Author: main-admin

ಬೆಂಗಳೂರು : ವಿಧಾನ ಸಭೆ ಚುನಾವಣಾ ಪ್ರಚಾರಕ್ಕಾಗಿ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳುತ್ತಿದ್ದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೆಲಿಕಾಪ್ಟರ್‌ಗೆ ರಣಹದ್ದು ಬಡಿದು ವಿಂಡೋ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಬೆಂಗಳೂರಿನ ಹೆಚ್​ಎಎಲ್​ನಿಂದ ಮುಳಬಾಗಿಲಿಗೆ ತೆರಳಲು ಹೆಲಿಕಾಪ್ಟರ್ ಹತ್ತಿದ್ದಾರೆ. ಕೊಂಚ ದೂರ ಸಾಗುತ್ತಿದ್ದಂತೆ ಹೆಲಿಕಾಪ್ಟರ್​ಗೆ ರಣಹದ್ದು ಬಡಿದಿದೆ. ಇದರಿಂದ ಹೆಲಿಕಾಪ್ಟರ್​ ವಿಂಡೋ ಗ್ಲಾಸ್​ ಪುಡಿಪುಡಿಯಾಗಿದ್ದು ತಕ್ಷಣ ಎಚ್ಚೆತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಕೆಲ ಕಾಲ ಡಿಕೆಶಿ ಭಯಭೀತರಾಗಿದ್ದು.ಯಾವುದೇ ಹಾನಿಯಾಗಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುರಕ್ಷಿತರಾಗಿದ್ದಾರೆ ಎಂದು ಹೆಲಿಕಾಪ್ಟರ್ ಸಿಬ್ಬಂದಿ ತಿಳಿಸಿದ್ದಾರೆ . ಘಟನೆ ಬಳಿಕ ಡಿ.ಕೆ.ಶಿವಕುಮಾರ್​ ಹೆಚ್​ಎಎಲ್​ ಏರ್​ಪೋರ್ಟ್​​ಗೆ ಮತ್ತೆ ಬಂದಿಳಿದಿದ್ದಾರೆ. ಇದೀಗ ಬಂದ ಸುದ್ದಿಯಾಗಿದ್ದು , ಹೆಚ್ಚಿನ ಮಾಹಿತಿ ತಿಳಿದ ತಕ್ಷಣ ಅಪ್‌ಡೇಟ್‌ ಮಾಡಲಾಗುತ್ತದೆ.

Read More

ಮಹಾರಾಷ್ಟ್ರ: ಮಹಾತ್ಮ ಗಾಂಧಿಜೀಯವರ ಮೊಮ್ಮಗ ಅರುಣ್​ ಗಾಂಧಿ(89) ಅವರು ಇಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನರಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತರಾಗಿದ್ದ ಅರುಣ್​ ಗಾಂಧಿ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಕೊಲ್ಹಾಪುರದಲ್ಲಿ ನೆರವೇರಲಿದೆ ಎಂದು ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ. ಏಪ್ರಿಲ್ 14, 1934 ರಂದು ಡರ್ಬನ್‌ನಲ್ಲಿ ಮಣಿಲಾಲ್ ಗಾಂಧಿ ಮತ್ತು ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದ ಅರುಣ್ ಗಾಂಧಿ, ಸಾಮಾಜಿಕ ಕಾರ್ಯಕರ್ತರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನು ಅರುಣ್ ಗಾಂಧಿ ಕೂಡ ಕೆಲವು ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ ದಿ ಗಿಫ್ಟ್​ ಆಫ್ ಆ್ಯಂಗರ್ ಆಂಡ್ ಅದರ್ ಲೆಸ್ಸನ್ಸ್​ ಫ್ರಂ ಮೈ ಗ್ರ್ಯಾಂಡ್​ಫಾದರ್ ಹಮಾತ್ಮ ಗಾಂಧಿ ಪ್ರಮುಖವಾದವು.

