Author: main-admin

ಮಂಗಳೂರು: ಕಾನೂನು ವಿದ್ಯಾರ್ಥಿನಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ವಕೀಲ ಕೆಎಸ್‌ಎನ್ ರಾಜೇಶ್ ವಿರುದ್ಧ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿದ ಎಫ್‌ಐಆರ್ ಮತ್ತು 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ವಕೀಲ ಕೆ.ಎಸ್‌.ಎನ್ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ. ಅತ್ಯಾಚಾರ, ಅತ್ಯಾಚಾರ ಯತ್ನ ಮತ್ತು ಅತ್ಯಾಚಾರಕ್ಕೆ ತಯಾರಿ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆಯಲ್ಲಿ ಕಂಡು ಬಂದಿದೆ. ತನಿಖಾಧಿಕಾರಿಗಳು ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳು, ಆರೋಪಿ ಮತ್ತು ದೂರುದಾರರ ನಡುವೆ ನಡೆದ ಮಾತುಕತೆಯ ವೈಜ್ಞಾನಿಕ ವರದಿಗಳು ಮತ್ತು ಘಟನಾ ಸಂದರ್ಭ ಆರೋಪಿಯ ಉದ್ದೇಶ, ಅತ್ಯಾಚಾರಕ್ಕೆ ಯತ್ನ ಮತ್ತು ಅತ್ಯಾಚಾರ ನಡೆದಿದೆಯೋ ಇಲ್ಲವೋ ಎಂಬ ವಿಷಯಕ್ಕೆ ಸಾಕ್ಷ್ಯ ವಿಚಾರಣೆ ವೇಳೆ ತಿಳಿಯುವುದೆಂದು ಮತ್ತು ನ್ಯಾಯಾಲಯ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದರೆ ಕಾನೂನು ವಿದ್ಯಾರ್ಥಿನಿಯರಿಗೆ…

Read More

ವಿಟ್ಲ: ಆಲ್ಟೊ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಂಗಾಯಿ ಮೈತ್ರೇಯಿ ಗುರುಕುಲದ ಬಳಿ ಈ ಅಪಘಾತ ಸಂಭವಿಸಿದೆ. ಕಡಂಬು ನಿವಾಸಿಗಳಾದ ಸಿನಾನ್ ಮತ್ತು ಫೈಜಲ್ ಬೈಕ್ ಸವಾರರು ಎಂದು ತಿಳಿದು ಬಂದಿದೆ. ವಾಹನಗಳ ಡಿಕ್ಕಿಯ ರಭಸಕ್ಕೆ ಬೈಕ್ ಸವಾರರೊಬ್ಬನ ತಲೆ ಕಾರಿನ ಗಾಜಿಗೆ ತಾಗಿ ಗಾಜು ಪುಡಿಪುಡಿಯಾಗಿ ಗಂಭೀರ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರು ಚಾಲಕ ಸುಳ್ಯ ಸಮೀಪದ ಕನಕಮಜಲು ನಿವಾಸಿ ಗೋಪಾಲಕೃಷ್ಣ ಎಂದು ಗುರುತಿಸಲಾಗಿದೆ. ಇವರು ತನ್ನ ಪುತ್ರಿಯನ್ನು ಮುಡಿಪು ನವೋದಯ ವಸತಿ ಶಾಲೆಗೆ ದಾಖಲಿಸಿ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸ್ಥಳೀಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Read More

