Author: main-admin

ಬೆಂಗಳೂರು : ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಅಂತ್ಯಗೊಂಡಿದ್ದರೂ ಕೂಡ ಅ.15 ರವರೆಗೂ ರಾಜ್ಯದಲ್ಲಿ ಅಬ್ಬರದ ಮಳೆ ಸಾಧ್ಯತೆಯಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಅ.10 ರ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಲ್ಲಿದ್ದು, ಅಕ್ಟೋಬರ್ 15 ರವರೆಗೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಂದು ಮತ್ತು ನಾಳೆ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಶಿವಮೊಗ್ಗ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ನಾಳೆ ಗುಡುಗು ಸಹಿತ ಭಾರೀಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 2 ರಂದು ಬಾಗಲಕೋಟೆ, ಬೆಳಗಾವಿ, ಕಲಬುರಗಿ, ರಾಯಚೂರು, ವಿಜಯಪುರ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ರಾಜ್ಯಾದ್ಯಂತ ಮಳೆಯ ಆರ್ಭಟ ಮತ್ತೆ ಶುರುವಾಗಿದ್ದು,…

Read More

ಮಂಗಳೂರು; ಸದ್ಯ ದಕ್ಷಿಣಭಾರತದಾದ್ಯಂತ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಾಂತಾರ. ಸಿನಿಮಾ ನೋಡಿದ ಮಂದಿಯ ಬಾಯಲ್ಲಿ ಬರೀ ಅದರದ್ದೇ ಮಾತು. ಅಪ್ಪಟ ಕರಾವಳಿ ಸೊಗಡಿನ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಜಾದು ಮಾಡಿದೆ. ದೈವಾರಾಧನೆ, ಕಂಬಳ, ಕರಾವಳಿಯ ಸಂಸ್ಕೃತಿಯ ಸುತ್ತ ಸುತ್ತುವ ಈ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆಯೋದರಲ್ಲಿ ಯಾವುದೇ ಸಂದೇಹವಿಲ್ಲ. ರಿಷಭ್ ಶೆಟ್ಟಿ ಈ ಸಿನಮಾದ ಮೂಲಕ ಪ್ರೇಕ್ಷಕರನ್ನು ಹೊಸ ಲೋಕಕ್ಕೆ ಕರೆದೊಯ್ದಿದ್ದಾರೆ. ಇನ್ನು ಕಾಂತಾರ ಸಿನಿಮಾದ ಕ್ಲೈಮಾಕ್ಸ್‌ ಒಬ್ಬ ಪ್ರೇಕ್ಷಕನನ್ನು ಎಷ್ಟರ ಮಟ್ಟಿಗೆ ಆವರಿಸಿಕೊಳ್ಳುತ್ತದೆ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ವಿಶೇಷ ಘಟನೆಯೊಂದು ಸಾಕ್ಷಿಯಾಗಿದೆ. ಮಂಗಳೂರಿನ ಪಿವಿಆರ್ ಚಿತ್ರಮಂದಿರದಲ್ಲಿ ಶುಕ್ರವಾರ ನಾಲ್ಕನೇ ಶೋನಲ್ಲಿ ‘ಕಾಂತಾರ’ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕನ ಮೈ ಮೇಲೆ ದೈವ ಆವಾಹನೆ ಆಗಿದೆ. ಸಿನಿಮಾ ನೋಡುತ್ತಿದ್ದ ವ್ಯಕ್ತಿ ಏಕಾಏಕಿ ದೈವ ಆವಾಹನೆ ಆದಂತೆ ವರ್ತಿಸಿದ್ದು, ಸ್ಥಳದಲ್ಲಿದ್ದವರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಪ್ರೇಕ್ಷನ ವರ್ತನೆ ಕಂಡು ಜನ ಗಾಬರಿಗೊಂಡಿದ್ದಾರೆ. ಈ…

