Author: main-admin

ಬೆಂಗಳೂರು: ಕ್ರೇನ್ ಡಿಕ್ಕಿ ಹೊಡೆದು ಸ್ಥಳದಲ್ಲೇ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಕೊನೆಯ ಪರೀಕ್ಷೆ ಮುಗಿಸಿ ರಸ್ತೆ ಬದಿಯಿಂದ ಮನೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕ್ರೇನ್​​ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆ ಚಾಲನೆಯಿಂದ ಈ ಘಟನೆಗೆ ನಡೆದಿದೆ. ವಿದ್ಯಾರ್ಥಿನಿಗೆ ಕ್ರೇನ್​ ಡಿಕ್ಕಿ ಹೊಡೆಯುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಕುರಿತಂತೆ ವೈಟ್ ಫೀಲ್ಡ್ ಸಂಚಾರಿ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕ್ರೇನ್ ಚಾಲಕ ಪೆರಿಯಸ್ವಾಮಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Read More

ಕಾಸರಗೋಡು: ಜಿಲ್ಲೆಯ ಹೊಸದುರ್ಗ ಅಲಾಮಿಪಳ್ಳಿ ನಿವಾಸಿ ಕಾಲೇಜು ವಿದ್ಯಾರ್ಥಿನಿ ನಂದ ವಿನೋದಿನಿ(20) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಕಲ್ಲೂರಾವಿ ಮೌಲಕರಿಯತ್‌ ಹೌಸ್‌ನ ಎ.ಕೆ.ಅಬ್ದುಲ್‌ ಸುಹೈಬ್‌(20) ಬಂಧಿತ ಆರೋಪಿಯಾಗಿದ್ದು ಹೊಸದುರ್ಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್‌ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪಡನ್ನಕ್ಕಾಡ್‌ ಇ.ಕೆ.ನಾಯನಾರ್‌ ಆರ್ಟ್ಸ್ ಆ್ಯಂಡ್‌ ಸಯನ್ಸ್‌ ಕಾಲೇಜು ವಿದ್ಯಾರ್ಥಿನಿಯಾಗಿದ್ದ ನಂದ ವಿನೋದಿನಿ ಅಕ್ಟೋಬರ್‌ 31 ರಂದು ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೇಣು ಬಿಗಿಯುವ ಮುನ್ನ ವೀಡಿಯೋ ಕಾಲ್‌ ಮಾಡಿ ಅಬ್ದುಲ್‌ ಸುಹೈಬ್‌ಗ ತಿಳಿಸಿದ್ದಳೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಸೆಕ್ಷನ್‌ ಪ್ರಕಾರ ಪೊಲೀಸರು ಕೇಸು ದಾಖಲಿಸಿದ್ದರು. ಈತನನ್ನು ಸಮಗ್ರ ವಿಚಾರಣೆಗೊಳಪಡಿಸಿದ ಬಳಿಕ ಸುಹೈಬ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಂದ ವಿನೋದಿನಿ ಮತ್ತು ಅಬ್ದುಲ್‌ ಸುಹೈಬ್‌ನ ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಸಮಗ್ರವಾಗಿ ಪರಿಶೀಲಿಸುತ್ತಿದ್ದಾರೆ.

