Author: main-admin

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ನಡೆಸುತ್ತಿರುವ ಮೆಗಾ ರೋಡ್‌ ಶೋಗೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ರಸ್ತೆಯ ಎರಡೂ‌ ಕಡೆ ಲಕ್ಷಾಂತರ ಜನ ನಿಂತು ಮೋದಿಯವರತ್ತ ಕೈಬೀಸುತ್ತಾ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳೂ ಮೋದಿಯವರನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸೇರಿರುವುದು ವಿಶೇಷ. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ದಾರಿಯುದ್ದಕ್ಕೂ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸುತ್ತಿದ್ದಾರೆ. ಮೋದಿ ಜನರತ್ತ ಕೈ ಮುಗಿಯುತ್ತಿದ್ದಾರೆ. ರೋಡ್ ಶೋ ಸಾಗುತ್ತಿರುವ ರಸ್ತೆಗಳಲ್ಲಿ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿವೆ. ಮೋದಿಯವರಿಗೆ‌ ಜೈಕಾರ ಹಾಕುತ್ತಿದ್ದಾರೆ. ಪ್ರಧಾನಿಯವರ ರೋಡ್ ಶೋ ಸಾಗುತ್ತಿರುವ ಮಾರ್ಗಗಳಲ್ಲಿ ಜನರ ಓಡಾಟಕ್ಕೆ, ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಹೊರಟ ಪ್ರಧಾನಿ ಮೋದಿ ರೋಡ್‌ ಶೋ ಭಾರೀ ಭದ್ರತೆಯೊಂದಿಗೆ ಸಾಗುತ್ತಿದೆ. ಪ್ರಧಾನಿ ಮೋದಿಯವರಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಜತೆಯಾಗಿದ್ದಾರೆ. ಚಾಮರಾಜಪೇಟೆ, ರಾಜಾಜಿನಗರ, ವಿಜಯನಗರ, ಬಸವೇಶ್ವರ ನಗರ ಹಾಗೂ…

Read More

ಉಡುಪಿ : ಜಿಲ್ಲೆಯಲ್ಲಿ ಮೇ 10 ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ, ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಮತದಾರರಲ್ಲದ ರಾಜಕೀಯ ಪ್ರಚಾರಕರು, ಕಾರ್ಯಕರ್ತರು, ಮೆರವಣಿಗೆ ಅಯೋಜಕರು ಸೇರಿದಂತೆ ಮತ್ತಿತರರು ಮೇ 8 ರಂದು ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತದಾನವು ಮೇ 10 ರಂದು ನಡೆಯಲಿದ್ದು, ಚುನಾವಣೆಯು ಮುಕ್ತ , ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕಾದ ಹಿನ್ನಲೆ, ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ, ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರಲ್ಲದವರು ನಿಗಧಿತ ಸಮಯಕ್ಕಿಂತ ಮುಂಚೆ ಹೊರಹೋಗಬೇಕು ಎಂದರು ಯಾವುದೆ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಅಥವಾ ಅಧಿಕೃತ ಅಭ್ಯರ್ಥಿಗಳ ಪ್ರಚಾರಕ್ಕಾಗಿ ವಿಧಾನಸಭಾ ಕ್ಷೇತ್ರದ ಹೊರಗಿನಿಂದ ಬಂದು ಉಳಿದುಕೊಂಡಿದ್ದಲ್ಲಿ ಅಂತಹವರು ನಿಗಧಿಪಡಿಸಿರುವ ಕಾಲಕ್ಕಿಂತ ಮುಂಚೆ ಕ್ಷೇತ್ರದಿಂದ…

