Author: main-admin

ಮಂಗಳೂರು: ವಿಮಾನ ನಿಲ್ಧಾಣದಲ್ಲಿ ದುಬೈನಿಂದ ಬಂದಿಳಿದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮುಕ್ಕ ನಿವಾಸಿ ಮೊಹಮ್ಮದ್ (65) ಮೃತರು.ಗುರುವಾರ ದುಬೈಗೆ ತೆರಳಿದ್ದ ಮೊಹಮ್ಮದ್ ಕುಟುಂಬಸ್ಥರನ್ನು ಭೇಟಿಯಾಗಿ ಭಾನುವಾರ ವಾಪಾಸ್ಸಾಗಿದ್ದರು.ಮಂಗಳೂರು ವಿಮಾನ ನಿಲ್ದಾಣ ತಲುಪಿ ಅಧಿಕಾರಿಗಳಿಗೆ ಪಾಸ್ ಪೋರ್ಟ್ ನೀಡಿ‌ ನಿಂತಿದ್ದ ವೇಳೆ ದಿಡೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

Read More

ಬಂಟ್ವಾಳ: ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆಯುವ ಮೂಲಕ ಪಿಎಫ್ಐ ಸಂಘಟನೆಯು ಆರ್‌ಎಸ್‌ಎಸ್‌ಗೆ ಬೆದರಿಕೆ ಹಾಕಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಬೆಳಕಿಗೆ ಬಂದಿದೆ. ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆದುಕೊಂಡಿದ್ದು, ಸ್ಥಳೀಯರು ಪುಂಜಾಲ್ ಕಟ್ಟೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣಕ್ಕೆ ಕ್ರಮ ಜರುಗಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತಾರೆ.

Read More

ಮಂಗಳೂರು: ನಗರದ ಶ್ರೀ ಗೋಕರ್ಣನಾಧೇಶ್ವರ ದೇವಸ್ಥಾನದಿಂದ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್ಲೋಗಳ ಶೋಭಾಯಾತ್ರೆಗೆ ಅಪಾರ ಜನಸಂಖ್ಯೆ ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 116ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಅ.05ರ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಅ.06ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಕೊಟ್ಟಾರ ಚೌಕಿ ಜಂಕ್ಷನ್ ಮುಖಾಂತರ ನಗರಕ್ಕೆ ಬರುವ ವಾಹನಗಳ ನಗರ ಪ್ರವೇಶವನ್ನು ನಿಷೇಧಿಸಲಾಗಿದೆ ಹಾಗೂ ವಾಹನಗಳು ಕುಂಟಿಕಾನ, ಕೆ.ಪಿ.ಟಿ, ನಂತೂರು ಮಾರ್ಗವಾಗಿ ನಗರ ಪ್ರವೇಶಿಸುವುದು.ನಗರದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಮುಖೇನ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಗರದಿಂದ ಲಾಲ್ಬಾಗ್ ಮಾರ್ಗವಾಗಿ ಕುಂಟಿಕಾನ ಹಾಗೂ ಕೆ.ಪಿ.ಟಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆ.ಎಸ್.ಆರ್ ರಸ್ತೆಯಿಂದ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಿ.ವಿ.ಎಸ್ ಮಾರ್ಗವಾಗಿ…

Read More

ಸುಳ್ಯ : ನಿನ್ನೆ ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆ ‌ ಗ್ರಾಮದ ತಂಬಿನಮಕ್ಕಿ ಬಳಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯ ಹೆಸರು ನಾರಾಯಣ ಎಂಬುದಾಗಿ ತಿಳಿದು ಬಂದಿದೆ. ಘಟನೆಯಿಂದ ಮತ್ತೋರ್ವ ಸುಜಿತ್ ಎಂಬುವರಿಗೆ ಗಾಯಾಳಾಗಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

