ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಶೇಖಮಲೆ ಬಳಿ ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ ಆಲ್ಟೊ ಮತ್ತು ಬೋಲೆರೋ ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಆಲ್ಟೊ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿದೆ. ಮೃತರನ್ನು ಸೋಮವಾರಪೇಟೆ ಮೂಲದ ಲೋಕೇಶ್, ರವೀಂದ್ರ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಬೋಲೆರೋ ವಾಹನದಲ್ಲಿದ್ದವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಎನ್ನಲಾಗಿದೆ. ಮಂಗಳೂರಿನಿಂದ ಮಡಿಕೇರಿ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Author: main-admin
ಭಾರತ ಈಗ ಎದುರಿಸುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯೆಂದರೆ ಅದು ಕ್ಯಾನ್ಸರ್. ಈ ಸಾಂಕ್ರಾಮಿಕ ರೋಗವು ವಯಸ್ಸಿನ ಭೇದವಿಲ್ಲದೆ ಜನರ ಮೇಲೆ ದಾಳಿ ಮಾಡುತ್ತಿದೆ. ಈಗ ಆಧುನಿಕ ಕಾಲದಲ್ಲಿಯೂ ಔಷಧ ಲಭ್ಯವಿದ್ದರೂ ಸಕಾಲದಲ್ಲಿ ಗುರುತಿಸದಿದ್ದರೆ ಈ ರೋಗ ಮಾರಕವಾಗಬಹುದು. ಕ್ಯಾನ್ಸರ್ ಕೋಶಗಳು ದೇಹದಲ್ಲಿ ಎಲ್ಲಿ ಬೇಕಾದರೂ ಬೆಳೆಯಬಹುದು. ಕಣ್ಣಿನ ಕ್ಯಾನ್ಸರ್ ಅಪರೂಪದ ಕ್ಯಾನ್ಸರ್ಗಳಲ್ಲಿ ಒಂದಾಗಿದೆ. ಅದರ ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಿ ಜಾಗೃತರಾದರೆ ರೋಗವನ್ನು ವಾಸಿ ಮಾಡಬಹುದು. ಕಣ್ಣಿನ ಕ್ಯಾನ್ಸರ್‌ನ ಲಕ್ಷಣಗಳು: • ಕಣ್ಣಿನಲ್ಲಿ ಬಿಳಿಯ ಪ್ರತಿಬಿಂಬ ಕಾಣಿಸಿಕೊಳ್ಳುತ್ತದೆ • ವೀಕ್ಷಿಸುವಾಗ, ಸಂಪೂರ್ಣ ದೃಶ್ಯವು ಸ್ಪಷ್ಟವಾಗಿ ಕಾಣದೆ ಸ್ವಲ್ಪ ಕತ್ತಲೆಯಾದಂತೆನಿಸುತ್ತದೆ. • ದೃಷ್ಟಿ ಮಸುಕಾಗುತ್ತದೆ. • ಎಲ್ಲವೂ ಎರಡೆರಡಾಗಿ ಕಾಣುತ್ತವೆ. • ಕಣ್ಣುರೆಪ್ಪೆಯ ಕೆಳಗೆ ಒಂದು ಸಣ್ಣ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ವೈದ್ಯರೊಂದಿಗೆ ಸಮಾಲೋಚಿಸಬೇಕು. • ಕಣ್ಣುರೆಪ್ಪೆಗಳ ಮೇಲೆ ಸಣ್ಣ ಕೆಂಪು ಉಬ್ಬುಗಳನ್ನು ನಿರ್ಲಕ್ಷಿಸಬೇಡಿ. • ನಿಮ್ಮ ರೆಪ್ಪೆಗೂದಲುಗಳು ಉದುರುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. • ಕಣ್ಣುರೆಪ್ಪೆಯ ಸೋಂಕು • ಕಣ್ಣಿನ ಮೂಲೆಯಲ್ಲಿ ಆಗಾಗ್ಗೆ…