Read More

ಹೊಸೂರು;ಹೆರಿಗೆ ಮಾಡಿಸುವ ವೇಳೆ ನವಜಾತ ಶಿಶುವಿನ‌ ಕೈ ಮುರಿದ ಘಟನೆ ಕೃಷ್ಣಗಿರಿ ಜಿಲ್ಲೆ ಉದ್ದನಪಲ್ಲಿಯಲ್ಲಿ ನಡೆದಿದೆ. ಹೊಸೂರು ನಗರದ ಕೊತ್ತೂರಿನ ಕೂಲಿಕಾರ್ಮಿಕ ಶಿವಕುಮಾರ್​ ಎಂಬುವರ ಪತ್ನಿ ವಸಂತಿ ಅವರಿಗೆ ಬುಧವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ತಕ್ಷಣ ಅವರನ್ನು ಹತ್ತಿರದ ಉದ್ಧನಪಲ್ಲಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಈ ವೇಳೆ ಆಸ್ಪತ್ರೆ ವೈದ್ಯೆ ಗೈರಾಗಿದ್ದರು. ದಾದಿಯರೇ ರಿಸ್ಕ್ ತೆಗೆದುಕೊಂಡು ಹೆರಿಗೆ ಮಾಡಿಸಿದ್ದರು. ಈ ವೇಳೆ ಮಗುವಿನ ಕೈ ಮುರಿದಿದ್ದು, ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ತಕ್ಷಣ ಆಂಬುಲೆನ್ಸ್​ ಮೂಲಕ ಹೊಸೂರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಮಗುವಿನ ಕೈ ಮುರಿದಿರುವ ಸುದ್ದಿ ತಿಳಿದು ಆಸ್ಪತ್ರೆ ಆವರಣದಲ್ಲಿ ಪೋಷಕರು ಗಲಾಟೆ ಮಾಡಿದರು.ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿ ಕೇಸ್ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು : ಮಂಗಳೂರು ನಗರದ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರದಲ್ಲಿನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಈ ರೋಗ ಹರಡುವುದನ್ನು ತಡೆಗಟ್ಟಲು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ತಿಳಿಸಿದ್ದಾರೆ. ಈ ಹಂದಿ ಸಾಕಣೆ ಕೇಂದ್ರದಿಂದ ಒಂದು ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು ಹತ್ತು ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ. ರೋಗಪೀಡಿತ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಆ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಹಾಗೂ ಅಲ್ಲಿಗೆ ಸಾರ್ವಜನಿಕರು ಭೇಟಿ ನೀಡದಂತೆ ನಾಮಫಲಕ ಅಳವಡಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸೂಕ್ತ ಕೈಗೊಳ್ಳಲು ಸೂಚನೆ : ಇನ್ನು ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಯಾವುದೇ ರೀತಿಯ ರೋಗವುಂಟು ಮಾಡುವುದಿಲ್ಲ. ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಲು ಸಲಹೆ ನೀಡಲಾಗಿದೆ. ಜಾಗೃತ ವಲಯದಲ್ಲಿರುವ ಹಂದಿ ಸಾಕಾಣಿಕೆದಾರರು ಮತ್ತು ಇತರರು ಸದ್ಯಕ್ಕೆ…

Read More

ಉಪ್ಪಿನಂಗಡಿ: ಸರ್ಕಾರಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ  ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪಿನಂಗಡಿಯ ಹಳೇ ಅರಣ್ಯ ತಪಾಸಣಾ ಕೇಂದ್ರದ ಬಳಿ ನಡೆದಿದೆ. ಗಾಯಗೊಂಡ ಸವಾರ ಭರತ್ ಕುಮಾರ್ ಬಜತ್ತೂರು ಗ್ರಾಮದ ಬೆದ್ರೋಡಿ ನಿವಾಸಿಯಾಗಿದ್ದು, ಕಾರ್ಯನಿಮಿತ್ತ ಉಪ್ಪಿನಂಗಡಿಗೆ ಬೈಕ್‍ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಬಸ್ಸಿನಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ಬೈಕ್ ಸವಾರ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Read More

ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ಕಾರು ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ಕಾರನ್ನು ಅಗ್ನಿಶಾಮಕ ಸಿಬ್ಬಂದಿಗಳು ಮೇಲಿತ್ತಿದಾಗ ಅದರಲ್ಲಿ ಶಾಸಕರ ಸಹೋದರನ ಪುತ್ರ ಚಂದ್ರಶೇಖರ್ ಮೃತದೇಹ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆ ಸಮೀಪ ಚಂದ್ರಶೇಖರ್ ಕಾರು ಸಂಚರಿಸಿದೆ ಎಂಬ ಸುಳಿವು ಸಿಕ್ಕಿತ್ತು. ಈ ಕಾರಣದಿಂದಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ಕ್ರೇನ್ ಮೂಲಕ ಕಾರನ್ನು ಮೇಲಕ್ಕೆ ಎತ್ತಲಾಗಿದೆ. ಈ ಕಾರಿನಲ್ಲಿ ಚಂದ್ರಶೇಖರ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ರೇಣುಕಾಚಾರ್ಯ ಗೋಳಿಡುತ್ತಿದ್ದಾರೆ.