ವಿಟ್ಲ: ಕಳೆದ ಎರಡು ವರ್ಷಗಳಿಂದ ವೀರಕಂಬ ಗ್ರಾಮ ಪಂ.ವ್ಯಾಪ್ತಿಯ ಬೆತ್ತಸರವು ರಸ್ತೆ ಬದಿಯ ಮರವೊಂದರಲ್ಲಿ ಪಂಚಾಯತ್‌ ಕುಡಿಯುವ ನೀರಿನ ಕೊಳವೆ ಬಾವಿಯ ಸಂಪರ್ಕದ ತ್ರಿ ಫೇಸ್ ವಿದ್ಯುತ್ ಬೋರ್ಡ್ ನೇತಾಡುತ್ತಿದೆ. ಈ ಬಗ್ಗೆ ಪಿಡಿಒ ಗೆ ಮಾಹಿತಿ ನೀಡಿದರೂ ಇದರ ಬಗ್ಗೆ ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ನೂರಾರು ಜನ ಓಡಾಡುತ್ತಿರುವ ರಸ್ತೆ ಬದಿಯ ಮರದಲ್ಲಿ ತ್ರಿ ಫೇಸ್ ವಿದ್ಯುತ್ ಬೋರ್ಡ್ ನೇತುಹಾಕಿದ ಸ್ಥಿತಿಯ ಬಗ್ಗೆ ಪಿಡಿಓಗೆ ಮಾಹಿತಿ ನೀಡಿ ಹದಿನೈದು ದಿನ ಕಳೆದಿದೆ. ಮಳೆಗಾಲದಲ್ಲಿ ಇದರಿಂದ ಪ್ರಾಣಾಪಾಯ ಆಗುವ ಸಂಭವವೂ ಹೆಚ್ಚಿದೆ. ಮಾಹಿತಿ ತಿಳಿದೂ ಇನ್ನೂ ತೆರವುಗೊಳಿಸದೇ ಬೇಜವಾಬ್ದಾರಿ ಮೆರೆದಿರುವುದು ಕಾರಣವಾಗಿದೆ. ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರು ಅರಿವಿಲ್ಲದೆ ಈ ಜಾಗದಲ್ಲಿ ಓಡಾಟ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನು ಯಾವುದಾದರೂ ದೂರು ನೀಡಲು ಪಿಡಿಓಗೆ ಕರೆ ಮಾಡುವಾಗ ಕರೆ ಎತ್ತದೆ ಸತಾಯಿಸುತ್ತಿರುವುದು ಕೂಡ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಅಧಿಕಾರ ಈ ರೀತಿಯಾಗಿ…

Read More

ಉಪ್ಪಿನಂಗಡಿ: ಉಪ್ಪಿನಂಗಡಿ ಠಾಣಾ ಹೆಡ್ ಕಾನ್‍ಸ್ಟೇಬಲ್ ಕೃಷ್ಣಪ್ಪ ನಾಯ್ಕ್‍ ಜಿ. ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾಣಿ ಸಮೀಪದ ನೇರಳಕಟ್ಟೆ ನಿವಾಸಿಯಾಗಿರುವ ಮೃತರು ಕಳೆದ 6 ವರ್ಷಗಳಿಂದ ಉಪ್ಪಿನಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಒಂದು ವರ್ಷದಿಮದ ಅನಾರೋಗ್ಯದಿಂದ ರಜೆಯಲ್ಲಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆ ನಡೆದ ಡಬಲ್ ಮರ್ಡರ್‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿ ಫಿಲಿಕ್ಸ್‌ ಕೊಲೆಗೆ ಕಾರಣ ಏನು ಅನ್ನೋದನ್ನ ಬಹಿರಂಗ ಪಡಿಸಿದ್ದಾರೆ. ದುಡ್ಡಿಗಲ್ಲ, ವ್ಯವಹಾರಕ್ಕೆ ಈ ಡಬಲ್ ಮರ್ಡರ್ ನಡೆದಿಲ್ಲ. ಒಂದು ಹುಡುಗಿ ವಿಚಾರಕ್ಕೆ ಹಾಡಹಗಲೇ ಬರ್ಬರ ಹತ್ಯೆ ಮಾಡಲಾಗಿದೆ. ಬನ್ನೇರುಘಟ್ಟದಲ್ಲಿದ್ದ ಜಿ ನೆಟ್ ಕಂಪನಿಯಲ್ಲಿ ಹತ್ಯೆಯಾದ ಫಣಿಂದ್ರ ಹಾಗೂ ಫಿಲಿಕ್ಸ್ ಕೆಲಸ ಮಾಡುತ್ತಿದ್ದರು. ಜಿ ನೆಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಹುಡುಗಿ ಜೊತೆ ಫಿಲಿಕ್ಸ್‌ಗೆ ಪ್ರೀತಿಯಾಗಿತ್ತು. ಕೊಲೆಯಾದ ಫಣೀಂದ್ರ ಆ ಹುಡುಗಿಯ ಮೇಲೆ ಕಣ್ಣಾಕ್ಕಿದ್ದ ಎನ್ನಲಾಗಿದೆ. ಇದೇ ವಿಚಾರಕ್ಕೆ ಫಣಿಂದ್ರ ಹಾಗೂ ಫಿಲಿಕ್ಸ್ ಜೊತೆ ಜಗಳ ನಡೆದಿತ್ತು. ನಮ್ಮ ಹುಡುಗಿ ವಿಚಾರಕ್ಕೆ ಬಂದ್ರೆ ನಿನ್ನ ಮುಗಿಸಿಬಿಡ್ತೀನಿ ಅಂತಾ ಫಿಲಿಕ್ಸ್ ಆವಾಜ್ ಹಾಕಿದ್ದನಂತೆ. ಇದೇ ವಿಚಾರಕ್ಕೆ ನಾನು ಕೊಲೆ ಮಾಡಿದ್ದೇನೆ ಅಂತಾ ಪೊಲೀಸರ ಮುಂದೆ ಫಿಲಿಕ್ಸ್‌ ತಪ್ಪು ಒಪ್ಪಿಕೊಂಡಿದ್ದಾನೆ. ನಿನ್ನೆ ಸಂಜೆ ನಾಲ್ಕು ಗಂಟೆ ಸಮಯ. ಬೆಂಗಳೂರಿನ ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಡಬಲ್…

