ಕೊಟ್ಟಿಗೆಹಾರ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಸಂಬಂಧಿಕನೇ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಮೇಲೆ ಆರೋಪಿಯನ್ನು ಪೋಕ್ಸೋ ಪ್ರಕರಣದಡಿ ಬಣಕಲ್ ಪೊಲೀಸರು ಬಂಧಿಸಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಸಬ್ಲಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿ ಸುಂದರೇಶ್ 36 ವರ್ಷ ಎಂದು ಗುರುತಿಸಲಾಗಿದೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
Author: main-admin
ಮಂಗಳೂರು : ಇಡೀ ರಾಜ್ಯವೇ ಬೆಚ್ಚಿಬೀಳಿಸುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮಂಗಳೂರಿನ ಬಾಂಬ್ ಸ್ಪೋಟದ ಬೆನ್ನಟ್ಟಿದ ಪೊಲೀಸರಿಗೆ ಹಲವು ಸ್ಪೋಟಕ ಮಾಹಿತಿ ಸಿಕ್ಕಿದೆ. ಇದೀಗ ಎಫ್ ಎಸ್ ಎಲ್ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಬಯಲಾಗಿದೆ. ಶಂಕಿತ ಉಗ್ರ ಶಾರೀಕ್ ಬಳಿ ಇದ್ದದ್ದು ಅಂತಿಥ ಬಾಂಬ್ ಅಲ್ಲ ಎಂದು ಬಯಲಾಗಿದೆ. ಇದು ಅಂತಿಂಥ ಕುಕ್ಕರ್ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್ಗೆ ಇಡೀ ಬಸ್ಸನ್ನೇ ಸ್ಪೋಟಿಸುವ ಶಕ್ತಿ ಇತ್ತು ಎಂಬ ಸ್ಫೋಟಕ ವಿಚಾರ ಬಯಲಾಗಿದೆ. ಮಂಗಳೂರಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಡೆಸಿದ ತಂಡ ಈ ಬಾಂಬ್ ಸಾಮರ್ಥ್ಯದ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸಿದೆ. ಪ್ಲಸ್ ಹಾಗೂ ಮೈನಸ್ ಡಿಟೆಕ್ಟ್ ಆಗದೇ ಶಾರ್ಟ್ ಸರ್ಕ್ಯೂಟ್ ಆಗಿದೆ. . ಜೆಲ್ ಹೊತ್ತಿಕೊಂಡು ಉರಿದ ಪರಿಣಾಮ ಸಣ್ಣ ಪ್ರಮಾಣದಲ್ಲಿ ಸ್ಫೋಟ ಸಂಭವಿಸಿ ದಟ್ಟವಾದ ಹೊಗೆ ಬಂದಿದೆ ಎನ್ನಲಾಗಿದೆ. 3 ಲೀಟರ್ ಕುಕ್ಕರ್ ಒಳಗಡೆ ಸ್ಪೋಟಕದ ಜೆಲ್ ಇದ್ದು,…
ಬೆಂಗಳೂರು: ಬಾಂಬ್ ಬ್ಲಾಸ್ಟ್ ಪ್ರಕರಣದ ಸಂಬಂಧ ನಾಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಭೇಟಿ ಸಂದರ್ಭದಲ್ಲಿ ಸಚಿವರು, ಬಾಂಬ್ ಸ್ಫೋಟ ಘಟನೆಯಿಂದ ಗಾಯಗೊಂಡ ಆಟೋ ರಿಕ್ಷಾ ಚಾಲಕನನ್ನೂ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಂಗಳೂರು ಆಟೋ ರಿಕ್ಷಾ ಬಾಂಬ್ ಸ್ಫೋಟ ಘಟನೆಯನ್ನು ರಾಜ್ಯ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಭಯೋತ್ಪಾದನೆ ಚಟುವಟಿಕೆಗಳನ್ನು ಆಮೂಲಗ್ರಹವಾಗಿ ತನಿಖೆ ಮಾಡಿ, ದ್ರೋಹಿಗಳನ್ನು ಮಟ್ಟ ಹಾಕಲು ಪೋಲಿಸರು ಶ್ರಮಿಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ದಳವೂ (NIA) ಇದಕ್ಕೆ ಸಹಕರಿಸುತ್ತಿದೆ ಎಂದು ಹೇಳಿದ್ದಾರೆ. ಈವರೆಗಿನ ಮಾಹಿತಿ ಆಧರಿಸಿ, ರಾಜ್ಯ ಪೊಲೀಸರು ಉಗ್ರಗಾಮಿ ಚಟುವಟಿಕೆಗಳಿಗೆ ಸಹಕರಿಸಿದವರ ವಿರುದ್ಧ ತನಿಖೆ ತೀವ್ರಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ನಿಂದ ಇನ್ನೂ ಹೆಚ್ಚಿನ ಮಾಹಿತಿಗಳು ಹೊರಬರಬೇಕಿದೆ ಎಂದು…