Read More

ಪುತ್ತೂರು: ಇಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರ ಪರ ಪುತ್ತೂರು ನಗರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಅವರ ಆಗಮನದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಪುತ್ತೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ನಗರದ ಹೊರವಲಯದ ಮೊಟ್ಟೆತ್ತಡ್ಕ ಎಂಬಲ್ಲಿರುವ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಬಳಿಕ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ದೇವಳದ ಬಳಿಯಲ್ಲಿರುವ ಮುಖ್ಯ ಅಂಚೆ ಕಚೇರಿ ಬಳಿಯಿಂದ ಕಿಲ್ಲೆ ಮೈದಾನದ ತನಕ ರೋಡ್ ಶೋ ನಡೆಸಲಿದ್ದಾರೆ. ಅಂಚೆ ಕಚೇರಿ ಬಳಿಯಿಂದ ಹೊರಟು ಕೋರ್ಟ್ ರಸ್ತೆಯಾಗಿ ಸಾಗಿ ಕಿಲ್ಲೆ ಮೈದಾನದ ತನಕ ಜಾಥಾ ನಡೆಯಲಿದೆ.ಇನ್ನು ಆದಿತ್ಯನಾಥ್ ಆಗಮನದ ಹಿನ್ನಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆಯ ದೃಷ್ಠಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ನಿಲುಗಡೆ ನಿಷೇಧಿಸಲಾಗಿದೆ. ವಾಹನ ಪಾರ್ಕಿಂಗ್ ಹಾಗೂ ವಾಹನಗಳು ಬದಲಿ ರಸ್ತೆ ಮಾರ್ಗದ ಮೂಲಕ ಸಂಚರಿಸುವಂತೆ ದ.ಕ. ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.…

Read More

ಬಂಟ್ವಾಳ: ಬಿಜೆಪಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿ ಮತಯಾಚನೆ ನಡೆಸುತ್ತಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಮೂಡೂರು ಎಂಬಲ್ಲಿ ನಡೆದಿದೆ. ಪ್ರವೀಣ್ ಚಂದ್ರ ನಾಯಕ್ (45) ಮೃತಪಟ್ಟ ವ್ಯಕ್ತಿ. ಇನ್ನು ಪ್ರವೀಣ್ ಅವರು ವೃತ್ತಿಯಲ್ಲಿ ಛಾಯಗ್ರಾಹಕನಾಗಿದ್ದು, ಪಕ್ಷದ ಕ್ರಿಯಾಶೀಲ ಕಾರ್ಯಕರ್ತನಾಗಿದ್ದರು ಎನ್ನಲಾಗಿದೆ. ಪ್ರಗತಿ ಪರ ಕೃಷಿಕನಾಗಿಯೂ ಗುರುತಿಸಿಕೊಂಡಿದ್ದ ಪ್ರವೀಣ್ ಅವರು ಇಂದು ಚುನಾವಣಾ ಪ್ರಚಾರದ ವೇಳೆ ತಲೆ ಸುತ್ತು ಕಂಡು ನೆಲಕ್ಕೆ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ‌