Read More

ಮಂಗಳೂರು: ನಗರದ ಹಿರಿಯ ವಕೀಲ ಬಿ.ಹರೀಶ್ ಆಚಾರ್ಯ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಮಂಗಳವಾರದಂದು ಬಿಜೈ ಬಾರಬೈಲ್‌ನಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದೆ. 60 ವರ್ಷ ವಯಸ್ಸಿನ ಹರೀಶ್ ಆಚಾರ್ಯ ಒಂಟಿಯಾಗಿ ವಾಸಿಸುತ್ತಿದ್ದರು. ಕಳೆದ ಶುಕ್ರವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಆದರೆ ಸೋಮವಾರದಂದು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆ, ಅವರ ಕಿರಿಯ ಸಹೋದ್ಯೋಗಿಗಳು ಅವರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಹಿನ್ನಲೆ ಮಂಗಳವಾರ ಕಿರಿಯ ವಕೀಲರು ಹರೀಶ್ ನಿವಾಸಕ್ಕೆ ಆಗಮಿಸಿದಾಗ ಅವರ ಮನೆಗೆ ಬೀಗ ಹಾಕಲಾಗಿತ್ತು. ನಂತರ ಪೊಲೀಸರು ಬಾಗಿಲು ತೆರೆದು ಒಳಪ್ರವೇಶಿಸಿ ನೋಡಿದಾಗ ಹರೀಶ್ ಆಚಾರ್ಯ ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಜುಲೈ 9 ರಂದು ಬೆಳಿಗ್ಗೆ 10 ಗಂಟೆ ಮತ್ತು ಜುಲೈ 11 ರಂದು ಬೆಳಿಗ್ಗೆ 11 ಗಂಟೆಯ ಮಧ್ಯಂತರ ಅವಧಿಯಲ್ಲಿ ಹರೀಶ್ ಹೃದಯಾಘಾತ ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇರಿಸಲಾಗಿದೆ. ಉರ್ವಾ ಪೊಲೀಸ್‌ ರಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಸಂಬಂಧಿಕರು…

Read More

ಬೆಂಗಳೂರು: ಆನ್ ಲೈನ್ ಗೇಮಿಂಗ್ ಆ್ಯಪ್ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಇವುಗಳ ಬಗ್ಗೆ ತನಿಖೆ ಕೈಗೊಂಡು, ಇಂತಹ ಚಟುವಟಿಕೆಗಳನ್ನು ರದ್ದು ಪಡಿಸುವಂತೆ ಕೋರಿ ವಿಧಾನ‌ ಪರಿಷತ್ ಸದಸ್ಯರಾದ ಅರುಣ್ ಡಿ.ಎಸ್ ಸರ್ಕಾರದ ಗಮನ ಸೆಳೆದರು. ಗೃಹ ಸಚಿವರ ಪರವಾಗಿ ಉತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಆನ್ ಲೈನ್ ಗೇಮ್ ಗಳಾದ ಡ್ರೀಮ್ 11. ಮೈ ಸರ್ಕಲ್ ಮುಂತಾದ ಆ್ಯಪ್ ಗಳಿಂದ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಯುವ ಸಮುದಾಯದವರು ಆನ್ ಲೈನ್ ಗೇಮ್ ಆಡುವ ಹವ್ಯಾಸಿಗಳಾಗಿದ್ದು, ಇವರು ತಮ್ಮ ಉದ್ಯೋಗದ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸದೆ ದಕ್ಷತೆಯಿಂದ ಕಾರ್ಯ ನಿರ್ವಹಿಸದೇ, ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಆರ್ಥಿಕ ನಷ್ಟ ಹೊಂದಿ ಮಾನಸಿಕ ತೊಂದರೆಗೊಳಗಾಗುತ್ತಿರುತ್ತಾರೆ, ಜೊತೆಗೆ , ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಅನಲೈನ್ ಗೇಮ್ ಆಡುವ ಹವ್ಯಾಸಿಗಳಾಗಿದ್ದು ತಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ . ಹಾಗಾಗಿ ಸರ್ಕಾರ  ಸೋಷಿಯಲ್ ಮಿಡಿಯಾ, ಮಾಧ್ಯಮಗಳು…