Read More

ನಮ್ಮ ದೇಹದಲ್ಲಿನ ರಕ್ತ ಶುದ್ಧಿ ಆಗದಿದ್ದರೆ ಸಾಕಷ್ಟು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಮೊಡವೆ ಸಮಸ್ಯೆ ಕೂಡ ಕಾಡುತ್ತದೆ. ಆಗಾಗ ನಮ್ಮ ರಕ್ತ ಶುದ್ಧಿಕರಣಗೊಳಿಸಿಕೊಂಡರೆ ಕಾಯಿಲೆಗಳಿಂದ ದೂರವಾಗಬಹುದು. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ರಕ್ತವನ್ನು ಶುದ್ಧಿಕರಣಗೊಳಿಸಿಕೊಳ್ಳಬಹುದು. ಹಾಗಲಕಾಯಿ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಇದು ರಕ್ತವನ್ನು ಶುದ್ಧಿಕರಣ ಮಾಡಲು ಉತ್ತಮವಾದ ಮನೆಮದ್ದಾಗಿದೆ. ಹಾಗಲಕಾಯಿ ಗೊಜ್ಜು, ಪಲ್ಯ ಮಾಡಿಕೊಂಡು ಆಗಾಗ ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ಕೂಡ ರಕ್ತ ಶುದ್ಧಿಕರಣ ಮಾಡುವ ಗುಣ ಹೊಂದಿದೆ. ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಗೆ 2 ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ತಿನ್ನಿ. ತಿಂದಾದ ನಂತರ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದರಿಂದ ರಕ್ತ ಶುದ್ಧಿಯಾಗುತ್ತದೆ. ಇನ್ನು ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಗೆ 1 ಟೇಬಲ್ ಸ್ಪೂನ್ ನಷ್ಟು ಬೆಳ್ಳುಳ್ಳಿ ಪೇಸ್ಟ್, 1 ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ…

Read More

ಮಂಗಳೂರು : ಎಫ್‌ಎಸ್‌ಎಸ್‌ಎಐ (ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ) ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಂತಹ ಸರ್ಕಾರಿ ಸಂಸ್ಥೆಗಳನ್ನು ಹೊಂದಿದ್ದರೂ, ದೇಶದ ವಿವಿಧ ಉತ್ಪನ್ನಗಳ ಮೇಲೆ ಹಲಾಲ್ ಪ್ರಮಾಣಪತ್ರಗಳನ್ನು ಹೇರಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ, ಹಲಾಲ್ ಪ್ರಮಾಣಪತ್ರವನ್ನು ಈ ಹಿಂದೆ ಮಾಂಸಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು, ಈಗ ವಸತಿ ಸಮುಚ್ಚಯಗಳು, ಫ್ಯಾಷನ್ ಉದ್ಯಮ, ಸೌಂದರ್ಯವರ್ಧಕಗಳು ಮತ್ತು ಆಹಾರ ಉತ್ಪನ್ನಗಳು ಸೇರಿದಂತೆ ಎಲ್ಲಾ ಉತ್ಪನ್ನಗಳಿಗೆ ವಿಸ್ತರಿಸಲಾಗಿದೆ.ಈ ಪ್ರಮಾಣಪತ್ರಕ್ಕಾಗಿ, ಜಮೀಯತ್ ಉಲೇಮಾ-ಎ-ಹಿಂದ್ ಗೆ ಅಗತ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಜಮೀಯತ್ ಉಲೇಮಾ-ಎ-ಹಿಂದ್ನ ಆರ್ಥಿಕ ಅಂಶಗಳ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಅವರು ಹೇಳಿದರು. ಎಲ್ಲಾ 57 ಮುಸ್ಲಿಂ ದೇಶಗಳು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾತ್ರ ಆಮದು ಮಾಡಿಕೊಳ್ಳಲು ಅನುಮತಿಸಲು ನಿರ್ಧರಿಸಿದ್ದವು. ಆದ್ದರಿಂದ, ಎಲ್ಲಾ ಎಂಎನ್ಸಿಗಳು ಮತ್ತು ಇತರರು ಹಲಾಲ್ ಪ್ರಮಾಣಪತ್ರದ ಹಿಂದೆ ಇದ್ದಾರೆ.…

