Author: main-admin

ಬೆಳ್ತಂಗಡಿ: ಮಂಗಳೂರಿನಲ್ಲಿ ಶಂಕಿತ ಉಗ್ರ ಶಾರೀಕ್ ನಿಂದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆಸಿದ ಹಿಂದಿನ ದಿನ ಬೆಳ್ತಂಗಡಿಯ ಬೆಂದ್ರಾಳದಲ್ಲಿ ನಿಷೇಧಿತ ಸ್ಯಾಟ್ ಲೈಟ್ ಫೋನ್ ಕರೆ ಹೋಗಿರುವುದು ಬೆಳಕಿಗೆ ಬಂದಿದೆ.‌ ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರಿಂದ ಶನಿವಾರ ಬೆಂದ್ರಾಳ ಪ್ರದೇಶದಲ್ಲಿ ತನಿಖೆ ಮತ್ತಷ್ಟು ಚುರುಕುಗೊಳಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ನವೆಂಬರ್ 18 ರಂದು ಸಂಜೆ 5 ಗಂಟೆಗೆ ನಿಷೇಧಿತ ಸ್ಯಾಟ್ ಲೈಟ್ ಫೋನ್ ಕರೆ ಹೋಗಿರುವ ಬಗ್ಗೆ ಕೇಂದ್ರ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ್ದು ಅದರಂತೆ ಆಂತರಿಕ ಭದ್ರತಾ ಇಲಾಖೆ ಹಾಗೂ ಸ್ಥಳೀಯ ಪೊಲೀಸರಿಗೆ ತನಿಖೆ ಮಾಡಲು ಮಾಹಿತಿ ರವಾನಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಹಾಗೂ ಮಂಗಳೂರು ಆಂತರಿಕ ಭದ್ರತಾ ಇಲಾಖೆಯ ಇನ್ಸ್ಪೆಕ್ಟರ್ ಚಿದಾನಂದ್ ಮತ್ತು ತಂಡ ಶುಕ್ರವಾರ ಬೆಂದ್ರಾಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶನಿವಾರ ಮತ್ತೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ ಐ ಅನಿಲ್ ಕುಮಾರ್ ಡಿ. ಮತ್ತು ತಂಡ ತೋಟತ್ತಾಡಿ ಗ್ರಾಮದ…

Read More

15 ವರ್ಷ ಹಳೆಯದಾದ ಸರ್ಕಾರಿ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಈ ವಾಹನಗಳನ್ನು ಗುಜರಿಗೆ ಹಾಕಲಿದ್ದು, ಬದಲಾಗಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಹೊಸ ವಾಹನಗಳಿಗೆ ಹೋಲಿಸಿದರೆ ಈ ವಾಹನಗಳು ಶೇಕಡಾ 10 ರಿಂದ 12 ರಷ್ಟು ಹೆಚ್ಚು ವಾಯುಮಾಲಿನ್ಯ ಉಂಟು ಮಾಡುತ್ತಿರುವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಈ ಯೋಜನೆಯ ಕಡತಕ್ಕೆ ಗುರವಾರದಂದು ಸಹಿ ಹಾಕಿದ್ದಾರೆ. ರಾಜ್ಯಗಳಿಗೂ ಈ ಯೋಜನೆಯ ಮಾಹಿತಿಯನ್ನು ಕಳುಹಿಸಿಕೊಡಲಾಗಿದ್ದು, ಇದನ್ನು ತಮ್ಮ ತಮ್ಮ ರಾಜ್ಯಗಳಲ್ಲಿಯೂ ಅನುಷ್ಠಾನಗೊಳಿಸುವಂತೆ ಸಲಹೆ ನೀಡಲಾಗಿದೆ. ಅಲ್ಲದೆ 20 ವರ್ಷ ಪೂರೈಸಿದ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಆದರೆ ಈ ಕುರಿತು ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ.

Read More

ಮಂಗಳೂರು : ಪಾರ್ಕಿಂಗ್ ಮಾಡಿದ್ದ ಕಾರೊಂದು ಬೆಂಕಿಗಾಹುತಿಯಾಧ ಘಟನೆ ಮಂಗಳೂರು ಜ್ಯೋತಿ ಜ್ಯೂಸ್‌ ಜಂಕ್ಷನ್‌ ಮುಂಭಾಗದಲ್ಲಿ ನಡೆದಿದೆ. ಪಾರ್ಕಿಂಗ್ ಮಾಡಿದ್ದ ಫೋರ್ಡ್‌ ಕಂಪೆನಿಯ ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಬಹುತೇಕ ಸುಟ್ಟು ಹೋಗಿದೆ. ಕಾರಿನ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. ಬೆಂಕಿ ಹಿಡಿದ ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ನೀರು ಹಾಕಿ ಪ್ರಯತ್ನಿಸಿದ್ದಾರೆ. ಸ್ಥಳದಲ್ಲಿ ದಟ್ಟವಾದ ಹೊಗೆ ಕೂಡಾ ಆವರಿಸಿದ್ದು, ಆತಂಕದ ವಾತಾವರಣ ಉಂಟಾಗಿತ್ತು. ಟ್ರಾಫಿಕ್‌ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭ ರಸ್ತೆ ಸಂಚಾರ ಕೊಂಚ ಹೊತ್ತು ಅಸ್ತವ್ಯಸ್ಥಗೊಂಡಿತು.