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಬಂಟ್ವಾಳ ತಾಲೂಕಿನ ಪೊಳಲಿ ಕಮ್ಮಾಜೆ ಸಮೀಪದ ಕಾಗುಡ್ಡೆ ಎಂಬಲ್ಲಿ ಇಂದು ನಡೆದಿದೆ. ಬಿ.ಸಿ. ರೋಡಿನಿಂದ ಕಲ್ಪನೆ ಮಾರ್ಗವಾಗಿ ಕೊಳತ್ತಮಜಲು ಮೂಲಕ ಮಂಗಳೂರು ಸಂಚಾರ ಮಾಡುವ ಖಾಸಗಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬಸ್ ನೊಳಗಿದ್ದ ಇಬ್ಬರು ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.ಬಸ್‌ನ ಚಾಲಕ ಹಾಗೂ ನಿರ್ವಾಹಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದಲ್ಲಿ ಬಸ್‌ನ ಮುಂಭಾಗದ ಗಾಜು ಪುಡಿಯಾಗಿದ್ದು, ಪ್ರಯಾಣಿಕರು ಬಸ್‌ನ ಮುಂಭಾಗದಿಂದ ಹೊರಬಂದಿದ್ದಾರೆ. ಆದಿತ್ಯವಾರ ಆದ ಕಾರಣ ಬಸ್ ನಲ್ಲಿ ಕೇವಲ ಎರಡು ಜನ ಮಾತ್ರ ಪ್ರಯಾಣಿಕರಿದ್ದು, ಅವರಿಗೆ ಯಾವುದೇ ಗಾಯಗಳು ಉಂಟಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪುತ್ತೂರು: ತಾಳಿಯನ್ನು ತನ್ನ ಮನೆಯಲ್ಲಿಟ್ಟು ವಿವಾಹಿತೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುತ್ತೂರು ನಗರದ ಹೊರವಲಯದ ಸರ್ವೆ ಗ್ರಾಮದ ಭಕ್ತಕೋಡಿಯ ಕಲ್ಲಗುಡ್ಡೆ, ಹರೀಶ ಎಂಬವರ ಪತ್ನಿ ದೀಪಿಕಾ(23) ನಾಪತ್ತೆಯಾದವರು. ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾದ ದೀಪಿಕಾರವರ ಪತಿ ಹರೀಶ್ ನೀಡಿದ ದೂರಿನಲ್ಲಿ, ತನ್ನ ಪತ್ನಿ ತಾನು ಕಟ್ಟಿದ ತಾಳಿಯನ್ನು ಮನೆಯಲ್ಲಿಯೇ ಬಿಟ್ಟು ಜೂ.13ರಂದು ಮನೆಯಿಂದ ಕಾಣೆಯಾಗಿದ್ದಾಳೆ. ಮನೆಯ ಸುತ್ತ ಮುತ್ತಲ ಪರಿಸರ ಮತ್ತು ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಜೂ.13ರಂದು ಮನೆಯಲ್ಲಿ ತಾಳಿಯನ್ನು ಬಿಟ್ಟು ಕಾಣೆಯಾಗಿರುವ ದೀಪಿಕಾ ಕಳೆದ 3 ತಿಂಗಳ ಹಿಂದೆ ಕಡಬದ ಕರ್ಮಾಯಿ ನಿವಾಸಿ ಪ್ರಶಾಂತ್ ಜೊತೆಗೆ ಹೋಗಿದ್ದು, ಬಳಿಕ ಮಂಗಳೂರಿನಲ್ಲಿ ಪತ್ತೆ ಮಾಡಿ ಅಲ್ಲಿಂದ ಕರೆದುಕೊಂಡು ಬರಲಾಗಿತ್ತು. ಈಗಲೂ ಪ್ರಶಾಂತ ಜೊತೆ ಹೋಗಿರುವ ಬಗ್ಗೆ ಸಂಶಯವಿರುತ್ತದೆ ಎಂದು ಹರೀಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವಿಟ್ಲ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜನ್ನು ತೆರೆದು ಅದರಲ್ಲಿದ್ದ ನಗ-ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕು, ಮಾಣಿ ಗ್ರಾಮದ ಪಲಿಕೆ ಎಂಬಲ್ಲಿ ನಡೆದಿದೆ. ಜಯರಾಜ್ ರವರು ನೀಡಿದ ದೂರಿನಂತೆ, ದಿನಾಂಕ 15-06-2024 ರಂದು ಬೆಳಿಗ್ಗೆ, ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಪಲಿಕೆ ಎಂಬಲ್ಲಿರುವ ಮನೆಯನ್ನು, ಜಯರಾಜ್ ತಮ್ಮ ಸುಜಯ್‌ರವರು ಭದ್ರಪಡಿಸಿ ಹೋಗಿದ್ದು, ಜಯರಾಜ್ ರವರು ಮಧ್ಯಾಹ್ನ ಮನೆಗೆ ಬಂದಾಗ, ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜನ್ನು ತೆರೆದು ಅದರ ಲಾಕರನ್ನು ಮುರಿದು, ಅದರಲ್ಲಿದ್ದ ಜಯರಾಜ್ ರವರ ಬಾಬ್ತು 12 ಗ್ರಾಂ ತೂಕದ (ಅಂದಾಜು ಮೌಲ್ಯ 78000/-) ಚಿನ್ನದ ಚೈನ್ ಮತ್ತು ತಾಯಿಯ ಒಟ್ಟು 4 ಗ್ರಾಂ ತೂಕದ ಕಿವಿಯ ಆಭರಣ (ಅಂದಾಜು ಅಂದಾಜು ಮೌಲ್ಯ ಸುಮಾರು 26,000/- ರೂಪಾಯಿಗಳು) ಹಾಗೂ ಜಯರಾಜ್ ರವರ ಬಾಬ್ತು ಪಾಸ್ ಪೋರ್ಟ್ ಹಾಗೂ 15000/- ಹಣವನ್ನು ಕಳ್ಳತನ…
ಮಂಗಳೂರು : ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನಿಸುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ, ನಳಿನ್ ಆಪ್ತ ಸೀತಾರಾಮ ರೈ ಕೆದಂಬಾಡಿಗುತ್ತು ದೂರು ನೀಡಿದ್ದಾರೆ. ಅಝೀಜ್ ಹಾಗೂ ಇನ್ನಿತರರು ನಳಿನ್ ಕುಮಾರ್ ಕಟೀಲು ಅವರ ವಿರುದ್ಧ ವಾಟ್ಸ್ಆ್ಯಪ್‌ನಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮೇ 14ರಿಂದ ವಾಟ್ಸ್ಆ್ಯಪ್‌ನಲ್ಲಿ ನಿರಂತರವಾಗಿ ನಳಿನ್ ಕುಮಾರ್ ಕಟೀಲು ವಿರುದ್ಧ ಮಾನಹಾನಿಯಾಗುವಂತೆ ಸಂದೇಶವನ್ನು ಹರಿಯಬಿಡಲಾಗಿದೆ. ಅಜೀಜ್ ಎಂಬಾತ “ಪ್ರವೀಣ್ ನೆಟ್ಟಾರ್ ಹತ್ಯೆಗೆ ಬಿಗ್ ಟ್ವಿಸ್ಟ್ – ಹಣ ನೀಡಿ ಕೊಲೆ ಮಾಡಿಸಿದ ನಳಿನ್ ಕುಮಾರ್ ಕಟೀಲು” ಎಂಬಿತ್ಯಾದಿ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ಪ್ರಸಾದ್ ಕೆ. ಎಂಬಾತನಿಂದಲೂ ಈ ವಿಚಾರದ ಬಗ್ಗೆ ಪ್ರಚಾರವಾಗುತ್ತಿದೆ. ನಳಿನ್ ಕುಮಾರ್ ಕಟೀಲು ಅವರ ತೇಜೋವಧೆ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಇದು ಅವರ ಅಭಿಮಾನಿ ಬಳಗಕ್ಕೆ ತುಂಬಾ ನೋವುಂಟಾಗಿರುತ್ತದೆ. ಈ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿ ಮಾನಹಾನಿಕರ ಸಂದೇಶಗಳನ್ನು ರವಾನಿಸುವವರ…
ಪುತ್ತೂರು; ವಿವಾಹಿತ ಮಹಿಳೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಸರ್ವೆ ಗ್ರಾಮದ ಭಕ್ತಕೋಡಿಯ ಹರೀಶ್ ಎಂಬವರ ಪತ್ನಿ ದೀಪಿಕಾ (23) ನಾಪತ್ತೆಯಾದವರು. ಇನ್ನು ದೀಪಿಕಾ ನಾಪತ್ತೆಯಾಗುವ ವೇಳೆ ಮದುವೆ ವೇಳೆ ಪತಿ ಕಟ್ಟಿದ ತಾಳಿಯನ್ನು ಮನೆಯಲ್ಲೇ ಬಿಚ್ಚಿಟ್ಟಿದ್ದಾರೆ. ಜೂನ್ 13 ರಂದು ದೀಪಿಕಾ ನಾಪತ್ತೆಯಾಗಿದ್ದಾರೆ. ಇನ್ನು ಮೂರು ತಿಂಗಳ ಹಿಂದೆ ದೀಪಿಕಾ ಕಡಬದ ಪ್ರಶಾಂತ್ ಎಂಬವರ ಜೊತೆ ಹೋಗಿದ್ದರು. ಬಳಿಕ ಮಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದರು. ಇದೀಗ ಮತ್ತೆ ಅವರೊಂದಿಗೆ ಹೋಗಿರಬಹುದು ಎಂದು ಪತಿ ಹರೀಶ್ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೀಪಿಕಾ ಪತಿ ಹರೀಶ್ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಮೆಯಲ್ಲಿ ದೂರು ದಾಖಲಿಸಿದ್ದಾರೆ.
