ವೇಣೂರು: ವ್ಯಕ್ತಿಯೋರ್ವರು ವೈನ್ ಶಾಪ್ ಬಳಿ ಮದ್ಯಪಾನ ಮಾಡಲು ಬಂದಿದ್ದಾಗ, ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ ಘಟನೆ ಬೆಳ್ತಂಗಡಿ ತಾಲೂಕು ಮೂಡುಕೋಡಿ ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ,ನಿಟ್ಟಡೆ ಗ್ರಾಮ ನಿವಾಸಿ ಪ್ರಸಾದ್ @ ಬಾಡು ಪ್ರಸಾದ್ ರವರು, ದಿನಾಂಕ 07.07.2024 ರಂದು ರಾತ್ರಿ , ತನ್ನ ಸ್ನೇಹಿತ ಮೋಹನ್ ನೊಂದಿಗೆ, ಬೆಳ್ತಂಗಡಿ ತಾಲೂಕು ಮೂಡುಕೋಡಿ ಗ್ರಾಮದ ವೈನ್ ಶಾಪ್ ಬಳಿ ಮದ್ಯಪಾನ ಮಾಡಲು ಬಂದಿದ್ದಾಗ, ಆರೋಪಿಗಳಾದ 1)ವಸಂತ್ ಕೋಟ್ಯಾನ್, 2) ಸಂತೋಷ್ ನಾರ್ಲ ಎಂಬವರುಗಳು, ಪ್ರಸಾದ್ ರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ. ಪಿರ್ಯಾದಿಯ ಸ್ನೇಹಿತರಾದ ಮೋಹನ್ ಮತ್ತು ಕಟ್ಟೆ ಸಂತೋಷ್ ಎಂಬವರು ಗಲಾಟೆ ಬಿಡಿಸಿದಾಗ, ಆರೋಪಿಗಳು ಪ್ರಸಾದ್‌ರಿಗೆ ಜೀವ ಬೆದರಿಕೆ ಒಡ್ಡಿ ತೆರಳಿರುತ್ತಾರೆ. ಪ್ರಸಾದ್‌ರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದಾಗಿ ನೀಡಿದ ದೂರಿನ…
Author: main-admin
ದ.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಭಾರತೀಯ ಹವಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ 09/07/2೦24 ರಂದು ಮುನ್ನೆಚ್ಚರಿಕೆ ಕ್ರಮವಾಗಿ ದ.ಕ ಜಿಲ್ಲೆಯ ಎಲ್ಲಾ ಅಂಗನವಾಡಿ ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ಜುಲೈ 9ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು : ಭಾರಿ ಮಳೆಯ ಕಾರಣ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಅತಿ ಭಾರೀ ಮಳೆಯ ಅಲರ್ಟ್ ನೀಡಲಾಗಿದ್ದು ರೆಡ್ ಅಲರ್ಟ್ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ಘೋಷಿಸಿದೆ ಬದಲಾದ ಹವಾಮಾನ ವೈಪರಿತ್ಯದಿಂದ ರಾಜ್ಯ ಕರಾವಳಿಯಲ್ಲಿ ಎಡಬಿಡದೆ ನಿರಂತರ ಮಳೆ ಸುರಿಯುತ್ತಿ್ದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯ ಕಾರಣ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಅತಿ ಭಾರೀ ಮಳೆಯ ಅಲರ್ಟ್ ನೀಡಲಾಗಿದ್ದು ರೆಡ್ ಅಲರ್ಟ್ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ಘೋಷಿಸಿದೆ. ಎಲ್ಲಡೆ ಮಳೆ ಅಬ್ಬರ ಜೋರಾಗಿದೆ. ಕೆಲವಡೆ ನಿರಂತರ ಭಾರಿ ಮಳೆಯಾಗುತ್ತಿದ್ದು, ಅದರಲ್ಲೂ ಕರಾವಳಿ, ಮಲೆನಾಡು ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳೂರು ನಗರದಲ್ಲಿ ಸೋಮವಾರ ಮಧ್ಯಾಹ್ನ ಎಡಬಿಡದೆ ಸುರಿದ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಮಂಗಳೂರು ನಗರದ ಅನೇಕ ಕಡೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಭಾದಿಸಿದೆ. ಮಂಗಳೂರು ಮತ್ತು ಉಳ್ಳಾಲದಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.…
ಮುಂಬೈ ನಲ್ಲಿ ಸೋಮವಾರ ಭಾರಿ ಮಳೆಯಾದ ಹಿನ್ನೆಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಿತು. ಇತ್ತೀಚಿನ ಮಾಹಿತಿಯ ಪ್ರಕಾರ, ಮುಂಬೈ ನಿಂದ ಹಾರಾಟ ನಡೆಸಬೇಕಾಗಿದ್ದ ಕನಿಷ್ಠ 50 ವಿಮಾನಗಳನ್ನು ರದ್ದುಪಡಿಸಲಾಗಿದೆ ಹಾಗೂ ಅಹಮದಾಬಾದ್, ಹೈದರಾಬಾದ್ ಮತ್ತು ಇಂದೋರ್ ಸೇರಿದಂತೆ ಹಲವಾರು ಸ್ಥಳಗಳಿಗೆ ತಿರುಗಿಸಲಾಗಿದೆ. ಬೇರೆಡೆಗೆ ತಿರುಗಿಸಿದ ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲು ತತ್ಪರಿಣಾಮದ ಬದಲಾವಣೆಗಳನ್ನು ಮಾಡಲಾಗಿದೆ, ಇದು ನಿರ್ಗಮನ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್‌ಎಂಐಎ) ಪ್ರಯಾಣಿಕರಿಗೆ ಸಲಹೆ ನೀಡಿದ್ದು, ಆಯಾ ವಿಮಾನಯಾನ ಸಂಸ್ಥೆಗಳೊಂದಿಗೆ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಸ್ವಲ್ಪ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ಹೊರಡಲು ಸಲಹೆ ನೀಡಿದೆ.
ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೊಬೈಲ್ ಟವರ್‌ಗಳ ಬ್ಯಾಟರಿ ಮತ್ತು ಕಾಂಪೌಂಡ್ ಗೇಟ್‌ಗಳನ್ನು ಕದ್ದ ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯ ಇಟ್ಟಿ ಪಣಿಕ್ಕರ್ (58) ಈಗ ಪೊಲೀಸ್ ವಶದಲ್ಲಿರುವ ಆರೋಪಿ. 2.56 ಲಕ್ಷ ಮೌಲ್ಯದ 39 ಬ್ಯಾಟರಿಗಳು, 52000 ರೂಪಾಯಿ ಮೌಲ್ಯದ ಮೂರು ಕಬ್ಬಿಣದ ಗೇಟ್‌ಗಳು ಮತ್ತು ಐದು ಲಕ್ಷ ರೂಪಾಯಿ ಮೌಲ್ಯದ ಪಿಕ್ ಅಪ್ ಗೂಡ್ಸ್ ಟೆಂಪೋ ಸೇರಿದಂತೆ 8.08 ಲಕ್ಷ ಮೌಲ್ಯದ ಸರಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಎಸಿಪಿ ಮನೋಜ್ ಕುಮಾರ್, ಮೂಲ್ಕಿ ಠಾಣೆ ಇನ್ಸ್‌ಪೆಕ್ಟರ್ ವಿದ್ಯಾಧರ್ ಡಿ.ಬೈಕೇರಿಕರ್, ಪಿಎಸ್‌ಐ ವಿನಾಯಕ ಬಾವಿಕಟ್ಟಿ, ಎಎಸ್‌ಐ ಸಂಜೀವ ಎ.ಪಿ, ಎಚ್.ಸಿ.ಕಿಶೋರ್ ಕೋಟ್ಯಾನ್, ಮಹೇಶ್, ಶಶಿಧರ, ಚಂದ್ರಶೇಖರ್, ವಿಶ್ವನಾಥ, ವೀರೇಶ, ಕಾನ್‌ಸ್ಟೆಬಲ್‌ಗಳಾದ ಅರುಣ್ ಕುಮಾರ್, ಸುನೀಲ್, ಚಿತ್ರಾ ಪಾಲ್ಗೊಂಡಿದ್ದರು.