Read More

ಉಡುಪಿ: ಗಾಂಜಾ ಪ್ರಕರಣದ ಆರೋಪಿ ಮಹಾರಾಷ್ಟ್ರದ ಅವಿನಾಶ್ ದಿಗಂಬರ್ ಲೋಖಂಡೆ(28) ಎಂಬಾತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಶಾಂತವೀರ ಶಿವಪ್ಪ ಆದೇಶಿಸಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆ ಅಂದಿನ ನಿರೀಕ್ಷಕ ಸೀತಾರಾಮ ಅವರು 2019ರ ಜು.24ರಂದು ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ಅವಿನಾಶ್‌ನನ್ನು ಬಂಧಿಸಿ ಆತನಿಂದ 2.20 ಕೆ.ಜಿ. ಗಾಂಜಾ, ಮೊಬೈಲ್ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ನಡೆಸಿದ ಸೆನ್ ಅಪರಾಧ ಪೊಲೀಸ್‌ ಠಾಣಿ ಉಪನಿರೀಕ್ಷಕ ನಾರಾಯಣ ಅವರು 2020ರ ಮಾ.23ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು

Read More

ಉಡುಪಿ: ಸುಸಜ್ಜಿತ ಮೀನುಗಾರಿಕಾ ಜೆಟ್ಟಿ ಬೇಕು ಅನ್ನೋದು ಉಡುಪಿಯ ಗಂಗೊಳ್ಳಿಯ ಮೀನುಗಾರರ ಬಹುವರ್ಷದ ಬೇಡಿಕೆ. ಮೀನುಗಾರರ ಕನಸಿನ ಜೆಟ್ಟಿಗೆ ಅಂತ ಸರ್ಕಾರದಿಂದ 12 ಕೋಟಿ ಬಿಡುಗಡೆ ಆಗಿ, ಕಾಮಗಾರಿಯೂ ನಡೆಯುತ್ತಿದೆ. ಆದ್ರೆ ಅಧಿಕಾರಿಗಳ ಲಅವೈಜ್ಞಾನಿಕ ಕಾಮಗಾರಿಯಿಂದ ನಿರ್ಮಾಣ ಹಂತದಲ್ಲಿದ್ದ ಜಟ್ಟಿ ನೋಡು ನೋಡುತ್ತಲೇ ಕುಸಿದು ಬಿದ್ದಿದೆ. ಈ ನಡುವೆ ಮೀನುಗಾರ ಜಟ್ಟಿ ನಿರ್ಮಾಣದಲ್ಲೂ ಪರ್ಸೆಂಟೇಜ್ ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೆಟ್ಟಿ ಕುಸಿತ ಕಂಡು ಮೀನುಗಾರರು ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಗೆ ಹಿಟ್ಟು ನೀಡುಲು ಸಹಕಾರಿಯಾಗಿದ್ದ ಜಟ್ಟಿ ಕುಸಿದು ಹೋಯಿತಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಜೆಟ್ಟಿ ಅನ್ನೋದು ಮತ್ಸ್ಯ ಬೇಟೆ ಮುಗಿದ ಬಳಿಕ ಮೀನುಗಳನ್ನು ಖಾಲಿ ಮಾಡಲು ಹಾಗೂ ಹಡಗು, ದೋಣಿಗಳು ತಂಗಲು ಇರೋ ಪ್ರದೇಶ.

