Author: main-admin

ಕಾಸರಗೋಡು;ರ‍್ಯಾಗಿಂಗ್‌ ಪ್ರಕರಣವೊಂದು ಪೈವಳಿಕೆ ಸರಕಾರಿ ಶಾಲೆಯಲ್ಲಿ‌ ನಡೆದಿದ್ದು, 12ನೇ ತರಗತಿ ವಿದ್ಯಾರ್ಥಿಯೋರ್ವನ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿರುವುದಾಗಿ ದೂರಲಾಗಿದೆ. ಪೈವಳಿಕೆ ಕಾಯರ್ ಕಟ್ಟೆ ಜಿ.ಎಚ್.ಎಸ್ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ಹಲ್ಲೆಗೆ ಒಳಗಾದ ವಿದ್ಯಾರ್ಥಿ.ಈತನ ತಲೆ ಮತ್ತು ಹಣೆಗೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಅದ್ನಾನ್ ಶುಕ್ರವಾರ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.ಇದೀಗ ಆತನಿಗೆ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ‌.

Read More

ಪ್ರಸಿದ್ಧ ವಿಹಾರ ತಾಣ ಪಣಂಬೂರು ಬೀಚ್ ನಲ್ಲಿ ಫೆ.19ರ ಸಂಜೆ 4:30ರಿಂದ ಡಿಜೆ ಪಾರ್ಟಿಯೊಂದನ್ನು ಆಯೋಜಿಸಲಾಗಿದ್ದು ಈಗಾಗಲೇ ಅದರ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಈ ಮಧ್ಯೆ ಡಿಜೆ ಪಾರ್ಟಿ ಹೆಸರಲ್ಲಿ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ದಾರಿ ತಪ್ಪುತ್ತಿದ್ದಾರೆ, ಪೊಲೀಸ್ ಇಲಾಖೆ ಅನುಮತಿ ನೀಡಿದ್ದಾದರೂ ಹೇಗೆ ಎಂದು ಹಿಂದೂ ಸಂಘಟನೆಗಳು ಕೆಂಗಣ್ಣು ಬೀರಿವೆ. ಬೀಚ್ ಪ್ರವಾಸೋದ್ಯಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕಾಡೆ ಮಲಗಿದೆ. ಸಂಜೆ ಆರು ಗಂಟೆಯ ಬಳಿಕ ಜನಸಾಮಾನ್ಯರ ವಿಹಾರಕ್ಕೆ ಪೊಲೀಸರೇ ಇಲ್ಲಸಲ್ಲದ ಕಾರಣ ಹೇಳಿ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿದೆ. ಹೀಗಿರುವಾಗ 4:30ರಿಂದ ಬೀಚ್ ನಲ್ಲಿ ಓಪನ್ ಆಗಿ ಗುಂಡು ತುಂಡಿನ ಡಿಜೆ ಪಾರ್ಟಿ ಆಯೋಜನೆಗೆ ಅನುಮತಿ ನೀಡಲು ಕಾರಣವೇನು ಅನ್ನೋದು ಜನರ ಪ್ರಶ್ನೆ. ಮಂಗಳೂರಲ್ಲಿ ಪಬ್ ಗಳಲ್ಲಿ ಮ್ಯೂಸಿಕ್ ಹಾಕುವಂತಿಲ್ಲ ಎಂಬ ಹೊಸ ನಿಯಮವನ್ನು ಕೆಳದಿನಗಳಿಂದ ಪೊಲೀಸ್ ಇಲಾಖೆ ಹೊಸದಾಗಿ ಜಾರಿಗೆ ತಂದಿದೆ. ಇದರಿಂದ ಪಬ್ ಖಾಲಿಯಾಗಿ ಮಾಲಕರು ಕಂಗಲಾಗಿದ್ದು ಹೊರಗಿನ ಪ್ರವಾಸಿಗರು ಮಂಗಳೂರಿನ ಸಹವಾಸವೇ ಬೇಡ…

