Author: main-admin

ಉಡುಪಿ : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಕುಚ್ಚಲಕ್ಕಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ವಿತರಿಸಲು ಕೇಂದ್ರ ಸರಕಾರ ಅನುಮತಿ ಕಲ್ಪಿಸಿದೆ. ಕಳೆದ ವರ್ಷ ಕೇಂದ್ರ ಸರಕಾರ ಸ್ಥಳೀಯ ಕುಚ್ಚಲಕ್ಕಿ ಖರೀದಿಸಿ, ವಿತರಿಸಲು ಅನುಮತಿ ನೀಡುವಾಗ ವಿಳಂಬವಾಗಿದ್ದರಿಂದ ಸ್ಥಳೀಯ ಕುಚ್ಚಲಕ್ಕಿ ಲಭ್ಯವಿರಲಿಲ್ಲ. ಆಂಧ್ರ ಸಹಿತ ಹೊರ ರಾಜ್ಯದ ಕುಚ್ಚಲಕ್ಕಿಯನ್ನೇ ವಿತರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಖರೀದಿಗೆ ಈಗಾಗಲೇ ಅನುಮೋದನೆ ನೀಡಿರುವುದರಿಂದ ಸ್ಥಳೀಯ ಕುಚ್ಚಲಕ್ಕಿ ಹೆಚ್ಚು ಸಿಗಬಹುದು. ಈ ತಿಂಗಳಿನಲ್ಲಿ ಕಟಾವು ಪ್ರಕ್ರಿಯೆ ಶುರುವಾಗಲಿದೆ. ಆದಷ್ಟು ಬೇಗ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಿ, ರೈತರಿಗೆ ಸೂಕ್ತ ಮಾಹಿತಿ ನೀಡುವ ಕಾರ್ಯ ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆ, ಜಿಲ್ಲಾಡಳಿತ ಮಾಡಬೇಕಿದೆ. ಪ್ರತಿ ತಿಂಗಳು ಉಭಯ ಜಿಲ್ಲೆಗಳಿಗೆ ಸರಾಸರಿ 1 ಲಕ್ಷ ಕ್ವಿಂಟಾಲ್‌ ಅಕ್ಕಿ ಪಡಿತರ ವ್ಯವಸ್ಥೆಯಡಿ ವಿತರಿಸಲು ಬೇಕಾಗುತ್ತದೆ. ಈ ಹಿಂದೆ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತಕ್ಕೆ ಕ್ವಿಂಟಲ್‌ಗೆ 1,940 ರೂ. ಹಾಗೂ ಗ್ರೇಡ್‌-ಎ ಭತ್ತಕ್ಕೆ 1,960 ರೂ. ನೀಡಿ ಖರೀದಿಸಲಾಗುತಿತ್ತು.…

