Author: main-admin

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಸುರತ್ಕಲ್‌ ಹೋಬಳಿ ಕುಳಾಯಿ ಗ್ರಾಮದ ಸಂತೋಷ್ (34 ವರ್ಷ) ಜು.5ರ ಬುಧವಾರ ಬೆಳಿಗ್ಗೆ ಬೈಕಂಪಾಡಿಯಲ್ಲಿರುವ ಸೋಲಾರ್ ಕಂಪೆನಿಗೆ ಮನೆಯಿಂದ ಕೆಲಸಕ್ಕೆ ತೆರಳುವಾಗ ಮರ ಬಿದ್ದು ದಾರಿ ಬಂದ್ ಆದ ಕಾರಣ ಕಂಪೌಂಡ್ ಹಾರಲು ಯತ್ನಿಸಿದಾಗ ಮರದೊಂದಿಗೆ ಬಿದ್ದ ವಿದ್ಯುತ್‌ ದೀಪದ ತಂತಿ ತಗುಲಿ ಮರಣ ಹೊಂದಿರುತ್ತಾರೆ.ಈ ಬಗ್ಗೆ ಮಂಗಳೂರು ತಹಶೀಲ್ದಾರರು ವರದಿ ಸಲ್ಲಿಸಿರುತ್ತಾರೆ. ಮೃತರ ವಾರಸುದಾರರಿಗೆ ಮೆಸ್ಕಾಂ ಇಲಾಖಾ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದ್ದ ತನ್ನ ಮನೆ ಸಂಪರ್ಕದ ಮೋರಿಯನ್ನು ದಾಟುವ ವೇಳೆ ಆಯತಪ್ಪಿ ಮೋರಿಯೊಳಗೆ ಬಿದ್ದು ಮೃತಪಟ್ಟಿದ್ದ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಸುರೇಶ್ ಗಟ್ಟಿ (53 ವರ್ಷ) ಅವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಜು.5ರ ಬುಧವಾರ 5 ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗಿದೆ. ಜು.4 ರಂದು…

Read More

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಪಾವತಿಸಲು ಸರ್ಕಾರ ಮತ್ತೆ ಶೇ.50 ರಿಯಾಯಿತಿ ಘೋಷಿಸಿದೆ. ಸೆಪ್ಟೆಂಬರ್ 9ರವರೆಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶವಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಈ ಹಿಂದೆ ರಿಯಾಯಿತಿ ನೀಡಿದ್ದಾಗ ಭಾರೀ ಮೊತ್ತದ ದಂಡ ಸಂಗ್ರಹವಾಗಿತ್ತು. ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಶೇ 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2023ರ ಫೆಬ್ರವರಿ 11ರ ಒಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲು ಈಗಿನ ಸರ್ಕಾರವೂ ಮುಂದಾಗಿದೆ. 

Read More

ಕಾಸರಗೋಡು: ದಾಖಲೆಗಳಿಲ್ಲದೆ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 41,78,000 ರೂ. ವನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿ ಕೊಂಡಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನಾವರದ ಪ್ರಕಾಶ್ ವಿನಾಯಕ ಶೆಟ್ಟಿ (45) ಎಂಬಾತನನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಈತನ ಬಳಿ ಇದ್ದ ಬ್ಯಾಗ್ ನಲ್ಲಿ ಹಣವನ್ನು ಸಾಗಿಸುತ್ತಿದ್ದನು. ಹೆಚ್ಚಿನ ವಿಚಾರಣೆಗಾಗಿ ನಗದು ಹಾಗೂ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ

Read More

ಮೀರತ್ : ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ಕಾರು ಅಪಘಾತದ ಬಳಿಕ ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಅವರ ಕಾರು ಅಪಘಾತವಾಗಿದೆ. ಮಂಗಳವಾರ ರಾತ್ರಿ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕೂಡ ಮೀರತ್ ನಲ್ಲಿ ಅಪಘಾತಕ್ಕೀಡಾಗಿದ್ದರು. ಮೀರತ್ನ ಕಮಿಷನರ್ ನಿವಾಸದ ಬಳಿ ವೇಗವಾಗಿ ಬಂದ ಕ್ಯಾಂಟರ್ ಮಾಜಿ ವೇಗಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿ ಕ್ಯಾಂಟರ್ ಚಾಲಕನನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಪಾಂಡವ ನಗರದಿಂದ ಲ್ಯಾಂಡ್ ರೋವರ್ ಡಿಫೆಂಡರ್ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ಆರೋಪಿ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕ್ಯಾಂಟರ್ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ನಗರ ಎಸ್ಪಿ ಪಿಯೂಷ್ ಕುಮಾರ್ ತಿಳಿಸಿದ್ದಾರೆ.

