ಪ್ರಾಧಿಕಾರ ಪ್ಯಾಕೆಟ್ ರೂಪದಲ್ಲಿ ಮೀನಿನ ಸಂಸ್ಕರಿತ ಉತ್ಪನ್ನಗಳ ಮಾರಾಟಕ್ಕೆ ಪರವಾನಿಗೆ ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಮೀನು ಸಂಸ್ಕರಣೆ ಕುರಿತು ಸಾರ್ವಜನಿಕರ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಧಿಕಾರವು ಮೀನು ಸಂಸ್ಕರಣ ಘಟಕಗಳ ಮೇಲೆ ನಿಗಾ ವಹಿಸಲಾರಂಭಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಣಮೀನು ಪ್ಯಾಕೆಟ್ ಹಾಗೂ ಬಿಡಿಯಾಗಿ ಮಾರಾಟವಾಗುತ್ತಿದೆ. ಹೀಗೆ ಪ್ಯಾಕ್ ಮಾಡಿ ಮಾರಬೇಕಿದ್ದರೆ ಪ್ರಾಧಿಕಾರದಡಿ ನೋಂದಾಯಿಸಿ, ಪರವಾನಿಗೆ ಪಡೆಯುವುದನ್ನು ಕಡ್ಡಾಯಗೊಳಿಸಲಿದೆ. ಬಿಡಿ ಮಾರಾಟಗಾರರಿಂದಲೂ ಮಾದರಿ(ಸ್ಯಾಂಪಲ್)ಗಳನ್ನು ಸಂಗ್ರಹಿಸಲಿದ್ದು, ಇದರಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಅಂಶಗಳು ಕಂಡು ಬಂದರೆ ಮಾರಾಟಗಾರರು ಮತ್ತು ಉತ್ಪನ್ನಕಾರರ ಮೇಲೆ ದಂಡ ವಿಧಿಸುವ ಸಂಭವವಿದೆ. ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಮಂಗಳೂರಿನಿಂದ ಒಣ ಮೀನು ಪೂರೈಕೆ ಆಗುತ್ತಿದೆ. ಕೆಲವು ಮೀನುಗಾರ ಕುಟುಂಬ ಗಳೂ ಒಣಮೀನು ಉದ್ಯಮ ನಡೆಸುತ್ತಿವೆ. ಈ ಉದ್ಯಮಗಳು ಮೀನು ಸಂಸ್ಕರಣೆಯಲ್ಲಿ ಎಲ್ಲಿಯೂ ಗುಣಮಟ್ಟ ಹಾಗೂ ಸ್ವತ್ಛತೆ ಕುರಿತು ರಾಜಿ ಮಾಡಿಕೊಳ್ಳದಂತೆ ಪ್ರಾಧಿಕಾರ ಎಚ್ಚರ ವಹಿಸಲಾರಂಭಿಸಿದೆ. ಈ ಕುರಿತು ತಿಳುವಳಿಕೆಯನ್ನೂ…
ಬೆಂಗಳೂರು : ಇತ್ತೀಚಿಗೆ ರಾಜ್ಯದಲ್ಲಿ ಅಪಾರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಎಸ್‌ಪಿ, ಕಮಿಷನರ್ ಗಳಿಗೆ ಎಡಿಜಿಪಿ ಆರ್ ಹಿತೇಂದ್ರ ಖಡಕ್ ಸೂಚನೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿವೆ. ಸಮಾಜದಲ್ಲಿ ಪದೇಪದೇ ಅಪರಾಧ ಎಸಗುತ್ತಿರುವವರು ಹಾಗೂ ಸಾರ್ವಜನಿಕರಲ್ಲಿ ಭಯವನ್ನು ಉಂಟು ಮಾಡುತ್ತಿರುವವರು ಅಂತವರ ಹೆಸರನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ. ಕೆಲ ದಿನಗಳಿಂದ ಅಪರಾಧ ಸಂಖ್ಯೆ ಹೆಚ್ಚಳವಾದ್ದರಿಂದ, ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹಿನ್ನೆಲೆ ರಾಜ್ಯದ ಎಲ್ಲ ಎಸ್. ಪಿ ಹಾಗೂ ಕಮಿಷನರ್ ಗಳಿಗೆ ಎಡಿಜಿಪಿ ಖಡಕ್ ಸೂಚನೆ ನೀಡಿದ್ದಾರೆ.