Read More

ಬಂಟ್ವಾಳ:ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಪಾಣೆ ಮಂಗಳೂರು ಬಳಿ ನಡೆದಿದೆ. ಪಾಣೆಮಂಗಳೂರು ನೆಹರು ನಗರ ನಿವಾಸಿ ಸುಲೈಮಾನ್ ಎಂಬವನಿಗೆ ಆತನ ಸ್ನೇಹಿತ ನಿಸಾರ್ ಎಂಬಾತ ಚೂರಿಯಿಂದ ಇರಿದಿದ್ದಾನೆ. ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದು ನಿಸಾರ್ ಸುಲೈಮಾನ್ ಗೆ ಚೂರಿಯಿಂದ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಸುಲೈಮಾನ್ ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸರು ಭೇಟಿ ನೀಡಿದ್ದಾರೆ.

Read More

ಮಂಗಳೂರು: ರಾಜ್ಯ ಬಜೆಟ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಹೇಳಿ ಬಿಲ್ಲವ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಸಹಿತ ರಾಜ್ಯದ ಬಿಲ್ಲವ ಸಚಿವರು ಮಾಡಿದ್ದಾರೆ ಎಂದು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ. ಇತ್ತೀಚೆಗೆ ಬಿಲ್ಲವ ಸಮುದಾಯದ ಮುಖಂಡರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ವೇಳೆ ಮುಂದಿನ ಬಜೆಟ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಘೋಷಣೆ ಮಾಡುವುದಾಗಿ ಹೇಳಿದ್ದರು ಇದಕ್ಕೆ ಜಿಲ್ಲೆಯ ಬಿಲ್ಲವ ಶಾಸಕರು, ಸಚಿವರೂ ಕೂಡ ಸಾಕ್ಷಿಯಾಗಿದ್ದರು ಆದರೆ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಇದರ ಬಗ್ಗೆ ಚಕಾರವೆತ್ತದಿರುವುದು ಸಮುದಾಯಕ್ಕೆ ಬಿಜೆಪಿ ಸರಕಾರ ಮಾಡಿದ ದ್ರೋಹವಾಗಿದೆ. ರಾಜ್ಯ ಸರ್ಕಾರ ಮಾಡಿದ ಈ ಮೋಸಕ್ಕೆ ಮುಂದಿನ ದಿನಗಳಲ್ಲಿ ಬಿಲ್ಲವ ಸಮುದಾಯ ತಕ್ಕ ಉತ್ತರ ನೀಡುತ್ತದೆ. ಮುಖ್ಯಮಂತ್ರಿಯವರು ಮಂಡಿಸಿದ ಬಜೆಟ್ ನಲ್ಲಿ ಬಿಲ್ಲವ ಸಮುದಾಯ ಮಾತ್ರವಲ್ಲದೆ ಇತರ ಸಮುದಾಯಗಳಾದ ಮೊಗವೀರ ಹಾಗೂ ಹಿಂದುಳಿದ…