Read More

ಶಿವಮೊಗ್ಗ: ಕಾರು ಮತ್ತು ಖಾಸಗಿ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರು ನಿವಾಸಿಯೋರ್ವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ಹೆದ್ದಾರಿಯ ಸಕ್ರೆಬೈಲು ಸಮೀಪ ನಡೆದಿದೆ ಮಂಗಳೂರು ಕುಪ್ಪೆಪದವು ಕಲ್ಲಾಡಿ ನಿವಾಸಿ ಅಶ್ರಫ್ ಮೃತರು. ಗಾಯಾಳುಗಳು ಕೂಡ ಅದೇ ಗ್ರಾಮದವರು ಎಂದು ಹೇಳಲಾಗಿದೆ. ಕಾರು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದಾಗ ತೀರ್ಥಹಳ್ಳಿಯಿಂದ ಬಂದ ಬಸ್ ಅಪಘಾತ ನಡೆದಿದೆ. ಮೃತ ಅಶ್ರಫ್ ಜಮಾಅತೆ ಇಸ್ಲಾಮಿ ಹಿಂದ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.

Read More

ಕಾರ್ಕಳ : ಈ ವರ್ಷ ಪ್ರತಿಭಾ ಕಾರಂಜಿ ದೊಡ್ಡ ಮಟ್ಟದಲ್ಲಿ ನಡೆಸಲು ಸಿದ್ಧತೆಗಳಾಗುತ್ತಿದ್ದು, ಶಿಕ್ಷಣ ಇಲಾಖೆಯು ಜೂ. 19ರಂದು ಸುತ್ತೋಲೆ ಹೊರಡಿಸಿ ಈ ವರ್ಷದ ಪ್ರತಿಭಾ ಕಾರಂಜಿಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಸುತ್ತೋಲೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಭೂತದ ಕೋಲಕ್ಕೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಜುಲೈ ತಿಂಗಳಲ್ಲಿ ಶಾಲಾ ಮಟ್ಟ, ಆಗಸ್ಟ್ ತಿಂಗಳಲ್ಲಿ ಕ್ಲಸ್ಟರ್ ಮಟ್ಟ, ಮುಂದೆ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿಯೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಜಾನಪದ ನೃತ್ಯವು ಸಮೂಹ ವಿಭಾಗವಾಗಿದ್ದು ಅದರಲ್ಲಿ ಬುಡಕಟ್ಟು, ಜಾನಪದ, ಪಾರಂಪರಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಅಷ್ಟೇ ಹೇಳಿ ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ ಅದೇ ಸುತ್ತೋಲೆಯಲ್ಲಿ ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ ಇತ್ಯಾದಿ ಉದಾಹರಣೆಗಳನ್ನು ನೀಡಲಾಗಿದೆ. ಕೊನೆಯಲ್ಲಿ ಭೂತದ ಕೋಲ (ಭೂತದ ಕೋಲು ಎಂದು ಆದೇಶದಲ್ಲಿದೆ ?) ಕ್ಕೆ…

Read More

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ಕರಾವಳಿ ಕರ್ನಾಟಕ ಭಾಗದಲ್ಲಿ ನಾಳೆ ಬೆಳಗ್ಗಿನವರೆಗೂ ಭಾರೀ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜುಲೈ 5ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 5ರ ಬೆಳಗ್ಗೆ 8.30ರಿಂದ ಜು. 6ರ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 8ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More

