Author: main-admin

ಉಡುಪಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ತಂದೆ ಮಗನಿಗೆ ಢಿಕ್ಕಿಯಾಗಿ ತಂದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಲಾರಿಯನ್ನು ಪತ್ತೆ ಮಾಡಲಾಗಿದೆ. ಕಾಪು ಸರ್ಕಲ್ ಇನ್ಸ್‌ಪೆಕ್ಟರ್ ಪೂವಯ್ಯ ಹಾಗೂ ಪಡುಬಿದ್ರಿ ಎಸ್.ಐ ಪುರುಷೋತ್ತಮ ತಂಡದ ತ್ವರಿತ ಕಾರ್ಯಚರಣೆಯಿಂದ ಮೂಡಬಿದ್ರೆ ಬಳಿ ತಡೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯಿಂದ ಬಸ್ಸಿನಲ್ಲಿ ಬಂದು ಬಸ್ಸಿಳಿದು ರಸ್ತೆ ಬದಿಯಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿಯಾದ ಪರಿಣಾಮ ತಂದೆಯ ದೇಹ ಲಾರಿಯಡಿಗೆ ಬಿದ್ದು ಛಿದ್ರಗೊಂಡರೆ, ಮಗ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಲಾರಿ ಮಹಾರಾಷ್ಟ್ರದ ಸೂರತ್‌ನಿಂದಲೂ 120 ಕೀ.ಮೀ.ದೂರದಿಂದ ಪ್ಲಾಸ್ಟಿಕ್ ಸಲಕರಣೆ ಮಾಡುವ ಕಚ್ಚಾವಸ್ತುಗಳನ್ನು ಹೇರಿಕೊಂಡು ಮೂಡಬಿದಿರೆ ಸಮೀಪದ ಗಂಜಿಮಠ ಎಂಬಲ್ಲಿನ ಫ್ಯಾಕ್ಟರಿಗೆ ಕಳೆದ ಮೂರು ದಿನಗಳ ಹಿಂದೆ ಹೊರಟಿತ್ತು. ಬುಧವಾರ ಮುಂಜಾನೆ ಆರರ ಸುಮಾರಿಗೆ ಉಚ್ಚಿಲ ಬಳಿ ಬರುತ್ತಿದ್ದಂತೆ ಚಾಲಕನ ನಿದ್ದೆಯ ಮಂಪರಿನಿಂದಾಗಿ ಲಾರಿ ರಸ್ತೆ ಬಿಟ್ಟು, ರಸ್ತೆ ಪಕ್ಕದಲ್ಲಿ ನಿಂತಿದ್ದ ತಂದೆ ಮಗನಿಗೆ ಢಿಕ್ಕಿಯಾಗಿ ಪರಾರಿಯಾಗಿತ್ತು.

Read More

ಮಂಗಳೂರು: ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ ನಗದೀಕರಣ ಮಾಡಿಕೊಡುವುದಾಗಿ ಹೇಳಿ ಒಟಿಪಿ ಪಡೆದು ವಂಚಿಸುವ ಖದೀಮರ ಬಗ್ಗೆ ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ. ಮಂಗಳೂರಿನ ವೈದ್ಯರೊಬ್ಬರು ಆಸ್ಪತ್ರೆಯಲ್ಲಿದ್ದಾಗ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ನಿಮ್ಮ ಕ್ರೆಡಿಟ್‌ ಕಾರ್ಡ್‌ ಪಾಯಿಂಟ್‌ ಗಳನ್ನು ಬಳಸಿಕೊಳ್ಳಲು ಇಂದು ಕೊನೆಯ ದಿನಾಂಕವಾಗಿದೆ. ಕೂಡಲೇ ಅದನ್ನು ನಗದೀಕರಣ ಮಾಡಿ ಇಲ್ಲವೆ ಗಿಫ್ಟ್ ಪಡೆದುಕೊಳ್ಳಿ ಎಂದು ಹೇಳಿದ್ದಾನೆ. ಇದನ್ನು ನಂಬಿದ ವೈದ್ಯರು ಪಾಯಿಂಟ್ಸ್‌ಗಳನ್ನು ನಗದೀಕರಣ ಮಾಡಿಕೊಡುವಂತೆ ಹೇಳಿದ್ದಾರೆ. ಆಗ ಅಪರಿಚಿತ ವ್ಯಕ್ತಿ ತಾನು ಹಾಗೆಯೇ ಮಾಡುವುದಾಗಿ ಹೇಳಿದ್ದಾನೆ. ಬಳಿಕ ವೈದ್ಯರು ಅವರ ಮೊಬೈಲ್‌ಗೆ ಬಂದ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ತಿಳಿಸಿದ್ದಾರೆ. ಆ ಬಳಿಕ ವೈದ್ಯರ ಖಾತೆಗೆ ಯಾವುದೇ ಹಣ ಬಂದಿರಲಿಲ್ಲ. ಬದಲಾಗಿ ಹಂತ ಹಂತವಾಗಿ ವೈದ್ಯರ ಖಾತೆಯಿಂದಲೇ ಒಟ್ಟು 60,000 ರೂ. ಯಾವುದೋ ಖಾತೆಗೆ ವರ್ಗಾವಣೆಯಾಗಿದೆ. ವಂಚನೆಗೊಳಗಾದವರಿಗೆ ಕರೆ ಮಾಡುವ ವ್ಯಕ್ತಿಗಳು ಹಣ ವಾಪಸ್‌ ಕೊಡಿಸುವುದಾಗಿ ಹೇಳಿ ವಂಚಿಸುವ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಇಂತಹ ವಂಚಕರನ್ನು ಸೈಬರ್‌ ವಲ್ಚರ್ಸ್‌ ಎಂದು ಕರೆಯಲಾಗುತ್ತದೆ. ಈ ಬಗ್ಗೆಯೂ…

