Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು..!!
    ಇತ್ತೀಚಿನ ಸುದ್ದಿ

    ಬಂಟ್ವಾಳ: ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು..!!

    March 21, 2026
    Share

    ಬಂಟ್ವಾಳ : ತೆಂಗಿನಕಾಯಿ ಕಾಯಿ ತೆಗೆಯುವ ವೇಳೆ ಮರದಿಂದ ಬಿದ್ದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ತಾರಿಪಡ್ಪು ಎಂಬಲ್ಲಿ ನಡೆದಿದೆ.

    ಮೃತರನ್ನು ಗಣೇಶ್‌ (ವಯಸ್ಸು ಅಂದಾಜು 45) ಎಂದು ಗುರುತಿಸಲಾಗಿದೆ. ಅವರು ತಮ್ಮ ಅಣ್ಣ ಪ್ರಕಾಶ್ ಅವರೊಂದಿಗೆ ತೆಂಗಿನ ಕಾಯಿ ಮತ್ತು ಅಡಿಕೆ ಕೊಯ್ಯುವ ಕೂಲಿ ಕೆಲಸ ಮಾಡಿಕೊಂಡಿದ್ದರು.

    ದಿನಾಂಕ 19ರಂದು ಬೆಳಿಗ್ಗೆ ಸುಮಾರು 8 ಗಂಟೆಗೆ ಇಬ್ಬರೂ ನರಿಕೊಂಬು ಗ್ರಾಮದ ತಾರಿಪಡ್ಪು ಪ್ರದೇಶದಲ್ಲಿರುವ ವಿಠಲ ಮೂಲ್ಯ ಅವರ ಮನೆಯ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ತೆರಳಿದ್ದರು. ಮಧ್ಯಾಹ್ನ ಸುಮಾರು 11 ಗಂಟೆ ಸುಮಾರಿಗೆ ಗಣೇಶ್ ಅವರು ಕಾಲಿಗೆ ಮತ್ತು ಕೈಗೆ ಹಗ್ಗವನ್ನು ಹಾಕಿಕೊಂಡು ತೆಂಗಿನ ಮರಕ್ಕೆ ಹತ್ತಿ ಸುಮಾರು 25 ಅಡಿ ಎತ್ತರಕ್ಕೆ ತೆರಳಿದ್ದ ವೇಳೆ ಕಾಲಿಗೆ ಕಟ್ಟಿದ್ದ ಹಗ್ಗ ಆಕಸ್ಮಿಕವಾಗಿ ತುಂಡಾಗಿ ಮರದ ಬುಡದ ಪಕ್ಕಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡರು.

    ತಕ್ಷಣವೇ ಪ್ರಕಾಶ್ ಮತ್ತು ವಿಠಲ ಮೂಲ್ಯ ಅವರು ಗಣೇಶ್ ಅವರನ್ನು ಎಬ್ಬಿಸಿ ಆರೈಕೆ ಮಾಡಿದ್ದು, ತಲೆಗೆ ಗಂಭೀರ ಗಾಯವಾಗಿರುವುದು ಕಂಡುಬಂದಿತು. ಬಳಿಕ ಅವರನ್ನು ಚಿಕಿತ್ಸೆಗಾಗಿ ವಾಹನದಲ್ಲಿ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ವೈದ್ಯರು ಪರೀಕ್ಷಿಸಿ ಮಧ್ಯಾಹ್ನ ಸುಮಾರು 12 ಗಂಟೆಗೆ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Post Views: 97

    Related Posts

    ಮಂಗಳೂರು: ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

    June 9, 2026

    ವೆನ್‌ಲಾಕ್ ಆಸ್ಪತ್ರೆಯಲ್ಲಿ ಕನ್ನಡ ಕಡ್ಡಾಯ: ವೈದ್ಯರಿಗೆ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆ

    June 9, 2026

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.