Read More

ದೆಹಲಿ: ಇರಾನ್‌ ಮೂಲದ ವಿದೇಶಿ ವಿಮಾನವೊಂದು ದೆಹಲಿಯ ವಾಯುಪ್ರದೇಶದತ್ತ ಚಲಿಸುವುದನ್ನು ತಡೆಯಲು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಹರಸಾಹಸ ಪಡುತ್ತಿವೆ. ಮೂಲಗಳ ಪ್ರಕಾರ, ವಿಮಾನದಲ್ಲಿ ಬಾಂಬ್ ಇರುವ ಸಾಧ್ಯತೆಯ ಬಗ್ಗೆ ದೆಹಲಿಯ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ಬಂದಿದೆ. ಹೀಗಾಗಿ, ಇದು ಎಚ್ಚರಿಕೆಯನ್ನು ನೀಡಿದ್ದು, ದೆಹಲಿಯಲ್ಲಿ ಇಳಿಯಲು ವಿಮಾನಕ್ಕೆ ಅನುಮತಿ ನೀಡಲಾಗಿಲ್ಲ. ವಿದೇಶಿ ವಿಮಾನವು ತನ್ನ ಅಂತಿಮ ಚೀನಾ ಕಡೆಗೆ ತೆರಳಿದೆ. ಭಾರತೀಯ ವಾಯು ಸಂಚಾರ ನಿಯಂತ್ರಣದಿಂದ ಎಚ್ಚರಿಕೆಯನ್ನು ವಿಮಾನದೊಂದಿಗೆ ಹಂಚಿಕೊಂಡಾಗ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಿತ್ತು. ಪಂಜಾಬ್ ಮತ್ತು ಜೋಧ್‌ಪುರ ವಾಯುನೆಲೆಗಳಿಂದ ಭಾರತೀಯ ವಾಯುಪಡೆಯ Su-30MKI ಫೈಟರ್ ಜೆಟ್‌ಗಳು ವಿಮಾನವನ್ನು ತಡೆಯಲು ಹರಸಾಹಸ ಪಡುತ್ತಿವೆ ಎಂದು ಮೂಲಗಳು ತಿಳಿಸಿವೆ. ಬಾಂಬ್ ಬೆದರಿಕೆ ಎಲ್ಲಿಂ ಬಂದಿದೆ ಮತ್ತು ವಿಮಾನದ ಹೆಸರು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ವಿಮಾನವು ಈಗ ಚೀನಾದ ಕಡೆಗೆ ಚಲಿಸುತ್ತಿದೆ. ಭಾರತೀಯ ವಾಯುಪ್ರದೇಶದ ಮೇಲಿತ್ತು ಮತ್ತು ಭದ್ರತಾ ಏಜೆನ್ಸಿಗಳಿಂದ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ವಿಮಾನವು ಚೀನಾದ ಕಡೆಗೆ ತನ್ನ ಹಾರಾಟದ ಹಾದಿಯಲ್ಲಿ ಮುಂದುವರಿಯುತ್ತಿದೆ…