Read More

ಪುತ್ತೂರು:ತಿಂಗಳಾಡಿಯಲ್ಲಿ ಹಿಂದೂ ಯುವತಿಯ ಜೊತೆ ಅಸಭ್ಯವಾಗಿ ವರ್ತನೆ ಆರೋಪದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಸರ್ವೆ ಸೊರಕೆ ನಿವಾಸಿ ಬದ್ರುದ್ದೀನ್ ಬಂಧಿತ ಆರೋಪಿ. ಈತ ಸೆ.14 ರಂದು ಸಂಜೆ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ಟೀಟ್ ಸ್ಟಾಲ್ ಎಂಬ ಅಂಗಡಿಯಲ್ಲಿ ಸ್ವೀಟ್ ಖರೀದಿಸಿ ಅಂಗಡಿಯ ಮಾಲೀಕರಿಗೆ ಹಣವನ್ನು ನೀಡುತ್ತಿರುವಾಗ ಸದ್ರಿ ಅಂಗಡಿಯೊಳಗೆ ಬಂದ ಆರೋಪಿಯು ಏಕಾಏಕಿ ಯುವತಿ ಸೊಂಟದ ಹಿಂಬದಿಗೆ ಕೈ ಹಾಕಿದ್ದು, ಆ ವೇಳೆ ಯುವತಿ ಬೊಬ್ಬೆ ಹಾಕಿ ಬದ್ರುದ್ದೀನ್ ನನ್ನು ತಳ್ಳಲು ಯತ್ನಿಸಿದಾಗ ಆತನು ಅಂಗಡಿಯಿಂದ ಹೊರಗೆ ಓಡಿ ಹೋಗಿರುತ್ತಾನೆ. ಬಳಿಕ ಯುವತಿಯು ಮಾಲಿಕರಲ್ಲಿ ವಿಚಾರಿಸಿದಾಗ ಯುವಕನು ಸೊರಕೆ ನಿವಾಸಿ ಬದ್ರುದ್ದೀನ್ ಎಂಬುದಾಗಿ ತಿಳಿದಿರುತ್ತದೆ. ಆದುದರಿಂದ ಸಾರ್ವಜನಿಕ ಸ್ಥಳದಲ್ಲಿ ಸೊಂಟದ ಹಿಂಬದಿಗೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ ಬದ್ರುದ್ದೀನ್ ಎಂಬವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಯುವತಿಯು ದೂರಿನಲ್ಲಿ ಉಲ್ಲೇಖಿಸಿದ್ದಳು. ಇದಲ್ಲದೆ ಹಿಂದೂ‌‌ ಸಂಘಟನೆಗಳು…

Read More

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ‌.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. 8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ ಅಪ್ ಮೂಲಕ ಸಂದೇಶ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು.ಆ ನಂಬರ್ ಜಿಲ್ಲಾಧಿಕಾರಿಯವರದ್ದಾಗಿರುವುದಿಲ್ಲ ಆದಕಾರಣ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ ಗೆ ವರ್ಗಾಯಿಸದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮನವಿ ಮಾಡಿದ್ದಾರೆ.8590710748 ಈ ನಂಬರ್ ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿಯವರು ಕೋರಿದ್ದಾರೆ.

Read More

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಜಗಳ ಕೊಲೆಯ ಮೂಲಕ ಅಂತ್ಯ ಕಂಡ ಘಟನೆ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಬನಾರಿಯಲ್ಲಿ ನಡೆದಿದೆ. ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದು, ಸಹೋದರ ಪದ್ಮನಾಭ (49) ಕೊಲೆಗೈದ ಆರೋಪಿಯಾಗಿದ್ದಾನೆ. ಜಾಗದ ವಿಚಾರವಾಗಿ ಹಾಗೂ ಕುಡಿದು ಮನೆಯಲ್ಲಿ ಆಗಾಗ ಗಲಾಟೆ ಸಂಭವಿಸುತ್ತಿದ್ದು, ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಬುಧವಾರ ವಿಟ್ಲ ಠಾಣೆಗೆ ದೂರು ಬಂದಿದೆ.