Read More

ಉಳ್ಳಾಲ:ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ತಲಪಾಡಿ ನಿವಾಸಿ ಮಕರೇಂದ್ರ ಎಂಬಾತನ ಮೇಲೆ ಪರಿಚಿತ ವ್ಯಕ್ತಿಯೇ ಹಲ್ಲೆ ನಡೆಸಿದ್ದಾನೆ. ತಲಪಾಡಿಯ ಬಾರ್ ಆಂಡ್ ರೆಸ್ಟೋರೆಂಟ್ ವೊಂದರ ಸಮೀಪ ಎ.28ರ ಸಂಜೆ ಘಟನೆ ನಡೆದಿದೆ.ಮಕರೇಂದ್ರ ಎಂಬಾತ ಬಾರ್ ನತ್ತ ಬಂದು ಪರಿಚಿತ ವಿಲ್ಫ್ರೆಡ್ ಮೈಕಲ್ ಡಿಸೋಜ ಬಳಿ ಕುಡಿಯಲು ಹಣ ಕೇಳಿದ್ದಾನೆ‌. ಇದಕ್ಕೆ ಕೋಪಗೊಂಡ ವಿಲ್ಫ್ರೆಡ್, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಹಲ್ಲೆ ನಡೆಸಿದಾಗ ಮಕರೇಂದ್ರ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ ರಸ್ತೆಯಲ್ಲಿದ್ದ ಕಲ್ಲು ಮಕರೇಂದ್ರನ ತಲೆಗೆ ಬಡಿದು ಗಂಭೀರವಾಗಿ ಗಾಯವಾಗಿದೆ.ಆತನಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾಯಲಿ ಎಂಬ ಉದ್ದೇಶದಿಂದ ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Read More

ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಮದುವೆ ಮನೆಯ ಸಂಭ್ರಮ, ಸಡಗರ ಮನೆ ಮಾಡಿದೆ.ಬುಧವಾರ ಸಂಜೆ ಗಂಟೆ 6.40 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 201 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಮಂಗಳವಾರ ಅವರ ದಾಖಲೆಗಳನ್ನೆಲ್ಲಾ ಪರಿಶೀಲಿಸಿ ವಧುವಿಗೆ ಸೀರೆ ಮತ್ತು ರವಿಕೆ ಕಣ ಹಾಗೂ ವರನಿಗೆ ಧೋತಿ-ಶಾಲು ನೀಡಲಾಗುತ್ತದೆ. ಬುಧವಾರ ಸಂಜೆ 5 ಗಂಟೆಯಿಂದ ಭವ್ಯ ಮೆರವಣಿಗೆಯಲ್ಲಿ ವಧೂ-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ಹೋಗಲಿದ್ದಾರೆ. ಅಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು, ಚಲನಚಿತ್ರ ನಟ ತೂಗುದೀಪ ದರ್ಶನ್ ಮೊದಲಾದ ಗಣ್ಯರು ಮಂಗಳಸೂತ್ರ ವಿತರಿಸಲಿದ್ದಾರೆ. ವೇದ-ಮಂತ್ರ ಘೋಷ ಪಠಣದೊಂದಿಗೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ವಿವಾಹ ಸಮಾರಂಭವು ಅವರವರ ಜಾತಿ ಸಂಪ್ರದಾಯದಂತೆ ನಡೆಯುತ್ತದೆ. ಬಳಿಕ ದೇವರ ದರ್ಶನ ಮಾಡಿ ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ನೂತನ ದಂಪತಿ ಅವರ ಊರಿಗೆ ತೆರಳಲಿದ್ದಾರೆ. ವರದಕ್ಷಿಣೆ ಹಾಗೂ ಮದುವೆಗಾಗಿ ಆಗುವ…