Read More

ಮಂಗಳೂರು; ಟ್ರಾಫಿಕ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹೆಡ್ ಕಾನ್ಸ್ಟೇಬಲ್ ಗೆ ಕಾರು ಡಿಕ್ಕಿಯಾಗಿ ಪರಾರಿಯಾದ ಘಟನೆ ಉಳ್ಳಾಲಬೈಲಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಲೋಕೇಶ್ ನಾಯ್ಕ್ ಗಾಯಗೊಂಡವರು. ಲೋಕೇಶ್ ನಾಯ್ಕ್ ಹಾಗೂ ಎಎಸ್ ಐ ಮಂಜುಳಾ ಅವರು ಹೈವೇ ಪೆಟ್ರೋಲ್ ವಾಹನದಲ್ಲಿ ಉಳ್ಳಾಲಬೈಲಿನಲ್ಲಿ ಇಂದು ಸಂಜೆ ಗಸ್ತಿನಲ್ಲಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಬರುತ್ತಿದ್ದ ಸ್ವಿಫ್ಟ್ ಕಾರನ್ನು ಲೋಕೇಶ್ ತಪಾಸಣೆಗಾಗಿ ಸೈಡ್ ಗೆ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಕಾರು ಲೋಕೇಶ್ ಅವರಿಗೆ ಏಕಾಏಕಿ ಡಿಕ್ಕಿಯಾಗಿದೆ. ಪರಿಣಾಮ ಲೋಕೇಶ್ ನಾಯ್ಕ್ ಡಿವೈಡರ್ ಗೆ ಎಸೆಯಲ್ಪಟ್ಟಿದ್ದಾರೆ. ಅಪಘಾತದ ಬಳಿಕ ಕಾರು ನಿಲ್ಲಿಸಿದೇ ಚಾಲಕ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಲೋಕೇಶ್ ನಾಯ್ಕ್ ಅವರನ್ನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಟ್ಲ: ಕನ್ಯಾನ ಗ್ರಾಮಸ್ಥರ ಬಹು ದೊಡ್ಡ ಬೇಡಿಕೆಯಾಗಿದ್ದ ಸಾರ್ವಜನಿಕ ಹಿಂದೂ ರುದ್ರ ಭೂಮಿಯನ್ನು ಆದಿತ್ಯವಾರ(ಆ.2.) ದಂದು ಕನ್ಯಾನ ಭಾರತ್ ಸೇವಾಶ್ರಮ ಇದರ ಮುಖ್ಯಸ್ಥರಾದ ಈಶ್ವರ ಭಟ್ ಇವರು ಲೋಕಾರ್ಪಣೆ ಗೊಳಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ದೇವಪ್ಪ ಪಿ ಆರ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್, ಉಪಾಧ್ಯಕ್ಷರಾದ ಶ್ರೀಮತಿ ಕುಸುಮ, ಸದಸ್ಯರುಗಳಾದ ಅಬ್ದುಲ್ ಮಜೀದ್ ಕನ್ಯಾನ, ಕೃಷ್ಣ ನಾಯ್ಕ ಮರ್ತನಾಡಿ, ಮೊಯಿದಿನ್ ಬೈರಿಕಟ್ಟೆ, ನಾರಾಯಣ ಶಿರಂಕಲ್ಲು, ಶ್ರೀಮತಿ ದೇವಕಿ, ಶ್ರೀಮತಿ ರೇಖಾ, ಶ್ರೀಮತಿ ಸೆಲೆಸ್ತಿನಾ, ಶ್ರೀಮತಿ ನಳಿನಿ ,ಶ್ರೀಮತಿ ವೀಣಾ ,ಶ್ರೀಮತಿ ಗ್ರೇಸಿ ಕ್ರಾಸ್ತಾ, ಶ್ರೀಮತಿ ವನಿತಾ, ಮಾಜಿ ಸದಸ್ಯರಾದ ಶ್ರೀಮತಿ ಲಲಿತಾ ಮತ್ತು ಪ್ರಮುಖರಾದ ಗಂಗಾಧರ ಕನ್ಯಾನ ಅಬ್ದುಲ್ ಖಾದರ್ ಸೆಟ್ಟಿಬೆಟ್ಟು, ಲೊಕೇಶ್ ಗೌಡ ಹಾಗೂ ಪಂಚಾಯತ್ ಸಿಬ್ಬಂದಿಗಳು, ನಾಗರೀಕರು ಉಪಸ್ಥಿತರಿದ್ದರು.

Read More

ಗುಜರಿ ಅಂಗಡಿಗೆ ಕೆಲಸಕ್ಕೆ ತೆರಳಿದ ಮಹಿಳೆ ನಾಪತ್ತೆಯಾಗಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಪತ್ನಿ ನಾಪತ್ತೆಯಾಗಿರುವ ಬಗ್ಗೆ ಪತಿ ಆನಂದ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಜಾತಾ ಉಪ್ಪಿನಂಗಡಿಯ ಕೂಟೇಲು ಸಮೀರ್ ಎಂಬವರ ಗುಜಿರಿ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡಿಕೊಂಡಿದ್ದರು.ಅದೇ ಗುಜರಿ ಅಂಗಡಿಗೆ ಸೆಪ್ಟಂಬರ್ 23ರಂದು ಕೆಲಸಕ್ಕೆಂದು ತೆರಳಿದ್ದಾರೆ. ಆದರೆ ಬಳಿಕ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read More