Read More

ಮಂಗಳೂರು: ಪ್ರಸಕ್ತ ಋತುವಿನ ಏಳನೇ ವಿಹಾರ ನೌಕೆ ‘ಎಂವಿ ಇನ್‌ಸಿಗ್ನಿಯಾ’ ಬುಧವಾರ ನವಮಂಗಳೂರು ಬಂದರಿಗೆ ಆಗಮಿಸಿದೆ. ಮಾರ್ಷಲ್ ಐಲ್ಯಾಂಡ್ ಫ್ಲ್ಯಾಗ್ಡ್ ಹಡಗು ಒಟ್ಟು 466 ಪ್ರಯಾಣಿಕರು ಮತ್ತು 399 ಸಿಬ್ಬಂದಿ ಒಳಗೊಂಡಿತ್ತು. ಈ ಹಡಗಿನ ಒಟ್ಟಾರೆ ಉದ್ದವು 180.05 ಮೀಟರ್ ಆಗಿದ್ದು, 30,277 ಒಟ್ಟು ಟನ್ನೇಜ್ ಸಾಗಿಸುವ ಸಾಮರ್ಥ್ಯ ಮತ್ತು 6 ಮೀಟರ್ ಡ್ರಾಫ್ಟ್ ಹೊಂದಿದೆ. ಮಿಯಾಮಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಓಷಿಯಾನಿಯಾ ಕ್ರೂಸಸ್, ಹಡಗಿನ ಮಾಲೀಕತ್ವವನ್ನು ನಿರ್ವಹಿಸುತ್ತಿದೆ. ನಾರ್ವೇಜಿಯನ್ ಕ್ರೂಸ್ ಲೈನ್‌ನ ಅಂಗಸಂಸ್ಥೆಯಾಗಿದೆ. ಫುಜೈರಾ ಮತ್ತು ಮುಂಬೈ ಬಂದರುಗಳಿಂದ ನೌಕಾಯಾನ ಮಾಡುವ ಹಡಗಿನ ಕೊನೆಯ ಬಂದರು ಗೋವಾದ ಮೊರ್ಮುಗೋ ಬಂದರು. ಮಂಗಳೂರಿನಿಂದ ಹೊರಡುವ ಹಡಗು ನಂತರ ಕೊಚ್ಚಿನ್ ಬಂದರಿಗೆ ಪ್ರಯಾಣಿಸಲಿದೆ. “ಹೋಲ್ಡಿಂಗ್ಸ್ ಲಿಮಿಟೆಡ್”, ಪ್ರಮುಖ ಜಾಗತಿಕ ಕ್ರೂಸ್ ಬ್ರಾಂಡ್‌ಗಳ ವೈವಿಧ್ಯಮಯ ಕ್ರೂಸ್ ಆಪರೇಟರ್, ಇದರಲ್ಲಿ ನಾರ್ವೇಜಿಯನ್ ಕ್ರೂಸ್ ಲೈನ್, ಓಷಿಯಾನಿಯಾ ಕ್ರೂಸಸ್ ಮತ್ತು ರೀಜೆಂಟ್ ಸೆವೆನ್ ಸೀಸ್ ಕ್ರೂಸಸ್ ಗಳು ಸೇರಿವೆ. ಹಡಗಿನಿಂದ ಇಳಿಯುವಾಗ ಕ್ರೂಸ್ ಪ್ರಯಾಣಿಕರಿಗೆ ಡ್ರಮ್ ಬಾರಿಸುವ…