Read More

ಮಂಗಳೂರು: ಸಾಮಾಜಿಕ ಜಾಲತಾಣದ ವಾಟ್ಸಪ್, ಫೇಸ್ಬುಕ್, ಇನ್ಸಾ ಗ್ರಾಮ್, ಟ್ವಿಟ್ಟರ್ ಹಾಗೂ ಇನ್ನಿತರ ಅಪ್ಲಿಕೇಶನ್ಗಳಲ್ಲಿ ಧರ್ಮದ ವಿಚಾರ, ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಅಂಶಗಳನ್ನು ಒಳಗೊಂಡ ಸಂದೇಶಗಳು ಹರಿದಾಡುತ್ತಿರುವುದು ಕಂಡು ಬರುತ್ತಿದೆ. ಇಂತಹ ಸಂದೇಶಗಳಿಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಈಗಾಗಲೇ 21 ಪ್ರಕರಣಗಳು ದಾಖಲಾಗಿದ್ದು ತನಿಖೆಯಲ್ಲಿರುತ್ತದೆ. ನಗರದ ಎಲ್ಲಾ ಪೊಲೀಸ್ ಠಾಣೆಗಳ ಹಾಗೂ ಸೋಷಿಯಲ್ ಮೀಡಿಯಾ ಸೆಲ್ನಲ್ಲಿ ಧರ್ಮದ ವಿಚಾರವಾಗಿ ಪರ ಮತ್ತು ವಿರೋಧ ಸಂದೇಶಗಳನ್ನು ಪೋಸ್ಟ್, ಶೇರ್ ಮತ್ತು ಕಮೆಂಟ್ ಮಾಡುವ ವ್ಯಕ್ತಿಗಳ ಮೇಲೆ ಸೂಕ್ತ ನಿಗಾ ವಹಿಸುತ್ತಿದ್ದು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೂ ಇದೇ ರೀತಿಯಲ್ಲಿ ಅಪರಾಧಗಳನ್ನು ಪುನರಾವರ್ತನೆ ಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರಾದ ಕುಲದೀಪ್ ಆರ್ ಜೈನ್ ಎಚ್ಚರಿಕೆ ನೀಡಿದ್ದಾರೆ

Read More

ಪುತ್ತೂರು: ಪುತ್ತೂರಿನ ಪಡೀಲಿನಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬುವರಿಗೆ ಸೇರಿದ ಬಿ.ಬಿ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಸರ್ಕಾರಿ ದಾಖಲೆಗಳ ನಕಲಿ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಪುತ್ತೂರು ತಾಪಂ ಇಒ ನೇತೃತ್ವದ ತಂಡ ದಾಳಿ ನಡೆಸಿ ನಕಲಿ ದಾಖಲೆ, ನಕಲಿ ಸೀಲ್ ವಶಕ್ಕೆ ಪಡೆದುಕೊಂಡಿದೆ. ಸರ್ಕಾರದಿಂದ ಅನುಮತಿ‌ ಪಡೆದ ಗುತ್ತಿಗೆದಾರರು ಇವರಾಗಿದ್ದು, ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ, ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು‌ ಪತ್ತೆಯಾಗಿವೆ. ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ‌ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು. ಸಾರ್ವಜನಿಕ ದೂರಿನ‌ ಮೇರೆಗೆ ತಾಪಂ ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.

Read More

ಬೆಳ್ತಂಗಡಿ: ಲಾರಿಯೊಂದು 2 ಬಸ್ಸು ಸೇರಿದಂತೆ ಇತರ 5 ವಾಹನಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತಿದ್ದ ಯುವತಿಯೊಬ್ಬಳು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಉಜಿರೆ ಕಡೆಯಿಂದ ಮರಳು ತುಂಬಿದ ಲಾರಿ ಬೆಳ್ತಂಗಡಿ ಸೇತುವೆ ಬಳಿ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರು ರಿಕ್ಷಾ ಸೇರಿದಂತೆ ನಡೆದುಕೊಂಡು ಹೋಗುತಿದ್ದ ಯುವತಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಯುವತಿ ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

Read More