Read More

ಬೆಂಗಳೂರು: 5G ಸೇವೆಯನ್ನು ದೇಶದಲ್ಲಿ ಕೆಲ ನೆಟ್‌ವರ್ಕ್‌ಗಳು ಆಯ್ದ ಪ್ರದೇಶಗಳಲ್ಲಿ ಶುರುವಾಗಿದೆ. ಈ ನಡುವೆ ಇದೇ ಅವಕಾಶವನ್ನು ಮಿಸ್‌ ಮಾಡಿಕೊಳ್ಳುತ್ತಿರುವ ಸೈಬರ್‌ ಕಿರಾತಕರು, 5G ಅಪ್‌ಡೇಟ್‌ ಲಿಂಕ್‌ ಗಳನ್ನು ಮೊಬೈಲ್‌ ಗ್ರಾಹಕರಿಗೆ ಕಳುಹಿಸಿ ಬ್ಯಾಂಕ್‌ಗಳಲ್ಲಿ ಇರುವ ಹಣವನ್ನು ಕದಿಯಲು ಶುರುಮಾಡಲು ಮಾಡಿದ್ದಾರೆ. ಈ ನಡುವೆ ಈ ಬಗ್ಗೆ ರಾಜ್ಯ ಪೋಲಿಸ್‌ ಇಲಾಖೆ ಜನತೆಗೆ ಮಹತ್ವದ ಸಂದೇಶವನ್ನು ಕಳುಹಿಸುತ್ತಿದ್ದು, ಆ ಸಂದೇಶದಲ್ಲಿ ಎಲ್ಲ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವ ವಿಷಯ ಏನೆಂದರೆ Mobile Sim Card 5G ಸರ್ವಿಸ್ ಪ್ರಾರಂಭವಾಗಿರುವುದು ನಿಮಗೆ ಗೊತ್ತಿರುವ ವಿಷಯವಾಗಿದೆ ಇದನ್ನೆ ನೇಪವಾಗಿಟ್ಟುಕೊಂಡು ಸೈಬರ್ ಕ್ರೈಮ್ ನ ಕೇಲವು ಕಿಡಿಗೇಡಿಗಳು ನಿಮ್ಮ ಮೊಬೈಲ್ ಗೆ ಕಾಲ್ ಮಾಡಿ ನಿಮ್ಮ Sim card ನ್ನು 4G ದಿಂದ 5G ಗೆ Update ಮಾಡ್ತಿವಿ ನಿಮಗೆ ಒಂದು OTP ಬರುತ್ತೆ ಹೇಳಿ ಅಂತ ಕಾಲ್ ಬಂದರೆ ಖಂಡಿತವಾಗಿ ಯಾರು ನಿಮಗೆ ಬಂದ OTP ತಿಳಿಸಬೇಡಿ ನೀವು ಒಂದು ವೇಳೆಗೆ ಅವರು ಕಳುಹಿಸಿದ…

Read More

ಮಂಗಳೂರು: ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಮಧ್ಯರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಫೇಸ್ ಬುಕ್ ಪೋಸ್ಟ್ ಒಂದಕ್ಕೆ ಸಂಬಂಧಿಸಿ ಸುನೀಲ್ ಬಜಿಲಕೇರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದೆನ್ನಲಾಗಿದ್ದು, ಸದ್ಯ ಅವರನ್ನು ಉರ್ವ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಪೊಲೀಸರು ವಶಕ್ಕೆ ಪಡೆದಿದ್ದು, ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಅವರನ್ನು ಊರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳೀಯರು ಠಾಣೆ ಗೆ ತೆರಳಿದ್ದಾರೆ. ಸಂಘ ಪರಿವಾರದ ಮಾಜಿ ಕಾರ್ಯಕರ್ತ ಸುನೀಲ್ ಬಜೀಲಕೆರಿ ಅವರು ಸದ್ಯ ಬಿಜೆಪಿ ನಾಯಕರ ಕಾರ್ಯವೈಖರಿಯ ಕಟುಟೀಕಾಕಾರರಾಗಿದ್ದಾರೆ.

Read More

ಉಳ್ಳಾಲ: ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರೊಂದರ ಕೆಳಗಡೆ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದ್ದು ಅಸ್ವಸ್ಥಗೊಂಡಿರುವ ಮಗುವಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೊಕ್ಕೊಟ್ಟು ಕಾಪಿಕಾಡುವಿನ ಗೇರು ಕೃಷಿ ಸಂಶೋಧನಾ ಕೇಂದ್ರ ರಸ್ತೆಯ ಅಂಬಿಕಾರೋಡ್ ನಿವಾಸಿ ಅಮರ್ ಎಂಬವರ ಮನೆ ಮುಂದಿನ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಸಂಬಂಧಿಕರ ಕಾರಿನ ಕೆಳಗಡೆ ನವಜಾತ ಶಿಶು ಪತ್ತೆಯಾಗಿದೆ. ನಿನ್ನೆ ಬೆಳಿಗ್ಗೆ ಅಮರ್ ಅವರು ಉಳ್ಳಾಲ ಶಾರದಾ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.ಅಮರ್ ಅವರು ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದು ಮಗುವನ್ನ ಬಿಟ್ಟು ಹೋದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Read More