ಬಂಟ್ವಾಳ : ಬೈಕ್ ಒಂದಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಕಾರಣ ಸವಾರ ಸ್ಥಳ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಬಂಟ್ವಾಳ ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ಬೆಂಜನಪದವು ನಿವಾಸಿ ನಯನ್ ಕುಮಾರ್ (22) ಮೃತಪಟ್ಟ ಯುವಕನಾಗಿದ್ದಾನೆ. ಕಡೆಗೋಳಿ ಭಾಗದಿಂದ ಮಂಗಳೂರು ಕಡೆಗೆ ತೆರಳುವ ಸಂದರ್ಭ ಕೆ ಎಸ್ ಆರ್‌ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ . ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿ ಎಂಬಲ್ಲಿ ಕಳ್ಳತನ ನಡೆದಿದೆ. ವಿದೇಶದಲ್ಲಿರುವ ಸುಲೈಮಾನ್ ಎಂಬವರ ಮನೆಯ ಮಹಡಿಯ ಕಿಟಕಿ ಸರಳು ತುಂಡರಿಸಿ ಬಾಗಿಲಿನ ಮೂಲಕ ಒಳನುಗ್ಗಿದ ಕಳ್ಳರಿಂದ ದುಷ್ಕೃತ್ಯ ನಡೆದಿದೆ. ಕೋಣೆಯೊಳಗೆ ನಿದ್ರಿಸಿದ್ದ ವೃದ್ಧೆ ಐಸಮ್ಮಾ(72) ಅವರ ಕತ್ತು ಹಿಸುಕಿ ಪ್ರಜ್ಞಾಹೀನರಾದ ಬಳಿಕ ಕಿವಿಯಲ್ಲಿದ್ದ ಹಿಂದಿನ ಕಾಲದ ಚಿನ್ನದ ಕಿವಿಯೋಲೆಗಳನ್ನು ಲಪಟಾಯಿಸಿ ಪರಾರಿಯಾಗಿದ್ದಾರೆ. ಮನೆಯ ಇನ್ನೊಂದು ಕೋಣೆಯಲ್ಲಿ ಮಕ್ಕಳೊಂದಿಗೆ ಮಲಗಿದ್ದ ಐಸಮ್ಮಾ ಅವರ ಸೊಸೆ ಬೆಳಗ್ಗೆ ಎದ್ದು ಅತ್ತೆಯನ್ನು ಎಚ್ಚರಿಸಲು ಬಂದಾಗ ಐಸಮ್ಮಾ ಪ್ರಜ್ಞಾಹೀನರಾಗಿ ಬಿದ್ದುಕೊಂಡಿದ್ದರು. ಪಾರ್ಶ್ವವಾಯು ಬಡಿದಿರಬೇಕೆಂದು ಶಂಕಿಸಿದ ಮನೆಯವರು ನೆರೆಯ ಸಂಬಂಧಿಕರಿಗೆ ಮಾಹಿತಿ ನೀಡಿದರು. ಅವರೆಲ್ಲ ಬಂದು ನೋಡಿದಾಗ ಕಿಟಕಿಯ ಸರಳು ತುಂಡರಿಸಿರುವುದು ಮತ್ತು ಮಹಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಆತಂಕಗೊಂಡ ಮನೆಯವರು ಮತ್ತಷ್ಟು ಪರಿಶೀಲಿಸಿದಾಗ ವೃದ್ಧೆಯ ಕಿವಿಯೋಲೆಗಳು ಕಳ್ಳತನ ಆಗಿರುವುದು ಸ್ಪಷ್ಟವಾಯಿತು. ಬಳಿಕ ಮಾಹಿತಿ ನೀಡಿ ವಿಟ್ಲ ಪೊಲೀಸರು ಮತ್ತು ಶ್ವಾನದಳ ಆಗಮಿಸಿದೆ. ವೃದ್ಧೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಲೈಮಾನ್ ಸಹೋದರ ಇಬ್ರಾಹಿಂ ನೀಡಿದ ದೂರಿನಂತೆ…
ಮಂಗಳೂರು: ಟೋಲ್ ಗೇಟ್ ಮುಚ್ಚುವಂತೆ ಏಳು ವರ್ಷಗಳಿಂದ ಹೋರಾಟ ನಡೆಸಿದ ಸುರತ್ಕಲ್ ಟೋಲ್ ಗೇಟ್ ಪ್ರತಿಭಟನಾ ಸಮಿತಿಯ 101 ಸದಸ್ಯರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಹಿಂದಿನ ಬಿಜೆಪಿ ಸರ್ಕಾರ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದರಿಂದ ಪ್ರತಿಭಟನಾಕಾರರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು. ಮಾಜಿ ಕಾರ್ಪೊರೇಟರ್ ಪ್ರಜ್ವಲ್ ಕುಳಾಯಿ ಅವರು ತಮ್ಮ ಜಮೀನು ದಾಖಲೆಗಳ ರೂಪದಲ್ಲಿ ಜಾಮೀನು ಭದ್ರತೆಯನ್ನು ಒದಗಿಸಿದರು.ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದಲ್ಲಿ ಪ್ರತಿಭಟನಾಕಾರರ ಪರ ಚರಣ್ ಶೆಟ್ಟಿ, ಅಶ್ವಿನಿ ಹೆಗ್ಡೆ, ನಿತಿನ್ ಕುತ್ತಾರ್, ಅಣ್ಣು ಮಲಿಕ್, ಮನೋಜ್ ವಾಮಂಜೂರು, ಹಸೈನಾರ್ ಗುರುಪುರ, ಶೆವಿನ್ ಸೊಲೊಮನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಜಾಮೀನು ಮಂಜೂರಾದ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕ ಮಿಥುನ್ ರೈ, ಎಲ್ಲ ಪಕ್ಷಗಳ ಸಮಾನ ಮನಸ್ಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇವರೆಲ್ಲರ ವಿರುದ್ಧ ಹಿಂದಿನ ಬಿಜೆಪಿ ಸರ್ಕಾರ ಪ್ರಕರಣ ದಾಖಲಿಸಿತ್ತು. ಪ್ರಕರಣ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದೇವೆ.…
ವಿಟ್ಲ: ಪೇಟೆಯ ಕಡೆಗೆ ಆಗಮಿಸುತ್ತಿದ್ದ ಕಾರು ಪೆಟ್ರೋಲ್ ಪಂಪ್ ವೊಂದರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ನಡೆದಿದೆ. ಬುಳೇರಿಕಟ್ಟೆ ಕಡೆಯಿಂದ ಕಾಸರಗೋಡು ರಸ್ತೆಯ ಮೂಲಕ ವಿಟ್ಲ ಪೇಟೆಗೆ ಬರುತ್ತಿರುವ ಸಂದರ್ಭ ಪೇಟೆಯಿಂದ ಪುತ್ತೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯ ತಿರುವಿನಲ್ಲಿ ಚರಂಡಿಗೆ ಬಿದ್ದಿದೆ. ಕಾರಿನ ಮುಂಭಾಗ ಜಖಂಗೊಂಡಿದೆ.
ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿಹಿಸುದ್ದಿ ನೀಡಿದ್ದು, ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಶೀಘ್ರವೇ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಶೇ.98 ರಷ್ಟು ಮಹಿಳೆಯರು ನೋಂದಾಯಿಸಿಕೊಂಡಿದ್ದು, ಇಲ್ಲಿಯವರೆಗೆ ಎಲ್ಲಾ ತಿಂಗಳ ಹಣ ಜಮೆಯಾಗುತ್ತಿದೆ. ಜೂನ್ ತಿಂಗಳ ಹಣವು ವಾರದಲ್ಲಿಯೇ ತಮ್ಮ ಖಾತೆಗಳಿಗೆ ಜಮೆಯಾಗಲಿದೆ. ಪ್ರಸ್ತಕ ತಿಂಗಳಿನ ಹಣವು ತದನಂತರ ಪಾವತಿಯಾಗಲಿದ್ದು, ಎಲ್ಲಾ ಮಹಿಳೆಯರಿಗೂ ತಲುಪಲಿದೆ ಎಂದರು. ರಾಜ್ಯ ಸರ್ಕಾರವು ಸಮಾಜದ ಅಭಿವೃದ್ಧಿಗೆ ಬದ್ಧವಾಗಿದ್ದು, ಅದರಲ್ಲೂ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣವಾಗುತ್ತಿದೆ. ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ಮಹಿಳೆಯು ಮನೆಯ ಯಜಮಾನಿಯಾಗಿದ್ದಾಳೆ. ಇದರ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ ಎಂದು ಅವರು ನುಡಿದರು. ರಾಜ್ಯದಲ್ಲಿನ 7 ಸಾವಿರಕ್ಕೂ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸಲಾಗುವುದು. ಈ ಮೂಲಕ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ನುರಿತರಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ, ತೂಕ,…