ಮಂಗಳೂರು: ಬಾಡಿಗೆಗೆ ಕಾರು ಪಡೆದು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತಾಲೂಕಿನ ವಗ್ಗ ನಿವಾಸಿ ಹರೀಶ್ ಯಾನೆ ಹರಿ (32) ಎಂಬಾತನನ್ನು ನಗರದ ಬಂದರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ನಗರದ ಫಳ್ನೀರ್ ಸಂಸ್ಥೆಯೊಂದರಿಂದ ಬಂಟ್ವಾಳದ ಯಕ್ಷಿತ್ ಎಂಬವರ ಕಾರನ್ನು ಆನ್‌ಲೈನ್ ಮೂಲಕ ಕಾಯ್ದಿರಿಸಿ, 25 ಸಾವಿರ ರೂ. ಆನ್‌ಲೈನ್ ಮೂಲಕ ಪಾವತಿಸಿದ್ದಾರೆ. ಬಾಕಿ 50 ಸಾವಿರ ರೂ. ನಗದು ನೀಡಿ ಅದರೊಂದಿಗೆ ಆಧಾರ್ ಕಾರ್ಡ್, ಚಾಲನಾ ಪರವಾನಿಗೆ ಮತ್ತು 3 ಬ್ಯಾಂಕ್ ಚೆಕ್‌ಗಳನ್ನು ನೀಡಿ 15 ದಿನಗಳಿಗೆ ಕಾರು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದಎಂದುಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿತ್ತು. ಬುಕ್ಕಿಂಗ್ ಅವಧಿ ಮುಗಿದಿದ್ದರೂ ಕಾರನ್ನು ಹಿಂತಿರುಗಿಸದ ಕಾರಣ ಸಂಸ್ಥೆಯ ಮಾಲಕ ಮುಹಮ್ಮದ್ ಹುಸೈನಾರ್ ಕರೆ ಮಾಡಿದಾಗ ಆರೋಪಿಗಳು ಸ್ಪಂದಿಸಿರಲಿಲ್ಲ. ಜಿಪಿಎಸ್ ಮೂಲಕ ಪರಿಶೀಲಿಸಿದಾಗ ಕಾರು ವಿಜಯಪುರದಲ್ಲಿರುವುದು ಕಂಡು ಬಂದಿದೆ. ಯಕ್ಷಿತ್ ಮತ್ತು ಹರೀಶ್ ಎಂಬವರು ಆಧಾರ್ ಕಾರ್ಡ್‌ನ್ನು ನಕಲು ಮಾಡಿ ವಿಜಯಪುರದ ವ್ಯಕ್ತಿಯೊಂದಿಗೆ ಮಾರಾಟದ ಒಪ್ಪಂದ ಮಾಡಿ ಕೊಂಡು 7 ಲಕ್ಷ…
ವಿಟ್ಲ: ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಮಹಿಳೆ ಮನೆಯೊಳಗೆ ಸಿಲುಕಿ ಹಾಕಿಕೊಂಡ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಕೂರೇಲು ಮದ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿರುವ ಮನೆ ಸಂಪೂರ್ಣ ಹಾನಿಯಾಗಿದೆ. ಘಟನೆಯ ವೇಳೆ ಮನೆಯೊಳಗೆ ಮಹಿಳೆ ಮಲಗಿದ್ದರು ಎನ್ನಲಾಗಿದ್ದು, ಗಂಭೀರ ಪರಿಸ್ಥಿಯಲಿದ್ದಾರೆ ಎಂದು ತಿಳಿದು ಬಂದಿದೆ. ವಾಹನವನ್ನು ತೆರವು ಮಾಡದೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಕೊಣಾಜೆ: ಶಾಲಾ ಪರಿಸರದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಿದ ಬಾಳೆಪುಣಿ ಗ್ರಾಮ ಪಂಚಾಯತ್ ಕಚೇರಿಗೆ ಶಾಲಾ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಮಂಗಳೂರು ತಾಲೂಕಿನ ಕೊಣಾಜೆ ಬಳಿಯ ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಪುಣಿ ಶಾರದಾ ಗಣಪತಿ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳ ಕಾನೂನು ಉಲ್ಲಂಘಿಸಿ ಪಂಚಾಯತ್ ಪರವಾನಗಿ ನೀಡಿರುವ ವಿಚಾರವಾಗಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರು: ಮಂಗಳೂರಿನಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ತಡರಾತ್ರಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗೆ ಕನ್ನ ಹಾಕಿದ ಖದೀಮರು ಮಾರಾಟಕ್ಕೆ ನಿಲ್ಲಿಸಿದ್ದ ಎರಡು ಕಾರು ಸಹಿತ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಮಂಗಳೂರು ತಾಲೂಕಿನ ಸುರತ್ಕಲ್ ಹೊಸಬೆಟ್ಟು ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದೆ.ಅಬಿದ್ ಅಹಮ್ಮದ್ ಸುರಲ್ಪಾಡಿ ಎಂಬವರಿಗೆ ಸೇರಿದ್ದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಚೇರಿ ಇದಾಗಿದ್ದು,ತಡರಾತ್ರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದ ಖದೀಮರ ತಂಡವೊಂದು ಕಚೇರಿ ಮುಂಭಾಗದ ಡೋರಿನ ಗ್ಲಾಸ್ ಮುರಿದು ಒಳ ಪ್ರವೇಶಿಸಿದ್ದಾರೆ. ಕಚೇರಿ ಪೂರ್ತಿ ಹುಡುಕಾಡಿ ಡ್ರಾವರ್ ನಲ್ಲಿದ್ದ ಕಾರುಗಳ ಕೀಯನ್ನು ಪಡೆದು ಕಚೇರಿ ಮುಂಭಾಗ ಮಾರಾಟಕ್ಕೆ ನಿಲ್ಲಿಸಿದ್ದ ಎರಡು ಕಾರುಗಳನ್ನು ಲಪಟಾಯಿಸಿದ್ದಾರೆ.6 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು ಹಾಗೂ 9 ಲಕ್ಷ ಮೌಲ್ಯದ ಕ್ರೇಟಾ ಕಾರು ಸಮೇತ ಕಚೇರಿಯ ಒಳಗಿದ್ದ ಲ್ಯಾಪ್ ಟಾಪ್, ಪ್ರಿಂಟರ್, ಮೊಬೈಲ್, ಕಾರುಗಳ ದಾಖಲಾತಿ ಪತ್ರಗಳನ್ನು ಕೂಡ ಖದೀಮರು…