Read More

ಬಂಟ್ವಾಳ: ಶಾಲೆಗೆಂದು ಹೋದ ಬಾಲಕಿ ಶಾಲೆಗೆ ಹೋಗದೆ ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು, ಸದ್ಯ ನಾಪತ್ತೆಯಾಗಿದ್ದ ಬಾಲಕಿ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ನಿವಾಸಿಪುಟ್ಟರಾಜ್ ಅವರ ಮಗಳು ಕಲ್ಲಡ್ಕದ ಅಮ್ಟೂರಿನ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವ ಪೃಥ್ವಿ (12) ಕಾಣೆಯಾಗಿದ್ದಳು. ಪುಟ್ಟರಾಜ್ ಅವರ ಮಗಳು ಪೃಥ್ವಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿತ್ತಿದ್ದು, ಕಲ್ಲಡ್ಕ ದ ಅಮ್ಟೂರು ನಿವಾಸಿ ಸಂಬಂಧಿಕ ರಾಜಪ್ಪ ಅವರ ಮನೆಯಲ್ಲಿ ಬಾಲಕಿ ವಾಸವಾಗಿದ್ದು ಅಲ್ಲಿಂದ ಶಾಲೆಗೆ ಹೋಗಿ ಬರುತ್ತಿದ್ದಳು. ಮನೆಯಿಂದ ರಿಕ್ಷಾದಲ್ಲಿ ಶಾಲೆಗೆ ಹೋಗಿದ್ದ ಬಾಲಕಿ ಶಾಲೆಗೆ ಬಾರದೆ ಇದ್ದುದರಿಂದ ಶಾಲಾ ಶಿಕ್ಷಕಿ ಮನೆಯವರಿಗೆ ಪೋನ್ ಮಾಡಿ ತಿಳಿಸಿದಾಗ ನಾಪತ್ತೆಯಾದ ಬಗ್ಗೆ ತಿಳಿದುಬಂದಿತ್ತು. ಶಾಲೆಗೆಂದು ಹೋದವಳು ಶಾಲೆಗೆ ಹೋಗದೆ ಕಾಣೆಯಾದ ಬಗ್ಗೆ ಗಾಬರಿಗೊಂಡ ಪೋಷಕರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಸದ್ಯ ಈ ಪ್ರಕರಣ ಸುಖಾಂತ್ಯ ಕಂಡಿದ್ದು, ಬಾಲಕಿಯು ಚಿಕ್ಕಮಗಳೂರಿನಲ್ಲಿ…

Read More

ಬಂಟ್ವಾಳ: ಆರೋಪಿಯೋರ್ವನನ್ನು ಜಿಲ್ಲಾ ಕಾರಾಗೃಹಕ್ಕೆ ಬಸ್‌ನಲ್ಲಿ ಪೊಲೀಸರು ಕರೆದುಕೊಂಡು ಹೋಗುವ ವೇಳೆ ಪರಾರಿಯಾಗಲು ಯತ್ನಿಸಿದ ಘಟನೆ ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮರಕೋಟ್ಲು ಎಂಬಲ್ಲಿ ನಡೆದಿದೆ. 2003 ರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕಳ್ಳಿಗೆ ನಿವಾಸಿ ಗಿರೀಶ್ ಯಾನೆ ಗಿರಿಧರ್ ಆರೋಪಿ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ತಲೆಮರೆಸಿಕೊಳ್ಳಲು ಯತ್ನಿಸಿದ ಕಾರಣಕ್ಕಾಗಿ ಈತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. 2003ರಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಿರಿಧರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯದ ಅದೇಶದಂತೆ ಪೋಲೀಸರು ಈತನನ್ನು ಪತ್ತೆ ಹಚ್ಚಿ ನ್ಯಾಯಾಲಯ ಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನಿಗೆ ಶಿಕ್ಷೆ ಪ್ರಕಟಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವ ಸಲುವಾಗಿ ಕೈದಿಯನ್ನು ಸರ್ಕಾರಿ ಬಸ್ ನಲ್ಲಿ ಇಬ್ಬರು ಪೋಲೀಸರು ಬಿಸಿರೋಡಿನಿಂದ ಮಂಗಳೂರಿಗೆ ಸುಮಾರು 6.30 ಗಂಟೆಗೆ ಕರೆದುಕೊಂಡು ಹೋಗುವ ವೇಳೆ ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಬಸ್ ನಿಧಾನವಾಗುತ್ತಿದ್ದಂತೆ, ನಿರ್ವಾಹಕನಿಗೆ ವಾರೆಂಟ್ ನೀಡುತ್ತಿರುವ ಸಮಯವನ್ನು ಉಪಯೋಗಿಸಿ ಆರೋಪಿ ಪೋಲೀಸರನ್ನು…