Read More

ಪುತ್ತೂರು: ಮಹಿಳೆಯೋರ್ವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು (ನ.26) ತಾಲೂಕಿನ ಕುಂಬ್ರ ಎಂಬಲ್ಲಿ ನಡೆದಿದೆ. ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಮಹಿಳೆ ನಬೀಸ ಎಂದು ಗುರುತಿಸಲಾಗಿದೆ. ಈಕೆ ನ.25 ರಂದು ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಎದುರು ಭಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಬೀಸ ಅವರೇ ಬೆಂಕಿ ಹಚ್ಚಿಕೊಂಡರೇ ಅಥವಾ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ನಬೀಸ ಅವರು ಅಲ್ಪ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರು ಪತಿ ಇಬ್ರಾಹಿಂ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Read More

ಪಡುಬಿದ್ರಿ: ಪಡುಬಿದ್ರಿ ಪಾದೆಬೆಟ್ಟುವಿನ ರೈಲ್ವೆ ಬ್ರಿಡ್ಜ್ ಬಳಿಯ ರೈಲ್ವೆ ಹಳಿಯಲ್ಲಿ ಯುವಕನ ಶವವೊಂದು ಶುಕ್ರವಾರ ರಾತ್ರಿ ಪತ್ತೆಯಾಗಿದೆ. ಪಕ್ಕದ ಕಲೋನಿಯ ನಿವಾಸಿ ಸುರೇಶ್ (33) ಮೃತ ಪಟ್ಟ ಯುವಕ. ಇದು ಆಕಸ್ಮಿಕವೊ ಆತ್ಮಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯ ಬೇಕಾಗಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More

ಬೆಂಗಳೂರು : ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಇಂದು (ನವೆಂಬರ್ 26) ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರತ್ಯೇಕ ಆದೇಶ ಹೊರಡಿಸಿದೆ. ಪ್ರತಿ ವರ್ಷ ನವೆಂಬರ್ 26 ಈ ದಿನವನ್ನು ‘ಭಾರತ ಸಂವಿಧಾನ’ವು ಭಾರತದ ಸಂವಿಧಾನ ಸಭೆಯಲ್ಲಿ ಅಂಗೀಕರಿಸಲ್ಪಟ್ಟ ದಿನವಾದ 26ನೇ ನವೆಂಬರ್ 1949ರ ಸವಿನೆನಪಿಗಾಗಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮುಂದುವರೆದು ಉಲ್ಲೇಖಿತ (2)ರಲ್ಲಿ ಭಾರತ ಸರ್ಕಾರದ, ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪತ್ರದಲ್ಲಿ ಸೂಚಿಸಿರುವಂತೆ ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು ಮತ್ತು ತತ್ವಗಳ ಅರಿವನ್ನು ಮೂಡಿಸುವಂತಹ Know Your Constitution ಕಾರ್ಯಕ್ರಮವನ್ನು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲು ಸೂಚನೆ ನೀಡಲಾಗಿದೆ. ಆದ್ದರಿಂದ ದಿನಾಂಕ:26.11.2022 ‘ಸಂವಿಧಾನ ದಿನಾಚರಣೆ’ ಅಂಗವಾಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಮುಖ್ಯಸ್ಥರು ಹಮ್ಮಿಕೊಳ್ಳಲು ಕ್ರಮವಹಿಸಲು ಸೂಚಿಸಿದೆ. ಎಲ್ಲಾ ಶಾಲೆಗಳಲ್ಲಿ ದಿನಾಂಕ:26.11.2022ರಂದು ಬೆಳಿಗ್ಗೆ…

Read More

ಮನುಷ್ಯನ ಅಸ್ಥಿಪಂಜರ ಇಂದು ಪತ್ತೆಯಾದ ಘಟನೆ ಮಂಗಳೂರು ನಗರದ ಬರ್ಕೆ ಅರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬರ್ಕೆ ಅರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಣ್ಣಗುಡ್ಡೆ ಹೋಟೆಲ್ ದುರ್ಗಮಹಲ್ ಮುಂಭಾಗದ ರಸ್ತೆ ಸಮೀಪದ ಪಾಲುಬಿದ್ದ ಮನೆಯ ಅಂಗಳದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಬರ್ಕೆ ಠಾಣಾ ಪೋಲಿಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Read More

ಮುಲ್ಕಿ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ 778 ಪ್ರವಾಸಿತಾಣ ಗುರುತಿಸಿದ್ದು ಅದರಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಮಂಗಳೂರಿನ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಪ್ರವಾಸಿ ತಾಣವಾಗಿ ಸೇರ್ಪಡೆಯಾಗಿದೆ. ಈ ಪ್ರವಾಸಿ ತಾಣಗಳಲ್ಲಿ ಅಗತ್ಯವಿರುವ ಯಾತ್ರಿ ನಿವಾಸ ಅಥವಾ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ವಿಮಲಾ ಬಿ. ತಮ್ಮ ಆದೇಶದಲ್ಲಿ ಹೊರಡಿಸಿದ್ದಾರೆ.