ಮಂಗಳೂರು : ಮಂಗಳೂರಿನ ಆಟೋ ಬಾಂಬ್ ಸ್ಪೋಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತೊಂದು ಸ್ಪೋಟಕ ಮಾಹಿತಿ ತಿಳಿದುಬಂದಿದ್ದು, ಶಂಕಿತ ಉಗ್ರ ಶಾರಿಕ್ ಜೊತೆಗೆ ಇನ್ನೊರ್ವ ಉಗ್ರ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮಂಗಳೂರು ಆಟೋ ಬ್ಲಾಸ್ಟ್ ಗೂ ಮುನ್ನ ಶಾರಿಕ್ ನ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಡೀಲ್ ಬಸ್ ನಿಲ್ದಾಣದ ಬಳಿಕ ನಾಗನುರಿ ಬಳಿ ಕೆಂಪು ಶರ್ಟ್, ಟೋಪಿ ಹಾಕಿಕೊಂಡಿದ್ದ ಶಾರಿಕ್ ಜೊತೆಗೆ ಮತ್ತೊಬ್ಬ ಉಗ್ರ ಇದ್ದ ಎನ್ನುವ ಸಂಶಯ ಮೂಡಿದೆ. ಮಂಗಳೂರು ಆಟೋದಲ್ಲಿ ಸ್ಪೋಟಗೊಂಡ ಬಳಿಕ ಶಾರಿಕ್ ಗಾಯಗೊಂಡಿದ್ದರೆ, ಮತ್ತೊರ್ವ ಆರೋಪಿ ಸ್ಪೋಟದ ಬೆನ್ನಲ್ಲೇ ಪರಾರಿಯಾಗಿರುವ ಅನುಮಾನ ಮೂಡಿಸಿದೆ. ಇನ್ನು ಶಂಕಿತ ಉಗ್ರ ಶಾರಿಕ್ ವಾಟ್ಸಪ್ ಡಿಪಿಯಲ್ಲಿ ಇಶಾ ಫೌಂಡೇಶನ್ ಶಿವನ ಫೋಟೋ ಇಟ್ಟುಕೊಂಡಿದ್ದ. ಈತನ ನಡುವಳಿಕೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ವೇಷ ಭೂಷಣ, ಬಟ್ಟೆ, ನಡೆಯಲ್ಲಿ ಮುಸ್ಲಿಂ ಅಂತ ಗೊತ್ತಾಗುತ್ತಿರಲಿಲ್ಲ. ಮೊಬೈಲ್ ತರಬೇತಿ ಕ್ಲಾಸ್ ಗೆ ಬಂದರೂ ಯಾವಾಗಲೂ ಬಾಗಿಲ ಕಡೆ ನೋಡುತ್ತಿದ್ದ. ಮೊಬೈಲ್ ರಿಪೇರಿ…
ಬೆಳ್ತಂಗಡಿ : ಪುದುವೆಟ್ಟು ಸಮೀಪದ ಪಲ್ಲದಪಲ್ಕೆ ಎಂಬಲ್ಲಿ ಒಂದೇ ಕುಟುಂಬದ ಇಬ್ಬರ ಮೃತದೇಹ ಮನೆ ಅಂಗಳದಲ್ಲಿ ಪತ್ತೆಯಾಗಿದ್ದು ಕಾಡಿನ ವಿಷ ಪೂರಿತ ಅಣಬೆಯ ಸೇವನೆಯೇ ಸಾವಿಗೆ ಕಾರಣ ಎಂದು ಸಂಶಯಿಸಲಾಗಿದೆ. ಮೃತರನ್ನು ಪಲ್ಲದಪಲ್ಕೆ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಪುತ್ರ ಓಡಿ(45) ಮೃತಪಟ್ಟವರು. ಬಡ ಕುಟುಂಬದ ಮನೆಯಲ್ಲಿ ಮನೆ ಯಾಜಮಾನ ಗುರುವ ಸಹಿತ ಇಬ್ಬರು ಪುತ್ರರು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು. ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಅಣಬೆ ಸೇವನೆಯ ಪದಾರ್ಥ ಸೇವನೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಅವಘಡ ತಪ್ಪಿದೆ. ಘಟನೆ ವಿಚಾರ ತಿಳಿದು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿದ್ದು. ತನಿಖೆ ಬಳಿಕ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.
ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಶವ ಮನೆ ಅಂಗಳದಲ್ಲಿ ಬಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು ಇದು ಕೊಲೆಯೋ ಅಥವಾ ಇನ್ನೇನಾರೂ ಬೇರೆ ಘಟನೆಗಳು ನಡೆದಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ತೆರಳಿ ತನಿಖೆ ನಡೆಸಬೇಕಿದೆ.
ಮಂಗಳೂರು: ತಾಲೂಕಿನ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67ರ 16.20 ಕಿ.ಮೀ. ನಿಂದ 19 ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಆದೇಶ ಹಾಗೂ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಅಪರ ದಂಡಾಧಿಕಾರಿಗಳೂ ಆಗಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಬದಲಿ ರಸ್ತೆ ವ್ಯವಸ್ಥೆ: ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಬಜಪೆ ಚರ್ಚ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಬಜಪೆ ಠಾಣೆಯ ಎದುರಿನ ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಮುರ ಜಂಕ್ಷನ್, ಕಿನ್ನಿಪದವು ರಸ್ತೆ ಮೂಲಕ ಮಂಗಳೂರಿಗೆ ತಲುಪುವುದು.ಮಂಗಳೂರಿನಿಂದ ಕಟೀಲು ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಮರವೂರು ಸೇತುವೆ, ಕೆಂಜಾರು ಮಾರ್ಗವಾಗಿ ಕಿನ್ನಿಪದವು ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಮುರ ಜಂಕ್ಷನ್, ಬಜಪೆ ಪೊಲೀಸ್ ಸ್ಟೇಷನ್ ಎದುರುಗಡೆಯಿಂದ ಬಜಪೆ ಚರ್ಚ್ ಜಂಕ್ಷನ್ ರಸ್ತೆಯ ಮೂಲಕ ಕಟೀಲು ಕಡೆಗೆ ಸಂಚರಿಸಬೇಕು…
ಮಂಗಳೂರು: ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಂಗಳೂರಿನ ಬಸ್ ನಿಲ್ದಾಣದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ನ.19 ರಂದು ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿರುವುದರಿಂದ ಆತಂಕ ಸೃಷ್ಟಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತು ಇಂದಷ್ಟೇ ಪತ್ತೆಯಾಗಿತ್ತು. ಇದಾದ ಕೆಲಹೊತ್ತಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ಬಂದಿತ್ತು. ಬಾಂಬ್ ನಿಗ್ರಹ ದಳ, ಶ್ವಾನದಳ ತಕ್ಷಣವೇ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿತು. ಆ ಬಳಿಕ ಬ್ಯಾಗ್ ವಾರಸುದಾರ ಪತ್ತೆಯಾಗಿದ್ದು, ಇದು ಪ್ರಯಾಣಿಕನ ಬ್ಯಾಗ್ ಎಂದು ಗೊತ್ತಾದಾಗ ಆತಂಕ ನಿವಾರಣೆಯಾಗಿದೆ.
ಮಂಗಳೂರು: ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಸ್ಪೋಟ ದಿನದಿಂದ ದಿನಕ್ಕೆ ತಿರುವುಪಡೆದುಕೊಳ್ಳುತ್ತಿದ್ದು, ಈ ನಡುವೆ ಪ್ರಕರಣ ಸಂಬಂಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಘಟನೆ ಸಂಬಂಧ ಸದ್ಯ ಮೈಸೂರಿನಲ್ಲಿ ಉಗ್ರ ತಾರಿಖ್ ವಾಸವಿದ್ದ ಮನೆಯಲ್ಲಿ ಹಲವು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಅಂತ ತಿಳಿಸಿದ್ದಾರೆ. ಇನ್ನೂ ಈ ನಡುವೆ ಮಂಗಳೂರಿಗೆ ತೆರಳುವ ಮುನ್ನ ಕುಕ್ಕರ್ ಬಾಂಬ್ ಕೈಯಲ್ಲಿಡಿದು ಫೋಟೋಗೆ ಪೋಸ್ ನೀಡಿದ್ದ ಎನ್ನಲಾಗಿದೆ ಅದರ ಫೋಟೋಗಳು ವೈರಲ್ ಆಗಿದ್ದಾವೆ. ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆಯಾಗಿದೆ ಅಂಥ ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅವರು ಇದೇ ವೇಳೇ ಘಟನೆಯಲ್ಲಿ ಚಾಲಕನಿಗೆ ಹಾಗೂ ಪ್ರಯಾಣಕನಿಗೆ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಪೋಲಿಸರು ತನಿಖೆ ಮಾಡಿದ ವೇಳೆಯಲ್ಲಿ ಘಟನೆಯಲ್ಲಿ ಪ್ರಯಾಣಿಕರ ಮುಖ…
ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಸ್ಪೋಟಕ್ಕೆ ಮಾಹಿತಿ ಬರುತ್ತಿದೆ. ಈ ನಡುವೆ ಶಂಕಿತ ಉಗ್ರ ತಾರೀಖ್, ಕುಕ್ಕರ್ ಬಾಂಬ್ ಅನ್ನು ಮೈಸೂರಿನಲ್ಲಿ ತಯಾರಿಸಿ, ಅದನ್ನು ಮಡಿಕೇರಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬಂದಿದ್ದಾನೆ ಎನ್ನಲಾಗಿದೆ. ಒಂದು ವೇಳೆ ಬಸ್‌ನಲ್ಲಿ ಬಾಂಬ್ ಸ್ಪೋಟವಾಗಿದ್ದರೇ ದೊಡ್ಡ ಪ್ರಮಾಣದಲ್ಲಿ ಅನಾಹುತಾ ಆಗುತಿತ್ತು ಎನ್ನಲಾಗಿದೆ. ಇದಲ್ಲದೇ ಶಂಕಿತ ಉಗ್ರ ತಾರೀಖ್ ಇತ್ತೀಚಿಗೆ ಕೊಯತ್ತಮತ್ತೂರಿನಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಕೂಡ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇದಲ್ಲದೇ ಕದ್ರಿಯಲ್ಲಿ ಗೋಡೆ ಮೇಲೆ ಬರೆದಿದ್ದ ಪ್ರಚೋದನಕಾರಿ ಬರಹದ ಪ್ರಕರಣದಲ್ಲಿ ಈತ ಜಾಮೀನು ಪಡೆದುಕೊಂಡಿದ್ದ ಎನ್ನಲಾಗಿದೆ. ಇದಲ್ಲದೇ ರಾಜ್ಯದ ನಾನಾ ಕಡೆ ಬಾಂಬ್ ಸ್ಪೋಟಕ್ಕೆ ಮುಂದಾಗಿದ್ದ ಶಂಕಿತ ಉಗ್ರ ಮುಂದಾಗಿದ್ದ ಎನ್ನಲಾಗಿದ್ದು, ಇದರ ಪ್ರಾರಂಭ ಭಾಗವಾಗಿ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಾರೀಕ್ ನಡೆಸಿರುವ ಕುಕ್ಕರ್ ಬಾಂಬ್ ಸ್ಪೋಟ ಮೊದಲ ಭಾಗ ಎನ್ನಲಾಗಿದೆ. ಈ ನಡುವೆ ಶಿವಮೊಗ್ಗದ ತುಂಗ ತೀರದಲ್ಲಿ ಕೂಡ ಬಾಂಬ್ ಸ್ಪೋಟದ ಟ್ರಯಲ್…








