ಬೆಳ್ತಂಗಡಿ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಐತಿಹಾಸಿಕ ಪ್ರವಾಸಿ ತಾಣ ಗಡಾಯಿಕಲ್ಲಿಗೆ ಚಾರಣ ತೆರಳುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಬಂಡೆಯಲ್ಲಿ ನೀರು ಹರಿಯುತ್ತಿದ್ದು, ಮೆಟ್ಟಿಲುಗಳಲ್ಲಿ ಪಾಚಿ ಬೆಳೆದು ಜಾರುವ ಅಪಾಯ ಇರುವುದರಿಂದ ಜು.7ರಿಂದ ಮುಂದಿನ ಆದೇಶದ ತನಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯಾರಣ್ಯಧಿಕಾರಿ ಸ್ವಾತಿ ಅವರು ತಿಳಿಸಿದ್ದಾರೆ.
Author: main-admin
ನವದೆಹಲಿ : ದೇಶದ ಮಹಿಳೆಯರನ್ನ ಆರ್ಥಿಕವಾಗಿ ಸದೃಡಗೊಳಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲಿ ‘ಉದ್ಯೋಗಿನಿ’ ಯೋಜನೆಯೂ ಒಂದು. ಈ ಯೋಜನೆಯಡಿ, ಮಹಿಳೆಯರಿಗೆ 3 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಅದ್ರಂತೆ, ಮಹಿಳೆಯರು 88 ಬಗೆಯ ಸಣ್ಣ ಉದ್ದಿಮೆಗಳನ್ನ ಸ್ಥಾಪಿಸಿ, ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೇಂದ್ರ ಸರ್ಕಾರ ಬಯಸಿದೆ. ಉದ್ಯೋಗಿನಿ ಯೋಜನೆ ಎಂದರೇನು.? ಅದರ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ.? ಅನುಸರಿಸಬೇಕಾದ ನಿಯಮಗಳೇನು.? ಹೇಗೆ ಅರ್ಜಿ ಸಲ್ಲಿಸಬೇಕು.? ಯಾವ ವ್ಯವಹಾರಕ್ಕೆ ಸಾಲ ನೀಡಲಾಗುತ್ತದೆ.? ಮುಂದಿದೆ ಮಾಹಿತಿ. ಉದ್ಯೋಗಿನಿ ಯೋಜನೆ ಎಂದರೇನು?* ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಆರ್ಥಿಕ ನೆರವು ನೀಡುವುದು ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಕಾರ್ಯಕ್ರಮದ ಉದ್ದೇಶಗಳಲ್ಲಿ ಒಂದಾಗಿದೆ.* ಉದ್ಯೋಗಿ ಎನ್ನುವುದು ಮಹಿಳೆಯರು ಉದ್ಯಮಿಗಳಾಗಿ ಮತ್ತು ಉದ್ಯಮಿಗಳಾಗಿ ಬೆಳೆದು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲು ಪರಿಚಯಿಸಿದ ಯೋಜನೆಯಾಗಿದೆ.* ಇದನ್ನ ಮೊದಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದು, ನಂತ್ರ ಕೇಂದ್ರ ಸರ್ಕಾರವು ಮಹಿಳಾ ಅಭಿವೃದ್ಧಿ ನಿಗಮದ ಮೇಲ್ವಿಚಾರಣೆಯಲ್ಲಿ ದೇಶಾದ್ಯಂತ ಜಾರಿಗೆ…
ಕಾಸರಗೋಡು: ಬೈಕ್ ಮತ್ತು ಜೀಪು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಜಾಲ್ಸೂರು ಚೆರ್ಕಳ ರಸ್ತೆಯ ಬೋವಿಕ್ಕಾನದಲ್ಲಿ ಗುರುವಾರ ರಾತ್ರಿ ನಡೆದಿದೆ. ಮಲ್ಲ ಕಲ್ಲುಕಂಡದ ಅಖಿಲ್ (22) ಮೃತಪಟ್ಟ ಯುವಕ.ಅಖಿಲ್ ಎಸ್ಎಫ್ಐ ಕಾರ್ಯಕರ್ತನಾಗಿದ್ದನು. ಅಖಿಲ್ ಬೋವಿಕ್ಕಾನದಿಂದ ಕಲ್ಲು ಕಂಡದ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಅಖಿಲ್‌ನನ್ನು ಕಾಸರಗೋಡಿನ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಳಿಲ್ಲ. ಈ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ : ಜಿಲ್ಲೆಯಲ್ಲಿ ವರುಣ ಅರ್ಭಟ ಇಂದು ಸಹ ಮುಂದುವರೆದಿದ್ದು, ಭಾರೀ ಗಾಳಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಕಾರ್ಕಳ ತಾಲೂಕಿನ ಬೆಳ್ಮಣ್ ದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಏಕಾಏಕಿ ಬೃಹತ್ ಆಲದ ಮರ ಬಿದ್ದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರವೀಣ್ ಆಚಾರ್ಯ ಮೃತ ದುರ್ವೈವಿ. ಪ್ರವೀಣ್ ತಮ್ಮ ಪಾಡಿಗೆ ತಾವು ಬೈಕ್ನಲ್ಲಿ ಹೋಗುತ್ತಿದ್ದಾಗ, ದೊಡ್ಡ ಆಲದ ಮರ ರಪ್ ಅಂತ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದ ಹಿನ್ನಲೆ ವಿದ್ಯುತ್ ಕಂಬ ಸೇರಿದಂತೆ ಇತರ ಕಟ್ಟಡಗಳಿಗೂ ಹಾನಿಯಾಗಿದ್ದು, ಸ್ಥಳೀಯರು ಮರ ತೆರವು ಮಾಡಿದ್ದಾರೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮಳೆಯಿಂದಾಗಿ ಇಬ್ಬರು ಬಲಿಯಾಗಿದ್ದಾರೆ. ಭಾರೀ ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರೂ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ. ಸತೀಶ ಪಾಂಡುರಂಗ ನಾಯ್ಕ (40), ಉಲ್ಲಾಸ ಗಾವಡಿ (50) ಮೃತ ದುರ್ದೈವಿಗಳು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಟುಳಿ ಗ್ರಾಮ ಗದ್ದೆಯಲ್ಲಿ…
ಮಂಗಳೂರು: ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ನಡೆದಿದೆ.ಪ್ರೀತಿಕಾ ಪೂಜಾರಿ(21) ಮೃತ ದುರ್ದೈವಿ. ಪ್ರೀತಿಕಾ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಪ್ರೀತಿಕಾ ಉದ್ಯೋಗದಲ್ಲಿದ್ದರು. ನಿನ್ನೆ ಮದ್ಯಾಹ್ನ 12.30 ರ ವೇಳೆಗೆ ಪ್ರೀತಿಕಾ ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ದ.ಕ. ಜಿಲ್ಲೆಯಲ್ಲಿ ಮುಂದುವರೆದ ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜುಲೈ 7ರ ಶುಕ್ರವಾರದಂದು ಶಾಲೆ, ಪಿ.ಯು. ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಧರೆಗೆ ಗುದ್ದಿ ಪಲ್ಟಿಯಾಗಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ. ಪುತ್ತೂರು ಕೂರ್ನಡ್ಕ ನಿವಾಸಿ ಇಬ್ರಾಹಿಂ ರವರ ಪುತ್ರಿ ಖತೀಜಹನ (20 ವ.) ಮೃತಪಟ್ಟ ವಿದ್ಯಾರ್ಥಿನಿ. ಕಾರಿನಲ್ಲಿದ್ದ ಖತೀಜಹನರ ತಾಯಿ ಸಮೀಮ ಮತ್ತು ಚಾಲಕ ಶಾನ್ ಯಾವುದೇ ಅಪಾಯವಿಲ್ಲದೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಖತೀಜಹನ ಅವರು ತಾಯಿ ಸಮೀಮಾ ಅವರ ಜೊತೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಅಲರ್ಜಿ ರೋಗಕ್ಕೆ ಚಿಕಿತ್ಸೆ ಪಡೆಯುವ ಹಿನ್ನೆಲೆಯಲ್ಲಿ ವೈದ್ಯರನ್ನು ಬೇಟಿ ಮಾಡಲು ಕಾರಿನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುವ ಸಂದರ್ಭದಲ್ಲಿ ರಾಮಲ್ ಕಟ್ಟೆ ತಲುಪಿದಾಗ ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ದ ಕಾರು ರಸ್ತೆ ಬದಿಯ ಗುಡ್ಡಕ್ಕೆ ಗುದ್ದಿ ರಸ್ತೆಗೆ ಪಲ್ಟಿಯಾಗಿದೆ. ಅಪಘಾತದ ತೀವ್ರತೆ ಗೆ ಕಾರಿನ ಬಾಗಿಲು ಕಿತ್ತುಹೋಗಿ ಕಾರಿನ ಒಳಗಿದ್ದ ಖತೀಜಹನ ಹೊರೆಕ್ಕೆಸೆಯಲ್ಟಿಟ್ಟಿದ್ದಾರೆ. ಗಂಭೀರ ಗಾಯಗೊಂಡ…
ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ.. ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶ ಗಳು ಜಲಾವೃತ ಗೊಂಡಿದೆ. ಕಡಲ್ಕೊರೆತ ತೀವ್ರ ಗೊಂಡಿದ್ದು, ಉಪ್ಪಳ ಮುಸೋಡಿ, ಕುಂಬಳೆ ಕೊಯಿಪ್ಪಾಡಿ ಮೊದಲಾದೆಡೆ ಹಲವು ಮನೆಗಳು ಅಪಾಯದಲ್ಲಿದ್ದು, ಹತ್ತಕ್ಕೂ ಅಧಿಕ ಮನೆಗಳು ಕುಸಿದಿವೆ. ಪೈವಳಿಕೆ ಸಮೀಪದ ಚಿಪ್ಪಾರ್ ನ ಖಾಸಗಿ ಶಾಲೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದೆ. ಗುಡ್ಡ ಜರಿದು ಬಿದ್ದಿದೆ. ಯಾವುದೇ ಅಪಾಯ ಉಂಟಾಗಿಲ್ಲ. ಉಪ್ಪಳ ಹೊಳೆಯ ಜೋಡುಕಲ್ಲು ಮಡಂದೂರು – ದೇರಂಬಳ ಸಂಪರ್ಕದ ಕಾಲ್ಸೇತುವೆ ಕುಸಿದು ಬಿದ್ದಿವೆ. ಇದರಿಂದ ಸಂಪರ್ಕ ಕಡಿದಿದೆ. ಮಧು ವಾಹಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಮಧೂರು ದೇವಸ್ಥಾನದ ಆವರಣ ದೊಳಗೆ ನೀರು ನುಗ್ಗಿದೆ. ಜಿಲ್ಲೆಯ ಎಲ್ಲಾ ನದಿ ಗಳು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ . ಹಲವಾರು ಕಂಬಗಳು ಧರಶಾಯಿ ಯಾಗಿದೆ. ಹಲವೆಡೆ ಗುಡ್ಡಗಳು ಜರಿದು ಬಿದ್ದಿರುವುದ ರಿಂದ ರಸ್ತೆ…
ಕಾನ್ಪುರ: ಕಾನ್ಪುರ ದೆಹತ್ ಜಿಲ್ಲೆಯ ಅಕ್ಬರ್‌ಪುರ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದು, ಮೂವರು ಪೊಲೀಸರು ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಬಿದ್ದಿದ್ದ ಕುಡುಕನಿಗೆ ಪೊಲೀಸರು ಸಹಾಯ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಕುಡುಕನ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ ಮೂವರು ಪೊಲೀಸರಲ್ಲಿ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಮಥುರಾ ಪ್ರಸಾದ್, ಹೆಡ್ ಕಾನ್ಸ್‌ಟೇಬಲ್ ಅರವಿಂದ್ ಕುಮಾರ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸೌರಭ್ ಕುಮಾರ್ ಮತ್ತು ವಿವೇಕ್ ಕುಮಾರ್ ಅವರೊಂದಿಗೆ ಗಸ್ತು ತಿರುಗುತ್ತಿದ್ದಾಗ ಮಾದಾಪುರ ಸೇತುವೆಯ ಹೆದ್ದಾರಿಯಲ್ಲಿ ಒಬ್ಬ ಕುಡುಕನನ್ನು ಕಂಡಿದ್ದಾರೆ. ಈ ವೇಳೆ, ಪೊಲೀಸರು ಕಾನ್‌ಸ್ಟೆಬಲ್ ವಿವೇಕ್ ಕುಮಾರ್ ಕುಡುಕನನ್ನು ರಸ್ತೆ ಬದಿಗೆ ಎಳೆಯಲು ಯತ್ನಿಸಿದಾಗ, ವೇಗವಾಗಿ ಬಂದ ಲೋಡರ್-ಟೆಂಪೋ ಅವರಿಗೆ ಡಿಕ್ಕಿ ಹೊಡೆದು ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಪುತ್ತೂರು: ಭಾರೀ ಮಳೆಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೇ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಜು.6ರಂದು ಮುಂಜಾನೆ ಮುಳುಗಡೆಯಾಗಿದೆ.ಚೆಲ್ಯಡ್ಕ ಸೇತುವೆ ಮುಳುಗಡೆಗೊಂಡ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸೆಂಟ್ಯಾರು ಪಾಣಾಜೆ ಲೋಕೋಪಯೋಗಿ ರಸ್ತೆಯ ಮೂಲಕ ಸಂಚರಿಸುತ್ತಿದೆ. ಇನ್ನು ಮುಳುಗು ಸೇತುವೆ ಎಂದು ಪ್ರಖ್ಯಾತಿ ಪಡೆದಿರುವ ಚೆಲ್ಯಡ್ಕ ಸೇತುವೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರಥಮ ಬಾರಿಗೆ ಮುಳುಗಡೆಯಾಗಿದೆ.










