Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಂಟ್ವಾಳ: ವಿದ್ಯುತ್ ದುರಸ್ತಿಯ ಸೋಗಿನಲ್ಲಿ ಬಂದು ಕಳ್ಳತನ- ಪ್ರಕರಣ ದಾಖಲು
    ಇತ್ತೀಚಿನ ಸುದ್ದಿ

    ಬಂಟ್ವಾಳ: ವಿದ್ಯುತ್ ದುರಸ್ತಿಯ ಸೋಗಿನಲ್ಲಿ ಬಂದು ಕಳ್ಳತನ- ಪ್ರಕರಣ ದಾಖಲು

    November 27, 2025
    Share

    ಬಂಟ್ವಾಳ: ಸಜೀಪನಡು ಗ್ರಾಮದ ದೇರಾಜೆಯ ದೀಕ್ಷಿತ್ ಅವರ ಮನೆಗೆ ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳನೋರ್ವ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ನಡೆದಿದೆ.

    ಮನೆಯಲ್ಲಿ ಸರೋಜಿನಿ ಎನ್ನುವ ಮಹಿಳೆಯನ್ನು ನಿಲ್ಲಿಸಿ ಮನೆಮಂದಿ ಪಾಣೆಮಂಗಳೂರಿನಲ್ಲಿ ನಡೆಯುತ್ತಿದ್ದ ಮದುವೆಗೆ ತೆರಳಿದ್ದರು. ಮಧ್ಯಾಹ್ನ 2-3 ರ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಆಗಮಿಸಿ ದೀಚು (ದೀಕ್ಷಿತ್) ಅವರು ಮನೆಯ ವಿದ್ಯುತ್ ವಯರ್ ಹಾಗೂ ಲೈಟ್ ದುರಸ್ತಿ ಮಾಡಲು ತಿಳಿಸಿದ್ದಾರೆಂದು ಹೇಳಿದನು. ಸತ್ಯವೆಂದು ನಂಬಿದ ಸರೋಜಿನಿ ಆತನನ್ನು ಒಳಗೆ ಬಿಟ್ಟಿದ್ದರು.

    ಆತ ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿದ್ದಾನೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 99

    Related Posts

    ಮಂಗಳೂರು: ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

    June 9, 2026

    ವೆನ್‌ಲಾಕ್ ಆಸ್ಪತ್ರೆಯಲ್ಲಿ ಕನ್ನಡ ಕಡ್ಡಾಯ: ವೈದ್ಯರಿಗೆ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆ

    June 9, 2026

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.