Read More

ಉಪ್ಪಿನಂಗಡಿ: ಏಳು ಅಂಗಡಿಗಳಿಗೆ ಕಳ್ಳನೊಬ್ಬ ನುಗ್ಗಿ ಸಾಮಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಉಪ್ಪಿನಂಗಡಿಯ ಬ್ಯಾಂಕ್ ಸ್ಟ್ರೀಟ್‌ ನಲ್ಲಿರುವ ಅಂಗಡಿಗಳಲ್ಲಿ ಕಳ್ಳತನವಾಗಿದೆ ಎನ್ನಲಾಗಿದೆ.ಕಳ್ಳನು ಚಿನ್ನದ ಅಂಗಡಿಯೊಂದಕ್ಕೆ ನುಗ್ಗಿ ಸೇಫ್ ಲಾಕರ್‍ ಅನ್ನು ತೆರೆಯಲು ಯತ್ನಿಸಿದ್ದಾನೆ. ಬಳಿಕ ಅಲ್ಲಿ ಡ್ರವರ್ ನಲ್ಲಿದ್ದ ಹಣ ಕಳ್ಳತನ ಮಾಡಿದ್ದಾನೆ. ಮತ್ತೊಂದು ಅಂಗಡಿಗೆ ನುಗ್ಗಿ ಮೊಬೈಲ್ ಕಳ್ಳತನ ಮಾಡಿದ್ದು, ನಂತರ ಬಟ್ಟೆ ಅಂಗಡಿಗೆ ನುಗ್ಗಿದ ಕಳ್ಳ ಎರಡು ಬಾತ್ ಟವೆಲ್ ಕದ್ದಿದ್ದಾನೆ. ಇದಲ್ಲದೆ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಬಳಿಯ ಹೋಟೆಲ್, ಪೀಠೋಪಕರಣಗಳ ಅಂಗಡಿ, ಜನರಲ್ ಸ್ಟೋರ್, ದಿನಸಿ ಅಂಗಡಿಗಳಿಗೂ ಕಳ್ಳರು ನುಗ್ಗಿ ಸಿಕ್ಕಿದ್ದನ್ನೆಲ್ಲಾ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.ಫರ್ನಿಚರ್ ಅಂಗಡಿಯಲ್ಲಿದ್ದ ದುಬಾರಿ ಬೆಲೆಯ ವಾಚ್ ಕಳ್ಳತನವಾಗಿದೆ. ಈ ಎಲ್ಲಾ ಏಳು ಕಳ್ಳತನಗಳು ಒಂದೇ ರೀತಿಯದ್ದಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.ಇನ್ನು ಶಂಕಿತ ಕಳ್ಳನ ಸಿಸಿಟಿವಿ ದೃಶ್ಯ ಕೂಡ ಸೆರೆಯಾಗಿದೆ. ಪ್ರತಿಯೊಂದು ಅಂಗಡಿಯೊಳಗೆ ನುಗ್ಗಿದ ಕಳ್ಳ ಸಿಸಿಟಿವಿಯ ದಿಕ್ಕು ಬದಲಾಯಿಸುವ ಪ್ರಯತ್ನ ಮಾಡಿದ್ದು, ಆ ವೇಳೆ ಆತನ…

Read More

ಹೈದರಾಬಾದ್: ತೆಲುಗಿನ ಜನಪ್ರಿಯ ನೃತ್ಯ ನಿರ್ದೇಶಕ (ಕೊರಿಯೊಗ್ರಾಫ‌ರ್‌) ಚೈತನ್ಯ ಅವರು ಇನ್ಸ್ಟಾಗ್ರಾಮ್‌ ಲೈವ್‌ ಬಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ತೆಲುಗು ನೃತ್ಯ ಕಾರ್ಯಕ್ರಮ ʼಧೀʼ ಯಲ್ಲಿ ಕೊರಿಯೊಗ್ರಾಫ‌ರ್ ಆಗಿ ಫೇಮ್‌ – ನೇಮ್‌ ಪಡೆದುಕೊಂಡಿದ್ದ ಚೈತನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ಸ್ಟಾಗ್ರಾಮ್‌ ಲೈವ್‌ ನಲ್ಲಿ ತಮ್ಮ ಕಷ್ಟದ ಬಗ್ಗೆ ಮಾತನಾಡಿದ್ದು, ನನ್ನ ಅಪ್ಪ, ಅಮ್ಮ, ಸಹೋದರಿ ನನಗೆ ಯಾವುದೇ ಕಷ್ಟಬಾರದಾಗೆ ನೋಡಿಕೊಂಡಿದ್ದಾರೆ. ನಾನು ನನ್ನೆಲ್ಲ ಸ್ನೇಹಿತರಲ್ಲಿ ಕ್ಷಮೆ ಕೋರುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಹಣದ ವಿಷಯದಲ್ಲಿ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದಲ್ಲ, ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾನೀಗ ನಲ್ಲೂರಿನಲ್ಲಿದ್ದೇನೆ. ಇದು ನನ್ನ ಕೊನೆಯ ದಿನ. ಇನ್ನು ನಾನು ನನ್ನ ಸಾಲಗಳಿಂದ ಬರುವ ಸಮಸ್ಯೆಗಳನ್ನು ಎದುರಿಸಲು ಆಗುವುದಿಲ್ಲ ಎಂದಿದ್ದಾರೆ.