ಮುಂಬೈ: ಮಹಿಳೆಯೊಬ್ಬಳು ಪ್ರಿಯಕರನನ್ನು ಲೂಟಿ ಮಾಡಿ ಬೆತ್ತಲೆಯಾಗಿ ಹೆದ್ದಾರಿಯಲ್ಲಿ ಬಿಟ್ಟು ಹೋದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಹೀಗೆ ದ್ರೋಹ ಎಸಗಿದ ಮಹಿಳೆಯನ್ನು ಭಾವಿಕಾ ಭೋರ್ (30 ವರ್ಷದ) ಎಂದು ಗುರುತಿಸಲಾಗಿದೆ. ಭಾವಿಕಾ ತನ್ನ ನಾಲ್ವರು ಗೆಳೆಯರೊಂದಿಗೆ ಗೆಳೆದ ಬಾಲಾಜಿ ಶಿವಭಗತ್ ಮೇಲೆ ಹಲ್ಲೆ ನಡೆಸಿದ್ದಾಳೆ. ಬಳಿಕ ಲೂಟಿ ಮಾಡಿ ಮಹಾರಾಷ್ಟ್ರದ ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಬಿಟ್ಟು ಹೋಗಿದ್ದಾಳೆ. “ಆರೋಪಿಯು ತನ್ನ ಬಟ್ಟೆಗಳನ್ನು ತೆಗೆದ ನಂತರ ತನ್ನ ವಿಡಿಯೋ ಕ್ಲಿಕ್ ಮಾಡಿದ್ದಾಳೆ ಎಂದು ಸಂತ್ರಸ್ತ ಬಾಲಾಜಿ ಶಿವಭಗತ್ ದೂರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಉಪ್ಪಿನಂಗಡಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಎಂಟು ತಿಂಗಳ ಮಗುವಿನ ತಾಯಿ, ತನ್ನ ಮಗುವಿನ ಸಾವಿಗೆ ಪತಿಯೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. 34 ನೆಕ್ಕಿಲಾಡಿ ಗ್ರಾಮದ ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಪುತ್ರ ಎಂಟು ತಿಂಗಳ ಮಗು ಜೀವಿತ್ ತೀವ್ರ ಜ್ವರದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 1 ರಂದು ಮಗು ಸಾವನ್ನಪ್ಪಿದೆ.ಜುಲೈ 2 ರಂದು ಚಿತ್ರಾ ತನ್ನ ಮಗುವಿನ ಮರಣದ ಕುರಿತು ಸಂಶಯ ವ್ಯಕ್ತಪಡಿಸಿ ತನ್ನ ಗಂಡನ ಮೇಲೆ ದೂರು ದಾಖಲಿಸಿದ್ದಾರೆ.ಮೃತ ಮಗು ಜೀವಿತ್‌ನ ತಾಯಿ ಚಿತ್ರಾ ತಮ್ಮ ದೂರಿನಲ್ಲಿ, “ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ನನ್ನ ಗಂಡನಿಗೆ ಹೇಳಿದಾಗ ಪತಿ ಶ್ರೀಧರ ಕೋಪಗೊಂಡು ಜಗಳವಾಡಿ ನನ್ನನ್ನು ತಳ್ಳಿದ್ದು, ಈ ವೇಳೇ ನಾನು ಮಗುವಿನೊಂದಿಗೆ ಕೆಳಗೆ ಬಿದ್ದೆ. ನಂತರ ಮಗುವಿನ ಜ್ವರ ಹೆಚ್ಚಾಯಿತು.…

Read More

ಕಾಸರಗೋಡು : ಸುರಿಯುತ್ತಿರುವ ಭಾರಿ ಮಳೆಗೆ ಬಾಲಕಿಯೊಬ್ಬಳ ಮೇಲೆ ಮರವೊಂದು ಬಿದ್ದು ಬಾಲಕಿ ಸಾವನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತರನ್ನು ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆಯಶತ್ ಮಿನ್ಹಾ ಎಂದು ಗುರುತಿಸಲಾಗಿದೆ. ಸಂಜೆ 4 ಗಂಟೆಗೆ ತರಗತಿಗಳು ಮುಗಿದ ಕೂಡಲೇ ಶಾಲೆಯ ಹೊರಗೆ ಈ ಘಟನೆ ನಡೆದಿದೆ. ಆಯಶತ್ ಮಿನ್ಹಾ ಮತ್ತು ಆಕೆಯ ಇಬ್ಬರು ಸ್ನೇಹಿತರು ಶಾಲಾ ಬಸ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಮರದ ಕೊಂಬೆಯೊಂದುಆಕೆಯ ತಲೆಯ ಮೇಲೆ ಬಿದ್ದಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಉಳಿದ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಕ್ಷಕರು ಆಕೆಯನ್ನು 15 ಕಿಮೀ ದೂರದ ಕುಂಬಳದ ಸಹಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಆಯಶತ್ ಮಿನ್ಹಾ ತನ್ನ ಪೋಷಕರು ಮತ್ತು ಮೂವರು ಒಡಹುಟ್ಟಿದವರನ್ನು ಅಗಲಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ.

Read More