ಮಂಗಳೂರು: ತುಳು ಚಲನಚಿತ್ರ ” ಪಿಲಿ ” ಬಿಡುಗಡೆ ಸಂಬಂಧ ಇಂದು (ದಿನಾಂಕ 22-02-2023) ಬುಧವಾರ ಸಂಜೆ 4 ಗಂಟೆಗೆ ಮಂಗಳೂರು ನಗರದ ವುಡ್ ಲಾಂಡ್ಸ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಕಾರಣಾಂತರಗಳಿಂದ ನವಂಬರ್ 10 ರಂದು ಅದ್ದೂರಿಯಾಗಿ ಕರಾವಳಿಯಾದ್ಯಂತ ತೆರೆ ಕಾಣಬೇಕಿದ್ದ ಎನ್. ಎನ್. ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ಪಿಲಿ ತುಳು ಚಿತ್ರ ಬಿಡುಗಡೆಗೆ ತಡೆಯುಂಟಾಗಿದ್ದ ಕಾರಣ ಸಮಸ್ತ ಚಿತ್ರತಂಡಕ್ಕೆ ಅಪಾರ ನೋವು ಹಾಗೂ ಸಿನಿಪ್ರಿಯರಿಗೆ ಅಗಾಧ ನಿರಾಸೆಯಾಗಿತ್ತು… ಕಷ್ಟ ಪಟ್ಟು ತುಳು ಭಾಷೆಯ ಅಭಿಮಾನದಿಂದ ಚಿತ್ರವನ್ನು ತಯಾರಿಸಿ ಅದನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿದಾಗ ಅದಕ್ಕೆ ಅಡ್ಡಿ ಪಡಿಸಿರುವುದು ಒಂದು ಬಹಳ ಬೇಸರದ ಸಂಗತಿಯಾಗಿದೆ . ಈ ಎಲ್ಲ ಅಡಚಣೆಗೆ ಸಮಸ್ತ ಪಿಲಿ ಚಿತ್ರತಂಡ ವಿಷಾದ ವ್ಯಕ್ತ ಪಡಿಸುತ್ತದೆ. ಪ್ರತಿ ಸಂದರ್ಭದಲ್ಲಿ ತುಳು ಚಲನಚಿತ್ರ ರಂಗಕ್ಕೆ ಬೆನ್ನೆಲುಬಾಗಿ ನಿಂತಿರುವ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು , ಸೇರಿದಂತೆ ಹಲವಾರು ತುಳುನಾಡಿನ ಗಣ್ಯರ ಬೆಂಬಲದೊಂದಿಗೆ…
Author: main-admin
ಮಂಗಳೂರು- ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕರ್ತವ್ಯ ನಿರತ ನಿರ್ವಾಹಕಿ ಮೇಲೆ ಹಲ್ಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ ನಿರ್ವಾಹಕಿ ವಿಜಯಾ ಅವರು ನೀಡಿದ ದೂರಿನ ಮೇರೆಗೆ ಪ್ರಯಾಣಿಕ ಹಸನ್‌ನನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 20ರಂದು ಸಂಜೆ ಪುತ್ತೂರು ನಿಲ್ದಾಣದಿಂದ ಬಸ್ ಹೊರಟು ನಗರದ ಮಾರುಕಟ್ಟೆ ಬಳಿಯ ತಂಗುದಾಣ ತಲುಪಿದಾಗ ಅಂಗವಿಕಲ ಪ್ರಯಾಣಿಕರೋರ್ವರಿಗೆ ಸೀಟು ಬಿಟ್ಟುಕೊಡುವಂತೆ ನಿರ್ವಾಹಕಿ ಕೇಳಿದ್ದು, ಆಕ್ಷೇಪಿಸಿದ ಆರೋಪಿಯು ಅವ್ಯಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಬಸ್‌ನಿಂದ ಇಳಿದು ಓಡಿ ಪರಾರಿಯಾಗಿದ್ದ. ನಿರ್ವಾಹಕಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಪುತ್ತೂರು ಮಹಿಳಾ ಠಾಣಾ ಪೊಲೀಸರು ಆರೋಪಿ ಹಸನ್‌ನನ್ನು ಬಂಧಿಸಿದ್ದಾರೆ.
ಉಡುಪಿ: ಗೂಗಲ್‌ನಲ್ಲಿ ವಿವರ ಹುಡುಕಾಡಿದಾಗ ಸಿಕ್ಕಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಮಹಿ ಳೆಯೊಬ್ಬರು 80 ಸಾವಿರ ರೂ. ಕಳೆದುಕೊಂಡಿದ್ದಾರೆ. ಬೀಜಾಡಿ ನಿವಾಸಿ ರೂಪಾಶ್ರೀ ಎಂಬುವರು ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದು, ಒಂದು ವಾರ ಕಳೆದರೂ ಪುಸ್ತಕಗಳು ಬಾರದೆ ಇರುವುದನ್ನು ಕಂಡು ಗೂಗಲ್‌ನಲ್ಲಿ ಕೊರಿಯ ಸಂಸ್ಥೆ ವಿವರವನ್ನು ಹುಡುಕಾಡಿದ್ದರು. ಈ ಸಂದರ್ಭ ಲಭಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆತ ತಾನು ಕೊರಿಯರ್ ಸಂಸ್ಥೆಯವನೆಂದು ನಂಬಿಸಿ, ರೂಪಶ್ರೀ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ, ವಿವರಗಳನ್ನು ಪಡೆದುಕೊಂಡಿದ್ದ. ಅದೇ ದಿನ ಹಲವು ಬಾರಿ ಒಟ್ಟು 80,602 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ. ಸನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಕಾಣಿಯೂರು ಸಮೀಪದ ಬೆಳಂದೂರಿನ ಅಮೈ ಎಂಬಲ್ಲಿ ಕುಟುಂಬದೊಳಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳಿಂದ ದೂರು ದಾಖಲಾಗಿದೆ. ಅಮೈ ನಿವಾಸಿ ಧರ್ಮಪಾಲ ಎಂಬವರಿಗೆ ಅವರ ಅಣ್ಣನ ಪತ್ನಿ ಹಾಗೂ ಮಗಳು ದೊಣ್ಣೆಯಿಂದ ತಲೆಗೆ ಹೊಡೆದು ನೋವುಂಟು ಮಾಡಿ ದೂಡಿ ಹಾಕಿ ನೆಲದಲ್ಲಿದ್ದ ಕಲ್ಲು ಮುಖಕ್ಕೆ ತಾಗಿ ಗುದ್ದಿರುವುದಾಗಿ ಆರೋಸಲಾಗಿದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಯಶೋದಾ ಅವರು ದೂರು ನೀಡಿ ಬೆಳಂದೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುವ ತಾನು ಫೆ. 20ರಂದು ಸಂಜೆ 5ರ ವೇಳೆಗೆ ಹೆತ್ತವರ ಯೋಗ ಕ್ಷೇಮ ವಿಚಾರಿಸಲು ಬೆಳಂದೂರಿನ ಅಮೈಯಲ್ಲಿರುವ ತವರು ಮನೆಗೆ ಬಂದಿದ್ದೆ. ಆಗ ಅಲ್ಲಿಗೆ ಬಂದಿದ್ದ ತನ್ನ ಅವಾಚ್ಯ ಶಬ್ದಗಳಿಂದ ಬೈದು, ಮರದ ಸಲಾಕೆಯಿಂದ ಕೈಗೆ, ಬೆನ್ನಿನ ಹಿಂಬದಿಗೆ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಿದ್ದಾರೆ. ಗಾಯಗೊಂಡ ಯಶೋದಾ ಅವರು ಸುಳ್ಯ ಸರಕಾರಿ ಆಸ್ಪತ್ರೆ ಮತ್ತು ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಳ್ಳಾರೆ…
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಮತದಾನದ ದಿನದಂದು ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುದು–1 ರಿಂದ 10 ಕ್ಷೇತ್ರಗಳು, ಬಂಟ್ವಾಳ ತಾಲೂಕಿನ 43–ಅನಂತಾಡಿಯ ಗ್ರಾಮ ಪಂಚಾಯತ್‍ನ 2–ಅನಂತಾಡಿ, ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮ ಪಂಚಾಯತ್‍ನ 1–ಬಲ್ಯ ಹಾಗೂ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ 4–ಆರ್ಯಾಪುವಿನಲ್ಲಿ 2023ರ ಫೆ.24ರ ಬೆಳಿಗ್ಗೆ 6 ಗಂಟೆಯಿಂದ ಫೆ.25ರ ಸಂಜೆ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಆದೇಶಿಸಿದ್ದಾರೆ.