ತ್ರಿಶೂರ್: ಶನಿವಾರ ಬೆಳಗ್ಗೆ ತ್ರಿಶೂರ್ ಹಾಗೂ ಪಾಲಕ್ಕಾಡ್ ಜಿಲ್ಲೆಯ ಕೆಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆಯ ಲಘು ಭೂಕಂಪನ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರದ ಪ್ರಕಾರ, ಈ ಪ್ರಾಂತ್ಯಗಳಲ್ಲಿ ಇಂದು ಬೆಳಗ್ಗೆ 8.15ರ ಸುಮಾರಿಗೆ 3.0 ತೀವ್ರತೆಯ ಭೂಕಂಪನವು ದಾಖಲಾಗಿದೆ. ನಾಲ್ಕು ಸೆಕೆಂಡ್ ಗಳ ಕಾಲ ನಡುಕದ ಅನುಭವವಾಗಿದೆಯಾದರೂ, ತಕ್ಷಣಕ್ಕೆ ಯಾವುದೇ ಹಾನಿ ಅಥವಾ ಗಾಯದ ವರದಿಗಳಾಗಿಲ್ಲ ಎಂದು ತ್ರಿಶೂರ್ ಜಿಲ್ಲಾಡಳಿತವು ತಿಳಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದೇ ವೇಳೆ, ಕುನ್ನಂಕುಲಂ, ಎರುಮಪ್ಪೆಟ್ಟಿ ಹಾಗೂ ಪಝಂಜಿ ಪ್ರಾಂತ್ಯಗಳು ಹಾಗೂ ಪಾಲಕ್ಕಾಡ್ ಜಿಲ್ಲೆಯ ಭಾಗಗಳಲ್ಲಿ ನಡುಕದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ಮತ್ತಷ್ಟು ಅಧ್ಯಯನ ನಡೆಸಲು ರಾಜ್ಯ ಭೌಗೋಳಿಕ ಇಲಾಖೆ ಹಾಗೂ ಇನ್ನಿತರರರು ಭೂಕಂಪ ಸಂಭವಿಸಿದ ಪ್ರಾಂತ್ಯಗಳಿಗೆ ಧಾವಿಸಿದ್ದಾರೆ ಎಂದು ಹೇಳಲಾಗಿದೆ.
ಮಂಗಳೂರು: ನಗರ ಸಮೀಪ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳಲ್ಲಿ ಬಜಪೆ, ಪೆರ್ಮುದೆ, ಕೈಕಂಬ, ಸೂರಲ್ಪಾಡಿ, ಕಂದಾವರ ಮುಂತಾದ ಕಡೆಗಳಲ್ಲಿ ಸಣ್ಣ ಪುಟ್ಟ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅವರಿಂದ ಕಳವು ಮಾಡಿದ್ದ ಒಂದು ಪಲ್ಸರ್ ಬೈಕ್ ಹಾಗೂ ಪೆರ್ಮುದೆಯ ಮನೆಯಲ್ಲಿ ಕಳ್ಳತನ ಮಾಡಿದ್ದ 30 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇಬ್ಬರು ಬಾಲಕರನ್ನು ಬಾಲ ನ್ಯಾಯ ಮಂಡಳಿಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಕಳವು ಮಾಡಿದವರ ಪತ್ತೆ ಕಾರ್ಯದಲ್ಲಿ ಬಜಪೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನಂದೇಶ್ ಬಿ. ಕುಂಬಾರ್ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.
ಉಡುಪಿ: ಎರಡೇ ದಿನ ಅಂತರದಲ್ಲಿ ಉಡುಪಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಉಡುಪಿ ಮಣಿಪಾಲ ಮಧ್ಯದ ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ತಡರಾತ್ರಿ ಸಂಭವಿಸಿದೆ. ಮಣಿಪಾಲದಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಇಂದ್ರಾಳಿಯಲ್ಲಿ ರಸ್ತೆ ವಿಭಜಕವಾಗಿ ಇರಿಸಲಾಗಿದ್ದ ಕಲ್ಲುಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಯ್ತು.ಪರಿಣಾಮವಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡರು. ಕಾರು ಪಲ್ಟಿಯಾಗುವ ಸಂದರ್ಭ ದೊಡ್ಡ ಕಲ್ಲೊಂದು ಬೈಕಿನತ್ತ ಚಿಮ್ಮಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ಓರ್ವ ಪ್ರಯಾಣಿಕನ ಸ್ಥಿತಿ ಚಿಂತಾ ಜನಕವಾಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಲ್ಲಿ ರಸ್ತೆ ಮಧ್ಯೆ ವಿಭಜಕವಾಗಿ ಕಲ್ಲುಗಳನ್ನು ಇರಿಸಲಾಗಿದೆ. ಇತ್ತೀಚೆಗೆ ಆ ಕಲ್ಲುಗಳನ್ನು ಎಲ್ಲೆಂದರಲ್ಲಿ ಇರಿಸಲಾಗಿತ್ತು. ಇದರಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟ್ರಾಫಿಕ್ ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಲಕ್ಷಕ್ಕೆ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ.