ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮುಲ್ಕಿ, ಉಳ್ಳಾಲ, ಮೂಡುಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಅಂಗನವಾಡಿ ಕೇಂದ್ರ ಸೇರಿದಂತೆ ಶಾಲೆಗಳು ಹಾಗೂ ಕಾಲೇಜುಗಳಿಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.
Author: main-admin
ಸೋಮವಾರ ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಮೊಣಕಾಲು ಎತ್ತರಕ್ಕೆ ನೀರು ನಿಂತಿದ್ದು ನಗರದ ಕಡೆ ಸಂಚರಿಸುವ ವಾಹನಗಳು ಜಂಕ್ಷನ್‌ನಲ್ಲಿ ಸಿಲುಕಿಕೊಂಡಿವೆ.ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ದುರಸ್ತಿಗಾಗಿ ಮ್ಯಾನ್ ಹೋಲ್ ಅಗೆದಿಟ್ಟುರುವುದ್ದರಿಂದ ಭಾರೀ ಮಳೆಯಿಂದಾಗಿ ಗಲೀಜು ನೀರಿನ ಜತೆ ಮಳೆ ನೀರು ಸುತ್ತಮುತ್ತಲಿನ ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಇಂಡಿಯನ್ ಬ್ಯಾಂಕ್‌ನೊಳಗೆ ನೀರು ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು ಕಡತಗಳು ಹಾಗೂ ಇನ್ನು ಪಕ್ಕದಲ್ಲಿದ್ದ ಎಟಿಎಂ ಮಷಿನ್‌ನಲ್ಲಿದ್ದ ಹಣವನ್ನು ಕೂಡ ಸ್ಥಳಾಂತರಿಸಿದ್ದಾರೆ.ಪಕ್ಕದಲ್ಲಿದ್ದ ಹೋಟೇಲ್ ಹಾಗೂ ಮೆಡಿಕಲ್‌ಗಳಿಗೂ ಗಲೀಜು ನೀರು ನುಗ್ಗಿ ಸಮಸ್ಯೆಯಾಗಿದೆ.ಕಳೆದ ಹಲವಾರು ದಿನಗಳಿಂದ ಮ್ಯಾನ್ ಹೋಲ್ ದುರಸ್ತಿಯಾಗುತ್ತಿದ್ದು ಇನ್ನು ಕೂಡ ಪೂರ್ಣವಾಗಿಲ್ಲ ಜತೆಗೆ ದಿನನಿತ್ಯ ಈ ಭಾಗದಲ್ಲಿ ಸಂಚರಿಸುವ ಮತ್ತು ವ್ಯಾಪಾರ ವ್ಯವಹಾರ ನಡೆಸುವ ಜನರಿಗೆ ಗಲೀಜು…
ಮಂಗಳೂರು : ಮಂಗಳೂರು ನಗರದ ಬೀದಿ ನಾಯಿಗಳ ತಾಯಿ ಎಂದೇ ಫೇಮಸ್ ಆಗಿರೋ ರಜನಿ ಶೆಟ್ಟಿ ಬಲ್ಲಾಳ್ಬಾಗ್ ಅವರ ಮೇಲೆ ಪಕ್ಕದ ಮನೆಯ ಮಹಿಳೆ ಹಲ್ಲೆ ನಡೆಸಿದ್ದಾರೆ. ರಜನಿ ಅವರು ಪ್ರತಿನಿತ್ಯ ನೂರಾರು ಬೀದಿ ನಾಯಿಗಳಿಗೆ ಅನ್ನ ಹಾಕಿ ಸಲಹುತ್ತಾ, ಅನಾರೋಗ್ಯಗೊಂಡ ನಾಯಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ರಜನಿ ಅವರ ಪಕ್ಕದ ಮನೆಯ ಮಂಜುಳಾ ಎಂಬುವವರು ಹಲವಾರು ಸಮಯದಿಂದ ಇವರಿಗೆ ಕಿರುಕುಳ ನೀಡುತ್ತಿದ್ದು, ರಜನಿ ಅವರ ನಾಯಿ ಬೆಕ್ಕುಗಳಿಗೆ ಹಲ್ಲೆ ನಡೆಸುವ ಜೊತೆಗೆ ಹಲವಾರು ರೀತಿಯಲ್ಲಿ ತೊಂದರೆ ನೀಡುತ್ತಿದ್ದರು. ಇಂದು ರಜನಿ ಅವರು ಬಟ್ಟೆ ಒಣ ಹಾಕಿದ್ದಾಗ ಬಟ್ಟೆಗಳನ್ನು ಎಸೆದು ಬಳಿಕ ದೊಡ್ಡ ಕಲ್ಲಿನಿಂದ ರಜನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲಿನಿಂದ ಹಲ್ಲೆಗೊಳಗಾದ ರಜನಿ ಅವರ ಕೈಕಾಲುಗಳಿಗೆ ಏಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು , ಹಲ್ಲೆ ನಡೆಸಿದ ಮಂಜುಳಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಜನಿ ಶೆಟ್ಟಿಯ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ರೇವಾ : ಮಧ್ಯಪ್ರದೇಶದ ರೇವಾ ನಗರದ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಶವವನ್ನು ಆಕೆಯ ಮನೆಯ ಫ್ರೀಜರ್‌ನಿಂದ ಪೊಲೀಸರು ಹೊರತೆಗೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ವಿಜಯ್ ಸಿಂಗ್ ಮಾತನಾಡಿ, ‘ಸುಮಿತ್ರಿ ಮಿಶ್ರಾ ಅವರ ಶವವನ್ನು ಅವರ ಮನೆಯ ಫ್ರೀಜರ್‌ನಿಂದ ಹೊರತೆಗೆಯಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು, ಈ ವಿಷಯ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಪತಿ ಭರತ್ ಮಿಶ್ರಾ ನಮ್ಮ ಮಗಳನ್ನು ಕೊಂದು ಶವವನ್ನು ಫ್ರೀಜರ್‌ನಲ್ಲಿಟ್ಟಿದ್ದಾನೆ ಎಂದು ಮೃತ ಮಹಿಳೆಯ ತಾಯಿಯ ಕಡೆಯವರು ಆರೋಪಿಸಿದರೆ, ಮುಂಬೈನಿಂದ ಮಗ ಬರಲೆಂದು ಶವವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೆ ಎಂದು ಮೃತ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ. ಸದ್ಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು…
ಬೆಳ್ತಂಗಡಿ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರ ಗಾಯಗೊಂಡ ಘಟನೆ ಕನ್ಯಾಡಿಯಲ್ಲಿ ನಡೆದಿದೆ. ಬೆಳ್ತಂಗಡಿಯ ದೇವಸ್ಥಾನವೊಂದರ ಸಹ ಅರ್ಚಕ ಅಮೇಯ ಭಟ್ ಅವರ ಪತ್ನಿ ಶ್ರೀರಕ್ಷಾ ಕಿಣಿ (22) ಅಪಘಾತಕ್ಕೀಡಾದವರು.ಅಮೇಯ ಭಟ್ ಅವರು ತನ್ನ ತಾಯಿ ಮನೆ ಕನ್ಯಾಡಿಗೆ ತೆರಳಿದ್ದು, ಅಲ್ಲಿಂದ ಹಿಂದಿರುಗಿ ಬೆಳ್ತಂಗಡಿಗೆ ಬರುತ್ತಿದ್ದ ವೇಳೆ ಉಜಿರೆ ಕಡೆಯಿಂದ ಬರುತ್ತಿದ್ದ ರಮೇಶ್ ಎಂಬಾತ ಚಲಾಯಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಹಾಗೂ ಹತ್ಯಡ್ಕದ ಸತೀಶ್ ಶೆಟ್ಟಿ ಅವರು ಚಲಾಯಿಸುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ.ಇನ್ನು ಢಿಕ್ಕಿಯ ರಭಸಕ್ಕೆ ಸ್ಕೂಟರ್ ಇಬ್ಭಾಗವಾಗಿ ಸಂಪೂರ್ಣ ಜಖಂಗೊಂಡು ಸವಾರೆ ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆ ದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ.ಈ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಸತೀಶ್ ಶೆಟ್ಟಿಯವರು ದೂರು ದಾಖಲಿಸಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಅಪಘಾತ ಎಸಗಿದ ಕಾರು ಬೆಂಗಳೂರು ನೋಂದಣಿ ಹೊಂದಿದ್ದು, ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಆದರೆ ಕಾರಿನಲ್ಲಿ ಇಲಾಖೆಯ ಅಧಿಕಾರಿಗಳು ಯಾರೂ ಇರಲಿಲ್ಲ. ಚಾಲಕ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮೇಲೆ ಇಂದು ಮುಂಜಾನೆ ಡ್ರೋನ್ ಹಾರುತ್ತಿರುವುದು ಕಂಡುಬಂದ ನಂತರ ದೆಹಲಿ ಪೊಲೀಸರು ಸೋಮವಾರ ತನಿಖೆಗೆ ಆದೇಶಿಸಿದ್ದಾರೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ವಿಶೇಷ ಸಂರಕ್ಷಣಾ ಗುಂಪಿನ ಅಧಿಕಾರಿಗಳು ಪಿಎಂ ಮೋದಿಯವರ ನಿವಾಸದ ಮೇಲೆ ಡ್ರೋನ್ ಅನ್ನು ನೋಡಿದರು. ಶೀಘ್ರದಲ್ಲೇ, ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಲಾಯಿತು ಮತ್ತು ಡ್ರೋನ್ ಅನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ ಯಾವುದೇ ಡ್ರೋನ್ ಪತ್ತೆಯಾಗಿಲ್ಲ. ಪ್ರಧಾನ ಮಂತ್ರಿಯವರ ನಿವಾಸವು ಕೆಂಪು ಹಾರಾಟ ನಿಷೇಧ ವಲಯ ಅಥವಾ ಡ್ರೋನ್ ರಹಿತ ವಲಯದ ಅಡಿಯಲ್ಲಿ ಬರುತ್ತದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.
ಉಳ್ಳಾಲ: ಆಂಬ್ಯುಲೆನ್ಸ್ ವಾಹನ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಉಳ್ಳಾಲ ತಲಪಾಡಿ ಮರೋಳಿ ಬಾರ್ ಎದುರುಗಡೆ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಮೃತರು. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಫ್ರಾನ್ಸಿಸ್ ದೂರ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ಚಾಲಕ ಅದೇ ಆಂಬ್ಯುಲೆನ್ಸ್ ಮೂಲಕ ಫ್ರಾನ್ಸಿಸ್ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತಂದರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಮಕ್ಕಳು ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ದ್ವಿಚಕ್ರ ವಾಹನ ಅಪಘಾತಗಳ ಬಗ್ಗೆ ನಿನ್ನೆ ನಡೆದ ನಗರ ಪೊಲೀಸ್ ಕಮೀಷನರ್ ಅವರ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು, ಇನ್ನು ಮುಂದೆ ಮಕ್ಕಳು ದ್ವಿಚಕ್ರ ಚಲಾಯಿಸಿ ಅಪಘಾತ ನಡೆಸಿದರೆ ಮಕ್ಕಳ ಹೆತ್ತವರ ವಿರುದ್ಧವೇ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ರೀತಿ ಘಟನೆ ನಡೆದರೆ ಆರ್‌ಸಿ ಓನರ್ ವಿರುದ್ಧ ಕೂಡ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದು, ಈ ಬಗ್ಗೆ ಮಕ್ಕಳ ಹೆತ್ತವರಿಗೆ ಕೂಡ ಸೂಚನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ರೈಲು ದುರಂತಕ್ಕೆ ಇಲಾಖೆ ಸಿಬ್ಬಂದಿ ಎಡವಟ್ಟು ಕಾರಣ ಎಂದು ರೈಲ್ವೆ ಸುರಕ್ಷಿತ ಆಯುಕ್ತರು ವರದಿ ಸಲ್ಲಿಸಿದ್ದಾರೆ, ಜೂನ್ 2 ರಂದು ನಡೆದ ರೈಲುಗಳ ಅಪಘಾತಕ್ಕೆ ಎರಡು ಇಲಾಖೆ ಸಿಬ್ಬಂದಿ ಕಾರಣ. ರೈಲ್ವೆಯ ಸಿಗ್ನಲ್ ಮತ್ತು ಕಾರ್ಯನಿರ್ವಹಣೆ ಸಿಬ್ಬಂದಿ ಕಾರಣ ಎಂದು ರೈಲ್ವೆ ಆಯುಕ್ತರ ವರದಿಯಲ್ಲಿ ಸಿಬ್ಬಂದಿ ಎಡವಟ್ಟಿನ ಬಗ್ಗೆ ಉಲ್ಲೇಖಿಸಲಾಗಿದೆ. ಸಿಬಿಐನಿಂದಲೂ ರೈಲು ದುರಂತದ ಬಗ್ಗೆ ತನಿಖೆ ಮುಂದುವರೆದಿದೆ. ರೈಲು ದುರಂತದ ಹಿಂದೆ ವಿಧ್ವಂಸಕ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಕೈಗೊಳ್ಳಲಾಗಿದೆ. ರೈಲು ಅಪಘಾತದಲ್ಲಿ 290 ಜನ ಮೃತಪಟ್ಟಿದ್ದರು. ಜೂನ್ 2 ರಂದು ಸಂಭವಿಸಿದ ತ್ರಿವಳಿ ರೈಲು ಅಪಘಾತಕ್ಕೆ ಮಾನವ ತಪ್ಪು ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರು(CRS) ತಿಳಿಸಿದ್ದಾರೆ. ಆದಾಗ್ಯೂ, ಕೇಂದ್ರೀಯ ತನಿಖಾ ದಳ(ಸಿಬಿಐ) ನಡೆಸುತ್ತಿರುವ ಸಮಾನಾಂತರ ತನಿಖೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಮುಚ್ಚಿಟ್ಟಿರುವ ವರದಿಯಲ್ಲಿ ತೋರಿಸಿರುವ ದೋಷಗಳ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ವರದಿಯು ಮಾನವ ದೋಷವನ್ನು…
ಮೈಸೂರು: ಫೇಸ್‌ಬುಕ್‌ನಲ್ಲಿ ಸಂಸದ ಪ್ರತಾಪ್ ಸಿಂಹ ಬಗ್ಗೆಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಮೈಸೂರಿನ ವಿವಿ ಪುರಂ ಠಾಣೆಯ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇಲಾಖಾ ವಿಚಾರಣೆ ಬಾಕಿ ಇರಿಸಿ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಬಿ.ಪ್ರದೀಪ್ ಅವರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶಿಸಿದ್ದಾರೆ. ಇನ್ನು ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಬಿ.ಪ್ರದೀಪ್, ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದನ್ನು ಗಮನಿಸಿದ ಸಂಸದ ಪ್ರತಾಪ ಸಿಂಹ ಹಾಕಲಾಗಿದ್ದ ಕಮೆಂಟ್ ಸ್ಕ್ರೀನ್ಶಾಟ್ ಜೊತೆ ಪೊಲೀಸ್ ಕಮಿಷನರ್ಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ದೂರಿನ ಮೇರೆಗೆ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.