ಮೈಸೂರು: ಮಹಿಳಾ ಪೊಲೀಸ್ ಕಾನ್ಸ್ಟೇಬಲ್ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್ಆರ್ಪಿ ವಸತಿಗೃಹದ ಮನೆಯಲ್ಲಿ ನಡೆದಿದೆ. ಗೀತಾ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗೀತಾ, ನಜರಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದರು. ನಿನ್ನೆ (ಫೆ.19) ಗೀತಾ ಅನಾರೋಗ್ಯದ ಕಾರಣ ನೀಡಿ ಕೆಲಸದಿಂದ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ಪತಿಯನ್ನು, ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದಾರೆ. ಈ ವೇಳೆ ಪತಿ, ಪತ್ನಿ ಗೀತಾಗೆ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವದೆಹಲಿ: ಎಲ್ಲಾ ಭಾಷಣಗಳು ದ್ವೇಷದ ಭಾಷಣವಲ್ಲ ಮತ್ತು ಯಾವ ಹೇಳಿಕೆಗಳು ಅಥವಾ ಭಾಷಣಗಳು ಆ ವ್ಯಾಖ್ಯಾನದಡಿಯಲ್ಲಿ ಬರುತ್ತವೆ ಎಂಬುದನ್ನು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ದ್ವೇಷ ಭಾಷಣದ ಪ್ರಕರಣಗಳಲ್ಲಿ ಕ್ರಮಕ್ಕೆ ಒತ್ತಾಯಿಸುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಹೇಳಿದೆ. ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಭಜರಂಗದಳ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಶಾಹೀನ್ ಅಬ್ದುಲ್ಲಾ ಅವರು ಅರ್ಜಿ ಸಲ್ಲಿಸಿದ್ದಾರೆ. ಇಂತಹ ಭಾಷಣಗಳು ಭಾರತದ ಏಕತೆ ಮತ್ತು ಅಖಂಡತೆಗೆ ಧಕ್ಕೆ ತರುತ್ತವೆ ಎಂದು ಅವರ ಅರ್ಜಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ, ಬಜರಂಗದಳವು ಹರಿಯಾಣದ ಮೇವಾತ್ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು, ಅಲ್ಲಿ ಭಾಷಣಕಾರರು ‘ತಮ್ಮ ಧರ್ಮವನ್ನು ರಕ್ಷಿಸಲು’ ‘ತ್ರಿಶೂಲ’ (ತ್ರಿಶೂಲ) ಅನ್ನು ಬಳಸುವುದಾಗಿ ವಾಗ್ದಾನ ಮಾಡಿದರು. ‘ಹೇಳಿದ ಎಲ್ಲವೂ ದ್ವೇಷದ ಮಾತುಗಳಲ್ಲ’ ಎಂದು ಐಎಎನ್‌ಎಸ್ ವರದಿಯ ಪ್ರಕಾರ ಕೇಜ್ರಿವಾಲ್ ವಿರುದ್ಧದ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಧೀಶರು ಹೇಳಿದರು. ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠವು ದ್ವೇಷದ ವ್ಯಾಖ್ಯಾನವಿಲ್ಲದ ಕಾರಣ ಎಚ್ಚರಿಕೆ ವಹಿಸುವ…
ಪುತ್ತೂರು: ಬೊಲೆರೋ ವಾಹನವೊಂದು ಪಲ್ಟಿಯಾಗಿ ದ್ವಿಚಕ್ರ ವಾಹನದ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಜತ್ತೂರು ಗ್ರಾಮದ ಕೆಮ್ಮಾರ ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ ಕೊರಗಪ್ಪ ಗೌಡ (58) ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ನಾಯ್ಕ ಚಲಾಯಿಸುತ್ತಿದ್ದ ಬೊಲೆರೋ ಪಿಕಪ್ ಕಡಬದಿಂದ ಬರುತ್ತಿದ್ದು ಈ ವೇಳೆ ಓಡ್ಲಾ ಎಂಬಲ್ಲಿ ದಿಢೀರ್ ಬ್ರೇಕ್ ಹಾಕಿದ್ದಾರೆ. ಪರಿಣಾಮವಾಗಿ ಬೊಲೆರೋ ಪಲ್ಟಿಯಾಗಿ ಕೊರಗಪ್ಪ ಅವರು ಚಲಾಯಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಇನ್ನು ಬೈಕ್ ಹಾಗೂ ಸವಾರ ಕೊರಗಪ್ಪ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಕೊರಗಪ್ಪ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸ್ವಲ್ಪ ಹೊತ್ತಿನಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪುತ್ತೂರು : ಕೆಎಸ್ ಆರ್ ಟಿಸಿ ನಿರ್ವಾಹಕಿಯೋರ್ವರಿಗೆ ಪ್ರಯಾಣಿಕನೋರ್ವ ಬಸ್ ನಲ್ಲಿಯೇ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಇಲ್ಲಿನ ಮಹಾವೀರ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಮಂಗಳೂರು- ಪುತ್ತೂರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಕರ್ತವ್ಯ ನಿರತರಾಗಿದ್ದ ನಿವಾರ್ಹಕಿ ವಿಜಯ ಎಂಬವರಿಗೆ ಅದೇ ಬಸ್ ನಲ್ಲಿದ್ದ ಪ್ರಯಾಣಿಕ ಹಸನ್ ಎಂಬಾತ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಬಸ್ ನಲ್ಲಿದ್ದ ವಿಕಲಾಂಗ ಪ್ರಯಾಣಿಕರೋರ್ವರಿಗೆ ಸೀಟು ಬಿಟ್ಟುಕೊಡುವಂತೆ ಕೇಳಿದಾಗ ಆಕ್ಷೇಪಿಸಿದ ಹಸನ್ ನನ್ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ , ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ನಿರ್ವಾಹಕಿ ವಿಜಯ ಆರೋಪ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ನಿರ್ವಾಹಕಿಗೆ ಹಲ್ಲೆ ನಡೆಸಿದ ಹಸನ್ ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದೇ ಇದ್ದಲ್ಲಿ ಕೆಎಸ್ಆರ್ ಟಿಸಿ ಮಜ್ದೂರ್ ಸಂಘ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಸುಬ್ರಹ್ಮಣ್ಯ: ಕಡಬ ತಾಲೂಕಿನಲ್ಲಿ ಕಾಡಾನೆ ಹಾವಳಿ ನಿಯಂತ್ರಿಸುವ ಹಿನ್ನಲೆ ಕಾಡಾನೆ ಸೆರೆಗೆ ಕಾರ್ಯಾಚರಣೆಗೆ ಸಿದ್ಧತೆಗಾಗಿ ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಆನೆಗಳು ಕಡಬ ತಾಲೂಕಿನ ರೆಂಜಿಲಾಡಿಗೆ ಆಗಮಿಸಿದೆ. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಸೋಮವಾರ ಬೆಳಿಗ್ಗೆ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿದೆ. ಲಾರಿಗಳ ಮೂಲಕ ಆನೆಗಳು ಸೋಮವಾರ ರಾತ್ರಿ ಕಡಬಕ್ಕೆ ಆಗಮಿಸಿದೆ. ಅರಣ್ಯ ಇಲಾಖೆಯ ಸಿಬ್ಬಂದಿಗಳ ತಂಡ ಅಲ್ಲಲ್ಲಿ ವೀಕ್ಷಣೆ ನಡೆಸಿ, ಡ್ರೋನ್ ಬಳಸಿ ಕಾಡಾನೆಯ ಚಲನ ವಲನಗಳನ್ನು ಪತ್ತೆ ಹಚ್ಚಲಾಗುತ್ತಿದೆ.ಕಾಡಾನೆಯನ್ನು ಸೆರೆ ಹಿಡಿಯಲು ಸಾಕಾನೆಗಳ ಸಹಕಾರ ಪಡೆಯಲಾಗುತ್ತದೆ. ಒಂದು ಕಾಡಾನೆ ಇರುವ ಜಾಗವನ್ನು ಪತ್ತೆ ಹಚ್ಚುವ ಕೆಲಸ ನಡೆಸುತ್ತಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ಎಸಿಎಫ್ ಪ್ರವೀಣ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಆರ್.ಗಿರೀಶ್,…