Read More

ಮುಂಬೈ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿಯೊಬ್ಬ ತನ್ನ ಎಲ್ಲಾ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್‍ಗೆ ನೀಡಿರುವ ಆರೋಪದ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದ್ದಾರೆ. ವಾಟ್ಸಾಪ್ ಮತ್ತು ವೀಡಿಯೊ ಕರೆಗಳ ಮೂಲಕ ಪಾಕಿಸ್ತಾನ ಗುಪ್ತಚರ ಏಜೆಂಟ್‍ನೊಂದಿಗೆ ಸಂಪರ್ಕದಲ್ಲಿದ್ದು ಹನಿಟ್ರ್ಯಾಪ್ ಮೂಲಕ ಆರೋಪಿಯನ್ನು ಬೆದರಿಸಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಈ ಎಲ್ಲಾ ಮಾಹಿತಿಗಳು ತನಿಖೆಯ ನಂತರ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಾಕಿಸ್ತಾನಿ ದೇಶಗಳಿಗೆ ತನ್ನ ಬಳಿಯಿರುವ ಎಲ್ಲಾ ರಹಸ್ಯ ಮಾಹಿತಿಗಳನ್ನು ನೀಡಿ ದೇಶದ ಭದ್ರತೆಗೆ ಅಪಾಯವನ್ನು ತರಬಹುದು ಎಂದು ತಿಳಿದಿದ್ದರೂ ಆರೋಪಿ ಮಾಹಿತಿ ನೀಡಿದ್ದಾನೆ. ಈ ಮೂಲಕ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಯ ವಿರುದ್ಧ ಮುಂಬೈನ ಕಲಾಚೌಕಿ ಎಟಿಎಸ್ ಘಟಕದಲ್ಲಿ ಅಧಿಕೃತ ರಹಸ್ಯ ಕಾಯ್ದೆ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಪಣಜಿ: ಪಾಕಿಸ್ತಾನ‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಅವರು ಗೋವಾದಲ್ಲಿ ನಡೆಯುವ ಶಾಂಘಾಯ್‌ ಸಹಕಾರ ಸಂಘದ ಸಮಾವೇಶದಲ್ಲಿ (ಎಸ್‌ಸಿಒ) ಪಾಲ್ಕೊಳ್ಳಲು ಗುರುವಾರ ಆಗಮಿಸಿದ್ದಾರೆ. ಗೋವಾಕ್ಕೆ ಬಂದಿಳಿದ ಬಳಿಕ‌ ಸಲಾಮ್‌ ಫ‌ಮ್‌ ಗೋವಾ ಎಂದು ಟ್ವೀಟ್‌ ಮಾಡಿದ್ದು, ಎಸ್‌ಸಿಒ ಪ್ರಧಾನ ಕಾರ್ಯದರ್ಶಿ ಝಾಂಗ್‌ ಮಿಂಗ್‌ ಜತೆಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾತುಕತೆ ನಡೆಸಿದ್ದಾರೆ. ಇನ್ನು ಭಾರತ ಆಗಮನಕ್ಕೂ ಮುನ್ನ ಟ್ವೀಟ್‌ ಮಾಡಿದ ಬಿಲಾವಲ್‌ ಭುಟ್ಟೊ, ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನನ್ನ ನಿರ್ಧಾರವು ಶಾಂಘಾಯ್‌ ಸಹಕಾರ ಒಕ್ಕೂಟದ ಬಗ್ಗೆ ಪಾಕಿಸ್ಥಾನದ ಬದ್ಧತೆಯನ್ನು ತೋರಿಸುತ್ತದೆ ಎಂದು ಬರೆದು ಕೊಂಡಿದ್ದಾರೆ.

Read More

ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್(Transgender Bodybuilder) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ಪ್ರವೀಣ ನಾಥ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಪ್ರವೀಣ್ ನಾಥ್ ಅವರು ನಗರದ ಉಪನಗರ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಪ್ರವೀಣ್ ಈ ವರ್ಷ ಪ್ರೇಮಿಗಳ ದಿನದಂದು ವಿವಾಹವಾಗಿದ್ದರು. ಕೆಲ ಮಾಧ್ಯಮಗಳ ವರದಿ ಪ್ರಕಾರ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿರಲಿಲ್ಲ ಎನ್ನಲಾಗಿತ್ತು, ಆದರೆ ಈ ವರದಿಗಳನ್ನು ಪ್ರವೀಣ್ ನಿರಾಕರಿಸಿದ್ದರು. ಪ್ರವೀಣ್ ರಿಶಾನಾ ಆಯೇಶು ಅವರನ್ನು ಮದುವೆಯಾಗಿದ್ದರು, ಇವರು ಮಿಸ್ಟರ್ ಕೇರಳ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ರಿಶಾನಾ ಮಿಸ್ ಮಲಬಾರ್ ಪಟ್ಟ ಗೆದ್ದಿದ್ದಾರೆ. ಆರಂಭದಲ್ಲಿ ಇಬ್ಬರ ಮನೆಯವರು ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ನಂತರ ಅವರು ಈ ಮದುವೆಗೆ ಒಪ್ಪಿದ್ದರು.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಹುಟ್ಟಿದ್ದು ಹೆಣ್ಣಾದರೂ ಗಂಡಾಗಿ ಇರಬೇಕೆಂಬ ಆಸೆ. ಒಂದು ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು, ಬಳಿಕ ತಮಗೆ ತಾವು ಸಮಾಧಾನ…

