Facebook Twitter Instagram
    Friday, July 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ದಂಡ ಕಟ್ಟದ ವಾಹನ ಸವಾರರಿಗೆ ಬಿಗ್‌ ಶಾಕ್‌ : ವಾಹನಗಳ ದಂಡ ಬಾಕಿಯಿದ್ರೆ ಇನ್ಶೂರೆನ್ಸ್ ಕ್ಯಾನ್ಸಲ್
    ಇತ್ತೀಚಿನ ಸುದ್ದಿ

    ದಂಡ ಕಟ್ಟದ ವಾಹನ ಸವಾರರಿಗೆ ಬಿಗ್‌ ಶಾಕ್‌ : ವಾಹನಗಳ ದಂಡ ಬಾಕಿಯಿದ್ರೆ ಇನ್ಶೂರೆನ್ಸ್ ಕ್ಯಾನ್ಸಲ್

    December 9, 2022
    Share

    ಬೆಂಗಳೂರು‌ : ಸಿಲಿಕಾನ್‌ ಸಿಟಿಯ ವಾಹನ ಸವಾರರೇ ಎಚ್ಚರ.! ಇನ್ಮುಂದೆ ವಾಹನಗಳ ಮೇಲೆ ದಂಡ ಬಾಕಿಯಿದ್ರೆ ಸಿಗಲ್ಲ ಇನ್ಶೂರೆನ್ಸ್ ಕ್ಯಾನ್ಸಲ್ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೆಡೆ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ನಿಯಮ ಉಲ್ಲಂಘನೆ ಕೇಸ್ ಹೆಚ್ಚಾಗುತ್ತಿದೆ ಈ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 30 ಸಾವಿರಕ್ಕೂ ಹೆಚ್ಚು ಟ್ರಾಫಿಕ್ ಕೇಸ್‌ಗಳು ದಾಖಲಾಗುತ್ತಿವೆ.

    ಕಳೆದ 11 ತಿಂಗಳಲ್ಲಿ ಬೆಂಗಳೂರಿನಲ್ಲಿ 96 ಲಕ್ಷ ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದೆ.

    11 ತಿಂಗಳಲ್ಲಿ ಬರೋಬ್ಬರಿ 164 ಕೋಟಿ ರೂ. ದಂಡದ ಮೊತ್ತ ವಸೂಲಿ ಮಾಡಲಾಗಿದೆ. ವರ್ಷಾಂತ್ಯಕ್ಕೆ ಒಂದು ಕೋಟಿ ಕೇಸ್ ಆಗುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ದೇಶದ ಯಾವ ನಗರದಲ್ಲೂ 1 ಕೋಟಿ ಕೇಸ್ ಹಾಕಿದ ಉದಾಹರಣೆ ಇಲ್ವಂತೆ. ಬೆಂಗಳೂರು ನಗರ ಒಂದರಲ್ಲೇ ಇಷ್ಟು ಕೇಸ್ ದಾಖಲಾಗುತ್ತಿದೆ. ಸಂಚಾರ ದಟ್ಟಣೆಯಲ್ಲಿ ಹೆಸರುವಾಸಿಯಾಗಿದ್ದ ಸಿಲಿಕಾನ್ ಸಿಟಿ ಈಗ ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡ ಕಟ್ಟುವಲ್ಲೂ ರೆಕಾರ್ಡ್ ಮಾಡುತ್ತಿದೆ.

    ಇದರಿಂದಾಗಿ ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ಸಂಚಾರ ನಿರ್ವಹಣೆ ಕೂಡ ಪೊಲೀಸರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ನಿಯಮ ಉಲ್ಲಂಘನೆ ಮಾಡೋದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್‌ ಮಾಡಿದ್ದು, ಐಟಿಎಂ ಸಿಸ್ಟಮ್ ಬಳಕೆಗೆ ಮುಂದಾಗಿದೆ.

    ಐಟಿಎಂ (ITM) ಸಿಸ್ಟಮ್ ಬಳಕೆ ಏನು?

    ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ್ರೆ ಪೊಲೀಸ್ ಇಲಾಖೆ ಟೆಕ್ನಾಲಜಿ ಸ್ಟ್ರೈಕ್‌ ಮೂಲಕ ರೂಲ್ಸ್ ಬ್ರೇಕ್ ಮಾಡುವವರ ಕಡಿವಾಣಕ್ಕೆ ಮುಂದಾಗಿದೆ. ನಗರದ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ರೆ ಆ ವಾಹನಗಳಿಗೆ ಸ್ವಯಂ ಚಾಲಿತ ದಂಡ ವಿಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಆರಂಭಿಸಿದೆ. ಈ ಮೂಲಕ ನಿಯಮ ಉಲ್ಲಂಘನೆ ಮಾಡಿದ್ರೆ ಅಂತಹ ವಾಹನ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಇ-ಚಲನ್ ರವಾನೆಯಾಗಲಿದೆ.

    ಜೊತೆಗೆ ಆ ವಾಹನದ ಸವಾರ ಮಾಡಿದ ಉಲ್ಲಂಘನೆ ವೀಡಿಯೋ ಕೂಡ ನೋಟಿಸ್ ಜೊತೆ ಮಾಲೀಕನ ಕೈ ಸೇರಲಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಒಳಗೊಂಡ 259 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ಅನ್ನು ಸೆರೆಹಿಡಿಯುವ ಕ್ಯಾಮೆರಾಗಳು ಮತ್ತು 80 ರೆಡ್‌ಲೈಟ್ ವಯಲೇಷನ್ ಡಿಟೆಕ್ಷನ್ ಕ್ಯಾಮೆರಾಗಳನ್ನು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿದೆ. ಈ ಮೂಲಕ ಸಂಚಾರ ಉಲ್ಲಂಘನೆ ಮಾಡುವವರ ಪತ್ತೆ ಸುಗಮವಾಗಲಿದೆ.