Read More

ಮಂಗಳೂರು: ಕಾಂಗ್ರೆಸ್‌, ಜೆಡಿಎಸ್‌ ನಂತರ ಇದೀಗ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರಜಾಪ್ರಣಾಳಿಕೆ ಎಂದು ಹೆಸರಿಟ್ಟಿದೆ. ಒಟ್ಟು 15 ಭರವಸೆಗಳನ್ನು ಬಿಡುಗಡೆ ಮಾಡಿದೆ. ಏನಿದೆ ಈ ಪ್ರಣಾಳಿಕೆಯಲ್ಲಿ? ಬಿಪಿಎಲ್​​ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ 3 ಗ್ಯಾಸ್​ ಸಿಲಿಂಡರ್​ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್ ವಿತರಣೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಟಲ್​ ಆಹಾರ ಕೇಂದ್ರ ಸ್ಥಾಪನೆ ಕಡಿಮೆ ಬೆಲೆಯಲ್ಲಿ ಗುಣಮಟ್ಟಣದ ಆಹಾರ ವಸ್ತುಗಳ ಮಾರಾಟ ಬಿಪಿಎಲ್​ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು ವಿತರಣೆ ಪ್ರತಿ ತಿಂಗಳು 5 ಕೆಜಿ ಅಕ್ಕಿ, ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್​‘ಪೋಷಣೆ ಯೋಜನೆ’ಯಡಿ ಹಾಲು, ಪಡಿತರ ಕಿಟ್​ ವಿತರಣೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆ ‘ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ನಿವೇಶನ ಹಂಚಿಕೆ…

Read More

ಹುಬ್ಬಳ್ಳಿ : ಕೆಲವೇ ಹೊತ್ತಿನಲ್ಲೇ ಬಿಜೆಪಿಯ ಜನಪರ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜನಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೆಲವೇ ಹೊತ್ತಲ್ಲೇ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಇಂದು ವರುಣ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಿಎಂ ಬೊಮ್ಮಾಯಿ ಅವರ ಪ್ರವಾಸ ರದ್ದಾಗಿದೆ. ನಾಳೆ ವರುಣ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ವರುಣ ಪ್ರವಾಸ ರದ್ದಾಗಿದೆ.

Read More

ಗಡ್‌ಚಿರೋಲಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ದಳದ ಕಮಾಂಡರ್ ಸೇರಿದಂತೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಕೆದ್ಮಾರಾ ಅರಣ್ಯದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಡ್‌ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನೀಲೋತ್‌ಪಾಲ್, “ಮನೆ ರಾಜಾರಾಂ ಮತ್ತು ಪೆರಿಮಿಲಿ ಸಶಸ್ತ್ರ ಚೌಕಟ್ಟಿನ ನಡುವಿನ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಪೆರಿಮಿಲಿ ಮತ್ತು ಅಹೇರಿ ದಳದ ಸದಸ್ಯರು ಮೊಕ್ಕಾಂ ಹೂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಜಂಗಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಸಿ-60 ಪೋಲೀಸರ ತುಕಡಿಗಳನ್ನು ಕಳುಹಿಸಲಾಗಿದೆ. ಶೋಧ ಕಾರ್ಯಾಚರಣೆಯ ವೇಳೆ ಮಾವೋವಾದಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದರು. ನಂತರ ಪೊಲೀಸರು ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿ ನಂತ್ರ ಮೂವರು ಪುರುಷ ಮಾವೋವಾದಿಗಳ ಶವಗಳನ್ನು ಶಸ್ತ್ರಾಸ್ತ್ರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

Read More

ನವದೆಹಲಿ : ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1856.50 ರೂ. ಇದೆ. ಮೇ. 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂ.ಗೆ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,856.50 ರೂ.ಇದೆ ಆದಾಗ್ಯೂ, ದರಗಳ ಕಡಿತವು ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ. ದೇಶೀಯ ಎಲ್ಪಿಜಿ ಅನಿಲ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ಗಳ ದರಗಳು ಕಳೆದ ತಿಂಗಳಂತೆಯೇ ಉಳಿದಿವೆ. ಎಲ್ಪಿಜಿ ಬೆಲೆ, ಹೆಚ್ಚಾಗಿ ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳ ಮೇಲೆ ಅವಲಂಬಿತವಾಗಿದೆ. ಇವುಗಳು ಹೆಚ್ಚಾದಾಗ, ಎಲ್ಪಿಜಿ ಸಿಲಿಂಡರ್ ದರಗಳು ಸಹ ಹೆಚ್ಚಾಗುತ್ತವೆ. ಬಡ ವರ್ಗಗಳಿಗೆ, ಸರ್ಕಾರವು ಈ ಬೆಲೆಗಳಿಗೆ ಸಬ್ಸಿಡಿ ನೀಡಿದೆ. ನವದೆಹಲಿಯಲ್ಲಿ ಇಂದು ಸಬ್ಸಿಡಿ ರಹಿತ…

Read More