Read More

ಕಾರ್ಕಳ: ಕಾರ್ಕಳ ತಾಲೂಕಿನ ಸೂಡ ಗ್ರಾಮದ ಗಾಣದಬೆಟ್ಟು ಎಂಬಲ್ಲಿ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡದ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.ಸೂಡ ಗ್ರಾಮದ ಗಾಣದಬೆಟ್ಟು ನಿವಾಸಿ ಸುಗುಣ (58 ವರ್ಷ) ಮೃತಪಟ್ಟ ದುರ್ದೈವಿ. ಕೃಷಿ ಕೆಲಸ ಮಾಡಿಕೊಂಡಿದ್ದ ಸುಗುಣ ಅವರು ನಿನ್ನೆ ಮನೆಯ ಪಕ್ಕದ ಸುನಿಲ್ ಎಂಬವರ ಭತ್ತದ ಗದ್ದೆಯಲ್ಲಿ ಬತ್ತದ ಕಳೆ ತೆಗೆಯುವ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆಂದು ಮನೆಗೆ ವಾಪಸ್ ಬರುತ್ತಿದ್ದ ವೇಳೆ ಮನೆಯ ಪಕ್ಕದಲ್ಲಿರುವ ನೀರು ತುಂಬಿದ್ದ ಕೃಷಿ ಹೊಂಡದಲ್ಲಿ ಕೈಕಾಲು ತೊಳೆಯಲೆಂದು ಹೋಗಿದ್ದ ಅವರು ಕೈಕಾಲು ತೊಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಂಡದ ನೀರಿಗೆ ಬಿದ್ದು ಮೇಲೆ ಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸುರತ್ಕಲ್ ಜಂಕ್ಷನ್ ಗೆ ವೀರ ಸಾವರ್ಕರ್ ಜಂಕ್ಷನ್ ಎಂದು ಮರು ನಾಮಕರಣ ಮಾಡಬೇಕೆಂಬ ಶಾಸಕ ಭರತ್ ಶೆಟ್ಟಿ ಅಹವಾಲನ್ನು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಗಿದೆ. ವೀರ ಸಾವರ್ಕರ್ ಹೆಸರಿಡಬೇಕೆಂದು ಒಂದು ವರ್ಷದ ಹಿಂದೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಮಹಾನಗರ ಪಾಲಿಕೆಗೆ ಪ್ರಸ್ತಾವ ಮುಂದಿಡಲಾಗಿತ್ತು. 2021ರ ಆಗಸ್ಟ್ 3ರಂದು ನಡೆದ ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿತ್ತು. ಕಾಂಗ್ರೆಸ್ ಸದಸ್ಯ ವಿನಯರಾಜ್, ಎಸ್ಡಿಪಿಐ ಸದಸ್ಯರಾದ ಮುನೀಬ್ ಬೆಂಗ್ರೆ ಮತ್ತು ಶಂಶದ್ ಅಬುಬಕ್ಕರ್ ವಿರೋಧಿಸಿದ್ದರು. ಆನಂತರ, ಪ್ರಸ್ತಾಪವು ಸ್ಥಾಯಿ ಸಮಿತಿಯಿಂದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಬಂದಿತ್ತು. ಇತ್ತೀಚೆಗೆ ಹೊಸತಾಗಿ ಮೇಯರ್ ಆಯ್ಕೆಯಾದ ಬಳಿಕ ಸೆ.30ರಂದು ಮೊದಲ ಬಾರಿಗೆ ಸಾಮಾನ್ಯ ಸಭೆ ನಡೆದಿದ್ದು, ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಇದೇ ವೇಳೆ, ಮಹಾನಗರ ಪಾಲಿಕೆಯ ಆಡಳಿತ ಸುರತ್ಕಲ್ ಜಂಕ್ಷನ್ನಿಗೆ ಸಾವರ್ಕರ್ ಹೆಸರಿಡುವ ಪ್ರಸ್ತಾಪವನ್ನು ವಿರೋಧ ಪಕ್ಷಗಳ ಸದಸ್ಯರ ವಿರೋಧದ ನಡುವೆಯೂ ಅಂಗೀಕರಿಸಿದ್ದು,…

Read More

ಬೆಂಗಳೂರು : ಬೆಂಗಳೂರು ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವ ಗ್ರಾಹಕರಿಗೆ ಬಿಬಿಎಂಪಿ (BBMP) ಬಿಗ್ ಶಾಕ್ ನೀಡಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಕೆ ವೇಳೆ ಸಿಕ್ಕಿ ಬಿದ್ದರೆ ದಂಡ ಪ್ರಯೋಗಿಸಲು ಬಿಬಿಎಂಪಿ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಆದರೆ ವ್ಯಾಪಾರಿಗಳು, ಗ್ರಾಹಕರು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ತಪ್ಪಿಸಲು ವ್ಯಾಪಾರಿಗಳು, ಗ್ರಾಹಕರು ನಿಷೇಧಿತ ಪ್ಲ್ಯಾಸ್ಟಿಕ್ ಬಳಸಿದರೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಇನ್ಮುಂದೆ ಪ್ಲಾಸ್ಟಿಕ್ ಕೈ ಚೀಲ ಬಳಸಿದ್ದು ಕಂಡು ಬಂದರೆ ಗ್ರಾಹಕರಿಗೆ 200 ರೂ. ದಂಡ ವಿಧಿಸಲಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮದಡಿ ಮಾಲಿನ್ಯ ನಿಯಂತ್ರಣ ಮಂಡಳಿ ದಂಡದ ಪ್ರಮಾಣ ಕುರಿತು ಆದೇಶ ಹೊರಡಿಸಿದೆ.