Read More

ಉಡುಪಿ : ರಸ್ತೆ ಬದಿ ನಿಂತಿದ್ದ ಅಪ್ಪ ಮಗನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪ್ಪ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಮಗನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಬೆಳಗಾವಿ ಮೂಲದ ಪ್ರಭಾಕರ್ ಕೋತ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಸಮರ್ಥ್ (14) ಎಂಬವರಾಗಿದ್ದಾರೆ. ಮೃತರು ಮಗನನ್ನು ಶಾಲೆಗೆ ಸೇರಿಸುವ ಸಲುವಾಗಿ ಬೆಳಗಾವಿಯಿಂದ ಕಾಪುವಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಭಾಕರ್ ಮೃತಪಟ್ಟು, ಸಮರ್ಥ್ ಗಂಭೀರ ಗಾಯಗೊಂಡಿದ್ದಾರೆ.

Read More

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಜಗಳ ಕೊಲೆಯ ಮೂಲಕ ಅಂತ್ಯ ಕಂಡ ಘಟನೆ ವಿಟ್ಲದ ಕೊಡಂಗೆ ಬನಾರಿಯಲ್ಲಿ ನಡೆದಿದೆ. ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದ ಮೃತ ದುರ್ದೈವಿ. ಪದ್ಮನಾಭ (49) ಕೊಲೆ ಆರೋಪಿ. ಜಾಗದ ವಿಚಾರವಾಗಿ ಮನೆಯಲ್ಲಿ ಸಹೋದರರು ಕುಡಿದು ಆಗಿಂದಾಗ ಗಲಾಟೆ ಸಂಭವಿಸುತ್ತಿತ್ತು. ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಕೂಡಾ ಜೋರಾಗಿ ಕಲಹ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಘಟನೆ ಬಗ್ಗೆ ವಿಟ್ಲ ಠಾಣೆಗೆ ದೂರು ಬಂದಿದೆ.

Read More

ಬೆಂಗಳೂರು : ಬೆಂಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಿಂದ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಪ್ಟೆಂಬರ್ 6 ರಂದು ಮೂವರು ಬಾಲಕಿಯರು ನಾಪತ್ತೆಯಾಗಿದ್ದು, ಪೋಷಕರು ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಕ್ತೇಶ್ವರಿ (15), ವರುಣಿಕಾ (16), ನಂದಿನಿ (15) ನಾಪತ್ತೆಯಾಗಿರುವ ಬಾಲಕಿಯರು, ಮಕ್ಕಳ ಬಗ್ಗೆ ಕೇಳಿದ್ರೆ ಆಡಳಿತ ಮಂಡಳಿಯವರು ಸರಿಯಾಗಿ ಹೇಳುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.

Read More

ಕಾರ್ಕಳ: ಪ್ರಗತಿಪರ ಕೃಷಿಕರೋರ್ವರು ತಮ್ಮ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ದುರ್ಗ ಗ್ರಾಮದ ತೆಳ್ಳಾರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.ಕಾರ್ಕಳ ಪ್ರಗತಿಪರ ಕೃಷಿಕ ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63 ) ಅವರು ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋಗಿದ್ದಾಗ ಭಾಸ್ಕರ ಹೆಗ್ಡೆಯವರು ಗುಂಡು ಹೊಡೆದುಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಪತ್ನಿ ಹೊರಗೋಡಿ ಬಂದಾಗ ಕೃತ್ಯ ಎಸಗಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗುತ್ತಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ.ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ವೃತ್ತ ನಿರೀಕ್ಷಕ ಸಂಪತ್, ಡಿವೈಎಸ್ಪಿ ವಿನಯಪ್ರಸಾದ್ ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಮೃತರು ಸಾವಯವ ಕೃಷಿಕರಾಗಿ ಗಮನ ಸೆಳೆದಿದ್ದರು. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಿದ್ದರು. ದುರ್ಗಾ ಪಂಚಾಯತ್ ನ ಸದಸ್ಯರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.

Read More

ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ.ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ. ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು 25,000 ನಷ್ಟ ಉಂಟಾಗಿದೆ.ಅಲ್ಲಿ ಸಮೀಪ ಮುನಾವರ್ ಸಾಹೇಬರ ಮನೆ ಚಾವಣಿ ಹಾರಿ ಹೋಗಿ ತೋಟದಲ್ಲಿರುವ ಅಡಿಕೆ ಮರ ತೆಂಗಿನ ಮರ ಸಾಗುವಾನಿ ಮರ ನೆಲಕ್ಕೆ ಉರುಳಿವೆ. ಇವರಿಗೆ ಸುಮಾರು 50,000 ದಷ್ಟು ನಷ್ಟ ಉಂಟಾಗಿದೆ. ಈ ಪರಿಸರದಲ್ಲಿ ಸುಮಾರು 10 ಮನೆಗಳಿಗೆ ತೀವ್ರತರದ ಹಾನಿ ಉಂಟಾಗಿ 10 ವಿದ್ಯುತ್ ಕಂಬಗಳು ನೆಲಕ್ಕೆರುಳಿವೆ ಈಗಾಗಲೇ ಸ್ಥಳೀಯ ಪಂಚಾಯತಿನ ಅಧಿಕಾರಿಗಳು ನಷ್ಟದ ಸಮೀಕ್ಷೆ ನಡೆಸುತ್ತಿದ್ದಾರೆ.

Read More