Read More

ಮಂಗಳೂರು : ಕಳವು ಮಾಡಿದ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದ ಕೇರಳದ ನಾಲ್ವರನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಎರ್ನಾಕುಳಂ ಜಿಲ್ಲೆಯ ಆಲುವಾ ನಿವಾಸಿ ರಿಯಾಝ್ (23), ಅದಿಪಿಲಿಕವಮ್‌ ಗ್ರಾಮದ ತಸ್ಸೀನ್‌ ಟಿ. ಎಚ್‌. ಯಾನೆ ತಸ್ಸೀರ್‌(25), ಕಲ್ಲಿಕೋಟೆಯ ತಾಯದಿಮ್‌ ಪರಂಬುವಿನ ಎಂ.ಕೆ. ಕ್ರಿಸ್ಟೋಪರ್‌ (30) ಮತ್ತು ಎರ್ನಾಡ್‌ ಗ್ರಾಮದ ಅಜಿತ್‌ ಕೆ. (22) ಎಂದು ಗುರುತಿಸಲಾಗಿದೆ. ಪಾಂಡೇಶ್ವರ ಎಸ್‌ಐ ಮನೋಹರ್‌ ಪ್ರಸಾದ್‌ ಪಿ. ಸಂಜೆ ಸಿಬಂದಿ ಜತೆ ಗಸ್ತು ನಿರತರಾಗಿದ್ದ ಸಂದರ್ಭ ಬಂದರು ದಕ್ಷಿಣ ಪರಿಸರದಲ್ಲಿ ಒಂದು ಸಿಲ್ವರ್‌ ಬಣ್ಣದ ಕಾರಿನಲ್ಲಿ ನಾಲ್ಕು ಮಂದಿ ಯುವಕರು ಸಂಶಯಾಸ್ಪದ ರೀತಿಯಲ್ಲಿ ಇರುವ ಬಗ್ಗೆ ದೊರೆತ ಮಾಹಿತಿಯಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಇನ್ನು ಈ ಸಂದರ್ಭ ಆರೋಪಿಗಳು ಈ ಕಾರನ್ನು ವಾರದ ಹಿಂದೆ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕಾರನ್ನು ಕೇರಳದಲ್ಲಿ ಕಳವು ಮಾಡಿ ಮಂಗಳೂರಿನಲ್ಲಿ ಮಾರಾಟಕ್ಕೆಂದು ತಂದಿರುವುದು ವಿಚಾರಣೆ ವೇಳೆ ಗೊತ್ತಾಗಿದೆ.

Read More

ಉತ್ತರಪ್ರದೇಶ : ಉತ್ತರಪ್ರದೇಶದ ಕೊಲೆ ಸುಲಿಗೆ ಕಿಡ್ನ್ಯಾಪ್‌ ಕೇಸ್‌ನಲ್ಲಿ ಭಾಗಿಯಾಗಿದ್ದ ಉತ್ತರಪ್ರದೇಶದ ಮತ್ತೊಬ್ಬ ಗ್ಯಾಂಗ್ ಸ್ಟರ್ ಅನಿಲ್ ದುಜಾನಾನನ್ನು ಎನ್‌ಟಿಎಫ್‌ನಿಂದ ಎನ್ಕೌಂಟರ್‌ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಉತ್ತರ ಪ್ರದೇಶದಲ್ಲಿ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಮತ್ತು ಆತನ ಸಹೋದರ, ಹಲವಾರು ಪೋಲೀಸರು ಸುದ್ದಿಗಾರರೊಂದಿಗೆ ಸಂವಾದ ನಡೆಸುತ್ತಿದ್ದಾಗ ಗುಂಡು ಹಾರಿಸಲಾಯಿತು. ಘಟನೆಯ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಆಸ್ಪತ್ರೆಗೆ ತಪಾಸಣೆಗೆಂದು ಕರೆದೊಯ್ಯುತ್ತಿದ್ದಾಗ ದಾಳಿ ನಡೆಸಲಾಗಿದೆ.ಇದು ಎದುರಾಳಿ ಗ್ಯಾಂಗ್‌ನ ಕೆಲಸ ಎಂದು ಮೂಲಗಳು ಸುದ್ದಿ ತಿಳಿಸಿವೆ.

Read More