Read More

ಮಂಗಳೂರು: ಹಾಡಹಗಲೇ ನಗರದ ಜ್ಯುವೆಲ್ಲರಿ ಶಾಪ್ ನುಗ್ಗಿ ಜ್ಯುವೆಲ್ಲರಿ ನೌಕರನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪ್ರಕರಣ ನಡೆದು ಎರಡು ವಾರಗಳು ಕಳೆದರೂ ಆರೋಪಿಯ ಪತ್ತೆಯಾಗಿಲ್ಲ. ಮಾಲೀಕ ‌ಮಧ್ಯಾಹ್ನ ಊಟಕ್ಕೆ ಹೋಗಿದ್ದ ವೇಳೆ ಆಭರಣ ಮಳಿಗೆಗೆ ನುಗ್ಗಿದ್ದ ದುಷ್ಕರ್ಮಿ, ಸಿಬ್ಬಂದಿ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ (54) ಎಂಬವರನ್ನು ಇರಿದು ಕೊಂದು ಚಿನ್ನಾಭರಣದೊಂದಿಗೆ ಎಸ್ಕೇಪ್ ಆಗಿದ್ದ.ಆರೋಪಿಯ ಸುಳಿವು ಸಿಗದ ಹಿನ್ನಲೆಯಲ್ಲಿ ಸಿಸಿ ಟಿವಿಯಲ್ಲಿ ದಾಖಲಾದ ಭಾವಚಿತ್ರವನ್ನು ಬಿಡುಗಡೆ ಮಾಡಿ ಮಾಹಿತಿ ದೊರೆತಲ್ಲಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದ್ದರು.ಇನ್ನೊಂದೆಡೆ ಪೊಲೀಸರು ಆರೋಪಿಯ ಪತ್ತೆಗೆ ಕಾಸರಗೋಡಿನಲ್ಲಿಯೂ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಸಿರಿಧಾನ್ಯ ಬಳಕೆ ಉತ್ತೇಜಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಾಜ್ಯದ ಎಲ್ಲ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಘೋಷಣೆ ಮಾಡಲಾಗಿದ್ದು, ಸಿರಿಧಾನ್ಯ ಆಧಾರಿತ ತಿಂಡಿ, ತಿನಿಸು, ಪಾನೀಯ ಬಳಸುವಂತೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಅಧೀನ ಕಚೇರಿಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗಿದೆ. ಎಲ್ಲಾ ಸಭೆಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ, ತಿನಿಸು, ಪಾನೀಯ ಬಳಕೆ ಮಾಡುವಂತೆ ಸರ್ಕಾರ ಸೂಚಿಸಲಾಗಿದೆ. ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಿರಿಧಾನ್ಯಗಳಿಗೆ ದೇಶಿಯ ಹಾಗೂ ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ಹಾಗೂ ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು ಅಂತಾರಾಷ್ಟ್ರೀಯ ಸಿರಿಧಾನ್ಯಗಳು ವರ್ಷ ಎಂದು ಘೋಷಿಸಲು ವಿಶ್ವಸಂಸ್ಥೆಗೆ ಭಾರತ ಸರ್ಕಾರ 2021 ರಲ್ಲಿ ಪ್ರಸ್ತಾಪಿಸಿತ್ತು. ಹೀಗಾಗಿ ವಿಶ್ವಸಂಸ್ಥೆ 2023ನೇ ವರ್ಷವನ್ನು ಅಂತಾರಾಷ್ಟ್ರೀಯ…