ಲಕ್ನೋ: ಅಯೋಧ್ಯೆರಾಮ ಮಂದಿರ ನಿರ್ಮಾಣ ಕಾಮಗಾರಿ ಶೇ. 50 ರಷ್ಟು ಪೂರ್ಣಗೊಂಡಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ. ದೇವಾಲಯದ ಟ್ರಸ್ಟ್ ಪ್ರಕಾರ, 2024 ರಲ್ಲಿ ಮಂಕರ ಸಂಕ್ರಾಂತಿ ದಿನದಂದು ದೇವಾಲಯದ ಗರ್ಭಗುಡಿಯಲ್ಲಿ ರಾಮನ ವಿಗ್ರಹವನ್ನು ಇರಿಸುವ ಸಾಧ್ಯತೆಯಿದೆ. 2020 ರಲ್ಲಿ ಪ್ರಾರಂಭವಾದ ದೇವಾಲಯದ ನಿರ್ಮಾಣವು 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. 1949ರಿಂದ ಆಂದೋಲನ ಆರಂಭವಾಗಿದ್ದು, ರಾಮಮಂದಿರದ ಕನಸನ್ನು ನನಸಾಗಿಸಲು ಸಮರ್ಪಣಾ ಪ್ರಯತ್ನಗಳು ನಡೆದಿವೆ. ಈಗ ಈ ಪ್ರಯತ್ನಗಳಿಂದಾಗಿ ದೇವಾಲಯದ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಶ್ರೀಕೃಷ್ಣ ದೇವರ ʻಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಶು ಕದಾಚನʼ ಉಪದೇಶದಂತೆ ನಾವು ರಾಮ ಮಂದಿರ ನಿರ್ಮಾಣ ಕಾರ್ಯ ನಡೆಸುತ್ತಿದ್ದೇವೆ ಎಂದಿದ್ದಾರೆ.

Read More

ಮಂಗಳೂರು: ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬ ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್‌ ಬುಕ್ಕಿಂಗ್‌ ನೆಪದಲ್ಲಿ ವಂಚನೆಗೊಳಗಾದ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮಾ.೩ರಂದು ಬೆಂಗಳೂರಿನ ಟೆಕ್ಕಿ ಮಂಗಳೂರಿಗೆ ಆಗಮಿಸಿದ್ದ ಟೆಕ್ಕಿ ಇಲ್ಲಿ ಸುತ್ತಾಡಿದ್ದರು . ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್‌ ಸರ್ಚ್‌ ಮಾಡಿದ್ದಾರೆ. ಈ ವೇಳೆ ವಿಮಾನ ಇಲ್ಲದಿರುವುದು ತಿಳಿದು, ಖಾಸಗಿ ಹೆಲಿಕಾಪ್ಟರ್‌ ಇದೆಯೇ ಎಂದು ಸರ್ಚ್‌ ಮಾಡಿದ್ದಾರೆ. ಈ ವೇಳೆ, ಖಾಸಗಿ ಹೆಲಿಕಾಪ್ಟರ್‌ ಬುಕ್ಕಿಂಗ್ ಮಾಡುವ ವೆಬ್‌ಸೈಟ್‌ ಒಂದು ಸಿಕ್ಕಿದೆ. ಆದನ್ನು ಸಂಪರ್ಕಿಸಿದಾಗ, ನಿತಿನ್‌ ಎನ್ನುವ ವ್ಯಕ್ತಿ ಫೋನ್‌ ಕರೆಗೆ ಸಿಕ್ಕಿದ್ದು, ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿಯೆಂದು ಹೇಳಿಕೊಂಡಿದ್ದ.ಆ ಬಳಿಕ ಹೆಲಿಕಾಪ್ಟರ್‌ ಬುಕ್ಕಿಂಗ್‌ ಅಡ್ವಾನ್ಸ್‌ ಎಂದು 38,060 ರೂ. ಕಳುಹಿಸಿ ಕೊಡಲು ಹೇಳಿದ್ದು, ಅದರಂತೆ ಆತ ಕಳುಹಿಸಿದ್ದ ಕ್ಯೂಆರ್‌ ಕೋಡ್‌ಗೆ ಹಣ ನೀಡಿದ್ದಾರೆ. ಅನಂತರ ಕರೆ ಮಾಡಿದಾಗ…