Read More

ಮಂಗಳೂರು: ಮತ್ತೊಬ್ಬನ ಪಾಸ್‌ಪೋರ್ಟ್‌ ಮೂಲಕ ದುಬೈಗೆ ತೆರಳಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿಗೆ 12 ವರ್ಷಗಳ ಬಳಿಕ ಮಂಗಳೂರು ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಬಂಟ್ವಾಳ ಸರಪಾಡಿ ಗ್ರಾಮದ ಬದ್ರುದ್ದೀನ್‌ ಶಿಕ್ಷೆಗೊಳಪಟ್ಟ ಅಪರಾಧಿ.ಬದ್ರುದ್ದೀನ್‌,ಹಸೈನಾರ್‌ ಎನ್ನುವವರ ಪಾಸ್‌ಪೋರ್ಟ್‌ ಬಳಸಿ 2010ರ ಫೆ.2ರ ರಾತ್ರಿ 7.37ಕ್ಕೆ ದುಬಾೖಗೆ ತೆರಳಲು ಪ್ರಯತ್ನಿಸಿದ್ದ.ಹಸೈನಾರ್ ನ ಪಾಸ್ ಪೋರ್ಟ್ ನ್ನು ಈತನಿಗೆ ಅಬ್ಬಾಸ್ ಕೊಟ್ಟಿದ್ದ. ಇಮಿಗ್ರೇಷನ್‌ ಅಧಿಕಾರಿ ಕೆ.ಎಂ. ಚಂದ್ರಶೇಖರ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಬಜಪೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಅವರು 1ನೇ ಆರೋಪಿ ಬದ್ರುದ್ದೀನ್‌ಗೆ 1 ವರ್ಷ ಜೈಲು ಮತ್ತು 15 ಸಾವಿರ ರೂ.ದಂಡವನ್ನು ವಿಧಿಸಿದ್ದು, 2ನೇ ಆರೋಪಿ ಬಂಟ್ವಾಳ ಮಂಚಿ ಗ್ರಾಮದ ಅಬ್ನಾಸ್ ಅವರನ್ನು ಖುಲಾಸೆಗೊಳಿಸಲಾಗಿದೆ.

Read More

ಮಂಗಳೂರು: ಒಳ ಉಡುಪು, ಗುದನಾಳ, ಮಿಕ್ಸರ್ ಗ್ರೈಂಡರ್ ಮೋಟಾರ್​ನಲ್ಲಿ ಅಕ್ರಮ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಭಾರಿ ಪ್ರಮಾಣದ ಬಂಗಾರ ವಶಕ್ಕೆ ಪಡೆದುಕೊಂಡಿದ್ದಾರೆ. ಸೆ.25 ರಿಂದ 30 ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಕರಣಗಳಲ್ಲಿ ಚಿನ್ನ ವಶಕ್ಕೆ ಪಡೆಯಲಾಗಿದೆ. ದುಬೈ ಮತ್ತು ಮಸ್ಕತ್​ನಿಂದ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಕಾಸರಗೋಡು, ಭಟ್ಕಳ ಮತ್ತು ತ್ರಿವೇಂದ್ರಂ ಮೂಲದ ಐವರು ಪ್ರಯಾಣಿಕರು ಈ ಚಿನ್ನ ಸಾಗಿಸುತ್ತಿದ್ದರು. ಇವರಿಂದ 24 ಕ್ಯಾರೆಟ್ ಶುದ್ಧತೆಯ 1,703 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ. 86,09,730 ಎಂದು ಅಂದಾಜಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಬಂಗಾರ ವಶಇವರಲ್ಲಿ ಕೆಲವು ಧರಿಸಿರುವ ಒಳಉಡುಪುಗಳ ಒಳಗೆ, ಗುದನಾಳದಲ್ಲಿ ಮತ್ತು ಮಿಕ್ಸರ್ ಗ್ರೈಂಡರ್​ನ ಮೋಟಾರ್ ಒಳಗೆ ಬಚ್ಚಿಟ್ಟು ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಚಿನ್ನವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ

Read More

ಮಂಗಳೂರು : ನಗರದ ಮಿನಿವಿಧಾನಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಮಂಗಳೂರು ತಹಶೀಲ್ದಾರ್ ಅವರ ಸಹಾಯಕ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಶಿವಾನಂದ ನಾಟೇಕರ್ ಎಂಬಾತನನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಎನ್‌ಒಸಿಗಾಗಿ ನಾಗರಿಕರೊಬ್ಬರಿಂದ ಲಂಚ ಕೇಳಿ 4700 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್ಪಿ ಲಕ್ಷ್ಮಿ ಗಣೇಶ್ ಹಾಗೂ ಡಿವೈಎಸ್‌ಪಿ ಚೆಲುವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ನಡೆದಿದೆ. ಎಸಿಬಿ ರದ್ದಾಗಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ಸಿಕ್ಕಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಕರಣ ಇದಾಗಿದೆ

Read More