Read More

ಹಾಸನ: ಭಾರತ ಸಾಂಸ್ಕೃತಿಕ ದೇಶ ಭವ್ಯ ಪರಂಪರೆ ಹೊಂದಿರುವ ದೇಶ ದೈವರಾದನೇ ನಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಭೂಮಿಗಾಳಿ ಆಕಾಶ ಪ್ರತಿಯೊಂದು ಕೂಡ ನಾವು ದೈವವನ್ನು ಕಾಣುತ್ತೇವೆ ಅದೇ ರೀತಿ ನಮ್ಮಲ್ಲಿ ದೇವಾಲಯಗಳು ಅತಿ ಹೆಚ್ಚಾಗಿ ಇದ್ದು ಹಲವಾರು ಪವಾಡಗಳನ್ನು ನಾವು ಕಾಣುತ್ತಿದ್ದೇವೆ. ವೈಜ್ಞಾನಿಕತೆಯಲ್ಲಿ ಅತಿ ಎತ್ತರಕ್ಕೆ ಬೆಳೆಯುತ್ತಿರುವ ಭಾರತದಲ್ಲಿ ಹಿಂದೂ ಕೂಡ ದೈವ ನಂಬಿಕೆ ಇದೆ ಎಂಬುದಕ್ಕೆ ಸಾಕ್ಷಿಯೇ ಈ ಚೌಡೇಶ್ವರಿ ಶಕ್ತಿ ಮಠ.ಹಾಸನ ಜಿಲ್ಲೆ ಚನ್ನರಾಯಪಟ್ಟಣದಿಂದ ಸರಿಸುಮಾರು 13 ಕಿಲೋ ಮೀಟರ್ ದೂರದಲ್ಲಿ ಇರುವ ಹೊಸಕೊಪ್ಪಲು ಗ್ರಾಮದಲ್ಲಿ ನೆಲೆಸಿರುವ ತಾಯಿ ಚೌಡೇಶ್ವರಿ ಹಲವಾರು ಪವಾಡಗಳಿಗೆ ಸಾಕ್ಷಿಯಾಗಿದ್ದಾಳೆ. ಸರಿ ಸುಮಾರು 450ಕ್ಕೂ ಹಿಂದಿನ ಹಳೆಯ ಇತಿಹಾಸವನ್ನು ಹೊಂದಿರುವ ಈ ತಾಯಿ ರಾಜ್ಯದ ಹಲವಾರು ಭಾಗಗಳಿಂದ ಬರುವ ಭಕ್ತರ ಕಷ್ಟಗಳನ್ನು ತನ್ನ ತ್ರಿಶೂದಲ್ಲಿ ಬರೆದು ತೋರಿಸಿ ಅದಕ್ಕೆ ಪರಿಹಾರವನ್ನು ತಾನೇ ನೀಡುತ್ತಾಳೆ. ನಂಬಿದ ಭಕ್ತರನ್ನು ಎಡಬಡದೆ ಕಾಯುವ ಈ ತಾಯಿ. ಹಿಂದೂ ರಾಜ್ಯದ ಮನೆಮಾತಾಗಿದ್ದಾಳೆ. ಚನ್ನರಾಯಪಟ್ಟಣದಿಂದ 13 ಕಿಲೋ ಮೀಟರ್ ದೂರದಲ್ಲಿರುವ ಮಟ್ಟನೆವಿಲಿ…

Read More

ಬೆಂಗಳೂರು : ಕ್ರಿಕೆಟ್ ಆಡುವಾಗ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಳ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದಾಗ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ನಂತರ ಜಗಳ ವಿಕೋಪಕ್ಕೆ ತಿರುಗಿದ್ದು, ದುಷ್ಕರ್ಮಿಗಳು ಇಬ್ಬರಿಗೆ ಚಾಕು ಇರಿದು ಹತ್ಯೆ ಮಾಡಿದ್ದಾರೆ ನಂತರ ಪರಾರಿಯಾಗಿದ್ದಾರೆ. ಕೊಲೆಯಾದವರನ್ನು ಭರತ್, ಪ್ರತೀಕ್ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ. ದೊಡ್ಡ ಬೆಳವಂಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಡುಪಿ: ಪೊಲೀಸ್ ಅಧಿಕಾರಿಗಳ ವಸತಿ ಗೃಹದಲ್ಲಿಯೇ ಸೈಕಲ್ ಕಳವಾದ ಘಟನೆ ನಡೆದಿದೆ. ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ನಿರೀಕ್ಷಕರಾದ ರಫೀಕ್ ಎಂ.ಅವರು ಉಡುಪಿ ನಗರ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಪೊಲೀಸ್ ಅಧಿಕಾರಿಗಳ ವಸತಿ ಗೃಹದಲ್ಲಿ ತನ್ನ ಸಂಸಾರದೊಂದಿಗೆ ವಾಸವಾಗಿದ್ದರು. ಇವರ ಕಾರು, ಸ್ಕೂಟಿ ಹಾಗೂ ಎರಡು ಸೈಕಲ್‌ಗಳನ್ನು ವಸತಿಗೃಹದ ಪಕ್ಕದಲ್ಲಿನ ಶೆಡ್‌ನಲ್ಲಿ ನಿಲ್ಲಿಸಿದ್ದರು. ಫೆ.13ರಿಂದ ಫೆ.14ರ ನಡುವೆ ಯಾರೋ ಕಳ್ಳರು ಸೈಕಲ್‌ ಗಳಿಗೆ ಅಳವಡಿಸಿದ ಬೀಗವನ್ನು ಮುರಿದು ಒಟ್ಟು 16,100 ರೂ.ಮೌಲ್ಯದ ಎರಡು ಸೈಕಲ್‌ಗಳನ್ನು ಕಳ್ಳತನ ಮಾಡಿದ್ದಾರೆ. ಎರಡು ದಿನ ಕಳೆದರೂ ಪತ್ತೆಯಾಗದ ಕಾರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More

ಪುತ್ತೂರು: ರೈಲಿನಲ್ಲಿ ಸಂಚರಿಸುತ್ತಿರುವ ಸಂದರ್ಭ ಹೃದಯಾಘಾತದಿಂದ ವಕೀಲರೊಬ್ಬರು ಸಾವನಪ್ಪಿರುವ ಘಟನೆ ಮಲಬಾರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.ಪುತ್ತೂರಿನ ಎಪಿಎಂಸಿ ರಸ್ತೆಯ ನೆಲ್ಲಿಕಟ್ಟೆ ನಿವಾಸಿ, ವಕೀಲ ಕೆ.ಪಿ. ಜೇಮ್ಸ್ ಅವರು ತಮಿಳುನಾಡು ಕಡೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬುಧವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕೆ.ಪಿ.ಜೇಮ್ಸ್ ಅವರು ಪತ್ನಿಯೊಂದಿಗೆ ಚೆಂಗನೂರಿನ ಧಾರ್ಮಿಕ ಕ್ಷೇತ್ರಕ್ಕೆ ರೈಲಿನಲ್ಲಿ ತೆರಳುತ್ತಿದ್ದರು. ಹವಾನಿಯಂತ್ರಿತ ಕೋಚ್‌ನಲಿದ್ದ ಅವರು ರಾತ್ರಿ ವೇಳೆ ಶೌಚಾಲಯಕ್ಕೆ ಹೋದವರು ನಾಪತ್ತೆಯಾಗಿದ್ದರು. ಜೇಮ್ಸ್‌ ವಾಪಸ್‌ ಬರದ ಕಾರಣ ಅವರ ಪತ್ನಿ ಹುಡುಕಾಡಿದ್ದಾರೆ. ಎಲ್ಲೂ ಕಾಣದಿದ್ದಾಗ ಕಿರುಚಾಡಿದ್ದಾರೆ. ವ್ಯಕ್ತಿಯೊಬ್ಬರು ರೈಲಿನಿಂದ ಕೆಳಗೆ ಬಿದ್ದಿರುವ ವಿಚಾರವನ್ನು ರೈಲಿನಲ್ಲಿದ್ದ ಪ್ರಯಾಣಿಕರು ಅವರ ಗಮನಕ್ಕೆ ತಂದರು. ಈ ಮಧ್ಯೆ ತಲ್ವೇರಿ ಬಳಿಯ ಧರ್ಮಡಮ್ ಎಂಬಲ್ಲಿ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಜೇಬಿನಲ್ಲಿ ಗುರುತುಚೀಟಿ ಮತ್ತು ಭಾವಚಿತ್ರ ಆಧರಿಸಿ ಅದು ಕೆ.ಪಿ. ಜೇಮ್ಸ್ ಅವರದ್ದು ಎಂದು ಶಂಕಿಸಲಾಗಿತ್ತು. ಬಳಿಕ ಸಂಬಂಧಿಕರು ಸ್ಥಳಕ್ಕೆ ತೆರಳಿ ದೃಢಪಡಿಸಿದ್ದಾರೆ. ಕೆ.ಪಿ. ಜೇಮ್ಸ್ ದಂಪತಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿ…

Read More