Read More

ಬಂಟ್ವಾಳ:ಶಾಲೆಗೆಂದು ಹೋಗಿದ್ದ ಬಾಲಕಿ ಶಾಲೆಗೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ‌ ಪೃಥ್ವಿ (12) ಕಾಣೆಯಾದ ಬಾಲಕಿ.ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹುರುಡಿ ಗ್ರಾಮದ ನಿವಾಸಿ ಪುಟ್ಟರಾಜ್ ಅವರ ಮಗಳು ಪೃಥ್ವಿ ಕಲ್ಲಡ್ಕದ ಅಮ್ಟೂರಿನ ಸಂಬಂಧಿಕರ ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಕಲ್ಲಡ್ಕದ ಅಮ್ಟೂರು ನಿವಾಸಿ ಸಂಬಂಧಿಕ ರಾಜಪ್ಪ ಅವರ ಮನೆಯಿಂದ ಬಾಲಕಿ ಶಾಲೆಗೆ ಹೋಗಲು ರಿಕ್ಷಾ ಮೂಲಕ ತೆರಳಿದ್ದಳು.ಬಾಲಕಿ ಶಾಲೆಗೆ ಬಾರದೆ ಇದ್ದುದರಿಂದ ಶಾಲಾ ಶಿಕ್ಷಕಿ ಮನೆಯವರಿಗೆ ಪೋನ್ ಮಾಡಿ ತಿಳಿಸಿದ್ದಾರೆ. ಶಾಲೆಗೆಂದು ಹೋದವಳು ಶಾಲೆಗೆ ಹೋಗದೆ ಕಾಣೆಯಾದ ಬಗ್ಗೆ ಪೋಷಕರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

Read More

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯನ್ನು ಸಿಐಡಿ ತಂಡ ಬಂಧಿಸಿದೆ. ಬಂಧಿತ ಆರೋಪಿ ಕಲ್ಯಾಣ ಕರ್ನಾಟಕ ಮಹಿಳಾ ಖೋಟಾದಲ್ಲಿ ಮೊದಲ ಸ್ಥಾನ ಪಡೆದಿದ್ದಳು. ಬಂಧಿತರನ್ನು ಸುಪ್ರಿಯಾ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್ ಎನ್ ಗ್ರಾಮ ನಿವಾಸಿಯಾದ ಸುಪ್ರಿಯಾ ಬ್ಲೂಟೂತ್ ಬಳಸಿ ಅಕ್ರಮವಾಗಿ ಪಿಎಸ್ ಐ ಪರೀಕ್ಷೆ ಬರೆದಿದ್ದರು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸುಪ್ರಿಯಾ ಹೆಸರಿತ್ತು, ಈ ಹಿನ್ನೆಲೆ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಿಐಡಿ ಪೊಲೀಸರು ಹಲವರನ್ನು ಇದುವರೆಗೆ ಬಂಧಿಸಿ ಜೈಲಿಗಟ್ಟಿದ್ದಾರೆ, ಪ್ರಕರಣ ಸಂಬಂಧ ಕಾರ್ಯಾಚರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಒಬ್ಬೊಬ್ಬರನ್ನಾಗಿ ಬಲೆಗೆ ಬೀಳಿಸುತ್ತಿದ್ದಾರೆ.

Read More