Read More

ಉಡುಪಿ: ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಸೇಂಟ್ ಮೇರಿಸ್ ದ್ವೀಪಕ್ಕೆ ಅಕ್ಟೋಬರ್ 5 ರಂದು ಬುಧವಾರ ದೋಣಿ ಸೇವೆ ಪುನರಾರಂಭವಾಗಿದೆ. ಕಳೆದ ವರ್ಷ ದ್ವೀಪದಲ್ಲಿ ಹಲವು ಅವಘಡಗಳು ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ದ್ವೀಪದ ಪ್ರವಾಸವನ್ನು ನಿಲ್ಲಿಸಲಾಗಿದೆ ಎಂದು ಡಾ.ಉದಯಕುಮಾರ್ ಶೆಟ್ಟಿ ತಿಳಿಸಿದರು. ಪಾಲಿಥಿನ್ ಚೀಲಗಳಲ್ಲಿ ಆಹಾರ ಪದಾರ್ಥಗಳನ್ನು ಸಾಗಿಸುವುದನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಪ್ರವಾಸಿಗರು ಚಿಕ್ಕ ಮಕ್ಕಳ ಬಳಕೆಗಾಗಿ ಹಾಲಿನ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ತರಲು ಮಾತ್ರ ಅನುಮತಿಸಲಾಗಿದೆ. ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಸಹ ನಿಷೇಧಿಸಲಾಗಿದೆ. ಪ್ರವಾಸಿಗರು ಸುರಕ್ಷಿತವಾಗಿ ಚಿತ್ರಗಳನ್ನು ತೆಗೆಯಲು ಏಳು ಸೆಲ್ಫಿ ಪಾಯಿಂಟ್‌ಗಳನ್ನು ರಚಿಸಲಾಗಿದೆ. 5 ಅಪಾಯಕಾರಿ ಸ್ಥಳಗಳಲ್ಲಿ ಬೋರ್ಡ್‌ಗಳು ಮತ್ತು ಎಚ್ಚರಿಕೆಯ ಧ್ವಜಗಳನ್ನು ಅಳವಡಿಸಲಾಗಿದೆ. ದ್ವೀಪದ ಉತ್ತರ ಮತ್ತು ಪೂರ್ವ ಭಾಗದಲ್ಲಿ 110 ಮೀಟರ್ ಉದ್ದ ಮತ್ತು 100 ಮೀಟರ್ ಅಗಲದ ಸುರಕ್ಷಿತ ಈಜು ವಲಯವನ್ನು ರಚಿಸಲಾಗಿದೆ. ಆ ಎರಡು ಪ್ರದೇಶಗಳಲ್ಲಿ ಮಾತ್ರ…

Read More

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನದಲ್ಲಿ ಅಕ್ರಮ ಸಾಗಾಟದ 38.53 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಮೂಲದ ಪ್ರಯಾಣಿಕ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಈ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ. ಈತ ಚಿನ್ನದ ಪೌಡರ್ ಅನ್ನು ಗಮ್ ನಲ್ಲಿ ಬೆರೆಸಿ ಅದನ್ನು ಉಂಡೆ ಮಾಡಿ ಗುದನಾಳದಲ್ಲಿ ಬಚ್ಚಿಟ್ಟ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತನಿಂದ 24 ಕ್ಯಾರೆಟ್ ಪರಿಶುದ್ಧತೆಯ 741 ಗ್ರಾಂ ತೂಕದ 38,53,200 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಿದ್ದಾರೆ.

Read More

ಸುರತ್ಕಲ್:  ಟೋಲ್ ಗೇಟ್ ತೆರವಿಗಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆ ಐತಿಹಾಸಿಕ ಹೋರಾಟವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಗುರುಪುರ ಪ್ರದೇಶದ ಜನತೆ ಶಾಂತಿಯುತವಾಗಿ ನಡೆಯಲಿರುವ ಈ ಮಹತ್ವದ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಕರೆ ನೀಡಿದರು.ಅವರು ಕೈಕಂಬ ಪ್ರೀಮಿಯರ್ ಸಭಾಂಗಣದಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದ ಯಶಸ್ಸಿಗಾಗಿ ಹಮ್ಮಿಕೊಳ್ಳಲಾಗಿದ್ದ ಗುರುಪುರ ವಲಯ ಮಟ್ಟದ ಸಮಾನ ಮನಸ್ಕ ಸಂಘಟನೆಗಳ ಸಮಾಲೋಚನಾ ಸಭೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

Read More