    ಪೊಲೀಸರ ಮಾಸ್ಟರ್ ಪ್ಲ್ಯಾನ್‌ ಏನು?

    ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಪ್ರತಿವರ್ಷ ವಿಮೆ ಮಾಡಿಸಲು ಹೋದಾಗ ಟ್ರಾಫಿಕ್ ಪೊಲೀಸರಿಂದ ಎನ್‌ಓಸಿ ಕೊಡಬೇಕಾಗುತ್ತದೆ. ಎನ್‌ಓಸಿ ಕೊಡದಿದ್ರೆ ಇನ್ಶೂರೆನ್ಸ್ ನವೀಕರಣ ಆಗದೇ ಇರುವಂತೆ ಮಾಡಲು ಪ್ಲ್ಯಾನ್‌ ಮಾಡಲಾಗಿದೆ. ಇನ್ಶೂರೆನ್ಸ್ ಕಂಪನಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಹಾಗೆಯೇ ಯೆಲ್ಲೋ ಬೋರ್ಡ್ ಗಾಡಿಗಳ ಎಫ್‌ಸಿ ಹಾಗೂ ವೈಟ್ ಬೋರ್ಡ್ ಗಾಡಿಗಳ ವಿಮೆ ಮಾಡಿಸಲು ಹೋದಾಗ ಅಲ್ಲಿಯೇ ಫೈನ್ ಕಲೆಕ್ಟ್ ಮಾಡಲು ಚಿಂತನೆ ನಡೆಸಲಾಗಿದೆ. ಪೊಲೀಸ್ ಇಲಾಖೆ ಕೆಲವೆ ದಿನಗಳಲ್ಲಿ ಈ ಪ್ಲ್ಯಾನ್‌ ರೂಪಿಸಿ, ಮೆಚ್ಚುಗೆಗೆ ಪಾತ್ರವಾಗಿದೆ.

    ಎಟಿಎಂ ಸಿಸ್ಟಮ್ ?
    ಹೈಯೆಂಡ್ ಕ್ಯಾಮೆರಾ ಮೂಲಕ ರೂಲ್ಸ್ ಬ್ರೇಕ್ ಮಾಡೋರ ಮೇಲೆ ಕಣ್ಣಿಡುವ ಜೊತೆಗೆ, ಪ್ರತಿ ಮೂಮೆಂಟ್ ರೆಕಾರ್ಡ್ ಮಾಡುತ್ತೆ. 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ನಿಯಮ ಉಲ್ಲಂಘನೆಯಾಗುವುದನ್ನು ರೆಕಾರ್ಡ್ ಮಾಡುತ್ತದೆ.

    ತ್ರಿಬಲ್ ರೈಡಿಂಗ್ ಇದ್ರೆ, ಸೀಟ್ ಬೆಲ್ಟ್ ಹಾಕದಿದ್ರೆ, ಜೀಬ್ರಾ ಕ್ರಾಸ್ ದಾಟಿದ್ರೆ ಫೋಟೋ ದಂಡದ ಬಿಸಿ ಮುಟ್ಟಿಸಲು ಸಹಕಾರಿಯಾಗುತ್ತೆ. ರಾತ್ರಿ ಹೊತ್ತಿನಲ್ಲೂ ಕಾರ್ಯನಿರ್ವಹಿಸಲಿರೋ ಕ್ಯಾಮೆರಾಗಳು, ರೂಲ್ಸ್ ಬ್ರೇಕ್ ಮಾಡಿದ 5 ಸೆಕೆಂಡ್‌ಗಳಲ್ಲೇ ವಿಡಿಯೋ ಜೊತೆ ದಂಡದ ನೋಟೀಸ್ ಬರುತ್ತೆ.

    ಮೊಬೈಲ್‌ನಲ್ಲೆ ಕ್ಯೂಆರ್ ಕೋಡ್ ಮೂಲಕ ಫೈನ್ ಕಟ್ಬೇಕು. ಫೈನ್ ಕಟ್ಟಿಲ್ಲವಾದರೆ, 24 ಗಂಟೆಗಳಲ್ಲಿ ಮನೆ ಬಾಗಿಲಿಗೆ ನೋಟಿಸ್ ಬರುತ್ತೆ. ನೋಟಿಸ್ ಬಂದ ನಂತರ ಠಾಣೆಯಲ್ಲಿ ಫೈನ್ ಕಟ್ಟುವಂತಿಲ್ಲ. ಕೋರ್ಟ್‌ಗೆ ಹೋಗಿ ಕಟ್ಟಬೇಕಾಗುತ್ತದೆ. ಈ ಎಲ್ಲಾ ಕ್ರಮಗಳ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸೋದಕ್ಕೆ ಟ್ರಾಫಿಕ್ಗ್‌ ಪೊಲೀಸರು ಮುಂದಾಗಿದ್ದಾರೆ.

    Post Views: 226

    Related Posts

    ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ.ದೇಶಾದ್ಯಂತ ‘ಆರೋಗ್ಯ ಬೈ ಆರ್‌ವಿಆರ್’ ವಿಸ್ತರಣೆ.ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಆರ್‌ವಿಆರ್ ಹೆಲ್ತ್‌ಕೇರ್

    July 24, 2026

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ.ದೇಶಾದ್ಯಂತ ‘ಆರೋಗ್ಯ ಬೈ ಆರ್‌ವಿಆರ್’ ವಿಸ್ತರಣೆ.ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಆರ್‌ವಿಆರ್ ಹೆಲ್ತ್‌ಕೇರ್

    July 24, 2026

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.