Read More

ಮಂಗಳೂರು: ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಶಾರೀಕ್ (Shariq) ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಎಂಟು ಮಂದಿ ವೈದ್ಯರು ದಿನದ 24 ತಾಸು ನಿಗಾ ವಹಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಶಾರೀಕ್ ಆರೋಗ್ಯ (Shariq Health) ಸ್ಥಿತಿ ಬಿಗಡಾಯಿಸುತ್ತಿದೆ. ಕುಕ್ಕರ್ ಬಾಂಬು ಸ್ಫೋಟದ ವೇಳೆ ಭಾರೀ ಪ್ರಮಾಣದ ಹೊಗೆ ಕಂಡುಬಂದಿತ್ತು. ಸ್ಪೋಟದ ಹೊಗೆ ಶಾರೀಕ್ ಶ್ವಾಸಕೋಶದಲ್ಲಿ ತುಂಬಿಕೊಂಡ ಕಾರಣ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟದ ವೇಳೆ ಕುಕ್ಕರ್ ನ ಮುಚ್ಚಳ ಕುತ್ತಿಗೆಗೆ ಬಡಿದು ಗಂಭೀರ ಗಾಯಗಳಾಗಿವೆ. ಹೀಗಾಗಿ ಕುತ್ತಿಗೆಯ ಗಾಯಗಳಿಗೆ ವೈದ್ಯರ ತಂಡ ವಿಶೇಷ ಚಿಕಿತ್ಸೆ ನೀಡುತ್ತಿದೆ.ಇನ್ನು ಮೂರು ವಾರಗಳ ಕಾಲ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. 8 ಮಂದಿ ವೈದ್ಯರಿಂದ ದಿನದ 24 ತಾಸು ನಿಗಾ ವಹಿಸಲಾಗುತ್ತಿದೆ. ಶಾರೀಕ್ ಎಳೆಯ ಪ್ರಾಯವಾಗಿರುವುದರಿಂದ ಚಿಕಿತ್ಸೆಗೆ ಅನುಕೂಲವಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ

Read More

ಉಡುಪಿ: ಟೋಕನ್ ಇಲ್ಲದೆ ಪಡಿತರ ನೀಡಿದ ವಿಚಾರಕ್ಕೆ ಸಂಬಂಧಿಸಿ ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿರುವ ಘಟನೆ ಸಹಕಾರಿ ವ್ಯವಸಾಯ ಬ್ಯಾಂಕ್‌ ಹೆರ್ಗ ಇದರ ಅಂಬಾಗಿಲುವಿನ ಶಾಖಾ ಕಚೇರಿಯಲ್ಲಿ ನಡೆದಿದೆ. ಅಂಬಾಗಿಲು ನಿವಾಸಿ ಸತೀಶ್ ವಿ. ಎಂಬವರು ನ. 21ರಂದು ಬೆಳಿಗ್ಗೆ ಉಡುಪಿ ತಾಲೂಕಿನ ಸಹಕಾರಿ ವ್ಯವಸಾಯ ಬ್ಯಾಂಕ್‌ ಹೆರ್ಗ ಇದರ ಅಂಬಾಗಿಲುವಿನ ಶಾಖಾ ಕಛೇರಿಗೆ ಪ್ರತಿ ತಿಂಗಳಂತೆ ತಮ್ಮ ಕಾರ್ಡ್ ನ ಪಡಿತರ ತರಲು ಹೋಗಿದ್ದರು. ಆಗ ಅಂಗಡಿಯಲ್ಲಿ ಈಗ ಸಮಯವಿಲ್ಲ ಸಂಜೆ ಬನ್ನಿ ಎಂದು ಹೇಳಿದ್ದರು. ಅದರಂತೆ ಸತೀಶ್ ವಿ. ಅವರು ಸಂಜೆ 4:15ಕ್ಕೆ ಅಂಗಡಿಗೆ ಹೋದಾಗ ಗ್ರಾಹಕರೊಬ್ಬರಿಗೆ ಟೋಕನ್‌ ನೀಡದೇ ಪಡಿತರ ಕೊಡುತ್ತಿದ್ದರು. ಅದನ್ನು ಗಮನಿಸಿದ ಸತೀಶ್ ಅವರು ಯಾಕೆ ನಂತರ ಬಂದಿರುವವರಿಗೆ ಟೋಕನ್‌ ಇಲ್ಲದೇ ಪಡಿತರ ಕೊಡುತ್ತೀರಿ. ಅವರು ಸಾಲಿನಲ್ಲಿ ನಿಲ್ಲಬೇಕಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಅಂಗಡಿಯಿಂದ ಹೊರಬಂದ ಸಚ್ಚೇಂದ್ರ ನಾಯಕ್ ಎಂಬಾತನು ಸತೀಶ್ ಅವರಿಗೆ ಹಲ್ಲೆ ನಡೆಸಲು ಮುಂದಾಗಿದ್ದಲ್ಲದೆ, ಅವಾಚ್ಯ…

Read More